Local Body Polls: ಮಧ್ಯಪ್ರದೇಶದಲ್ಲಿ ನೆಲೆಯೂರಿದ ಆಪ್, AIMAM; ಕಾಂಗ್ರೆಸ್-ಬಿಜೆಪಿಗೆ ಹೊಸ ಸವಾಲು!


 ಮಧ್ಯಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ 6.3 ಶೇಕಡಾ ಮತಗಳನ್ನು ಗಳಿಸಿದೆ. ಎಐಎಂಐಎಂ ಪಕ್ಷದ ಏಳು ಅಭ್ಯರ್ಥಿಗಳು ಕಾರ್ಪೊರೇಟರ್‌ಗಳಾಗಿದ್ದಾರೆ. ಇವರೆರಡೂ ಗಮನಿಸಬೇಕಾದ ಸಂಗತಿಯಾಗಿವೆ.

ನವದೆಹಲಿ(ಜು. 31): ಇತ್ತೀಚಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶಗಳು ಆಮ್ ಆದ್ಮಿ ಪಕ್ಷ (Aam Aadmi Party) ಮತ್ತು ಹೈದರಾಬಾದ್ ಮೂಲದ ಎಐಎಂಐಎಂ (AIMIM) ಪಕ್ಷಗಳು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮೂರನೇ ಸ್ಥಾನಕ್ಕೆ ಪ್ರಬಲ ಸ್ಪರ್ಧಿಗಳಾಗಿ ಹೊರಹೊಮ್ಮಿವೆ. ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಮತ್ತು ಅಸಾದುದ್ದೀನ್ ಓವೈಸಿ ನೇತೃತ್ವದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (All India Majlis-e-Ittehadul Muslimeen) ಇಲ್ಲಿಯವರೆಗೆ ಸಮಾಜವಾದಿ ಪಕ್ಷ (SP) ಮತ್ತು ಬಹುಜನ ಸಮಾಜ ಪಕ್ಷ (BSP) ಆಕ್ರಮಿಸಿಕೊಂಡಿದ್ದ ಜಾಗವನ್ನು ತುಂಬಲು ಬಯಸುತ್ತಿವೆ

ಗಮನಾರ್ಹ ಬೆಳವಣಿ

ಮಧ್ಯಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ 6.3 ಶೇಕಡಾ ಮತಗಳನ್ನು ಗಳಿಸಿರುವುದು ಗಮನಾರ್ಹವಾಗಿದೆ. ಏಕೆಂದರೆ ಮಧ್ಯಪ್ರದೇಶದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಇದು ಚೊಚ್ಚಲ ಚುನಾವಣೆ. ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷದ ಏಳು ಅಭ್ಯರ್ಥಿಗಳು ಕಾರ್ಪೊರೇಟರ್‌ಗಳಾಗಿರುವುದು ಕೂಡ ಗಮನಿಸಬೇಕಾದ ಸಂಗತಿಯಾಗಿದೆ. ಮತ್ತೊಂದೆಡೆ ಮಾಯಾವತಿ ನೇತೃತ್ವದ ಬಿಎಸ್ಪಿ ಮತ್ತು ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷಗಳ ಅಸ್ತಿತ್ಚವು  ಮಧ್ಯಪ್ರದೇಶದಲ್ಲಿ ಈಗ ಕ್ಷೀಣಿಸುತ್ತಿದೆ

ತೃತೀಯ ಶಕ್ತಿಗಳ

ಆಡಳಿತಾರೂಢ ಬಿಜೆಪಿ ಮತ್ತು ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಇದುವರೆಗೆ ದ್ವಿಧ್ರುವಿ ರಾಜಕಾರಣ ರೂಢಿಯಲ್ಲಿದ್ದ ರಾಜ್ಯದಲ್ಲಿ ತೃತೀಯ ಶಕ್ತಿಯ ವೃದ್ಧಿಯಾಗುತ್ತಿದೆ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಾವು 6.3 ಪ್ರತಿಶತ ಮತಗಳನ್ನು ಪಡೆದಿದ್ದೇವೆ. 14 ಮೇಯರ್ ಅಭ್ಯರ್ಥಿಗಳಲ್ಲಿ ಒಬ್ಬರು ಸಿಂಗ್ರೌಲಿಯಿಂದ ಗೆದ್ದಿದ್ದಾರೆ. ಗ್ವಾಲಿಯರ್ ಮತ್ತು ರೇವಾದಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಗ್ವಾಲಿಯರ್‌ನಲ್ಲಿ ನಾವು ಸುಮಾರು 46,000 ಮತಗಳನ್ನು ಪಡೆದಿದ್ದೇವೆ ಎಂದು ಎಎಪಿಯ ರಾಜ್ಯಾಧ್ಯಕ್ಷ ಪಂಕಜ್ ಸಿಂಗ್ ತಿಳಿಸಿದ್ದಾ

ಇದನ್ನೂ ಓದಿ: Girls Fight Video: ಗೆಳತಿ ಜೊತೆ ಜಾತ್ರೆಗೆ ಬಂದ ಪ್ರಿಯಕರ, ಎದುರಿಗೇ ನಿಂತಿದ್ಲು ಪ್ರೇಯಸಿ! ಮುಂದೆ ಏನಾಯ್ತ ಅಂತ ನೀವೇ ನೋ

 2023ರ ಅಸೆಂಬ್ಲಿ ಚುನಾವಣೆ ಮೇಲೆ ಎಫೆಕ್ಟ್ಡಿ

ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶ ಮತ್ತು ಈಗ ಪಂಜಾಬ್‌ನಲ್ಲಿ ತನ್ನ ಸರ್ಕಾರಗಳನ್ನು ಹೊಂದಿರುವ ಆಮ್ ಆದ್ಮಿ ಪಕ್ಷವು ಮಧ್ಯಪ್ರದೇಶದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸುಮಾರು 1,500 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಅವರಲ್ಲಿ 40 ಮಂದಿ ಗೆದ್ದಿದ್ದಾರೆ ಮತ್ತು 135ರಿಂದ140 ಅಭ್ಯರ್ಥಿಗಳು ಎರಡನೇ ಸ್ಥಾನದಲ್ಲಿ

ಪಕ್ಷದ ಚಿಹ್ನೆಗಳಿಲ್ಲದೆ ನಡೆದ ಪಂಚಾಯತ್ ಚುನಾ

ಪಕ್ಷದ ಚಿಹ್ನೆಗಳಿಲ್ಲದೆ ನಡೆದ ಪಂಚಾಯತ್ ಚುನಾವಣೆಯಲ್ಲಿ ಎಎಪಿ ಬೆಂಬಲಿತ ಅಭ್ಯರ್ಥಿಗಳು 10 ಜಿಲ್ಲಾ ಪಂಚಾಯತ್ ಸದಸ್ಯರು, 23 ಜನಪದ ಸದಸ್ಯರು, 103 ಸರಪಂಚ್‌ಗಳು ಮತ್ತು 250 ಪಂಚ್‌ಗಳನ್ನು ಗೆದ್ದಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ. 2023 ರ ವಿಧಾನಸಭಾ ಚುನಾವಣೆಯಲ್ಲಿ ಮಧ್ಯಪ್ರದೇಶದ ಮತದಾರರಿಗೆ ಬಲವಾದ ಮೂರನೇ ಆಯ್ಕೆಯನ್ನು ನೀಡಲು ನಮ್ಮ ಪಕ್ಷವು ಉತ್ಸುಕವಾಗಿದೆ. ಏಕೆಂದರೆ ಜನರು ಬಿಜೆಪಿ ಮತ್ತು ಕಾಂಗ್ರೆಸ್ ಎರಡರ ವಿರುದ್ಧವೂ ಕೋಪಗೊಂಡಿದ್ದಾರೆ ಎಂದು ಅವರು ಹೇಳಿದ

ಇದನ್ನೂ ಓದಿ: Congress MLA: ಜೇಬು ತುಂಬ ಹಣ ಅಲ್ಲ, ಕಾರು ತುಂಬ ಹಣ! ಕಂತೆಗಳೊಂದಿಗೆ ಸಿಕ್ಕಿಬಿದ್ದ ಕಾಂಗ್ರೆಸ್ ಶಾಸ

ನಮ್ಮ ಪಕ್ಷದ ಈಗಾಗಲೇ ಎಲ್ಲಾ 230 ವಿಧಾನಸಭಾ ಸ್ಥಾನಗಳಿಗೆ ಸ್ಪರ್ಧಿಸಲು ತಯಾರಿ ನಡೆಸಿದೆ. ನಾವು ಬೂತ್ ಮಟ್ಟದಿಂದ ನಮ್ಮ ಸಂಘಟನೆಯನ್ನು ಬಲಪಡಿಸುವ ಪ್ರಕ್ರಿಯೆಯಲ್ಲಿದ್ದೇವೆ ಮತ್ತು ಜನಪರ ಸಮಸ್ಯೆಗಳಿಗಾಗಿ ಹೋರಾಡಲು ಸಜ್ಜಾಗಿದ್ದೇವೆ. 2014ರ ಲೋಕಸಭೆ ಚುನಾವಣೆಯಲ್ಲಿ ಎಎಪಿ ಎಲ್ಲ 29 ಸ್ಥಾನಗಳಿಗೆ ಸ್ಪರ್ಧಿಸಿ ಶೇಕಡಾ 2ರಷ್ಟು ಮತಗಳನ್ನು ಪಡೆದಿದ್ದರೆ, 2018ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವು ಕೇವಲ ಶೇಕಡಾ 1ರಷ್ಟು ಮತಗಳನ್ನು ಪಡೆದಿತ್ತು. ಆದರೆ ಈ ಬಾರಿ ನಮ್ಮ ಪಾಲು ಶೇಕಡಾ 6ಕ್ಕೆ ಏರಿದೆ ಎಂದಿದ್ದಾರೆ. ಕರುರು.ವಣೆದ್ದಾರೆ.ರೆ. ಉದಯ.ಗೆ.ಶೇಕಡಾ 6ಕ್ಕೆ ಏರಿದೆ ಎಂದಿದ್ದಾರೆ.

Post a Comment

Previous Post Next Post