ಬೆಂಗಳೂರು (ಜು 4): ಕರ್ನಾಟಕ ಭೂಕಂದಾಯ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ (R Ashok) ಹೇಳಿದ್ದಾರೆ. ಸರ್ಕಾರಿ ಜಮೀನು ಅಕ್ರಮ ಸಾಗುವಳಿ ಮಾಡ್ತಿರೋ ರೈತರಿಗೆ ಅನುಕೂಲವಾಗುವ ರೀತಿ ಕಾಯ್ದೆ ತಿದ್ದುಪಡಿ ಮಾಡಲಾಗುವುದು ಎಂದು ಸಚಿವ ಆರ್ . ಅಶೋಕ್ ತಿಳಿದ್ದಾರೆ. ಮಾಧ್ಯಮಗಳ ಜತೆ ಮಾತಾಡಿ ಕಂದಾಯ ಸಚಿವರು, ಕಾಫಿ, ಏಲಕ್ಕಿ, ಕಾಳುಮೆಣಸು ಬೆಳೆ ಬೆಳೆಯೋ ಕೆಲವು ಬೆಳೆಗಾರರು ಅನಧಿಕೃತವಾಗಿ ಸಾಗುವಳಿ ಮಾಡುತ್ತಿದ್ದಾರೆ. ಅವರಿಂದ ಜಾಮೀನನ್ನು ಕಸಿದುಕೊಳ್ಳುವ ಬದಲಾಗಿ, ಸರ್ಕಾರಿ ಜಮೀನುಗಳನ್ನು ಅವರಿಗೆ ಗುತ್ತಿಗೆಗೆ ನೀಡಲು ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ (Law Amendment) ತರಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದ್ದಾರೆ.
ಭೂ ಕಂದಾಯ ಕಾಯ್ದೆಗೆ ತಿದ್ದು
ವಾಣಿಜ್ಯ ಬೆಳೆ ಬೆಳೆಯುವ ಕೃಷಿಕರು ಸುಮಾರು ಒಂದು ಲಕ್ಷ ಎಕರೆಗೂ ಹೆಚ್ಚು ವಿಸ್ತೀರ್ಣದ ಸರ್ಕಾರಿ ಜಮೀನುಗಳನ್ನು ಅನಧಿಕೃತವಾಗಿ ಸಾಗುವಳಿ ಮಾಡುತ್ತಿದ್ದಾರೆ. ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ತಂದು ಈ ಜಮೀನುಗಳನ್ನು ಅವರಿಗೆ ದೀರ್ಘಾವಧಿಗೆ ಗುತ್ತಿಗೆಗೆ ನೀಡಲು ಅವಕಾಶ ಕಲ್ಪಿಸಲಾಗುವುದು. ಈ ತಿಂಗಳಲ್ಲಿ ನಡೆಯುವ ವಿಧಾನಮಂಡಲದ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆ ಮಂಡಿಸಲಾಗುವುದು ಎಂದರು
ಗುತ್ತಿಗೆಗೆ ನೀಡುವ ಮೂಲಕ ಸರ್ಕಾರಿ ಹಕ್ಕು ಖಾ
ಚಿಕ್ಕಮಗಳೂರು ಜಿಲ್ಲೆಯಲ್ಲಿ 45,000 ಎಕರೆ, ಹಾಸನ ಜಿಲ್ಲೆಯಲ್ಲಿ 30,000 ಎಕರೆ ಮತ್ತು ಕೊಡಗು ಜಿಲ್ಲೆಯಲ್ಲಿ 9,000 ಎಕರೆ ಸರ್ಕಾರಿ ಜಮೀನುಗಳನ್ನು ವಾಣಿಜ್ಯ ಬೆಳೆಗಾರರು ಅನಧಿಕೃತವಾಗಿ ಸಾಗುವಳಿ ಮಾಡುತ್ತಿದ್ದಾರೆ. ಗುತ್ತಿಗೆಗೆ ನೀಡುವ ಮೂಲಕ ಈ ಜಮೀನುಗಳ ಮೇಲಿನ ಸರ್ಕಾರದ ಹಕ್ಕನ್ನು ಖಾತರಿಪಡಿಸಲಾಗುವುದು ಎಂದು ತಿಳಿಸಿದ
ಇದನ್ನೂ ಓದಿ: Bengaluru: ಬೆಂಗಳೂರು ಗಾರ್ಡನ್ ಸಿಟಿಯಿಂದ ಗಾಂಜಾ ಸಿಟಿ ಆಗಿದೆ; ಪ್ರಿಯಾಂಕ್ ಖರ್ಗೆ ವಾಗ್ದಾ
6 ಲಕ್ಷ ಹೆಕ್ಟೇರ್ ಸರ್ಕಾರಿ ಜಮೀನು ಶೀಘ್ರದಲ್ಲಿ ಡೀಮ್ ಅರಣ್ಯದ ವ್ಯಾಪ್ತಿಯಿಂದ ಹೊರ ಬರಲಿವೆ. ಅವುಗಳನ್ನು ಶಾಲೆ, ಕಾಲೇಜು, ಆಸ್ಪತ್ರೆ ಮತ್ತಿತರ ಸಾರ್ವಜನಿಕ ಉದ್ದೇಶಕ್ಕೆ ಆದ್ಯತೆ ಮೇಲೆ ಹಂಚಿಕೆ ಮಾಡಲಾಗುವುದು ಎಂದು ಇದೇ ವೇಳೆ ಆರ್.ಅಶೋಕ್ ಹೇಳಿದ್ದಾರೆ
ಇದನ್ನೂ ಓದಿ: Breaking News: ಲಂಚ ಸ್ವೀಕರಿಸಿದ ಆರೋಪ; ಡಿಸಿ ಜೆ. ಮಂಜುನಾಥ್ ಅರೆ
9749 ರೈತರಿಗೆ ಅನುಕೂಲವಾಗಲಿ
ಕೊಡಗು : ಒತ್ತುವರಿ ಭೂಮಿಯನ್ನು(Encroachment Land) ಗುತ್ತಿಗೆ ನೀಡುವುದರಿಂದ ಜಿಲ್ಲೆಯ ಒಟ್ಟು 9749 ರೈತರಿಗೆ ಅನುಕೂಲವಾಗಲಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ (R Ashok) ತಿಳಿಸಿದರು. ಜಿಲ್ಲಾ ಬಿಜೆಪಿ ವತಿಯಿಂದ ನಡೆದ ಒತ್ತುವರಿಯಾಗಿರುವ ಸರ್ಕಾರಿ ಪೈಸಾರಿ ಜಮೀನನ್ನು ರೈತರಿಗೆ ಗುತ್ತಿಗೆ ನೀಡುವ ಸಂಬಂಧ ರೈತರೊಂದಿಗೆ (Farmers) ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಈ ಹಿಂದೆ ಒತ್ತುವರಿ ಮಾಡಿಕೊಂಡಿರುವ ರೈತರ ಮೇಲೆ ಸೆಕ್ಷನ್ 192ಎ ಪ್ರಕರಣವನ್ನು ದಾಖಲಿಸಲಾಗುತಿತ್ತು. ಆ ರೈತರನ್ನು ಜೈಲಿಗೆ ಕಳುಹಿಸುವ ಸ್ಥಿತಿ ಇತ್ತು. ಇದೆಲ್ಲೆವನ್ನು ಮನಗಂಡು ಕರ್ನಾಟಕ ಲ್ಯಾಂಡ್ ರೆವೆನ್ಯೂ ಆಕ್ಟ್ ಗೆ ತಿದ್ದುಪಡಿ ತರಲಾಗುತ್ತಿದೆ. ಆ ಮೂಲಕ ರೈತರ ಮೇಲಿರುವ ಪ್ರಕರಣಗಳನ್ನು ವಾಪಸ್ ಪಡೆಯಲಾಗುತ್ತದೆ. ರೈತರು ಇನ್ನು ಮುಂದೆ ನೆಮ್ಮದಿಯಾಗಿ ಇರಬಹುದು ಎಂ
ಭೂಮಿ ಗುತ್ತಿಗೆ ನೀಡಿದರೆ ಬ್ಯಾಂಕ್ಗಳಿಂದ
ಆದರೆ ನಗರ ಪ್ರದೇಶಗಳಲ್ಲಿ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿದ್ದರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ರೈತರಿಂದ ಒತ್ತುವರಿ ಆಗಿರುವ ಭೂಮಿಯಿಂದ ಸರ್ಕಾರಕ್ಕೂ ಆದಾಯವಿದೆ. ಅವುಗಳಲ್ಲಿ ಈಗಾಗಲೇ ಬೆಳೆ ಇರುವುದರಿಂದ ಅವುಗಳನ್ನು ಸರ್ಕಾರ ಬಿಡಿಸಲು ಹೋಗುವುದಿಲ್ಲ. ರೈತರಿಗೆ 30 ವರ್ಷದವರೆಗೆ ಭೂಮಿಯನ್ನು ಗುತ್ತಿಗೆ ನೀಡುವುದರಿಂದ ಅವರು ಬ್ಯಾಂಕುಗಳಲ್ಲಿ ಸಾಲವನ್ನು ಪಡೆಯಬಹುದು ಎಂದು ಅಭಿಪ್ರಾಯಿಸಿದರು. ಸಾಲದರು.ದೆಸ್ಟ್.ಳಿರು.ತರಿ.ಪಡಿಯಬಹುದು ಎಂದು ಅಭಿಪ್ರಾಯಿಸಿದರು.
Post a Comment