ಗುತ್ತಿಗೆದಾರರು ಮತ್ತೊಮ್ಮೆ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ಗುತ್ತಿಗೆದಾರರ ಸಂಘ ಇಂದು ಮಾಜಿ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿ ದಾಖಲೆ ನೀಡಿತು. ಬಳಿಕ ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ, ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ರು.
ರಾಜ್ಯ ಬಿಜೆಪಿ ಸರ್ಕಾರದ ಮೇಲೆ ಮತ್ತೊಮ್ಮೆ 40% ಕಮಿಷನ್ (Corruption) ಸದ್ದು ಮಾಡ್ತಿದೆ. ಮುಖ್ಯಮಂತ್ರಿ ಬೊಮ್ಮಾಯಿಯಿಂದ (Basavaraj Bommai) ಹಿಡಿದು ಸಚಿವರುಗಳು, (Ministers), ಶಾಸಕರು, ಪ್ರತಿಯೊಂದು ಇಲಾಖೆಯಲ್ಲಿಯೂ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ (Kempanna) ಗಂಭೀರ ಆರೋಪ ಮಾಡಿದ್ದಾರೆ. ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ (Muniratna) ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದಾರೆ. ಸಿದ್ದರಾಮಯ್ಯ (Siddaramaiah) ಸುದ್ದಿಗೋಷ್ಠಿ ನಡೆಸಿ, ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಮಾತ್ರವಲ್ಲ ಹೈಕೋರ್ಟ್ (Karnataka High court) ಹಾಲಿ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಸಿದ್ದರಾಮಯ್ಯರ ಆರೋಪಕ್ಕೆ ಸಚಿವ ಮುನಿರತ್ನ, ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ಕೊಟ್ಟಿದ್ದಾರೆ.
ಗುತ್ತಿಗೆದಾರರು ಮತ್ತೊಮ್ಮೆ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ಗುತ್ತಿಗೆದಾರರ ಸಂಘ ಇಂದು ಮಾಜಿ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿ ದಾಖಲೆ ನೀಡಿತು. ಬಳಿಕ ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ, ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ರು
. ವಿರುದ್ಧ ಸಿದ್ದರಾಮಯ್ಯ ಗುತ್ತಿಗೆದಾರರ ಸಂಘದಿಂದ ಸಿದ್ದರಾಮಯ್ಯ ಭೇಟಿ
ಕಾಮಗಾರಿ ಮುನ್ನವೇ ಲಂಚ ಕೊಡಬೇಕಂತೆ- ಸಿದ್ದರಾಮ
ರಾಜ್ಯ ಗುತ್ತಿಗೆದಾರ ಸಂಘ ಬಂದು ನನ್ನನ್ನ ಭೇಟಿ ಮಾಡಿದ್ದರು. ಅರಣ್ಯ ಇಲಾಖೆ ಗುತ್ತಿಗೆದಾರರು ಬಂದು ಭೇಟಿ ಮಾಡಿದ್ದರು. ಸರ್ಕಾರ ಇದುವರೆಗೂ ಕ್ರಮ ತೆಗದುಕೊಂಡಿಲ್ಲ. ಸಚಿವರು ಶೇಕಡ 30ರಿಂದ 40ರಷ್ಟು ಕಮಿಷನ್ ಕೇಳ್ತಿದ್ದಾರೆ. ಕಾಮಗಾರಿ ಮುನ್ನವೇ ಲಂಚ ಕೊಡ್ಬೇಕು. ನ್ಯಾಯಾಂಗ ತನಿಖೆಯಾದ್ರೆ ದಾಖಲೆ ಕೊಡುತ್ತೇವೆ ಎಂದು ಹೇಳಿದ್ದಾರೆ ಅಂತಾ ಕಿಡಿಕಾರಿದ್ರು
ಇದನ್ನೂ ಓದಿ: ಸರ್ಕಾರದ ವಿರುದ್ಧ ಮತ್ತೆ 40% ಕಮಿಷನ್ ತೂಗುಕತ್ತಿ; ಮುನಿರತ್ನ ವಿರುದ್ಧ ಆರೋಪ, ದಾಖಲೆ ಕೊಡಿ ಅಂತಾ ಸಚಿವರ
ಭ್ರಷ್ಟಾಚಾರವನ್ನ ಸಾಬೀತು ಪಡಿಸಬೇಕೆಂದು ನೀವು ಏನ್ ಹೇಳಿದ್ರೂ ಕೇಳುತ್ತೇವೆ ಎಂದು ಸಿಎಂ, ಸಚಿವರು ಹೇಳಿದ್ದಾರೆ. ಭ್ರಷ್ಟಾಚಾರ ಎಲ್ಲಾ ಕಾಲದಲ್ಲೂ ಇತ್ತು. ಆದ್ರೆ ಬಿಜೆಪಿ ಸರ್ಕಾರದಲ್ಲಿ ಶರವೇಗದಲ್ಲಿ ಕಮಿಷನ್ ಇದೆ. ಇದನ್ನ ರಾಜ್ಯ ಗುತ್ತಿಗೆದಾರರು ಹೇಳುತ್ತಿದ್ದಾರೆ ಅಂತಾ ಸಿದ್ದರಾಮಯ್ಯ ಕಿಡಿಕಾರಿದ್ರು
ಪ್ರಾಮಾಣಿಕರಾಗಿದ್ರೆ ನ್ಯಾಯಾಂಗ ತನಿಖೆ ಕೊಡಿ- ಸಿದ್ದರಾಮ
ಹಾಲಿ ಹೈಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಯಾಗಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಮತ್ತೆ ಸದನದಲ್ಲಿ ನಾನು ಇದನ್ನು ಪ್ರಸ್ತಾಪ ಮಾಡುತ್ತೇನೆ. ನೀವು ಪ್ರಾಮಾಣಿಕರಾಗಿದ್ರೆ ನ್ಯಾಯಾಂಗ ತನಿಖೆಗೆ ಕೊಡಿ ಅಂತಾ ಹೇಳಿದ್ರು. ನ್ಯಾಯಾಂಗ ತನಿಖೆ ಮಾಡಲು ಭಯವೇಕೆ? ನ್ಯಾಯಾಂಗ ತನಿಖೆ ಒಪ್ಪದೇ ಇದ್ರೆ ಜನರು ತೀರ್ಮಾನ ಮಾಡ್ತಾರೆ ಅಂತಾ ಹೇಳಿದ್ರು
ನಿಮ್ಮ ಭಂಡತನ ಜನರೇ ನೋಡ್ತಾರೆ- ಸಿದ್ದರಾ
ನೀವು ಭಂಡತನ ಮಾಡಿದ್ರೆ ಜನರೇ ನೋಡ್ತಾರೆ. ಸಚಿವ ಮುನಿರತ್ನ ಕಮಿಷನ್ ಕಲೆಕ್ಷನ್ ಬಗ್ಗೆ ಗುತ್ತಿಗೆದಾರರು ನನ್ನ ಗಮನಕ್ಕೆ ತಂದ್ರು. ಬೇರೆ ಬೇರೆ ಇಲಾಖೆಯಲ್ಲಿ ಭ್ರಷ್ಟಾಚಾರದ ಬಗ್ಗೆ ಗಮನಕ್ಕೆ ತಂದ್ರು. ಸರ್ಕಾರದ ಮೇಲೆಯೇ ಗುತ್ತಿಗೆದಾರರ ಸಂಘದವರು ಆರೋಪ ಮಾಡಿದ್ದಾರೆ. ಈಗ ಹೈಕೋರ್ಟ್ ಹಾಲಿ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಯಾಗಬೇಕು ಅಂತಾ ಒತ್ತಾಯಿಸಿದ್ರು
ಇದನ್ನೂ ಓದಿ: ನಳಿನ್ ಕುಮಾರ್ ಕಟೀಲ್ ಬದಲಾವಣೆ ಬಹುತೇಕ ಫಿಕ್ಸ್; ಈ ಐವರಲ್ಲಿ ಯಾರಾಗ್ತಾರೆ ಬಿಜೆಪಿ ರಾಜ್ಯಾಧ್ಯ
ರಾಜ್ಯ ಸರ್ಕಾರಕ್ಕೆ ಕುಟುಕಿದ ಕೆಪಿ
ಕಮಿಷನ್ ಆರೋಪದ ಬೆನ್ನಲ್ಲೇ ಸರ್ಕಾರದ ವಿರುದ್ಧ ಕೆಪಿಸಿಸಿ ಆಕ್ರೋಶ ಹೊರಹಾಕಿದೆ. ಮುನಿರತ್ನ ವಿರುದ್ಧ ಕೆಪಿಸಿಸಿ ಕಿಡಿಕಾರಿದೆ. ಬಿಜೆಪಿ ಭ್ರಷ್ಟೋತ್ಸವದ ಪರಿಣಾಮದಿಂದ ಬೆಂಗಳೂರಿನ ರಸ್ತೆಗಳು ಪರಲೋಕದ ದಾರಿಗಳಾಗಿ ಬದಲಾಗಿವೆ ಎಂದು ಜರೆದಿದೆ. ಬಿಜೆಪಿ ಕಮಿಷನ್ ಶೇಕಡ 100ಕ್ಕೆ ತಲುಪಿದೆ ಅಂತಾ ಹೇಳಿ
ಸ್ವತಃ ಗುತ್ತಿಗೆದಾರರಾಗಿದ್ದ ಸಚಿವ 'ಮನಿ'ರತ್ನ ಸಚಿವ ಸ್ಥಾನ ಸಿಕ್ಕಿದ್ದೇ ತಡ ಗುತ್ತಿಗೆದಾರರನ್ನೇ ದೋಚಲು ಶುರು ಮಾಡಿದ್ದಾ
40% ಕಮಿಷನ್ ಸರ್ಕಾರ ಅಧಿಕಾರಿಗಳನ್ನೇ ವಸೂಲಿಗೆ ಬಳಸಿಕೊಳ್ಳುತ್ತಿದೆ ಎಂದು ಗುತ್ತಿಗೆದಾರರ ಆರೋ
ರಾಜ್ಯದಲ್ಲಿ ias, ips ಅಧಿಕಾರಿಗಳ ಬಂಧನವಾಗಿದ್ದು ಇದಕ್ಕೆ ಪುಷ್ಠಿ ಕೊಡುತ್ತದೆ.#bjpbrashtots
— karnataka congress (@inckarnataka) august 24, 20
ಸರ್ಕಾರದ ವಿರುದ್ಧ ಕುಮಾರಸ್ವಾಮಿ ಆಕ್ರೋ
ಸಚಿವ ಮುನಿರತ್ನ ಮೇಲೆ ಕಮಿಷನ್ ಆರೋಪಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ. ಇದು ಹೊಸದೇನಲ್ಲ. ಎಲ್ಲಾ ಕಡೆ ಇದೇ ನಡಿತಾ ಇರೋದು. ಪ್ರಧಾನಿ ಭಾಷಣ ಭ್ರಷ್ಟಾಚಾರ ಬಗ್ಗೆ ಮಾತನಾಡ್ತಾರೆ. ಬೀದಿ ಬೀದಿಲಿ 40% ಚರ್ಚೆ ಆಗ್ತಾ ಇದೆ. ಇದು ಪ್ರಧಾನಿಗಳ ಗಮನಕ್ಕೆ ಹೋಗಿಲ್ವಾ ಅಂತಾ ಪ್ರಶ್ನೆ ಮಾಡಿದ್ದಾರೆ. ಶ22avaಪ.ರೆ,ದೆ.ಸಿಸಿಕ್ಷ?.ಮಯ್ಯ.ಯ್ಯ.ಸವಾಲ್.ಯ್ಯಳ ಗಮನಕ್ಕೆ ಹೋಗಿಲ್ವಾ ಅಂತಾ ಪ್ರಶ್ನೆ ಮಾಡಿದ್ದಾರೆ.


Post a Comment