ಮಧ್ಯ ಪ್ರದೇಶದ ಮಾಜಿ ಶಾಸಕ ಓಡಿಸುತ್ತಿದ್ದ ಬಿಎಂಡಬ್ಲ್ಯೂ ಕಾರು ಭೀಖರ ಅಪಘಾತವಾಗಿದ್ದು ವೇಗವಾಗಿ ಬಂದ ಕಾರು ಇತರ ವಾಹನಕ್ಕೆ ಡಿಕ್ಕಿಯಾಗಿದೆ.
ದೆಹಲಿ(ಜು.08): ಶನಿವಾರ ತಡರಾತ್ರಿ ಉತ್ತರ ದೆಹಲಿಯ (North Delhi) ಗೀತಾ ಕಾಲೋನಿ ಪ್ರದೇಶದಲ್ಲಿ ರಾತ್ರಿ 10.45 ರ ಸುಮಾರಿಗೆ ವೇಗವಾಗಿ ಬಂದ ಬಿಎಂಡಬ್ಲ್ಯು (BMW) ಕಾರೊಂದು ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದಿದೆ (Accident). ಹಲವು ದ್ವಿಚಕ್ರ ವಾಹನಗಳು ಮತ್ತು ಫೋರ್ ವೀಲ್ಹರ್ವಾಹನಗಳನ್ನು ಹಾನಿಗೊಳಿಸಿತು. ಬಿಎಂಡಬ್ಲ್ಯೂ ಕಾರನ್ನು ಮಧ್ಯಪ್ರದೇಶದ ಸಾಗರ್‌ನ ಮಾಜಿ ಸ್ವತಂತ್ರ ಶಾಸಕ ಸುನಿಲ್ ಜೈನ್ (MLA Sunil Jain) ಎಂಬ ವ್ಯಕ್ತಿ ಓಡಿಸುತ್ತಿದ್ದರು ಎನ್ನಲಾಗಿದೆ. ವೇಗವಾಗಿ ಬಂದ ವಾಹನವು ಮೊದಲು ವ್ಯಾಗನ್ಆರ್ ಕಾರಿಗೆ ಡಿಕ್ಕಿ ಹೊಡೆದಿದೆ. ಇದು ಒಂದು ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ವ್ಯಾಗನ್ಆರ್ ಚಾಲಕ ಮತ್ತು ಸ್ಕೂಟಿ ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು (Police) ತಿಳಿಸಿದ್ದಾರೆ
ಕಾರಿಗೆ ಡಿಕ್ಕಿ ಹೊಡೆದು ಕಾರು ಸ್ಕೂಟಿಗೆ ಡಿಕ್ಕಿ
ಸ್ಥಳೀಯ ಪೊಲೀಸರು ಸ್ಥಳಕ್ಕೆ ತಲುಪಿದಾಗ, ಅವರು ಕಿಯಾ ಸೆಲ್ಟೋಸ್ ಕಾರಿಗೆ ಡಿಕ್ಕಿ ಹೊಡೆದಿದ್ದು, ನಂತರ ರಸ್ತೆಯಲ್ಲಿದ್ದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದ್ದಾರೆ ಎಂದು ಅವರಿಗೆ ತಿಳಿದು ಬಂದಿದೆ. ವ್ಯಾಗನಾರ್ ಕಾರು ಚಾಲಕ ಹಾಗೂ ಸ್ಕೂಟಿ ಸವಾರರು ಸೇರಿದಂತೆ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿ
ಕೇಸ್ ದಾಖಲಿಸಿದ ಪೊಲೀ
ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದ ಕಾರಣ ಆಸ್ಪತ್ರೆಯಿಂದ ತಕ್ಷಣವೇ ಡಿಸ್ಮಾರ್ಜ್ ಕೂಡಾ ಮಾಡಲಾಯಿತು. ಕೋಟ್ವಾಲಿ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 279 (ಸಾರ್ವಜನಿಕ ದಾರಿಯಲ್ಲಿ ದುಡುಕಿನ ಚಾಲನೆ ಅಥವಾ ಸವಾರಿ) ಮತ್ತು 337 (ಮಾನವ ಜೀವಕ್ಕೆ ಅಪಾಯವನ್ನುಂಟುಮಾಡುವ ಕೃತ್ಯದಿಂದ ನೋವುಂಟುಮಾಡುವುದು) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಸಾಗರ್ ಸಿಂಗ್ ಕಲ್ಸಿ, ಉಪ ಪೊಲೀಸ್ ಕಮಿಷನರ್ (ದೆಹಲಿ ಉತ್ತರ), ಹೇಳಿ
ಗಾಯಾಳುಗಳು ಯಾರೂ ಕೇಸ್ ದಾಖಲಿಸಿ
ಆರೋಪಿಯು ಕಾರನ್ನು ಓಡಿಸುತ್ತಿದ್ದ. ಅವನ ಪಕ್ಕದಲ್ಲಿ ಅವನ ಮಗಳು ಮತ್ತು ಹಿಂದಿನ ಸೀಟಿನಲ್ಲಿ ಡ್ರೈವರ್ ಇದ್ದನು ಎಂದು ಅವರು ಹೇಳಿದರು. ಬಿಎಂಡಬ್ಲ್ಯು ಕಾರು ಅಪಘಾತದಲ್ಲಿ ತೀವ್ರ ಹಾನಿಗೊಳಗಾಗಿದೆ. ಅದರ ಎಲ್ಲಾ ಏರ್‌ಬ್ಯಾಗ್‌ಗಳು ತೆರೆದಿವೆ. ಗಾಯಗೊಂಡವರು ಯಾರೂ ಇನ್ನೂ ದೂರು ದಾಖಲಿಸಿಲ್ಲ. ಅವರು ತಮ್ಮ ನಡುವೆ ವಿಷಯವನ್ನು ರಾಜಿ ಮಾಡಿಕೊಂಡಂತೆ ತೋರುತ್ತದೆ. ಆದರೆ, ಕಾನೂನು ಪ್ರಕ್ರಿಯೆ ಆರಂಭಿಸಲಾಗಿದೆ' ಎಂದು ಡಿಸಿಪಿ ತಿಳಿಸಿದರು
ಇದನ್ನೂ ಓದಿ: Ayodhya: ಅಕ್ರಮ ಪ್ಲಾಟಿಂಗ್ ನಡೆಸಿದ 40 ಜನರ ಪಟ್ಟಿಯಲ್ಲಿ ಬಿಜೆಪಿ ಶಾಸಕ, ಮೇಯರ್ ಹೆಸ
ಮದ್ಯ ಸೇವಿಸಿ ಬಿಎಂಡಬ್ಲ್ಯೂ ಚಲಾಯಿಸಿದರಾ ಮಾಜಿ ಶಾ
ಆದರೆ, ಜೈನ್ ವಾಹನ ಚಲಾಯಿಸುವಾಗ ಮದ್ಯದ ಅಮಲಿನಲ್ಲಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ. “ಅಪಘಾತದ ನಂತರ, ಅವನ ಚಾಲಕನು ಬಿಯರ್ ಬಾಟಲಿಗಳನ್ನು ಎಸೆಯುವುದನ್ನು ನಾವು ನೋಡಿದ್ದೇವೆ ಮತ್ತು ಸ್ಥಳೀಯರು ಅವನನ್ನು ಥಳಿಸಿದರು. ನನ್ನ ಹೆಂಡತಿ ಮತ್ತು ಆರು ತಿಂಗಳ ಮಗು ನನ್ನೊಂದಿಗೆ ಸ್ಕೂಟಿಯಲ್ಲಿ ಹೋಗುತ್ತಿದ್ದರು. ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಇನ್ನೂ ಭಯದಲ್ಲಿದ್ದಾರೆ' ಎಂದು ಗೌರವ್ ಕುಮಾರ್ ಹೇಳಿದ್ದಾ
ಇದನ್ನೂ ಓದಿ: NITI Aayog: ನೀತಿ ಆಯೋಗದ ಸಭೆಯಲ್ಲಿ ಬಿಜೆಪಿಯೇತರ CMಗಳ ಜೊತೆ ಮೋದಿ ಮಾತುಕತೆ ಹೇಗಿತ್ತು
? ರೆ.ಸಕ?ರು!.ಲ್ಲದರು.ಸರುದೆ..ತೆ ಮೋದಿ ಮಾತುಕತೆ ಹೇಗಿತ್ತು?ಘಟನೆ ನಡೆದ ತಕ್ಷಣ ಮತ್ತೊಂದು ವಾಹನ ಸ್ಥಳಕ್ಕೆ ಬಂದು ಜೈನ್ ಮತ್ತು ಅವರ ಕುಟುಂಬವನ್ನು ಕರೆದುಕೊಂಡು ಹೋಗಿದೆ ಎಂದು ಇನ್ನೊಬ್ಬ ಸ್ಥಳೀಯರು ಹೇಳಿದ್ದಾರೆ. ಅವರನ್ನು ಸಂಪರ್ಕಿಸಿದಾಗ, ಘಟನೆಯ ಬಗ್ಗೆ ಪ್ರತಿಕ್ರಿಯಿಸಲು ಜೈನ್ ನಿರಾಕರಿಸಿದರು. ಅಪಘಾತವಾಗಿರುವ ಕಾರು ನಜ್ಜುಗುಜ್ಜಾಗಿದ್ದು ತೀವ್ರ ಹಾನಿಯಾಗಿದೆ. ಸದ್ಯ ಪ್ರಾಣಾಪಾಯ ಸಂಭವಿಸಿಲ್ಲ.
Post a Comment