Bihar Politics: 8ನೇ ಬಾರಿಗೆ ಬಿಹಾರ ಸಿಎಂ ಆದ ನಿತೀಶ್ ಕುಮಾರ್; ತೇಜಸ್ವಿ ಯಾದವ್ ಉಪಮುಖ್ಯಮಂತ್ರಿ


  ನಿತೀಶ್ ಕುಮಾರ್ ಅವರು ಜನಾದೇಶಕ್ಕೆ ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿ ಬಿಜೆಪಿ ಇಂದು ಪಾಟ್ನಾದಲ್ಲಿ ಬೃಹತ್ ಪ್ರತಿಭಟನೆ ನಡೆಸಿದೆ. ಬಿಹಾರದ ಎಲ್ಲ ಜಿಲ್ಲೆಗಳಲ್ಲೂ ಪ್ರತಿಭಟನೆ ನಡೆಸುವ ಯೋಜನೆಯನ್ನು ಬಿಜೆಪಿ ಹಮ್ಮಿಕೊಂಡಿದೆ.

ಪಾಟ್ನಾ: ಬಿಹಾರದಲ್ಲಿ ಮತ್ತೆ ಹೊಸ ಸರ್ಕಾರ (Bihar Politics Updates) ರಚನೆಯಾಗುತ್ತಿದೆ. ಆದರೆ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಅವರೇ (Bihar CM Nitish Kumar) ಮುಂದುವರೆಯಲಿದ್ದಾರೆ. ಮಂಗಳವಾರ ಬಿಜೆಪಿಯನ್ನು ತೊರೆದು ತೇಜಸ್ವಿ ಯಾದವ್ ಮತ್ತು ಇತರ ವಿರೋಧ ಪಕ್ಷಗಳನ್ನು ಒಳಗೊಂಡ ಹೊಸ ಮಹಾಮೈತ್ರಿಯನ್ನು ಘೋಷಿಸಿದ ನಂತರ ನಿತೀಶ್ ಕುಮಾರ್ ಅವರು ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ನಿತೀಶ್ ಕುಮಾರ್ ಎಂಟನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ತೇಜಸ್ವಿ ಯಾದವ್ (Tejaswi Yadav) ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇಂದು ಬೇರೆ ಯಾವುದೇ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವುದಿಲ್ಲ ಎಂದು ತಿಳಿದುಬಂದಿದೆ.

ಬಿಜೆಪಿಯಿಂದ ಪ್ರತಿಭಟನೆ

ನಿತೀಶ್ ಕುಮಾರ್ ಅವರು ಜನಾದೇಶಕ್ಕೆ ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿ ಬಿಜೆಪಿ ಇಂದು ಪಾಟ್ನಾದಲ್ಲಿ ಬೃಹತ್ ಪ್ರತಿಭಟನೆ ನಡೆಸಿದೆ. ಬಿಹಾರದ ಎಲ್ಲ ಜಿಲ್ಲೆಗಳಲ್ಲೂ ಪ್ರತಿಭಟನೆ ನಡೆಸುವ ಯೋಜನೆಯನ್ನು ಬಿಜೆಪಿ ಹಮ್ಮಿಕೊಂಡಿದೆ. ಬಿಹಾರ ರಾಜ್ಯ ಬಿಜೆಪಿ ಮುಖ್ಯಸ್ಥ ಡಾ.ಸಂಜಯ್ ಜೈಸ್ವಾಲ್, ಬಿಹಾರದ ಜನರು ನಿತೀಶ್ ಕುಮಾರ್ ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಹೇಳಿದ್ದಾರೆ.

ಬಿಜೆಪಿ-ಜನತಾ ದಳ (ಯುನೈಟೆಡ್) ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ತಾರ್​ಕಿಶೋರ್ ಪ್ರಸಾದ್ ಅವರು ಮೈತ್ರಿ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಲು ನಾವು ಪ್ರಯತ್ನಿಸಿದ್ದೇವೆ ಎಂದು ಹೇಳಿದ್ದಾರೆ. ಈ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಿತೀಶ್ ಕುಮಾರ್ ಅವರೊಂದಿಗೆ ಮಾತನಾಡಿದ್ದಾರೆ ಎಂದು ಅವರು ಹೇಳಿದರು.

ಪಕ್ಷದ ಶಾಸಕರ ಅಭಿಪ್ರಾಯಕ್ಕೆ ಮನ್ನಣೆ

ಹೊಸ ಆಡಳಿತ ಒಕ್ಕೂಟವು "ಏಳು ಪಕ್ಷಗಳ ಮಹಾಘಟಬಂಧನ್ ಎಂದು ಮಹಾ ಮೈತ್ರಿ ಎಂದು ಕುಮಾರ್ ನಿನ್ನೆ ಹೇಳಿದ್ದಾರೆ. ಒಂಬತ್ತು ವರ್ಷಗಳಲ್ಲಿ ಎರಡನೇ ಬಾರಿಗೆ ಬಿಜೆಪಿಯಿಂದ ಬೇರ್ಪಡುವ ನಿರ್ಧಾರ ತಮ್ಮ ಪಕ್ಷದ ಶಾಸಕರೊಂದಿಗಿನ ಸಂವಾದದಲ್ಲಿ ಸ್ವೀಕರಿಸಿದ ಪ್ರತಿಕ್ರಿಯೆಯನ್ನು ಆಧರಿಸಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: Bihar Politics: ನಿತೀಶ್ ಕುಮಾರ್ 2024ರಲ್ಲಿ ಪ್ರಧಾನಿ ಅಭ್ಯರ್ಥಿ ಆಗುವರೇ? ಪ್ರಶಾಂತ್ ಕಿ


ಶೋರ್ ಹೀಗಂದ್ರುತೇಜಸ್ವಿ ಯಾದವ್ ಅವರು ಬಿಹಾರ ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಲಿದ್ದು ನಿತೀಶ್ ಕುಮಾರ್ ಅವರೊಂದಿಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬಿಜೆಪಿ ತನ್ನ ಎಲ್ಲಾ ಮಿತ್ರಪಕ್ಷಗಳಿಗೆ ದ್ರೋಹ ಮಾಡುತ್ತದೆ ಮತ್ತು ಇತರರನ್ನು ಹೆದರಿಸುತ್ತದೆ ಎಂದು ತೇಜಸ್ವಿ ಯಾದವ್ ನಿತೀಶ್ ಕುಮಾರ್ ಅವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಇದನ್ನೂ ಓದಿ: Bihar Politics: ಬಿಜೆಪಿಯಿಂದ ನಿತೀಶ್ ದೂರಾ ದೂರ, ವೈರಲ್ ಆಯ್ತು ಲಾಲೂ ಯಾದವ್ 5 ವರ್ಷ ಹಳೇ ಟ್ವೀಟ್

ಆಗಸ್ಟ್ 15ರ ನಂತರ ಸಚಿವ ಸಂಪುಟ ವಿಸ್ತ

ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್ ಅವರು ಕ್ರಮವಾಗಿ ಬಿಹಾರ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ.  ಆಗಸ್ಟ್ 15 ರ ನಂತರ ಸಂಪುಟ ವಿಸ್ತರಣೆಯಾಗಬಹುದು ಎಂದು ಅಂದಾಜಿಸಲಾಗಿದೆ.  RJD ಮತ್ತು JD(U) ಇದೇ ಸೂತ್ರವನ್ನು ಅಳವಡಿಸಿಕೊಳ್ಳುವ ಸಾಧ್ಯತೆಯಿದೆ. ಬಿಜೆಪಿ ಜತೆ ನಿತೀಶ್‌ ಕುಮಾರ್‌ ರಚಿಸಿದ ಸರ್ಕಾರದಂತೆಯೇ  ಸಚಿವ ಸಂಪುಟ ಹಂಚಿಕೆ. ಹಣಕಾಸು, ರಸ್ತೆ ನಿರ್ಮಾಣ, ಪಟ್ಟಣ ಯೋಜನೆ, ಕೃಷಿ ಮತ್ತು ಭೂ ಕಂದಾಯ ಖಾತೆಗಳು ತಮಗೆ ಸೇರಬೇಕೆಂದು ಆರ್‌ಜೆಡಿ ಒತ್ತಾಯಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.ರಣೆ​!

Post a Comment

Previous Post Next Post