Nupur Sharma: ಪ್ರಧಾನಿ ಮೋದಿ ಅರಬ್ ಎಮಿರೇಟ್ಸ್ ಭೇಟಿಯಿಂದ ನೂಪುರ್ ಶರ್ಮಾ ವಿವಾದ ತಣ್ಣಗಾಯಿತೇ? ಭಾರತದಲ್ಲಿ ನಡೆದಿದ್ದ ನೂಪುರ್ ಶರ್ಮಾ ಅವರ ಹೇಳಿಕೆಗೆ ಸಂಬಂಧಿಸಿದಂತೆ ಭುಗಿಲೆದ್ದಿದ್ದ ವಿವಾದವು ಜಾಗತಿಕವಾಗಿ ಗಮನ ಸೆಳೆದಿತ್ತು ಹಾಗೂ ನೂಪುರ್ ಅವರ ಹೇಳಿಕೆಯನ್ನು ಖಂಡಿಸಿ ಯುಎಇ ಸೇರಿದಂತೆ ಮುಸ್ಲಿಮ್ ರಾಷ್ಟ್ರಗಳು ಖಂಡನೆ ಮಾಡಿದ್ದವು. ಇದರಿಂದ ಭಾರತ ಮುಸ್ಲಿಂ ರಾಷ್ಟ್ರಗಳೊಂದಿಗೆ ಹೊಂದಿರುವ ಗಟ್ಟಿಯಾದ ಬಾಂಧವ್ಯದಲ್ಲಿ ಬಿರುಕು ಮೂಡಬಹುದೆಂದು ಅಂದಾಜಿಸಲಾಗಿತ್ತು.


 ಭಾರತದ ಪ್ರಧಾನಿ (Prime Minister Of India)  ಒಂದು ದಿನದ ಮಟ್ಟಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ಗೆ (United Arab Emirates) ಭೇಟಿ ನೀಡಿದ್ದರು. ಇತ್ತೀಚೆಗೆ ಭಾರತದಲ್ಲಿ ನಡೆದಿದ್ದ ನೂಪುರ್ ಶರ್ಮಾ (Nupur Sharma) ಅವರ ಹೇಳಿಕೆಗೆ ಸಂಬಂಧಿಸಿದಂತೆ ಭುಗಿಲೆದ್ದಿದ್ದ ವಿವಾದವು ಜಾಗತಿಕವಾಗಿ ಗಮನ ಸೆಳೆದಿತ್ತು ಹಾಗೂ ನೂಪುರ್ ಅವರ ಹೇಳಿಕೆಯನ್ನು ಖಂಡಿಸಿ ಯುಎಇ ಸೇರಿದಂತೆ ಮುಸ್ಲಿಮ್ ರಾಷ್ಟ್ರಗಳು (Muslim Nation) ಖಂಡನೆ ಮಾಡಿದ್ದವು. ಇದರಿಂದ ಭಾರತ ಮುಸ್ಲಿಂ ರಾಷ್ಟ್ರಗಳೊಂದಿಗೆ ಹೊಂದಿರುವ ಗಟ್ಟಿಯಾದ ಬಾಂಧವ್ಯದಲ್ಲಿ ಬಿರುಕು ಮೂಡಬಹುದೆಂದು ಅಂದಾಜಿಸಲಾಗಿತ್ತು. ಆದರೆ, ಏತನ್ಮಧ್ಯೆ ಭಾರತ ಸರ್ಕಾರವು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಸ್ಪಷ್ಟ ನಿಲುವನ್ನು ಹೇಳಿತ್ತು. 

ಪ್ರಧಾನಿಯವರ ಯುಎಇ ಭೇ

ಈ ಎಲ್ಲ ವಿದ್ಯಮಾನಗಳ ದೃಷ್ಟಿಯಿಂದ ಅವಲೋಕಿಸಿದಾಗ ಪ್ರಧಾನಿಯವರ  ಯುಎಇ ಭೇಟಿಯು ಸಾಕಷ್ಟು ಮಹತ್ವಪೂರ್ಣವಾಗಿತ್ತೆಂದೇ ವಿಶ್ಲೇಷಿಸಲಾಗುತ್ತಿದೆ. ಅಲ್ಲದೆ, ಈ ಭೇಟಿಯು ಭಾರತದ ಬಲವಾದ ಧೋರಣೆ ಹಾಗೂ ದ್ವಿಪಕ್ಷೀಯ ಸಂಬಂಧಗಳಲ್ಲಿ ಯಾವುದೇ ಬಿರುಕು ಮೂಡದಂತೆ ಸಮಯೋಚಿತವಾಗಿ ತೆಗೆದುಕೊಂಡ ಕ್ರಮ ಎಂದೇ ಬಣ್ಣಿಸಲಾಗುತ್ತಿದೆ

ಜಿ7 ಶೃಂಗ ಸಭೆಗೆ ಭೇಟಿ ನೀಡಿದ ಪಿಎಂ ಮೋ

ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಜಿ7 ಶೃಂಗಸಭೆಗೆ ನೀಡಲಾಗಿದ್ದ ಆಹ್ವಾನದ ಮೇರೆಗೆ ಜರ್ಮನಿಗೆ ಭೇಟಿ ನೀಡಿದ್ದರು. ಅಲ್ಲಿ ಸಭೆಯಲ್ಲಿ ಪಾಲ್ಗೊಂಡು ಭಾರತಕ್ಕೆ ಮರಳುವ ಸಂದರ್ಭದಲ್ಲಿ ಮೋದಿ ಅವರು ಒಂದು ದಿನದ ಭೇಟಿಗೆಂದು ಯುಎಇಗೆ ಬಂದಿಳಿದಿದ್ದರು

ಈ ಮೂಲಕ ಭಾರತವು ಜಾಗತಿಕ ಮಟ್ಟದಲ್ಲಿ, "ಭಾರತ ತನ್ನ ಎಲ್ಲ ಮಿತ್ರ ರಾಷ್ಟ್ರಗಳೊಂದಿಗೆ ಹೊಂದಿರುವ ಗಟ್ಟಿಯಾದ ಸ್ನೇಹವನ್ನು ಹಾಗೇ ಮುಂದುವರೆಸಲು ಬದ್ಧವಾಗಿದೆ ಹಾಗೂ ದೇಶದೊಳಗಿನ ಆಂತರಿಕ ರಾಜಕಾರಣವು ಭಾರತ ತನ್ನ ಮಿತ್ರ ರಾಷ್ಟ್ರಗಳೊಂದಿಗೆ ಹೊಂದಿರುವ ಸಂಬಂಧದ ಮೇಲೆ ಯಾವುದೇ ಪ್ರಭಾವ ಬೀರದು" ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದಂತಾಗಿದೆ ಎಂದು ನಂಬಿಕಸ್ಥ ಮೂಲಗಳಿಂದ ತಿಳಿದುಬಂದಿ

ಇದನ್ನೂ ಓದಿ: Eknath Shinde: ಚಾಲಕನಾಗಿದ್ದ ಶಿಂಧೆ ಇಷ್ಟು ಪ್ರಭಾವಶಾಲಿಯಾಗಿದ್ದು ಹೇಗೆ? ಮಹಾ ಪಾಲಿಟಿಕ್ಸ್ನಲ್ಲಿ ಬಿರುಗಾ

ಈ ಒಟ್ಟಾರೆ ಭೇಟಿಯ ಉದ್ದೇಶಕ್ಕೆ ಸಂಬಂಧಿಸಿದಂತೆ ಉನ್ನತ ಮೂಲಗಳ ಅಧಿಕಾರಿಯೊಬ್ಬರು, "ಇದು ಕೇವಲ ಭಾರತ ತನ್ನ ಮಿತ್ರ ರಾಷ್ಟ್ರಗಳೊಂದಿಗೆ ವಿಶ್ವಾಸವನ್ನು ಮತ್ತಷ್ಟು ಗಟ್ಟಿಗೊಳಿಸುವ ಉಪಕ್ರಮ ಮಾತ್ರವಲ್ಲದೆ, ಭಾರತ ಈಗಲೂ ಈ ಪ್ರದೇಶದಲ್ಲಿ ಪ್ರಮುಖ ಪಾಲುದಾರಿಕಾ ರಾಷ್ಟ್ರ ಎಂಬ ಸ್ಪಷ್ಟ ಸಂದೇಶವನ್ನು ಎಲ್ಲ ಜನರಿಗೂ ತಿಳಿಸುವ ಮಹದೋದ್ದೇಶ ಹೊಂದಿತ್ತು" ಎಂದು ಹೇಳಿದ್ದಾ

ಯುಎಇ ಅಧ್ಯಕ್ಷರಾಗಿದ್ದ ಶೇಖ್ ಖಲಿಫಾ ಬಿನ್ ಜಾಯೆದ್ ಸುಲ್ತಾನ್ ಅವರ ಒಂದು ದಿನದ ಶೋಕಾ

ಇನ್ನು ಅಧಿಕೃತವಾಗಿ, ಪಿಎಂ ಅವರ ಯುಎಇ ಭೇಟಿಯು ಅಲ್ಲಿ ಇತ್ತೀಚಿಗಷ್ಟೆ ನಿಧನ ಹೊಂದಿರುವ ಯುಎಇ ಅಧ್ಯಕ್ಷರಾಗಿದ್ದ ಶೇಖ್ ಖಲಿಫಾ ಬಿನ್ ಜಾಯೆದ್ ಸುಲ್ತಾನ್ ಅವರ ಸ್ಮರಣಾರ್ಥ ಗೌರವ ಸಲ್ಲಿಸುವುದಾಗಿತ್ತುಎನ್ನಲಾಗಿದೆ. ಕಳೆದ ತಿಂಗಳು ಅಂದರೆ ಮೇ 13 ರಂದು ಶೇಖ್ ಅವರು ನಿಧನರಾದರು ಹಾಗೂ ಅವರಿಗೆ ಅಂತಿಮ ಗೌರವ ಸಲ್ಲಿಸುವ ನಿಮಿತ್ತ ಭಾರತವು ಒಂದು ದಿನದ ಶೋಕಾಚರಣೆಯನ್ನೂ ಸಹ ಘೋಷಣೆ ಮಾಡಿತ್ತು

ಶೇಖ್ ಅವರ ಅಗಲಿಕೆಗೆ ಸಂಬಂಧಿಸಿದಂತೆ ತಮ್ಮ ಸಾಂತ್ವನ ಹಾಗೂ ಗೌರವ ಸಲ್ಲಿಸಲು ಪಿಎಂ ಅವರು ಭೇಟಿ ನೀಡಿರುವುದು ಅಧಿಕೃತ ಭೇಟಿಯ ಉದ್ದೇಶವಾಗಿದ್ದರೆ ಆಂತರಿಕ ಮೂಲಗಳ ಪ್ರಕಾರ, ಇತ್ತೀಚಿಗಷ್ಟೆ ಪ್ರವಾದಿ ಮಹಮದ್ ಅವರ ಕುರಿತು ಹೇಳಿಕೆಯಿಂದ ಭಾರತದಲ್ಲಿ ಆಂತರಿಕವಾಗಿ ಉಂಟಾಗಿದ್ದ ದೊಡ್ಡ ವಿವಾದ, ಭಾರತವು ತನ್ನ ಮಿತ್ರರಾಷ್ಟ್ರಗಳೊಂದಿಗೆ ಹೊಂದಿರುವ ಬದ್ಧತೆಯನ್ನು ಎಂದಿಗೂ ಚ್ಯುತಿಗೊಳಿಸದು ಎಂಬ ಸಂದೇಶ ನೀಡುವುದಾಗಿತ್ತು ಎಂದು ಸಹ ವ್ಯಾಖ್ಯಾನಿಸಲಾಗಿದೆ

ಭಾರತಕ್ಕೆ ವಿರೋಧ ವ್ಯಕ್ತಪಡಿಸಿದ್ದ ಮುಸ್ಲಿಮ್ ರಾಷ್ಟ್ರ

ಭಾರತದಲ್ಲಿ ನೂಪುರ್ ಅವರ ಹೇಳಿಕೆ ದೊಡ್ಡ ವಿವಾದ ಎಬ್ಬಿಸುತ್ತಿದ್ದಂತೆಯೇ ಎಲ್ಲ ಮುಸ್ಲಿಮ್ ರಾಷ್ಟ್ರಗಳು ಆ ಬಗ್ಗೆ ತಮ್ಮ ವಿರೋಧವನ್ನು ಭಾರತಕ್ಕೆ ವ್ಯಕ್ತಪಡಿಸಿದ್ದವು. ಆದರೆ, ತ್ವರಿತವಾಗಿ ನುಪುರ್ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಯಿತು ಹಾಗೂ ಈ ನಡೆಯನ್ನು ಪ್ರಾದೇಶಿಕ ವಲಯದ ದಿಗ್ಗಜ ರಾಷ್ಟ್ರಗಳಾಗಿರುವ ಸೌದಿ ಅರೇಬಿಯಾ ಮತ್ತು ಯುಎಇ ಸ್ವಾಗತಿಸಿದ್ದವು

ಇದನ್ನೂ ಓದಿ: Bigg Boss: ಬಿಗ್ ಬಾಸ್ ಸ್ಪರ್ಧಿಗೆ ಕೊಲೆ ಬೆದರಿಕೆ; ಸಿಧು ಮೂಸೆವಾಲಾರಂತೆಯೇ ಗುಂಡಿಕ್ಕುವೆ ಎಂದ ಆರೋ

ಒಟ್ಟಿನಲ್ಲಿ ಭಾರತವು ತನ್ನ ನಡೆಗಳ ಮೂಲಕ ಜಾಗತಿಕ ವಲಯದಲ್ಲಿ ಪ್ರತಿಯೊಂದು ಪ್ರಮುಖ ದೇಶಗಳನ್ನು ಸಮರ್ಥವಾಗಿ ನಿಭಾಯಿಸುತ್ತ ಸಾಗುತ್ತಿದೆ. ಅಲ್ಲದೆ, ತನ್ನ ನೆಲದಲ್ಲಿ ಯಾವುದೇ ಧರ್ಮನಿಂದನೆಯಂತಹ ಅಂಶಗಳನ್ನು ಸಹಿಸಲಾಗದು ಹಾಗೂ ಎಲ್ಲರಿಗೂ ಅವರವರ ಧಾರ್ಮಿಕ ಸ್ವಾತಂತ್ರ್ಯ ಪರಿಪೂರ್ಣವಾಗಿದೆ ಎಂದು ಪ್ರಪಂಚದ ವೇದಿಕೆಯಲ್ಲಿ ತೋರಿಸಿಕೊಟ್ಟಿದೆ ಅಂತಲೇ ಹೇಳಬಹುದು. ಪಿ .ಗಳು..ಚರಣೆರೆ.ಳಿದೆ..ದಿ.ಟಿರಿಸಿಕೊಟ್ಟಿದೆ ಅಂತಲೇ ಹೇಳಬಹುದು.

Post a Comment

Previous Post Next Post