ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾದ ಹಿನ್ನೆಲೆ ದೇಗುಲದ ಶುದ್ಧೀಕರಣ ಮತ್ತು ವಿಶೇಷ ಪೂಜೆ ಸಲ್ಲಿಕೆ ಮಾಡಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ಹೇಳಿದೆ.
ಕೊಡಗು: ಮಾಂಸಾಹಾರ ಸೇವನೆ ಮಾಡಿ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ (Former CM Siddaramaiah) ಅವರು ಕೊಡಗು (Kodagu) ಜಿಲ್ಲೆಯ ಕೊಡ್ಲಿಪೇಟೆಯ ಬಸವೇಶ್ವರ ದೇವಸ್ಥಾನಕ್ಕೆ (Basaveshwara Temple) ಭೇಟಿ ನೀಡಿದ್ದರು ಎಂದು ಬಿಜೆಪಿ ಆರೋಪ (BJP Allegation) ಮಾಡಿದೆ. ಆದ್ರೆ ಸಿದ್ದರಾಮಯ್ಯನವರು ತಾವು ಮಾಂಸಾಹಾರ (Non veg) ಸೇವನೆ ಮಾಡಿರಲಿಲ್ಲ ಎಂದು ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದ್ದರು. ಆಗಸ್ಟ್ 19ರಂದು ಕೊಡಗಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಬಸವೇಶ್ವರ ದೇವಸ್ಥಾನಕ್ಕೆ ತೆರಳಿದ್ದರು. ಈ ಎಲ್ಲಾ ಬೆಳವಣಿಗೆ ಬಳಿಕ ದೇವಾಲಯದ ಸಮಿತಿ ಶನಿವಾರ ದೇವಸ್ಥಾನದ ಆವರಣವನ್ನು ಶುಚಿಗೊಳಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಶನಿವಾರ ಇಡೀ ದೇವಸ್ಥಾನದ ಶುದ್ಧೀಕರಣ (Temple Purified) ನಡೆದಿದೆ ಎಂದು TOI ವರದಿ ಮಾಡಿದೆ.
ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾದ ಹಿನ್ನೆಲೆ ದೇಗುಲದ ಶುದ್ಧೀಕರಣ ಮತ್ತು ವಿಶೇಷ ಪೂಜೆ ಸಲ್ಲಿಕೆ ಮಾಡಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ಹೇಳಿದೆ.
ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಯಾರೂ ಬರಲ್ಲ
ಈ ಕುರಿತು ಮಾತನಾಡಿರುವ ದೇವಾಲಯ ಸಮಿತಿ ಅಧ್ಯಕ್ಷ ವರಪ್ರಸಾದ್, ಭಕ್ತರು ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಬರುವುದಿಲ್ಲ, ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಬರುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಭಕ್ತರ ಭಾವನೆ ಕಾಪಾಡಲು ದೇವಸ್ಥಾನವನ್ನು ಸ್ವಚ್ಛಗೊಳಿಸಲು ನಿರ್ಧರಿಸಿದ್ದೇವೆ ಎಂದು ಹೇಳಿ
ದ್ದಾರೆ ಭೋಜನ ಸವಿಯುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ
ಇದನ್ನೂ ಓದಿ: Siddaramaiah: ಮಾಂಸ ತಿಂದು ದೇವಸ್ಥಾನಕ್ಕೆ ಹೋದ್ರೆ ಏನ್ ತಪ್ಪು; ಸಿದ್ದರಾಮಯ್ಯ ಪರ ಮುತಾಲಿಕ್ ಬ್ಯಾಟ್
ಇನ್ನೂ ದೇವಸ್ಥಾನದ ಅರ್ಚಕ ಮೃತ್ಯಂಜಯ ಅವರು ಮಾತನಾಡಿ, ಇಲ್ಲಿಗೆ ಶ್ರದ್ಧಾಭಕ್ತಿಯಿಂದ ಬರುವ ಎಲ್ಲಾ ಭಕ್ತರಿಗೆ ತೀರ್ಥ ಹಾಗೂ ಪ್ರಸಾದ ನೀಡುತ್ತೇನೆ. ಅದೇ ರೀತಿ ಎಲ್ಲರಿಗೂ ತೀರ್ಥ ಮತ್ತು ಪ್ರಸಾದ ನೀಡಿದ್ದೇನೆ ಎಂದು ಹೇಳುತ್ತಾರೆ.
ದೇಗುಲದ ಪಾವಿತ್ರತ್ಯೆ ಕಾಪಾಡೋದು ನಮ್ಮ ಜವಾಬ್ದಾರಿ
ಕೊಡ್ಲಿಪೇಟೆ ಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಮಾಂಸಾಹಾರ ಸೇವನೆ ಆಹಾರ ಪದ್ಧತಿ. ಆದ್ರೆ ಮಾಂಸಾಹಾರ ಸೇವಿಸಿ ಯಾರೂ ದೇವಸ್ಥಾನ ಪ್ರವೇಶ ಮಾಡಲ್ಲ. ಹಿಂದೂ ಸಂಪ್ರದಾಯದಂತೆ ದೇಗುಲಗಳ ಪಾವಿತ್ರತ್ಯೆ ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಅಂದು ತಿಂದಿದ್ದು ಕಣಿಲೆ ಅಕ್ಕಿ ರೊಟ್ಟಿ ಮತ್ತು ತುಪ್ಪ
ಸಿದ್ದರಾಮಯ್ಯ ಅವರು ಅಂದು ಮಾಂಸಹಾರವನ್ನು ಸೇವಿಸಲೇ ಇಲ್ಲ ಎಂದು ಕಾಂಗ್ರೆಸ್‍ನ ಮಾಜಿ ಎಂಎಲ್ಸಿ ವೀಣಾ ಅಚ್ಚಯ್ಯ ಸ್ಪಷ್ಟನೆ ನೀಡಿದ್ದಾರೆ. ಅಂದು ಸಿದ್ದರಾಮಯ್ಯ ಅವರಿಗೆ ಕೊಡಗಿನ ಮಾಜಿ ಎಂಎಲ್ಸಿ ವೀಣಾ ಅಚ್ಚಯ್ಯ ಅವರ ಮನೆಯಿಂದ ನಾಟಿಕೋಳಿ ಸಾರು, ಮಟನ್ ಫ್ರೈ, ಅಕ್ಕಿ ರೊಟ್ಟಿ, ಬಿದಿರು ಕಣಿಲೆ ಗೊಜ್ಜು ಸೇರಿದಂತೆ ವಿವಿಧ ಆಹಾರಗಳು ಮಾಡಿ ಮಡಿಕೇರಿಯ ಸುದರ್ಶನ್ ಗೆಸ್ಟ್ ಹೌಸ್ಗೆ
ಪೂರೈಸಲಾಗಿತ್ತು.ಜಗದೀಶ್ ಶೆಟ್ಟರ್ ಹೇಳಿಕೆ
ಸಿದ್ದರಾಮಯ್ಯ ಮಾಂಸಹಾರ ಸೇವಿಸಲೇ ಇಲ್ಲ
ಮಧ್ಯಾಹ್ನ ಊಟ ಮಾಡಿದ್ದ ಸಿದ್ದರಾಮಯ್ಯ ಅವರು ಸಂಜೆ ಕೊಡ್ಲಿಪೇಟೆಯ ಬಶವೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದರು. ಆದರೆ ಸಿದ್ದರಾಮಯ್ಯ ಅವರು ಅಂದು ಮಾಂಸ ಆಹಾರವನ್ನು ತಿನ್ನಲಿಲ್ಲ. ಕೊಡಗಿನ ಮಳೆಗಾಲದ ವಿಶೇಷ ಕಣಿಲೆ ಅಕ್ಕಿರೊಟ್ಟಿ ತುಪ್ಪ ತಿಂದರು. ಬಿಟ್ಟರೆ ತರಕಾರಿ ಸಾಂಬರಿನಲ್ಲಿ ಸ್ವಲ್ಪ ಅನ್ನ ಊಟ ಮಾಡಿದರು. ಅವರು ಮಾಂಸಹಾರ ಸೇವಿಸಲೇ ಇಲ್ಲ. ಸ್ವತಃ ನಾನೇ ಊಟ ಬಡಿಸಿದ್ದೇನೆ ಎಂದು ವೀಣಾ ಅಚ್ಚಯ್ಯ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: Siddu V/s Yatnal: ಸಿದ್ದರಾಮಯ್ಯಗೆ ತಾಕತ್ತು ಇದ್ರೆ ಹಂದಿ ಮಾಂಸ ತಿಂದು ಮಸೀದಿಗೆ ಹೋಗಲಿ, ಯತ್ನಾ
ಳ್ ಸವಾಲ್ಮುನಿಸ್ವಾಮಿ ಹೇಳಿಕೆ
ಬಿಜೆಪಿ ಆರೋಪಕ್ಕೆ ಸಿದ್ದರಾಮಯ್ಯ ತಿರುಗೇ
ಚಿಕ್ಕಬಳ್ಳಾಪುರದಲ್ಲಿ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಮಾಂಸ ತಿಂದು ನಾಳೆ ದೇವಸ್ಥಾನಕ್ಕೆ ಹೋಗಬಹುದು. ಮಧ್ಯಾಹ್ನ ತಿಂದು ಸಂಜೆ ದೇವಸ್ಥಾನಕ್ಕೆ ಹೋಗುವಂತೆ ಇಲ್ಲವೇ ಎಂದು ಪ್ರಶ್ನಿಸಿದ್ದರು. ಅಲ್ಲದೇ ಯಾವ ಆಹಾರ ತಿಂದು ದೇವಸ್ಥಾನಕ್ಕೆ ಬರಬಹುದು, ಯಾವ ಆಹಾರ ತಿಂದು ಬರಬಾರದು ಎಂದು ದೇವರು ಎಲ್ಲೂ ಹೇಳಿಲ್ಲ ಎಂದು ತಿರುಗೇಟು ನೀಡಿದ್ದರು. ನಂತರ ಅಂದು ನಾನು ಮಾಂಸಾಹಾರ ಸೇವನೆ ಮಾಡಿರಲಿಲ್ಲ ಎಂದು ಹೇಳಿದ್ಗರು.ಟು




Post a Comment