Peacocks: ಮನೆಯಲ್ಲಿ ನವಿಲು ಸಾಕಬಹುದೇ? ಸಾಕಿದ ಈ ವ್ಯಕ್ತಿಗೆ ಕೊನೆಗೂ ಏನಾಯ್ತು? ಮೈಸೂರು ಜಿಲ್ಲೆಯ ಕಾಮೇಗೌಡನಹಳ್ಳಿಯಲ್ಲಿ ಮಂಜು ನಾಯ್ಕ್ ಎಂಬ ವ್ಯಕ್ತಿ ಗುಟ್ಟಾಗಿ ಮನೆಯಲ್ಲಿ ನವಿಲುಗಳನ್ನು ಸಾಕುತ್ತಿದ್ದ. ಕರ್ನಾಟಕ ಅರಣ್ಯ ಇಲಾಖೆಯ ಸಂಚಾರಿ ವಿಜಿಲೆನ್ಸ್ ಸ್ಕ್ವಾಡ್ ದಾಳಿ ನಡೆಸಿ, ಮಂಜು ನಾಯ್ಕ್‍ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಒಂದು ನವಿಲನ್ನು ವಶಪಡಿಸಿಕೊಂಡಿದ್ದಾರೆ.


 ನವಿಲು ನಮ್ಮ ರಾಷ್ಟ್ರಪಕ್ಷಿ  ನವಿಲು ತನ್ನ ಸೌಂದರ್ಯ, ಬಣ್ಣ ಹಾಗೂ ನಡೆಗಳಿಗೆ ಪ್ರಸಿದ್ಧಿಯಾಗಿದೆ. ಇದು ವಿಶ್ವದಲ್ಲೇ ಅತ್ಯಂತ ಸುಂದರವಾದ ಪಕ್ಷಿ. ನವಿಲು ಗರಿ ಬಿಚ್ಚಿ ಕುಣಿಯುವುದನ್ನು ನೋಡುವುದೆ ಒಂದು ಚೆಂದ. ಹೆಣ್ಣು ನವಿಲಿಗಿಂತ ಗಂಡು ನವಿಲು ಹೆಚ್ಚು ಸುಂದರವಾಗಿರುತ್ತೆ. ಹೆಣ್ಣು ನವಿಲು ಗಂಡು ನವಿಲಿಗಿಂತ ಚಿಕ್ಕದಾಗಿರುತ್ತದೆ. 1972 ರಲ್ಲಿ ಭಾರತ ಸರ್ಕಾರ  ನವಿಲನ್ನು  (Peacocks) ನಮ್ಮ ರಾಷ್ಟ್ರ ಪಕ್ಷಿಯನ್ನಾಗಿ (National Bird ) ಘೋಷಿಸಿತ್ತು. ನವಿಲುಗಳು ಕಾಡಿನಲ್ಲಿ ತಮ್ಮಿಷ್ಟ ಬಂದಂತೆ ಇದ್ದರೆ ಚೆನ್ನ. ಅವು ಅವುಗಳಿಗೆ ಬೇಕಾದಂತೆ ಸ್ವಚ್ಛಂದವಾಗಿ ಇರಬಹುದು. ಅದು ಬಿಟ್ಟು ಮನೆಗಳಲ್ಲಿ ನವಿಲನ್ನು ಸಾಕಲು ಆಗುತ್ತಾ?

ಆದ್ರೆ ಇಲ್ಲೊಬ್ಬ ವ್ಯಕ್ತಿ ಮನೆಯಲ್ಲಿ ನವಿಲುಗಳನ್ನು ಸಾಕುತ್ತಿದ್ದರಂತೆ. ಹೌದು, ಮೈಸೂರು ಜಿಲ್ಲೆಯ ಕಾಮೇಗೌಡನಹಳ್ಳಿ ಗ್ರಾಮದ ವ್ಯಕ್ತಿಯೊಬ್ಬ ತಮ್ಮ ಮನೆಯಲ್ಲಿ ನವಿಲುಗಳನ್ನು ಸಾಕುತ್ತಿದ್ದ. ಕರ್ನಾಟಕ ಅರಣ್ಯ ಇಲಾಖೆಯ ಸಂಚಾರಿ ವಿಜಿಲೆನ್ಸ್ ಸ್ಕ್ವಾಡ್  ದಾಳಿ ನಡೆಸಿ, ಮಂಜು ನಾಯಕ್ ಎಂಬಾತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಒಂದು ನವಿಲನ್ನು ವಶಪಡಿಸಿಕೊಂಡಿದ್ದಾ

ಯಾರಿಗೂ ತಿಳಿಯದಂತೆ ಮನೆಯಲ್ಲಿ ನವಿಲು ಸಾಕಾಣಿಕೆ

ಮೈಸೂರು ಜಿಲ್ಲೆಯ ಕಾಮೇಗೌಡನಹಳ್ಳಿಯಲ್ಲಿ ಮಂಜು ನಾಯ್ಕ್ ಎಂಬ ವ್ಯಕ್ತಿ ಗುಟ್ಟಾಗಿ ಮನೆಯಲ್ಲಿ ನವಿಲುಗಳನ್ನು ಸಾಕುತ್ತಿದ್ದ. ಆತ ಮನೆಯಲ್ಲಿ ನವಿಲುಗಳನ್ನು ಸಾಕುತ್ತಿರುವುದು ಹೇಗೋ ಅರಣ್ಯ ಇಲಾಖೆಯ ಸಂಚಾರಿ ವಿಜಿಲೆನ್ಸ್ ಸ್ಕ್ವಾಡ್ ಗೆ ತಿಳಿದಿದೆ. ಅವರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, ಮಂಜು ನಾಯ್ಕ್‍ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಮನೆಯಿಲ್ಲಿದ್ದ ವಯಸ್ಕ ನವಿಲೊಂದನ್ನು ವಶಪಡಿಸಿಕೊಂಡಿದ್ದಾರೆ

ಹಿಂದೂ ಧರ್ಮದ ಪ್ರಕಾರ ನವಿಲುಗಳು ಪವಿ

ಹಿಂದೂ ಧರ್ಮದಲ್ಲಿ ನವಿಲುಗಳನ್ನು ಪವಿತ್ರವೆಂದು ಪರಿಗಣಿಸಲಾಗುತ್ತೆ. ಶಿವ ಮತ್ತು ಪಾರ್ವತಿಯ ಎರಡನೇ ಮಗ ಕಾರ್ತಿಕೇಯ (ಷಣ್ಮುಖ). ಭಾರತದ ದಕ್ಷಿಣ ಭಾಗದಲ್ಲಿ ಈತನನ್ನು ಅತಿ ಹೆಚ್ಚಾಗಿ ಪೂಜಿಸಲಾಗುತ್ತದೆ. ರಾಕ್ಷಸರನ್ನು ನಾಶಪಡಿಸಲು ಜನಿಸಿದ ಈತನ ವಾಹನ ಸುಂದರ ನವಿಲಾಗಿದೆ.ಖಾದ್ದರಿಂದ ನವಿಲುಗಳನ್ನು ಪವಿತ್ರ ಎಂದು ಪರಿಗಣಿಸಲಾಗುತ್ತೆ. ಅಂತಹ ನವಿಲುಗಳನ್ನು ಮನೆಯಲ್ಲಿ ಸಾಕುವುದು ಕಾನೂನು ಬಾಹಿರ

ಗಿಳಿಗಳನ್ನು ಸಾಕುತ್ತಿದ್ದವರನ್ನೂ ಸಹ ಬಂಧಿಸಿದ ಅಧಿಕಾರಿ

ಈ ತಿಂಗಳ ಆರಂಭದಲ್ಲಿ ಚೆಂಗಲ್ಪಟ್ಟು ಅರಣ್ಯ ಇಲಾಖೆ ಅಧಿಕಾರಿಗಳು ಅಕ್ರಮವಾಗಿ ಸಣ್ಣ ಪಂಜರಗಳಲ್ಲಿ ಗಿಳಿಗಳನ್ನು ಸಾಕುತ್ತಿದ್ದ 7 ಭವಿಷ್ಯ ಹೇಳುವವರ ಮೇಲೆ ದಾಳಿ ನಡೆಸಿದ್ದರು. ಅಧಿಕಾರಿಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆ (ಡಬ್ಲ್ಯುಪಿಎ), 1972 ರ ಸೆಕ್ಷನ್ 9, 39 ಮತ್ತು 51 ರ ಅಡಿಯಲ್ಲಿ ಪ್ರಾಥಮಿಕ ಅಪರಾಧ ವರದಿಯನ್ನು ದಾಖಲಿಸಿದ್ದಾರೆ ಮತ್ತು ಭವಿಷ್ಯ ಹೇಳುವವರನ್ನು ಬಂಧಿಸಿದ್ದಾರೆ

ಇದನ್ನೂ ಓದಿ: Viral Video: ಬಾಲ್ಕನಿ ಮೇಲೆ ಚಿಲ್ ಮಾಡ್ತಿದೆ ನವಿಲು, ವಿಡಿಯೋ ನೋಡಿ ನೆಟ್ಟಿಗರು ಫಿ

ನವಿಲುಗಳ ವಿಶೇಷತೆ ನಿಮಗೆ ಗೊತ್ತಾ

ನವಿಲು ಫಾಸಿನಿಡೆ ಕುಟುಂಬಕ್ಕೆ ಸೇರಿದ ಒಂದು ಹಕ್ಕಿ. ಇದು ಭಾರತದ ರಾಷ್ಟ್ರೀಯ ಪಕ್ಷಿ. ನವಿಲುಗಳಲ್ಲಿ ಭಾರತೀಯ ನವಿಲು, ಹಸಿರು ನವಿಲು, ಕಾಂಗೋ ನವಿಲು ಎಂದು ಮೂರು ವಿಧ. ಗಂಡು ನವಿಲು ಕಾಮನ ಬಿಲ್ಲಿನ ಬಣ್ಣಗಳಂತೆ ಆಕರ್ಷಕವಾದ ಗರಿಗಳನ್ನು ಹೊಂದಿರುತ್ತದೆ. ಅವುಗಳಲ್ಲಿ ಮುಖ್ಯವಾಗಿ ನೀಲಿ ಹಸಿರು ಮಿಶ್ರಿತ ಅಥವಾ ಹೊಳಪಿನ ಹಸಿರು ಬಣ್ಣದ ಗರಿಗಳನ್ನು ಹೊಂದಿರುತ್ತದೆ. ಉದ್ದನೆಯ ಗರಿಗಳ ಗುಚ್ಛವು ಹೃದಯದ ಆಕಾರದಲ್ಲಿ ಕೊನೆಗೊಂಡಿರುತ್ತದೆ. ಅಲ್ಲದೆ ಅದರ ಮಧ್ಯದಲ್ಲಿ ಕಣ್ಣಿನ ಚಿತ್ರವಿದೆ. ಹೆಣ್ಣು ನವಿಲು ಹಸಿರು ಬಣ್ಣದ ಕುತ್ತಿಗೆ ಹಾಗೂ ಮಸುಕು ಕಂದು ಬಣ್ಣದ ಚಿಕ್ಕ ಗರಿಗಳ ಗುಚ್ಛವನ್ನು ಹೊಂದಿರುತ್ತದೆ

ಇದನ್ನೂ ಓದಿ: White Peacock: ಬಿಳಿ ನವಿಲು ನೋಡಿದ್ದೀರಾ? ಇಲ್ಲಿದೆ ನೋಡಿ ಅಪರೂಪದ ವಿ

ಕಾಂಗೋ ನವಿಲು ಗಾಢವಾದ ನೀಲಿ, ಅದಿರಿನ ಹಸಿರು ಮತ್ತು ಸ್ವಲ್ಪ ನೇರಳೆ ಬಣ್ಣಗಳ ಮಿಶ್ರಣವಿರುವ ಗರಿಗಳ ಗುಚ್ಛವನ್ನು ಹೊಂದಿರುತ್ತದೆ. ಕೆಂಬಣ್ಣದ ಕತ್ತು, ಬೂದು ಬಣ್ಣದ ಕಾಲು 14 ಸಣ್ಣ ಕಪ್ಪು ಗರಿಗಳ ಗುಚ್ಛವನ್ನೂ ಹೊಂದಿರುತ್ತದೆ. ಅಲ್ಲದೆ ನೇರವಾದ ಬಿಳಿಯ ಕೂದಲಿನಂತಹಾ ಮುಕುಟವನ್ನು ಹೊಂದಿರುತ್ತದೆ. ಹೆಣ್ಣು ನವಿಲು ಸಾಧಾರಣವಾಗಿ ಕಂದು ಬಣ್ಣವಿದ್ದು, ಕಪ್ಪಾದ ಹೊಟ್ಟೆಯನ್ನು ಹೊಂದಿರುತ್ತದೆ. ಅದಿರು ಹಸಿರಿನ ಬೆನ್ನು ಮತ್ತು ಸಣ್ಣ ಬಾದಾಮಿಯಾಕಾರದ ಕಂದು ಮುಕುಟವನ್ನು ಹೊಂದಿರುತ್ತದೆ. ಬೇರೆ ನವಿಲುಗಳಿಗಿಂತ ಕಾಂಗೋ ನವಿಲುಗಳು ತುಂಬಾ ಆಕರ್ಷಣೀಯವಾಗಿರುತ್ತವೆ. ಡಿಯೋ.?ದಾ.ಗಳು.ತ್ರ.!ರೆ.ಆಕರ್ಷಣೀಯವಾಗಿರುತ್ತವೆ.

Post a Comment

Previous Post Next Post