Hubballi: ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಹಿಂದೂಪರ ಸಂಘಟನೆಗಳ ಪಟ್ಟು; ಅಂದು ಉಮಾ ಭಾರತಿ ಸಿಎಂ ಸ್ಥಾನ ಕಳೆದುಕೊಂಡಿದ್ದು ಹೇಗೆ? ಪಾಲಿಕೆಗೆ ಮೂರು ದಿನಗಳ ಗಡುವು ನೀಡಿರೋ ಸಂಘಟನೆಗಳು, ಮುಂದೆ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿವೆ.


  ಹುಬ್ಬಳ್ಳಿ ಈದ್ಗಾ ವಿವಾದ (Hubballi Idgah Maidana) ಮತ್ತೆ ಮುನ್ನೆಲೆಗೆ ಬಂದಿದೆ. ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನದ (Chamrajpet Idgah Maidana) ವಿವಾದ ಭುಗಿಲೆದ್ದ ನಂತರ ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದವೂ ಮುನ್ನಲೆಗೆ ಬಂದಿದೆ. ರಾಷ್ಟ್ರಧ್ವಜ ಹಾರಾಟಕ್ಕೆ (National Flag) ಸಂಬಂಧಿಸಿದಂತೆ ಈ ಹಿಂದೆ ವಿವಾದ ಭುಗಿಲೆದ್ದಿತ್ತು. ಇದೀಗ ಗಣೇಶ ಪ್ರತಿಷ್ಠಾಪನೆಗಾಗಿ ವಿವಾದ ಸೃಷ್ಟಿಯಾಗಿದೆ. ಗಣೇಶ ಮೂರ್ತಿ  (Ganesha Idol) ಪ್ರತಿಷ್ಠಾಪನೆಗೆ ಹಿಂದೂಪರ ಸಂಘಟನೆಗಳು ಪಟ್ಟು ಹಿಡಿದಿವೆ. ರಾಣಿ ಚನ್ನಮ್ಮ ಮೈದಾನ ಗಣೇಶೋತ್ಸವ ಸಮಿತಿಯನ್ನು ಹಿಂದೂಪರ ಸಂಘಟನೆಗಳು (Hindu Organizations) ಅಸ್ತಿತ್ವಕ್ಕೆ ತಂದಿವೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ  (Union Minister Pralhad Joshi), ಮಾಜಿ ಸಿಎಂ ಜಗದೀಶ್ ಶೆಟ್ಟರ್ (Former CM Jagadish Shettar), ಪಾಲಿಕೆ ಆಯುಕ್ತರಿಗೆ ಸಮಿತಿ ಮನವಿ ಸಲ್ಲಿಸಿವೆ. ಶ್ರೀರಾಮ ಸೇನೆ (Srirama sene) ಸಂಘಟನೆಯಿಂದಲೂ ಪಾಲಿಕೆಗೆ ಪ್ರತ್ಯೇಕ ಮನವಿ ಸಲ್ಲಿಕೆಯಾಗಿದೆ.

ಇದುವರೆಗೂ ಅನುಮತಿ ಸಿಗದೇ ಇರೋ ಹಿನ್ನೆಲೆಯಲ್ಲಿ ಪಾಲಿಕೆಗೆ ಮತ್ತೊಮ್ಮೆ ಮನವಿ ಸಲ್ಲಿಸಲಾಗಿದೆ. ಈದ್ಗಾ ಮೈದಾನ ಮಹಾನಗರ ಪಾಲಿಕೆ ಆಸ್ತಿಯಾಗಿದೆ. ಮುಸ್ಲಿಂ ಸಮುದಾಯದವರಿಗೆ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡಲಾಗುತ್ತೆ. ಹಿಂದೂಗಳಿಗೆ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡಬೇಕೆಂದು ಹಿಂದೂಪರ ಸಂಘಟನೆಗಳು ಪಟ್ಟು ಹಿಡಿದಿ

 ಗಣೇಶ ಪ್ರತಿಷ್ಠಾಪನೆಗೆ ಹಿಂದೂಗಳ ಸಂಘಟನೆಗಳ ನಿರ್ಧಾ

ಸಾರ್ವಜನಿಕ ಉದ್ದೇಶಗಳಿಗೆ ಮೈದಾನ ಬಳಸಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಹೇಳಿದೆ. ಹೀಗಾಗಿ ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ನೀಡುವಂತೆ ಗಣೇಶೋತ್ಸವ ಸಮಿತಿ ಪಟ್ಟು ಹಿಡಿದಿದೆ. ಗಣೇಶೋತ್ಸವ ಸಮಿತಿಗೆ ಶ್ರೀರಾಮ ಸೇನೆ ಸೇರಿ ವಿವಿಧ ಹಿಂದೂಪರ ಸಂಘಟನೆಗಳು ಬೆಂಬಲ ನೀಡಿವೆ. ಅವಕಾಶ ನೀಡಿದರೇ ಸರಿ, ಇಲ್ಲದಿದ್ದರೆ ಮುಂದೆ ನಡೆಯೋ ಅಹಿತಕರ ಘಟನೆಗಳಿಗೆ ಸರ್ಕಾರವೇ ಜವಾಬ್ದಾರಿಯಾಗುತ್ತೆ ಎಂದು ಎಚ್ಚರಿಸಿವೆ. ಗಣೇಶ ಪ್ರತಿಷ್ಠಾಪನೆ ಮಾಡಿಯೇ ತೀರೋದಾಗಿ ಹಿಂದೂಪರ ಸಂಘಟನೆಗಳು ಖಡಾಖಂಡಿತವಾಗಿ ಹೇಳಿವೆ


. ರವೆ.ಳಿವೆ ಹಿಂದೂ ಸಂಘಟನೆ ಮನವಿ


ಪಾಲಿಕೆಯ ನಿರ್ಧಾರವೇ ಅಂತಿಮ

 ಗಣೇಶೋತ್ಸವ ಸಮಿತಿ ಹಾಗೂ ಶ್ರೀರಾಮ ಸನೆಯಿಂದ ಮನವಿ ಬಂದಿದೆ. ಈದ್ಗಾ ಮೈದಾನದ ಕುರಿತು ಸುಪ್ರೀಂ ಕೋರ್ಟ್ ನೀಡಿರೋ ಆದೇಶ ಪರಿಶೀಲಿಸಲಾಗುವುದು. ಹುಬ್ಬಳ್ಳಿಯ ಗಣ್ಯರು, ವಿವಿಧ ಅಧಿಕಾರಿಗಳ ಜೊತೆ ಚರ್ಚಿಸಲಾಗುತ್ತೆ. ಅನುಮತಿ ನೀಡುವ ಕುರಿತು ಮೇಲಾಧಿಕಾರಿಗಳ ಜೊತೆ ಚರ್ಚಿಸಲಾಗುತ್ತಿದೆ. ಸಾಧಕ – ಬಾಧಕ ಪರಿಶೀಲಿನೆಯ ನಂತರ ಅನುಮತಿ ಕೊಡುವ ಕುರಿತು ತೀರ್ಮಾನ ಮಾಡಲಾಗುತ್ತದೆ. ಪಾಲಿಕೆ ಆಸ್ತಿ ಇರೋದ್ರಿಂದ ಪಾಲಿಕೆಯೇ ಅಂತಿಮ ನಿರ್ಧಾರ ಕೈಗೊಳ್ಳುತ್ತೆ ಎಂದು ರಾಧಾಕೃಷ್ಣ ತಿಳಿಸಿದ್ದಾರೆ.

ಪಾಲಿಕೆಗೆ ಮತ್ತೊಮ್ಮೆ ಮನವಿ ಸಲ್ಲಿಕೆ

ರಾಣಿ ಚೆನ್ನಮ್ಮ ಮೈದಾನ ಗಣೇಶೋತ್ಸವ ಸಮಿತಿಯಿಂದ ಪಾಲಿಕೆ ಎದುರು ಮತ್ತೊಮ್ಮೆ ಪ್ರತಿಭಟನೆ ಮಾಡಲಾಗಿದೆ. ಹಿಂದೂಪರ ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ನೀಡಿದ್ದು, ಗಣೇಶೋತ್ಸವಕ್ಕೆ ಅನುಮತಿ ನೀಡುವಂತೆ ಪಟ್ಟು ಹಿಡಿದಿವೆ. ಒಂದು ವೇಳೆ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡದೇ ಇದ್ದಲ್ಲಿ ಮುಂದೆ ನಡೆಯೋ ಅಹಿತಕರ ಘಟನೆಗಳಿಗೆ ನಾವು ಜವಾಬ್ದಾರಿಯಾಗಲ್ಲ ಅಂತ ಎ


ಚ್ಚರಿಸಿವೆ.ಈದ್ಗಾ ಮೈದಾನ


ಮನವಿ ಸ್ವೀಕರಿಸಿರೋ ಪಾಲಿಕೆ ಆಯುಕ್ತ ರಾಧಾಕೃಷ್ಣ ಹಾಗೂ ಪಾಲಿಕೆ ಮೇಯರ್ ಈರೇಶ್ ಅಂಚಟಗೇರಿ, ಸೂಕ್ತ ಕ್ರಮದ ಭರವಸೆ ನೀಡಿ ಕಳುಹಿಸಿದ್ದಾರೆ. ಪಾಲಿಕೆಗೆ ಮೂರು ದಿನಗಳ ಗಡುವು ನೀಡಿರೋ ಸಂಘಟನೆಗಳು, ಮುಂದೆ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿವೆ.

ಈದ್ಗಾ ವಿವಾದದ ಹಿನ್ನೆಲೆ

ಹಬ್ಬಳ್ಳಿ ಈದ್ಗಾ ವಿವಾದ ಮುಗಿದು 25 ವರ್ಷ ಪೂರ್ಣಗೊಂಡಿದೆ. 1992 ರಲ್ಲಿ ಆರಂಭಗೊಂಡಿದ್ದ ಈದ್ಗಾ ವಿವಾದಕ್ಕೆ 1996 ರಲ್ಲಿ ತೆರೆ ಬಿದ್ದಿತ್ತು. 1992 ರ ಜನವರಿ 26 ರಂದು ಮುರಳಿ ಮನೋಹರ ಜೋಶಿ ಜಮ್ಮು-ಕಾಶ್ಮೀರದ ಲಾಲ್ ಚೌಕ್ ನಲ್ಲಿ ರಾಷ್ಟ್ರಧ್ವಜ ಹಾರಿಸಲು ಯತ್ನಿಸಿದಾಗ, ಅದೇ ಸಂದರ್ಭದಲ್ಲಿ ಎಬಿವಿಪಿ, ಆರ್​ಎಸ್ಎಸ್ ಕಾರ್ಯಕರ್ತರಿಂದ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ರಾಷ್ಟ್ರ ಧ್ವಜ ಹಾರಿಸಲು ಯತ್ನಿಸಲಾಗಿತ್ತು. ರಾಷ್ಟ್ರಧ್ವಜ ಹಾರಿಸೋಕೆ ಅವಕಾಶ ಸಿಗದ ಹಿನ್ನೆಲೆ ವಿವಾದ ಭುಗಿಲೆದ್ದಿತ್ತು.

ವಿವಾದಕ್ಕೆ ಉಮಾ ಭಾರತಿ ಎಂಟ್ರಿ

1994 ರ ಆಗಸ್ಟ್ 15ರಂದು ವಿವಾದಕ್ಕೆ ಮಧ್ಯ ಪ್ರದೇಶದ ಉಮಾ ಭಾರತಿ ಎಂಟ್ರಿ ಕೊಟ್ಟಿದ್ದರು. ಈ ವೇಳೆ ದೇಶಪಾಂಡೆ ನಗರದಲ್ಲಿ ನಡೆದ ಗೋಲಿಬಾರ್​ನಲ್ಲಿ ಸ್ಥಳದಲ್ಲಿಯೇ ಐವರು ಸಾವನ್ನಪ್ಪಿದ್ದರೆ, ಮರು ದಿನ ಮತ್ತೋರ್ವ ಸಾವಿಗೀಡಾಗಿದ್ದ. ಗೋಲಿಬಾರ್​ಗೆ ಒಟ್ಟು ಆರು ಜನ ಸಾ


ವನ್ನಪ್ಪಿದ್ದರು.ಈದ್ಗಾ ಮೈದಾನ

1995 ರಲ್ಲಿ ಈದ್ಗಾ ವಿವಾದಕ್ಕೆ ಅಂದಿನ ಸಿಎಂ ಎಚ್.ಡಿ.ದೇವೇಗೌಡ ಎಂಟ್ರಿ ಕೊಟ್ಟಿದ್ದರು. ಅಂಜುಮನ್-ಎ-ಇಸ್ಲಾಂ ಪದಾಧಿಕಾರಿಗಳಿಂದಲೇ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸುವ ಮೂಲಕ ವಿವಾದಕ್ಕೆ ತಾತ್ಕಾಲಿಕ ತೆರೆ ಎಳೆಯಲಾಗಿತ್ತು. ಮಾಜಿ ಸಚಿವ ಸಿ.ಎಂ.ಇಬ್ರಾಂ ನೇತೃತ್ವದಲ್ಲಿ ಸೌಹಾರ್ದಯುತ ನಿರ್ಧಾರ ಕೈಗೊಳ್ಳಲಾಗಿತ್ತು.

ಇದನ್ನೂ ಓದಿ: Shivamogga: ಚಾಕು ಇರಿತ ಕೇಸ್​ಗೆ ಟ್ವಿಸ್ಟ್: ಪ್ರೇಮ್ ​ಸಿಂಗ್​ಗೂ ಮೊದಲೇ ಸದ್ದಾಂ ಎಂಬಾತನ ಮೇಲೆ ಹಲ್ಲೆ

ಸಿಎಂ ಸ್ಥಾನಕ್ಕೆ ಉಮಾ ಭಾರತಿ ರಾಜೀನಾಮೆ

1994 ರಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಮಾ ಭಾರತಿಗೆ ಜಾಮೀನು ರಹಿತ ವಾರಂಟ್ ಜಾರಿಯಾಗಿತ್ತು. ಈ ಹಿನ್ನೆಲೆಯಲ್ಲಿ 2004 ರ ಆಗಸ್ಟ್​ನಲ್ಲಿ ಉಮಾ ಭಾರತಿ ಮಧ್ಯಪ್ರದೇಶದ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವಂತಾಯಿತು.

ಇದನ್ನೂ ಓದಿ: Taj Bawadi: ವಿಜಯಪುರದಲ್ಲಿ ಮತ್ತೆ ಮುನ್ನೆಲೆಗೆ ಬಂದ ತಾಜ್ ಬಾವಡಿ; ಏನಿದು ಸಂಘರ್ಷ?

ಆಗಿನ ಸೌಹಾರ್ದ ಒಪ್ಪಂದದ ಪ್ರಕಾರ ಎರಡು ಬಾರಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಕೊಡಲಾಗಿತ್ತು. ರಂಜಾನ್ ಹಾಗೂ ಬಕ್ರಿದ್ ಸಂದರ್ಭದಲ್ಲಿ ನಮಾಜ್​​ಗೆ ಅವಕಾ


ಶ ನೀಡಲಾಗಿತ್ತು.ಈದ್ಗಾ ಮೈದಾನ

ಪಾಲಿಕೆಯ ಒಡೆತನದಲ್ಲಿ ಈದ್ಗಾ ಮೈದಾನ


ಜನವರಿ 24 ಹಾಗೂ ಆಗಸ್ಟ್ 15ರಂದು ರಾಷ್ಟ್ರದ ಧ್ವಜ ಹಾರಿಸಲು ಅವಕಾಶ ಕೊಡಲಾಗಿತ್ತು. ಮೂಲತರ್ ಈದ್ಗಾ ಮೈದಾನದ ಜಾಗ ಮುನಿಸಿಪಾಲಿಟಿಗೆ ಸೇರಿದ್ದಾಗಿದೆ. ಹುಬ್ಬಳ್ಳಿಯ ಮುನಿಸಿಪಾಲಿಟಿ 1921ರಲ್ಲಿ ಅಂಜುಮನ್ ಸಂಸ್ಥೆಗೆ ವರ್ಷಕ್ಕೆ ಒಂದು ರೂಪಾಯಿಗೆ ಬಾಡಿಗೆ ನೀಡಿತ್ತು. 999 ವರ್ಷಗಳ ಕಾಲ ಮುನಿಸಿಪಾಲಿಟಿ ಲೀಸ್​ಗೆ ನೀಡಿತ್ತು. ಈಗಲೂ ಈದ್ಗಾ ಮೈದಾನ ಪಾಲಿಕೆಯ ಒಡೆತನದಲ್ಲಿದೆ

Post a Comment

Previous Post Next Post