Praveen Murder: ಪ್ರವೀಣ್ ಮರಣೋತ್ತರ ಪರೀಕ್ಷೆ ಮುಕ್ತಾಯ, ಅಂತಿಮಯಾತ್ರೆಗೆ ಸಿದ್ಧತೆ; ಕರಾವಳಿಯಲ್ಲಿ ಹೈಅಲರ್ಟ್


  ಪ್ರವೀಣ್ ತಲೆಗೆ ಮೂರು ಬಲವಾದ  ತಲವಾರು ಏಟು ಬಿದ್ದಿದೆ ಎನ್ನಲಾಗಿದೆ. ಹಂತಕರು ಪ್ರವೀಣ್ ಬೆನ್ನಿಗೂ ಚೂರಿಯಿಂದ ಒಂದು ಬಾರಿ ಇರಿದಿದ್ದಾರೆ. ಸದ್ಯ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟಂ ಮುಕ್ತಾಯವಾಗಿದೆ.

ಪುತ್ತೂರು, ದಕ್ಷಿಣ ಕನ್ನಡ: ನಿನ್ನೆ ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದ (Murder) ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರಿನ (Puttur) ಬಿಜೆಪಿ ಕಾರ್ಯಕರ್ತ (BJP Worker) ಪ್ರವೀಣ್ ನೆಟ್ಟಾರು (Praveen Nettaru) ಮೃತದೇಹದ (Dead body) ಮರಣೋತ್ತರ (Postpartum) ಪರೀಕ್ಷೆ ಮುಕ್ತಾಯವಾಗಿದೆ. ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ (Government Hospital) ಮರಣೋತ್ತರ ಪರೀಕ್ಷೆ ನಡೆದಿದ್ದು, ಸದ್ಯ ಸರಕಾರಿ ಆಸ್ಪತ್ರೆ ಶವಾಗಾರದಲ್ಲಿ ಪ್ರವೀಣ್ ಮೃತದೇಹ ಇಡಲಾಗಿದೆ. ಮೆರವಣಿಗೆ ಮೂಲಕ ಮೃತದೇಹ ಸಾಗಿಸಲು ಬಿಜೆಪಿ ಕಾರ್ಯಕರ್ತರು, ಹಿಂದೂ ಪರ ಸಂಘಟನೆ ಕಾರ್ಯಕರ್ತರು ಸಿದ್ಧತೆ ನಡೆಸಿದ್ದಾರೆ

ನಿನ್ನೆ ಪ್ರವೀಣ್ ಹತ್ಯೆ ಮಾಡಿದ್ದ ದುಷ್ಕರ್ಮಿ ದಕ್ಷಿಣ ಕನ್ನಡ ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾಗಿದ್ದ 32 ವರ್ಷದ ಪ್ರವೀಣ್ ನೆಟ್ಟಾರು ಅವರು ಬೆಳ್ಳಾರೆಯಲ್ಲಿ ಕೋಳಿ ಅಂಗಡಿ ನಡೆಸುತ್ತಿದ್ದರು. ಬೆಳ್ಳಾರೆ ಪೇಟೆಯಲ್ಲಿ ತನ್ನ ಅಂಗಡಿ ಮುಚ್ಚುತ್ತಿದ್ದಾಗ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿ, ಬರ್ಬರವಾಗಿ ಹತ್ಯೆ ಮಾಡಿದ್ದರು. ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಪ್ರವೀಣ್ ನೆಟ್ಟಾರು ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರವೀಣ್ ನೆಟ್ಟಾರು ಸಾವನ್ನಪ್ಪಿದ್ದರು

ತಲ್ವಾರ್ ಏಟಿನಿಂದ ಪ್ರವೀಣ್ ಸಾ

ಪ್ರವೀಣ್ ತಲೆಗೆ ಮೂರು ಬಲವಾದ  ತಲವಾರು ಏಟು ಬಿದ್ದಿದೆ ಎನ್ನಲಾಗಿದೆ. ಹಂತಕರು ಪ್ರವೀಣ್ ಬೆನ್ನಿಗೂ ಚೂರಿಯಿಂದ ಒಂದು ಬಾರಿ ಇರಿದಿದ್ದಾರೆ. ಸದ್ಯ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟಂ ಮುಕ್ತಾಯವಾಗಿ

ಇದನ್ನೂ ಓದಿ: Murder: ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ಬರ್ಬರ ಹತ್ಯೆ; ಪುತ್ತೂರಿನಾದ್ಯಂತ 144 ಸೆಕ್ಷನ್ ಜಾ

 ಅಂತಿಮ ಯಾತ್ರೆ ನಡೆಸಲು ಸಿದ್ಧ

ಪ್ರವೀಣ್ ಅಂತಿಮ ಯಾತ್ರೆ ನಡೆಸಲು ಬಿಜೆಪಿ ಕಾರ್ಯಕರ್ತರು, ಹಿಂದೂ ಪರ ಸಂಘಟನೆ ಕಾರ್ಯಕರ್ತರು ತಯಾರಿ ನಡೆಸಿದ್ದಾರೆ. ಸರಕಾರಿ ಆಸ್ಪತ್ರೆಯಿಂದ ದರ್ಬೆ ಸರ್ಕಲ್ ಮೂಲಕ ಬೆಳ್ಳಾರೆಗೆ ಮೃತದೇಹ ತರಲು ನಿರ್ಧರಿಸಲಾಗಿದೆ. ದರ್ಬೆ, ಸವಣೂರು, ಕಾಣಿಯೂರು, ನಿಂತಿಕಲ್ಲು ಮಾರ್ಗವಾಗಿ ಬೆಳ್ಳಾರೆಗೆ ಸಾಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇನ್ನು ಅಂತಿಮಯಾತ್ರೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಏಳೂ ಶಾಸಕರು, ಸಚಿವರು ಭಾಗಿಯಾಗಬೇಕೆಂದು ಹಿಂದೂ ಕಾರ್ಯಕರ್ತರು ಪಟ್ಟು ಹಿಡಿದಿದ್ದಾ

ತಡರಾತ್ರಿವರೆಗೂ ಪ್ರತಿಭ

ಇನ್ನು ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆ ಖಂಡಿಸಿ ಹಿಂದೂಪರ ಸಂಘಟನೆ ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರು ತಡರಾತ್ರಿಯವರೆಗೂ ಪ್ರತಿಭಟನೆ ಮುಂದುವರೆಸಿದ್ದರು. ಜಿಲ್ಲಾಧಿಕಾರಿ ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದಿದ್ದರು. ಹೀಗಾಗಿ ತಡರಾತ್ರಿ ಆಸ್ಪತ್ರೆ ಗೆ ಭೇಟಿ ನೀಡಿದ ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ಪ್ರವೀಣ್ ಕುಟುಂಬಸ್ಥರು, ಆಪ್ತವಲಯದೊಂದಿಗೆ ಮಾತುಕತೆ ನಡೆಸಿದ್ದರು. ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳುವಂತೆ ಜನರಿಗೆ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ಮನವಿ ಮಾಡಿದ್ರು

ಇದನ್ನೂ ಓದಿ: Suicide: 6 ವರ್ಷ ಹಿಂದೆ ತಂದೆ ಸೂಸೈಡ್, ಈಗ ತಾಯಿ ಮಗಳು ಆತ್ಮಹತ್ಯೆ! ಪರೀಕ್ಷೆ ಫೇಲ್ ಆಗಿದ್ದಕ್ಕೆ ದುಡುಕಿನ ನಿ

ಬಂದ್‌ಗೆ ಹಿಂದೂಪರ ಸಂಘಟನೆಗಳ 

ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯ ಹಾಗೂ ಕಡಬ ತಾಲೂಕು ಬಂದ್‌ಗೆ ಹಿಂದೂ ಪರ ಸಂಘಟನೆಗಳು ಕರೆ ನೀಡಿವೆ. ಸ್ವಯಂ ಪ್ರೇರಿತರಾಗಿ‌ ಬಂದ್ ಮಾಡುವಂತೆ ಹಿಂದೂ ಸಂಘಟನೆಗಳು ಮನವಿ ಮಾಡಿವೆ. ಇನ್ನು ಮುನ್ನೆಚ್ಚರಿಕಾ ಕ್ರಮವಾಗಿ ಪುತ್ತೂರಿನ ಅಂಬಿಕಾ ಕಾಲೇಜ್ ಹಾಗೂ ವಿವೇಕಾನಂದ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕರೆರ್ಧಾರ.ಟನೆರೆ.ತೆರಿದೆ.ವು?.ಗಳು.ಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

Post a Comment

Previous Post Next Post