Idgah: ಈದ್ಗಾ ಮೈದಾನಕ್ಕೆ ಜಮೀರ್​ಗೂ ನೋ ಪರ್ಮಿಷನ್! ಸರ್ಕಾರದಿಂದಲೇ ಧ್ವಜಾರೋಹಣ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಸರ್ಕಾರದ ವತಿಯಿಂದಲೇ ಧ್ವಜಾರೋಹಣ ಮಾಡಲಾಗುತ್ತೆ. ಸ್ಥಳೀಯ ಶಾಸಕ ಜಮೀರ್ ಅಹ್ಮದ್​​ಗೂ ಅವಕಾಶವಿರುವುದಿಲ್ಲ ಅಂತಾ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ.


 ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂಭ್ರಮದ ಹೊತ್ತಲ್ಲೇ ಎದ್ದಿದ್ದ ಈದ್ಗಾ ಮೈದಾನ (Idgah) ವಿವಾದವನ್ನು ಸರ್ಕಾರ ಇಂದು ಇತ್ಯರ್ಥ (Solve) ಪಡಿಸಿದೆ. ವಿವಾದದ ಕೇಂದ್ರಬಿಂದುವಾಗಿದ್ದ ಚಾಮರಾಜಪೇಟೆಯ ಈದ್ಗಾ ಮೈದಾನವನ್ನು (Ground) ಸರ್ಕಾರ ತನ್ನ ವಶಕ್ಕೆ ಪಡೆದಿದೆ. ಮಾತ್ರವಲ್ಲ ಈದ್ಗಾ ಮೈದಾನದಲ್ಲಿ ಸರ್ಕಾರದಿಂದಲೇ ಧ್ವಜಾರೋಹಣ (Flag Hoisting) ನಡೆಯುತ್ತೆ. ಬೇರೆ ಯಾರಿಗೂ ಇಲ್ಲಿ ಅವಕಾಶ ಇಲ್ಲ ಅಂತಾ ಕಂದಾಯ ಸಚಿವ (Revenue Minister) ಆರ್.ಅಶೋಕ್ ಹೇಳಿದ್ದಾರೆ. ಈದ್ಗಾ ಮೈದಾನವನ್ನು ಬಿಟ್ಟುಕೊಡೋ ಮಾತೇ ಇಲ್ಲ ಅಂತಾ ಸಾರುತ್ತಿದ್ದ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ಗೂ ನೋ ಪರ್ಮಿಷನ್ (No Permission) ಅಂತಾ ಸರ್ಕಾರ ಹೇಳಿದೆ. ಸಭೆಯ ವೇಳೆ ಆರ್.ಅಶೋಕ್ ಈದ್ಗಾ ಮೈದಾನ ಅಂತಾನೂ ಕರೆಯಲು ಹಿಂದೇಟು ಹಾಕಿದ ಘಟನೆ ನಡೆಯಿತು.

ಈದ್ಗಾ ಮೈದಾನ ವಿವಾದ ಇತ್ಯರ್ಥ ಸಂಬಂಧ ಕಂದಾಯ ಸಚಿವ ಅಶೋಕ್ ನೇತೃತ್ವದಲ್ಲಿ ಇಂದು ನಡೆದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜಿಲ್ಲಾಡಳಿತ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಲಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರ ಪೊಲೀಸ್ ಕಮಿಷನರ್ಗೆ ಕಂದಾಯ ಸಚಿವರು ಸೂಚಿಸಿದ್ದಾಜಮೀರ್ ಅಹ್ಮದ್ಗೂ ಅವಕಾಶ ಇಲ್ಲ

ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಸರ್ಕಾರದ ವತಿಯಿಂದಲೇ ಧ್ವಜಾರೋಹಣ ಮಾಡಲಾಗುತ್ತೆ. ಇಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಯಾವುದೇ ಸಂಘ-ಸಂಸ್ಥೆಗೂ ಅವಕಾಶವಿಲ್ಲ. ಸ್ಥಳೀಯ ಶಾಸಕ ಜಮೀರ್ ಅಹ್ಮದ್ಗೂ ಅವಕಾಶವಿರುವುದಿಲ್ಲ ಅಂತಾ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾ


ರೆ. ರೆ.ದ್ದಾರೆಈದ್ಗಾ ಮೈದಾನದಲ್ಲಿ ಸರ್ಕಾರದಿಂದಲೇ ಧ್ವಜಾರೋಹಣ


ಯಾವುದೇ ಘೋಷಣೆ ಕೂಗುವಂತಿಲ್ಲ

ಆಗಸ್ಟ್​ 15ರಂದು ಬೆಂಗಳೂರಿನ ಉತ್ತರ ತಾಲ್ಲೂಕಿನ ಸಹಾಯಕ ಆಯುಕ್ತರು ಧ್ವಜಾರೋಹಣ ಮಾಡಲಿದ್ದಾರೆ. ಶಿಷ್ಟಾಚಾರದ ಪ್ರಕಾರ ಸ್ಥಳೀಯ ಶಾಸಕ, ಸಂಸದರು ಉಪಸ್ಥಿತರಿರಬಹುದು. ಅಲ್ಲಿ ಭಾರತ ಮಾತಾಕೀ ಜೈ, ವಂದೇ ಮಾತರಂ ಘೋಷಣೆ ಮಾತ್ರ ಕೇಳಿಬರಬೇಕು. ಬೇರೆ ಯಾವುದೇ ಘೋಷಣೆ ಮಾಡಬಾರದು ಎಂದು ಆರ್. ಅಶೋಕ್ ತಿಳಿಸಿದ್ದಾರೆ.

ಇದನ್ನೂ ಓದಿ: ಕೊಪ್ಪಳದಲ್ಲಿ ಗಲಾಟೆ, ಕಲ್ಲುತೂರಾಟ; ಇಬ್ಬರು ಸಾವು- ನಿಷೇಧಾಜ್ಞೆ ಜಾರಿ

ಈದ್ಗಾ ಎನ್ನಲು ಅಶೋಕ್ ಹಿಂದೇಟು

ಸಭೆಯಲ್ಲಿ ಈದ್ಗಾ ಮೈದಾನ ಎಂದು ಕರೆಯಲು ಸಚಿವ ಆರ್.ಅಶೋಕ್ ಹಿಂದೇಟು ಹಾಕಿದ್ದಾರೆ. ಇನ್ಮುಂದೆ ಸರ್ವೇ ನಂಬರ್ 40 ಗುಟ್ಟಹಳ್ಳಿ ಚಾಮರಾಜಪೇಟೆ ಕಂದಾಯ ಇಲಾಖೆ ಎಂದು ಕರೆಯಲಾಗುವುದು. ಮುಂದೆ ಜಾಗವನ್ನ ಬಿಬಿಎಂಪಿಗೆ ಕೊಡಬೇಕಾ ಅಥವಾ ಬಿಡಿಎಗೆ ಕೊಡಬೇಕಾ ಎಂದು ಸಿಎಂ ಜೊತೆ ಚರ್ಚಿಸಿ ನಿರ್ಧರಿಸಲಾಗುವುದು ಅಂತಾ ಅಶೋಕ್


ತಿಳಿಸಿದ್ರು.ಸಚಿವ ಆರ್​ ಅಶೋಕ್​


ವರ್ಷಕ್ಕೆ 2 ಬಾರಿ ಪ್ರಾರ್ಥನೆಗೆ ಅವಕಾಶ

ಚಾಮರಾಜಪೇಟೆಯ ಮೈದಾನದಲ್ಲಿ ಯಾವುದೇ ಕಾರ್ಯಕ್ರಮಕ್ಕೆ ಅವಕಾಶ ಇಲ್ಲ. ಸರ್ಕಾರದ ಆದೇಶವನ್ನು ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಪಾಲಿಸಬೇಕು. ಮುಂದಿನ ಆದೇಶದವರೆಗೂ ಸರ್ಕಾರಿ ಆದೇಶ ಯಥಾಸ್ಥಿತಿ ಇರಲಿದೆ. ವರ್ಷಕ್ಕೆ 2 ಬಾರಿ ಪ್ರಾರ್ಥನೆಗೆ ಮಾತ್ರ ಅವಕಾಶ ಇದೆ ಅಂತಾ ತಿಳಿಸಿದ್ರು. ನಮಗೆ ಶಾಂತಿ, ಸೌಹಾರ್ದತೆ ಮುಖ್ಯ ಅಂತಾ ಸ್ಪಷ್ಟಪಡಿಸಿದ್ರು.

ಇದನ್ನೂ ಓದಿ: ‘ಫ್ಲವರ್‘ ಸ್ಟಾರ್ ಅಪ್ಪು! ಲಾಲ್​ಬಾಗ್​ನಲ್ಲಿ ಪುಷ್ಪಗಳ ಹಬ್ಬದ ವಿಡಿಯೋ ನೋಡಿ

ಗಣೇಶ ಹಬ್ಬ ಆಚರಣೆ ಬಗ್ಗೆ ನಿರ್ಧಾರ

ಚಾಮರಾಜಪೇಟೆ ಮೈದಾನದಲ್ಲಿ ಗಣರಾಜ್ಯೋತ್ಸವದಂದು ಧ್ವಜಾರೋಹಣ ಕೂಡ ಕಂದಾಯ ಇಲಾಖಾ ವ್ಯಾಪ್ತಿಯಲ್ಲಿ ನಡೆಯಲಿದೆ. ಆಗಸ್ಟ್​ 31ರಂದು ಗಣೇಶೋತ್ಸವ ಇದೆ. ಆಗಸ್ಟ್ 15ರ ಬಳಿಕ ಗಣೇಶೋತ್ಸವದ ಬಗ್ಗೆ ತೀರ್ಮಾನಿಸಲಾಗುವುದು ಅಂತಾ ಆರ್.ಅಶೋಕ್ ಹೇಳಿದ್ರು.

ಜಮೀರ್ ವಿರುದ್ಧ ದೂರು

ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ವಿರುದ್ಧ ದೂರು ದಾಖಲಾಗಿದೆ. ಚಾಮರಾಜಪೇಟೆ ಮೈದಾನದಲ್ಲಿ ಗಣೇಶಹಬ್ಬ ಆಚರಿಸೋಕೆ ಬಿಡಲ್ಲ ಎಂದಿದ್ದ ಜಮೀರ್ ವಿರುದ್ಧ ಪೊಲೀಸ್ ಕಮಿಷನರ್, ಡಿಸಿಪಿ‌‌ ಪಶ್ಚಿಮ ವಿಭಾಗ ಮತ್ತು ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಶ್ರೀರಾಮಸೇನೆ ಬೆಂಗಳೂರು ಘಟಕ ದೂರು ನೀಡಿದೆ.

Post a Comment

Previous Post Next Post