ED Raids: ಸಿಎಂ ಮಮತಾ ಬ್ಯಾನರ್ಜಿಗೆ ಆಪ್ತವಾಗಿರುವ ಚಾನೆಲ್​​ಗಳಿಗೆ ಇಡಿ ರೈಡ್


  ಜಾರಿ ನಿರ್ದೇಶನಾಲಯ (ED) ಮತ್ತು ಆದಾಯ ತೆರಿಗೆ (IT) ಯ ಎರಡು ತಂಡಗಳು ಪ್ರಸಿದ್ಧ ಟಿವಿ ಚಾನೆಲ್ಗಳ (TV Channel) ಕಚೇರಿಗೆ ರೈಡ್ ಮಾಡಿವೆ. ಕೌಸ್ತವ್ ರಾಯ್ ಅವರ ನಿವಾಸ ಮತ್ತು ಕಚೇರಿಗಳಲ್ಲಿ ಏಕಕಾಲದಲ್ಲಿ ದಾಳಿ ಮತ್ತು ಶೋಧ ಕಾರ್ಯಾಚರಣೆ ನಡೆದಿದೆ. ಚಾನೆಲ್, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಿಕಟ ಸಂಬಂಧಕ್ಕೆ ಹೆಸರುವಾಸಿಯಾಗಿದೆ.

 ಕೋಲ್ಕತ್ತಾ(ಆ.17: ಪಶ್ಚಿಮ ಬಂಗಾಳದಲ್ಲಿ ಸದ್ಯ ರೈಡ್, ದಾಳಿ, ಹಗರಣಗಳ ಸುದ್ದಿ ಬಿಟ್ಟರೆ ಬೇರೇನೂ ಕೇಳಿಸುತ್ತಿಲ್ಲ. ಮಮತಾ ಬ್ಯಾನರ್ಜಿ ಸಿಎಂ ಆಗಿರುವ ಪಶ್ಚಿಮ ಬಂಗಾಳದ ಎಸ್ಎಸ್ಸಿ ಹಗರಣ ಇತ್ತೀಚೆಗಷ್ಟೇ ಭಾರೀ ಚರ್ಚೆಯಾಗಿತ್ತು. ಇದೀಗ ಜಾರಿ ನಿರ್ದೇಶನಾಲಯ (ED) ಮತ್ತು ಆದಾಯ ತೆರಿಗೆ (IT) ಯ ಎರಡು ತಂಡಗಳು ಪ್ರಸಿದ್ಧ ಟಿವಿ ಚಾನೆಲ್ಗಳ (TV Channel) ಕಚೇರಿಗೆ ರೈಡ್ ಮಾಡಿವೆ. ಕೋಲ್ಕತ್ತಾ ಮೂಲದ ಉದ್ಯಮಿ ಮತ್ತು ಜನಪ್ರಿಯ ಬಂಗಾಳಿ ಸುದ್ದಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಕೌಸ್ತವ್ ರಾಯ್ ಅವರ ನಿವಾಸ ಮತ್ತು ಕಚೇರಿಗಳಲ್ಲಿ ಏಕಕಾಲದಲ್ಲಿ ದಾಳಿ ಮತ್ತು ಶೋಧ ಕಾರ್ಯಾಚರಣೆ ನಡೆದಿದೆ. ಚಾನೆಲ್, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಿಕಟ ಸಂಬಂಧಕ್ಕೆ ಹೆಸರುವಾಸಿಯಾಗಿದೆ. ಇಡಿ ಮೂಲವು ದಾಳಿಯನ್ನು ದೃಢಪಡಿಸಿದೆ. ಆದರೆ ಈ ಬೆಳವಣಿಗೆಗೆ ಕಾರಣವನ್ನು ಉಲ್ಲೇಖಿಸಲು ನಿರಾಕರಿಸಿದೆ

ಬರೀ ವಿವಾದ ಹಿನ್ನೆಲೆ ಇರುವ ವ್ಯಕ್ತಿ ಸಮಿತಿ ಮುಖ್ಯ

 ಈ ವರ್ಷದ ಮೇ ತಿಂಗಳಲ್ಲಿ ರಾಜ್ಯ ಸರ್ಕಾರ ಕಲ್ಯಾಣ ಮತ್ತು ಅಭಿವೃದ್ಧಿ ಯೋಜನೆಗಳ ಯೋಜನೆ ಮತ್ತು ಮೇಲ್ವಿಚಾರಣೆಗಾಗಿ ಸಮಿತಿಯನ್ನು ರಚಿಸಿ ವಿವಾದಾತ್ಮಕ ಹಿನ್ನೆಲೆ ಹೊಂದಿರುವ ರಾಯ್ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದ ನಂತರ ರಾಯ್ ವಿವಾದದ ಸುಳಿಯಲ್ಲಿ ಸಿಲುಕಿದ್ದರು

ಕಂಪ್ಯೂಟರ್, ಸಾಫ್ಟ್‌ವೇರ್ ಮತ್ತು ಮಾಧ್ಯಮ ಕ್ಷೇತ್ರದ ನಂ

ಆದರೆ, ನಂತರದಲ್ಲಿ ಆಗಿನ ರಾಜ್ಯಪಾಲ ಜಗದೀಪ್ ಧನಕರ್ ಅವರು ನಿರ್ಣಾಯಕ ನೇತೃತ್ವದಲ್ಲಿ ರಾಯ್ ಅವರನ್ನು ನೇಮಿಸಿದ ಸಮರ್ಥನೆಯನ್ನು ಪ್ರಶ್ನಿಸಿದ ನಂತರ ಅವರ ಹೆಸರನ್ನು ರದ್ದುಗೊಳಿಸಲಾಯಿತು. ರಾಯ್ ಅವರು ಕಂಪ್ಯೂಟರ್, ಸಾಫ್ಟ್‌ವೇರ್ ಮತ್ತು ಮಾಧ್ಯಮದಂತಹ ಬಹು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾ

2018 ರಲ್ಲಿ ಅರೆ

ಮಾರ್ಚ್ 2018 ರಲ್ಲಿ, ಆರ್‌ಪಿ ಇನ್ಫೋಸಿಸ್ಟಮ್ಸ್‌ನ ನಿರ್ದೇಶಕರಾಗಿ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್ ಸೇರಿದಂತೆ ಬ್ಯಾಂಕ್‌ಗಳ ಒಕ್ಕೂಟವನ್ನು ಒಳಗೊಂಡಿರುವ ರೂ 515 ಕೋಟಿ ಬ್ಯಾಂಕ್ ವಂಚನೆ ಹಗರಣಕ್ಕೆ ಸಂಬಂಧಿಸಿದಂತೆ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ಅವರನ್ನು ಬಂಧಿಸಿತು

ಇದನ್ನೂ ಓದಿ: 18 Foetuses Found: ತ್ಯಾಜ್ಯ ಎಸೆಯುವ ಮೈದಾನದಲ್ಲಿ 18 ಭ್ರೂಣ ಪತ್ತೆ



ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ರಾಯ್ ಒಡೆತನದ ಬಂಗಾಳಿ ಚಾನೆಲ್, ಗೃಹ ವ್ಯವಹಾರಗಳ ಸಚಿವಾಲಯದ ಭದ್ರತಾ ಕ್ಲಿಯರೆನ್ಸ್‌ನ ನಿರಾಕರಣೆಯನ್ನು ಉಲ್ಲೇಖಿಸಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಮಾಡಿ ವಿವಾದಕ್ಕೆ ಕಾರಣವಾಗಿತ್ತು. ಇದೇ ವಿಚಾರವಾಗಿ ಸಚಿವಾಲಯದಿಂದ ಚಾನೆಲ್ ಲೈಸೆನ್ಸ್ ರದ್ದಾಗುವ ಎಚ್ಚರಿಕೆಯನ್ನು ಪಡೆದಿತ್ತು !.ಸ್ಟ್ರೆ.ಟು.ಸ್ಥ.ರಿಕೆಯನ್ನು ಪಡೆದಿತ್ತು

Post a Comment

Previous Post Next Post