ದೇಶಕ್ಕೆ ಸ್ವಾತಂತ್ರ್ಯ ಬಂದು75 ವರ್ಷ ತುಂಬಿದ್ದು, ಅಮೃತ ಮಹೋತ್ಸವವನ್ನು ದೊಡ್ಡದಾಗಿ ಸಂಭ್ರಮಿಸಲು ನಿರ್ಧಾರ ಮಾಡಲಾಗಿದೆ. ಪ್ರತೀ ಮನೆ ಮೇಲೆ ಧ್ವಜ ಹಾರಿಸಲು ನಿರ್ಧಾರ ಮಾಡಲಾಗಿದೆ.
ಬೆಂಗಳೂರು (ಜು.31): ಸ್ವಾತಂತ್ರ್ಯ (Freedom) ಸಿಕ್ಕಿ 75 ವರ್ಷ ತುಂಬಿದ ಅಮೃತ ಮಹೋತ್ಸವ ಕಾರ್ಯಕ್ರಮ ಆಚರಿಸಲಾಗುತ್ತಿದೆ. ಪ್ರತೀ ಮನೆ ಮೇಲೆ ತ್ರಿವರ್ಣ ಧ್ವಜ (Tricolor Flag) ಹಾರಿಸಲು ನಿರ್ಧಾರ ಮಾಡಲಾಗಿದೆ ಎಂದು ಸಚಿವ ಎಸ್.ಟಿ ಸೋಮಶೇಖರ್ (ST Somashekar) ಹೇಳಿದ್ದಾರೆ. ಬಿಜೆಪಿ ಕಚೇರಿ ಎದುರು ತ್ರಿವರ್ಣ ಧ್ವಜ ಮಾರಾಟ ಮಾಡಲಾಗುವುದು. ಧ್ವಜ ಮಾರಾಟಕ್ಕೆ ಸಚಿವ ಎಸ್.ಟಿ ಸೋಮಶೇಖರ್ ಅವರು ಸ್ಟಾಲ್ (Stall) ಉದ್ಘಾಟನೆ ಮಾಡಿದ್ರು. ಈ ವೇಳೆ ವಿಧಾನಪರಿಷತ್ ಸದಸ್ಯ ಹಾಗೂ ಪ್ರಧಾನ ಕಾರ್ಯದರ್ಶಿ ರವಿಕುಮಾರ್ (Ravi Kumar) ಉಪಸ್ಥಿತರಿದ್ರು. ಪ್ರತಿ ತ್ರಿವರ್ಣ ಧ್ವಜಕ್ಕೆ 25ರೂ ನಿಗದಿಪಡಿಸಿ ಮಾರಾಟ ಮಾಡಲಾಗುವುದು
ಪ್ರತೀ ಮನೆ ಮೇಲೆ ಧ್ವಜ ಹಾರಿಸಲು ನಿರ್ಧಾ
ಇದೇ ವೇಳೆ ಮಾತಾಡಿದ ವಿಧಾನ ಪರಿಷತ್ ಸದಸ್ಯ ರವಿಕುಮಾರ್, ನರೇಂದ್ರ ಮೋದಿ ನಮ್ಮ ದೇಶದ ಹೆಮ್ಮೆಯ ಪ್ರಧಾನಿ, ದೇಶಕ್ಕೆ ಸ್ವಾತಂತ್ರ್ಯ ಬಂದು75 ವರ್ಷ ತುಂಬಿದ್ದು, ಅಮೃತ ಮಹೋತ್ಸವವನ್ನು ದೊಡ್ಡದಾಗಿ ಸಂಭ್ರಮಿಸಲು ನಿರ್ಧಾರ ಮಾಡಲಾಗಿದೆ. ಪ್ರತೀ ಮನೆ ಮೇಲೆ ಧ್ವಜ ಹಾರಿಸಲು ನಿರ್ಧಾರ ಮಾಡಲಾಗಿದೆ. ಇದಕ್ಕಾಗಿ ನಮ್ಮೆಲ್ಲಾ ಕಾರ್ಯಕರ್ತರನ್ನ ಸಿದ್ದಗೊಳಿಸಲಾಗಿದೆ. ಸಚಿವ ಸೋಮಶೇಖರ್ ಅವರು ತಿರಂಗ ಮಳಿಗೆ ಉದ್ಘಾಟನೆ ಮಾಡಿದ್ದಾರೆ. ರಾಷ್ಟ್ರ ಧ್ವಜ ಕೊಂಡುಕೊಂಡು ತಮ್ಮ ಮನೆ ಮೇಲೆ ಹಾರಿ
39 ಕೇಂದ್ರಗಳಲ್ಲಿ ತ್ರಿವರ್ಣ ಧ್ವಜ ಮಾ
ಪಕ್ಷದ 39 ಕೇಂದ್ರಗಳಲ್ಲಿ ತ್ರಿವರ್ಣ ಧ್ವಜ ಮಾರಾಟ ಮಾಡ್ತೀವಿ. ಮನೆ ಮನೆ ಮೇಲೆ ತ್ರಿವರ್ಣ ಧ್ವಜ ಹಾರಾಟ ಮಾಡ್ತೀವಿ. ಆಗಸ್ಟ್ 13-15ರ ಮೂರು ದಿನ ಮನೆ ಮೇಲೆ ಹಾರಾಟ ಮಾಡಬೇಕು. ಆಗಸ್ಟ್ 9-15ರ ವರೆಗೂ ಹೋಬಳಿ, ತಾಲ್ಲೂಕು, ವಿಧಾನಸಭಾ ಕ್ಷೇತ್ರದಲ್ಲಿ ಮಾಡಬೇಕು. ಆ ಸಂದರ್ಭದಲ್ಲಿ ದೇಶಭಕ್ತಿ ಗೀತೆ ಹಾಡುವುದು. ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನ ಮಾಡಲಾಗುವುದು. ಸ್ವಾತಂತ್ರ್ಯ ಹೋರಾಟಗಾರರ ಪುತ್ಥಳಿ ಅಲಂಕಾರ ಮಾಡಿ ದೊಡ್ಡ ಉತ್ಸವ ಮಾಡ್ತೀವಿ ಎಂದ್ರು
ಚೈನಾದಿಂದ ತಂದ ಧ್ವಜ ಮಾರುತ್ತಿ
ಚೈನಾ ಧ್ವಜ ಬಳಕೆ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ರವಿಕುಮಾರ್, ಚೈನಾದಿಂದ ತಂದ ಧ್ವಜ ಮಾರುತ್ತಿಲ್ಲ. ಇದಕ್ಕೆ ನಾವೇ ಸ್ಟಿಚ್ ಮಾಡಿಸ್ತಿದ್ದೇವೆ. ನಾವೇ ಟೈಲರ್ ಬಳಸಿ, ಸ್ಟಿಚ್ ಮಾಡಿಸಿ ಮಾರಾಟ ಮಾಡಲಾಗ್ತಿದೆ. ಹುಬ್ಬಳ್ಳಿಯ ಬೆಂಗೇರಿಯಲ್ಲಿ ಧ್ವಜ ತಯಾರಾಗ್ತಿದೆ. ವಿಶೇಷವಾಗಿ ಖಾದಿ, ನಮ್ಮ ದೇಶದ ಕಾಟನ್‌ಗೆ ಹೆಚ್ಚು ಉತ್ತೇಜನ ನೀಡ್ತೀ
ಇದನ್ನೂ ಓದಿ: Breaking News: ಐಸಿಸ್ ಜೊತೆ ನಂಟು ಹೊಂದಿರೋ ಶಂಕೆ, ಭಟ್ಕಳದಲ್ಲಿ ಇಬ್ಬರನ್ನು ವಶಕ್ಕೆ ಪಡೆದ
ಕಾಂಗ್ರೆಸ್‌ನವರಿಗೆ ಅರ್ಧ ಬುದ್ದಿ
RSS ಕಚೇರಿ ಮೇಲೆ ಧ್ವಜ ಹಾರಿಸೋ ಬಗ್ಗೆ ಕಾಂಗ್ರೆಸ್ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ರವಿ ಕುಮಾರ್, ಕಾಂಗ್ರೆಸ್‌ನವರಿಗೆ ಅರ್ಧ ಬುದ್ದಿ ಇದೆ. ನಾಗಪುರದ ಕೇಂದ್ರ ಕಚೇರಿಯಲ್ಲಿ ರಾಷ್ಟ್ರ ಧ್ವಜ ಹಿಂದಿನಿಂದಲೂ ಹಾರಿಸಲಾಗ್ತಿದೆ. ರಾಷ್ಟ್ರ ಧ್ವಜ ಎಲ್ಲರೂ ಒಪ್ಪಿರೋದ್ರಿಂದ ಹಾರಿಸಲಾಗ್ತಿದೆ. ಭಗತ್ ಸಿಂಗ್ ಸೇರಿದಂತೆ ಅನೇಕ ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸ ತಿಳಿಸುವ ಕೆಲಸವೂ ಮಾಡಲಿದ್ದೇ
ರಾಜ್ಯದ ಎಲ್ಲಾ ಸರ್ಕಾರಿ ನೌಕರರಿಗೆ
ಆಗಸ್ಟ್ 13 ರಿಂದ 15 ರವರೆಗೆ ತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿ ಹರ್ ಘರ್ ತಿರಂಗಾ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ರಾಜ್ಯದ ಎಲ್ಲಾ ಸರ್ಕಾರಿ ನೌಕರರಿಗೆ ಕರೆ ನೀಡಿದ್ದಾ
ಇದನ್ನೂ ಓದಿ: Siddaramotsava: ಮುಂದಿನ ಸಿಎಂ ಸಿದ್ದರಾಮಯ್ಯ; ಡಿಕೆಶಿಗೆ ಬ್ಯಾನರ್ ಮೂಲಕ ಟಕ್ಕರ್ ಕೊಟ್ಟ ಸಿದ್ದು ಬೆಂಬಲಿ
ರಾಜ್ಯ ಮಟ್ಟದ ಸ್ವಾತಂತ್ರ್ಯ ದಿನಾಚರಣೆಯ ಕುರಿತು ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ತಮ್ಮ ಮನೆಗಳ ಮೇಲೆ ರಾಷ್ಟ್ರ ಧ್ವಜ ಹಾರಿಸಿ ಇಡೀ ದೇಶಕ್ಕೆ ಮಾದರಿಯಾಗಲು ರಾಜ್ಯ ಸರ್ಕಾರಿ ನೌಕರರಿಗೆ ಇದೊಂದು ಸದಾವಕಾಶ ಎಂದು ಅವರು ಬಣ್ಣಿಸಿದ್ದಾರೆ. ಗರುರೆ.ಕರೆವೆ.ಇದೆ NIAವಿ.ಲ್ಲ.ರಾಟಸಿರ.ದು ಸದಾವಕಾಶ ಎಂದು ಅವರು ಬಣ್ಣಿಸಿದ್ದಾರೆ.

Post a Comment