Karnataka Politics: ದೇವೇಗೌಡರ ಪರ ನಿಂತ್ರು ಡಿಕೆ ಬ್ರದರ್ಸ್​; ಕೆ.ಎನ್​ ರಾಜಣ್ಣಗೆ ನೋಟಿಸ್ ಮಾಜಿ ಶಾಸಕ ಕೆ.ಎನ್. ರಾಜಣ್ಣ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ಕಾಂಗ್ರೆಸ್ ಹೈಕಮಾಂಡ್ ಕರೆ ಮಾಡಿದ್ದು, ಕೂಡಲೇ ಕೆ.ಎನ್. ರಾಜಣ್ಣ ತಮ್ಮ ಹೇಳಿಕೆ ಹಿಂಪಡೆಯಬೇಕು. ಹೇಳಿಕೆ ಹಿಂಪಡೆಯುವಂತೆ ರಾಜಣ್ಣಗೆ ಸೂಚನೆ ನೀಡಿ ಎಂದು ಡಿಕೆ ಶಿವಕುಮಾರ್ ಗೆ ಹೈಕಮಾಂಡ್ ನಾಯಕರಿಂದ ಸೂಚನೆ ನೀಡಿದೆ


 ಬೆಂಗಳೂರು (ಜು 1): ಕಾಂಗ್ರೆಸ್ ಮುಖಂಡ ಕೆ.ಎನ್ ರಾಜಣ್ಣ (K.N Rajanna) ಮಾಜಿ ಪ್ರಧಾನಿಗಳ ಬಗ್ಗೆ ಮಾತಾಡಿ ಪೇಚಿಗೆ ಸಿಲಿಕಿದ್ದಾರೆ. JDS ನಾಯಕರು ಕೆ.ಎನ್. ರಾಜಣ್ಣ ಹೇಳಿಕೆ ವಿರುದ್ಧ ಸಿಡಿದೆದ್ದಿದ್ದಾರೆ. ಇತ್ತ ಕಾಂಗ್ರೆಸ್ ನಾಯಕರು (Congress Leaders) ಸಹ ದೇವೇಗೌಡರ ಪರ ನಿಂತಿದ್ದಾರೆ. ಕೆ.ಎನ್ ರಾಜಣ್ಣ ವಿರುದ್ಧ ಡಿ.ಕೆ ಶಿವಕುಮಾರ್ (D.K Shivakumar), ಸಂಸದ ಡಿ.ಕೆ. ಸುರೇಶ್ ಕೂಡ ಕಿಡಿಕಾರಿದ್ದಾರೆ. ಕೆ.ಎನ್. ರಾಜಣ್ಣ ಹೇಳಿಕೆ ಖಂಡನೀಯ ಎಂದ ಡಿ.ಕೆ ಸುರೇಶ್, ಮಾಜಿ ಪ್ರಧಾನಿ ದೇವೇಗೌಡರಿವೆ (Devegowda) ಗೌರವ ಕೊಡಬೇಕು. ದೇವೇಗೌಡರ ಹಿರಿತನಕ್ಕೆ ಎಲ್ಲರೂ ತಲೆಬಾಗಬೇಕು ಎಂದ್ರು.

ಕೂಡಲೇ ರಾಜಣ್ಣ ದೇವೇಗೌಡರ ಕ್ಷಮೆ ಕೇಳಬೇ

ಹಿರಿಯ ನಾಯಕರ ಬಗ್ಗೆ ಹೀಗೆ ಮಾತನಾಡಿದ್ದು, ಅವರ ಘನತೆಗೆ ತಕ್ಕದ್ದಲ್ಲ ಕೂಡಲೇ ರಾಜಣ್ಣ ದೇವೇಗೌಡರ ಕ್ಷಮೆ ಕೇಳಬೇಕು. ವೈಯಕ್ತಿಕವಾಗಿ ಏನೇ ಇರಲಿ ರಾಜಣ್ಣ ಕ್ಷಮೆ ಕೇಳಬೇಕು. ಕ್ಷಮೆ ಕೇಳದಿದ್ದರೆ ಸಮಾಜ ಸುಮ್ಮನಿರುವುದಿಲ್ಲ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ

ದೇವೇಗೌಡರಿಗೆ ಭಗವಂತ ಉತ್ತಮ ಆರೋಗ್ಯ ಕೊ

ಹೆಚ್‌ಡಿಡಿ ವಿರುದ್ಧ ಕೆ. ರಾಜಣ್ಣ ಹೇಳಿಕೆ ವಿಚಾರಕ್ಕೆ ಡಿ.ಕೆ ಶಿವಕುಮಾರ್ ಸಹ ಕಿಡಿಕಾರಿದ್ದಾರೆ. ನವದೆಹಲಿಯಲ್ಲಿ ಮಾತಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ದೇವೇಗೌಡರ ಬಗ್ಗೆ ಅಡಿದ ಮಾತು ಸರಿಯಲ್ಲ. ಇಡೀ ಕಾಂಗ್ರೆಸ್ ಪಕ್ಷ ಈ ಹೇಳಿಕೆಯನ್ನು ಖಂಡಿಸುತ್ತೆ. ಮಾಜಿ ಪ್ರಧಾನಿಯ ಆರೋಗ್ಯದ ಬಗ್ಗೆ ಹೀಗೆ ಮಾತನಾಡುವುದು ಸರಿಯಲ್ಲ, ರಾಜಣ್ಣ ಅವರು ಕ್ಷಮಾಪಾಣೆ ಕೇಳಬೇಕು. ಕ್ಷಮೆಯಾಚಿಸುವಂತೆ ರಾಜಣ್ಣಗೆ ಸೂಚಿಸಿದ್ದೇನೆ. ಇಂತಹ ಹೇಳಿಕೆಗೆ ನಾವು ಅವಕಾಶ ಕೊಡಲ್ಲ. ಸಮಾಜ ಶಾಂತ ರೀತಿಯಲ್ಲಿರಬೇಕು. ಅವರಿಗೆ ಭಗವಂತ ಉತ್ತಮ ಆರೋಗ್ಯ ಕೊಡಲಿ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾ

ಕೆ.ಎನ್. ರಾಜಣ್ಣ ವಿರುದ್ಧ ಹೈಕಮಾಂಡ್ ಗರಂ ನೋ

ಮಾಜಿ ಶಾಸಕ ಕೆ.ಎನ್. ರಾಜಣ್ಣ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ಕಾಂಗ್ರೆಸ್ ಹೈಕಮಾಂಡ್ ಕರೆ ಮಾಡಿದ್ದು, ಕೂಡಲೇ ಕೆ.ಎನ್. ರಾಜಣ್ಣ ತಮ್ಮ ಹೇಳಿಕೆ ಹಿಂಪಡೆಯಬೇಕು. ಹೇಳಿಕೆ ಹಿಂಪಡೆಯುವಂತೆ ರಾಜಣ್ಣಗೆ ಸೂಚನೆ ನೀಡಿ ಎಂದು ಡಿಕೆ ಶಿವಕುಮಾರ್ ಗೆ ಹೈಕಮಾಂಡ್ ನಾಯಕರಿಂದ ಸೂಚನೆ ನೀಡಿದೆ. ಕೆ.ಎನ್. ರಾಜಣ್ಣಗೆ ನೋಟಿಸ್ ನೀಡಲು ಡಿ.ಕೆ. ಶಿವಕುಮಾರ್ ಸೂಚನೆ ನೀಡಿದ್ದಾರೆ. ದೇವೇಗೌಡರ ಬಗ್ಗೆ ಹೇಳಿಕೆ ನೀಡಿದ್ದಕ್ಕೆ ರಾಜಣ್ಣಗೆ ನೋಟೀಸ್ ನೀಡುವಂತೆ ಸೂಚನೆ ನೀಡಲಾಗಿದೆ ಟಿಸ್ರೆ.ಡಲಿ.ಕು ಸೂಚನೆ ನೀಡಲಾಗಿದೆ

Post a Comment

Previous Post Next Post