ಬಾಲಕಿಯರೆಲ್ಲಾ ಶಾಲೆಗೆ ತೆರಳಿದ ಬಳಿಕ ಸಂತ್ರಸ್ತೆ ತನ್ನ ಸ್ನೇಹಿತರಿಗೆ ತಡವಾಗಿ ಬರುವುದಾಗಿ ಹೇಳಿದ್ದಳು. ಆದರೆ ಆಕೆ ಹಿಂತಿರುಗದ ಕಾರಣ ಸಿಬ್ಬಂದಿ ಆಕೆಯ ಹಾಸ್ಟೆಲ್ ಕೊಠಡಿಯನ್ನು ಪರಿಶೀಲಿಸಿದಾಗ ಆಕೆಯು ನೇಣು ಹಾಕಿಕೊಂಡಿರುವುದು ಕಂಡು ಬಂದಿದೆ. ಕಳೆದ 2 ವಾರದಲ್ಲಿ ರಾಜ್ಯದಲ್ಲಿ ಇದು 3ನೇ ವಿದ್ಯಾರ್ಥಿನಿಯ ಸಾವಿನ ಪ್ರಕರಣವಾಗಿದ.
ಚೆನ್ನೈ: ತಮಿಳುನಾಡಿನಲ್ಲಿ ಮತ್ತೊಬ್ಬ ವಿದ್ಯಾರ್ಥಿಯ ಸಾವು ಪ್ರಕರಣ (Tamil Nadu Girl Suicide) ವರದಿಯಾಗಿದ್ದು, ಸಂಚಲನ ಮೂಡಿಸಿದೆ. ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ (Tiruvallur district) 12 ನೇ ತರಗತಿಯ ಬಾಲಕಿ ಸೋಮವಾರ ನಸುಕಿನಲ್ಲಿ ತನ್ನ ಹಾಸ್ಟೆಲ್ ಕೋಣೆಯಲ್ಲಿ ಆತ್ಮಹತ್ಯೆ (suicide) ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆಕೆಯ ಸ್ನೇಹಿತರ ಪ್ರಕಾರ, ಅವಳು ಒಂದು ತಿಂಗಳಿನಿಂದ ಮನೆಗೆ ಭೇಟಿ ನೀಡಿರಲಿಲ್ಲ. ಬೇಸರದಲ್ಲಿರುವಂತೆ ಕಾಣುತ್ತಿದ್ದಳಂತೆ. ಆಕೆ ಸರ್ಕಾರಿ ಅನುದಾನಿತ ಶಾಲೆಯಲ್ಲಿ ಓದಿತ್ತಿದ್ದು, ಆಕೆಯ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಿರುವಳ್ಳು ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕೊಂಡೊಯ್ಯಲಾಯಿತು. ಭಾರೀ ಪೊಲೀಸ್ ನಿಯೋಜನೆಯಲ್ಲಿ ಶಾಲಾ ಆವರಣದ ಬಳಿ ಸ್ಥಳೀಯರು ಮತ್ತು ಪೋಷಕರಿಂದ ಹಲವಾರು ಪ್ರತಿಭಟನೆಗಳು ನಡೆದವು. ಬಾಲಕಿಯ ಪೋಷಕರು ದಿನಗೂಲಿ ಕಾರ್ಮಿಕರಾಗಿದ್ದು, ಕಿಲಚೇರಿ ಗ್ರಾಮದಲ್ಲಿ ವಾಸವಿದ್ದಾರೆ. ಜಿಲ್ಲೆಯ ತಿರುತ್ತಣಿ ಪಟ್ಟಣದಲ್ಲಿ ಆಕೆಯ ಗ್ರಾಮದ ಜನರು ಬಸ್ ಮತ್ತು ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು.
ಸಹಪಾಠಿಗಳ ತೆರಳಿದ ಬಳಿಕ ಹಾಸ್ಟೆಲ್ನಲ್ಲಿ ಆತ್ಮಹತ್ಯೆ
ಸೋಮವಾರ ಬೆಳಗ್ಗೆ ಬಾಲಕಿಯರೆಲ್ಲಾ ಶಾಲೆಗೆ ತೆರಳಿದ ಬಳಿಕ ಸಂತ್ರಸ್ತೆ ತನ್ನ ಸ್ನೇಹಿತರಿಗೆ ತಡವಾಗಿ ಬರುವುದಾಗಿ ಹೇಳಿದ್ದಳು. ಆದರೆ ಆಕೆ ಹಿಂತಿರುಗದ ಕಾರಣ ಸಿಬ್ಬಂದಿ ಆಕೆಯ ಹಾಸ್ಟೆಲ್ ಕೊಠಡಿಯನ್ನು ಪರಿಶೀಲಿಸಿದಾಗ ಆಕೆಯು ನೇಣು ಹಾಕಿಕೊಂಡಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯ ನಂತರ, ಹಾಸ್ಟೆಲ್‌ನಿಂದ ಯಾವುದೇ ಸೂಸೈಡ್ ನೋಟ್ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮಪ್ಪೇಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕ್ರೈಂ ಬ್ರಾಂಚ್-ಅಪರಾಧ ತನಿಖಾ ವಿಭಾಗಕ್ಕೆ (ಸಿಬಿ-ಸಿಐಡಿ) ವರ್ಗಾಯಿಸಲಾಗಿದೆ. ಸಿಬಿ-ಸಿಐಡಿ ಅಧಿಕಾರಿಗಳು ಈಗ ಶಾಲಾ ಕ್ಯಾಂಪಸ್‌ನಲ್ಲಿರುವ ಶಾಲಾ ಸಿಬ್ಬಂದಿ ಮತ್ತು ಹಾಸ್ಟೆಲ್ ವಾರ್ಡನ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಇದನ್ನೂ ಓದಿ: Lottery Surprise: ವಿಪರೀತ ಸಾಲ, ಮನೆ ಮಾರುವ ಬರೀ 2 ಗಂಟೆ ಮುನ್ನ ಹೊಡೆಯಿತು ಕೋಟಿ ಲಾಟರಿ!
ಕುಟುಂಬಸ್ಥರ ಸಂಶಯ
ಸಂತ್ರಸ್ತೆಯ ಸೋದರಿ ಹಾಗೂ ಸೋದರ ಸಂಬಂಧಿ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರತೆ.ಆಕೆಯ ಸಾವಿನ ಹಿಂದೆ ಏನಾದರೂ ಅಡಗಿದೆ ಎಂದು ನಮಗೆ ಅನುಮಾನ ಬರುತ್ತಿದೆ ಎಂದಿದ್ದಾರೆ. ನಾವು ಶವವನ್ನು ಶವಪರೀಕ್ಷೆಯ ಮೊದಲು ಪಡೆಯುವುದಿಲ್ಲ. ಅವಳಿಗೆ ನಿಜವಾಗಿ ಏನಾಯಿತು ಗೊತ್ತಾಗಬೇಕು. ಅವಳು ಆತ್ಮಹತ್ಯೆಗೆ ಮಾಡಿಕೊಳ್ಳುವ ರೀತಿಯ ಹುಡುಗಿಯಲ್ಲ ಎಂದಿದ್ದಾರೆ. ಜುಲೈ 24 ರ ರಾತ್ರಿಯೂ ಅವಳು ಕುಟುಂಬ ಸದಸ್ಯರೊಂದಿಗೆ ಮಾತನಾಡಿದ್ದಳು. ಅವಳು ಸಾಮಾನ್ಯ ರೀತಿಯಲ್ಲಿ ಇದ್ದಳು. ಅವಳ ಸಾವಿನ ಹಿಂದೆ ನಿಗೂಢವಿದೆ ಎಂದು ಅವರು ಹೇಳಿದರು. ಸಂತ್ರಸ್ತೆಯ ಅತ್ತಿಗೆ ಮಾತನಾಡಿ, ಆಕೆಯ ಸಾವಿನ ಹಿಂದೆ ನಿಗೂಢವಿದೆ, ಹುಡುಗಿ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ, ಅವಳು ತುಂಬಾ ಮುಗ್ಧಳು, ಆಕೆಗೆ ನ್ಯಾಯ ಸಿಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದರು.
ಶಾಲೆಗೆ ಪೊಲೀಸ್ ಭದ್ರತೆ
ಕಾಂಚೀಪುರಂ ನಗರದ ಡಿಐಜಿ ಎಂ.ಸತಪ್ರಿಯ ಮಾತನಾಡಿ, ನಾವು ಸ್ಥಳಕ್ಕೆ ತಲುಪುವ ವೇಳೆಗೆ ಸಂತ್ರಸ್ತರ ಕುಟುಂಬ ಸದಸ್ಯರಿಗೆ ಸರಿಯಾಗಿ ಮಾಹಿತಿ ನೀಡಿದ್ದೇವೆ. ಎಲ್ಲಾ ಸದಸ್ಯರು ಬೆಳಿಗ್ಗೆಯಿಂದ ಇಲ್ಲಿದ್ದಾರೆ. ಇಲ್ಲಿಯವರೆಗೆ ನಮಗೆ ಯಾವುದೇ ಪತ್ರ ಅಥವಾ ಸಾಕ್ಷ್ಯಗಳು ಸಿಕ್ಕಿಲ್ಲ. ಸಿಬಿ- ಸಿಐಡಿ ತನಿಖೆ ಆರಂಭಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ನಾವು ಶಾಲೆಯ ಆವರಣಕ್ಕೆ ಪೊಲೀಸ್ ರಕ್ಷಣೆಯನ್ನು ನಿಯೋಜಿಸಿದ್ದೇವೆ. ತನಿಖೆಯ ನಂತರವೇ ಸತ್ಯವನ್ನು ಬಹಿರಂಗಪಡಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಜುಲೈ 13 ರಂದು ಕಲ್ಲಕುರಿಚಿಯ ಖಾಸಗಿ ಶಾಲೆಯ ಹಾಸ್ಟೆಲ್ ಆವರಣದಲ್ಲಿ 16 ವರ್ಷದ ಬಾಲಕಿ ಸಾವನ್ನಪ್ಪಿದ್ದಳು. ಬಾಲಕಿಯ ಪೋಷಕರು ಕೊಲೆ ಎಂದು ಶಂಕಿಸಿದ್ದರು. ಆದರೆ ಪೊಲೀಸರು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.

Post a Comment