Jamun: ಮಧುಮೇಹ ನಿಯಂತ್ರಿಸುವಲ್ಲಿ ನೇರಳೆ ಹಣ್ಣುಗಳು ಎತ್ತಿದ ಕೈ: ಇದನ್ನು ಈ ರೀತಿಯಾಗಿ ಸೇವಿಸಿ


  ಸಮಗ್ರ ಪೌಷ್ಟಿಕತಜ್ಞೆ ಮತ್ತು ಆರೋಗ್ಯ ಮತ್ತು ಸ್ವಾಸ್ಥ್ಯ ತರಬೇತುದಾರರಾದ ಅನುಪಮಾ ಮೆನನ್, ನೀಡಿದ ಸಂದರ್ಶನದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ನಿಮ್ಮ ಆಹಾರದಲ್ಲಿ ನೇರಳೆ ಹಣ್ಣನ್ನು ಸೇರಿಸುವ ಅನೇಕ ಮಾರ್ಗಗಳ ಬಗ್ಗೆ ಮಾತನಾಡಿದ್ದಾರೆ ನೋಡಿ.

ನೇರಳೆ ಹಣ್ಣು (Jamun Fruit) ಮಳೆಗಾಲದಲ್ಲಿ ಹೇರಳವಾಗಿ ದೊರೆಯುವ ಒಂದು ಹಣ್ಣು ಅಂತ ಹೇಳಬಹುದು. ಇದು ಋತುಮಾನದ ಸೋಂಕುಗಳ ವಿರುದ್ಧ ರೋಗನಿರೋಧಕ ಶಕ್ತಿಯನ್ನು (Immunity) ಹೆಚ್ಚಿಸಲು ಸೂಕ್ತವಾದ ಹಣ್ಣು ಆಗಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಈ ನೇರಳೆ ಹಣ್ಣು ಮತ್ತು ಅದರ ಬೀಜವು ದೇಹದಲ್ಲಿ ಸಕ್ಕರೆಯ ಬಿಡುಗಡೆಯನ್ನು ನಿಧಾನಗೊಳಿಸುತ್ತದೆ ಎಂದು ತಿಳಿದಿರುವುದರಿಂದ ಮಧುಮೇಹ (diabetes) ಹೊಂದಿರುವ ಜನರು ವಿಶೇಷವಾಗಿ ನೇರಳೆ ಹಣ್ಣು ಯಾವಾಗಪ್ಪಾ ಮಾರುಕಟ್ಟೆಯಲ್ಲಿ (Market) ಸಿಗುತ್ತದೆ ಅಂತ ಎದುರು ನೋಡುತ್ತಿರುತ್ತಾರೆ. ಈ ಹಣ್ಣನ್ನು ಮಧುಮೇಹ ಚಿಕಿತ್ಸೆಗಾಗಿ ಆಯುರ್ವೇದದಲ್ಲಿ (Ayurveda) ವ್ಯಾಪಕವಾಗಿ ಬಳಸಲಾಗುತ್ತದೆ, ಏಕೆಂದರೆ ಇದು ಜಾಂಬೋಲಿನ್ ಎಂಬ ಸಂಯುಕ್ತವನ್ನು ಹೊಂದಿದ್ದು, ಇದು ರಕ್ತದಲ್ಲಿನ ಸಕ್ಕರೆಯನ್ನು (Sugar) ನಿಯಂತ್ರಿಸಲು ಮತ್ತು ಇನ್ಸುಲಿನ್ ಸಂವೇದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ

ನೇರಳೆ ಹಣ್ಣಿನ ಆರೋಗ್ಯ ಪ್ರಯೋಜನ

ಈ ಹಣ್ಣುಗಳು ಉತ್ಕರ್ಷಣ ನಿರೋಧಕಗಳು, ಪ್ರೋಟೀನ್, ಕ್ಯಾಲ್ಸಿಯಂ, ಫೈಬರ್, ಕಬ್ಬಿಣ, ರಂಜಕ, ಪೊಟ್ಯಾಸಿಯಮ್, ವಿಟಮಿನ್ ಸಿ ಮತ್ತು ಬಿ6 ಮತ್ತು ಮ್ಯಾಂಗನೀಸ್ ನಿಂದ ತುಂಬಿದೆ. ಕಬ್ಬಿಣದ ಅಂಶ ಹೆಚ್ಚಿರುವ ನೇರಳೆ ಹಣ್ಣು ನಿಮ್ಮ ಹಿಮೋಗ್ಲೋಬಿನ್ ಮಟ್ಟವನ್ನು ಸಹ ಹೆಚ್ಚಿಸುತ್ತದೆ ಮತ್ತು ರಕ್ತವನ್ನು ಶುದ್ಧೀಕರಿಸುತ್ತದೆ

ನೇರಳೆ ಹಣ್ಣಿನಲ್ಲಿ ಕಂಡು ಬರುವ ಜಾಂಬೋಲಿನ್ ಮತ್ತು ಜಾಂಬೋಸಿನ್ ಮಧುಮೇಹಿಗಳಿಗೆ ತುಂಬಾ ಸಹಾಯಕವಾಗುತ್ತದೆ. ಈ ಹಣ್ಣು ಮತ್ತು ಬೀಜಗಳು ದೇಹದಲ್ಲಿ ಸಕ್ಕರೆಗಳ ಬಿಡುಗಡೆಯನ್ನು ನಿಧಾನಗೊಳಿಸುತ್ತವೆ ಎಂದು ತಿಳಿದುಬಂದಿದೆ" ಎಂದು ಜಸ್ಲೋಕ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಮುಖ್ಯ ಆಹಾರ ತಜ್ಞ ಮತ್ತು ಪೌಷ್ಟಿಕ ತಜ್ಞ ಡೆಲ್ನಾಜ್ ಚಂದುವಾಡಿಯಾ ಹೇಳುತ್ತಾರೆ

ಇದನ್ನೂ ಓದಿ:  French Fries Side Effects: ಫ್ರೆಂಚ್ ಫ್ರೈಸ್ ತಿನ್ನುತ್ತೀರಾ? ಇದರಿಂದ ಹೃದಯ ಸಂಬಂಧಿ ಕಾಯಿಲೆ ಬರುತ್ತಂ

ಸಮಗ್ರ ಪೌಷ್ಟಿಕತಜ್ಞೆ ಮತ್ತು ಆರೋಗ್ಯ ಮತ್ತು ಸ್ವಾಸ್ಥ್ಯ ತರಬೇತುದಾರರಾದ ಅನುಪಮಾ ಮೆನನ್, ನೀಡಿದ ಸಂದರ್ಶನದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ನಿಮ್ಮ ಆಹಾರದಲ್ಲಿ ನೇರಳೆ ಹಣ್ಣನ್ನು ಸೇರಿಸುವ ಅನೇಕ ಮಾರ್ಗಗಳ ಬಗ್ಗೆ ಮಾತನಾಡಿದ್ದಾರೆ ನೋ

1. ನೇರಳೆ ಹಣ್ಣಿನ ಜ್ಯೂ

ಈ ನೇರಳೆ ಹಣ್ಣುಗಳಿಂದ ರಸವನ್ನು ತೆಗೆದು ಅದರಿಂದ ಜ್ಯೂಸ್ ಮಾಡಿಕೊಂಡು ಕುಡಿಯುವುದು ಮೊದಲನೆಯ ವಿಧಾನವಾಗಿದೆ. 1/4 ಕಪ್ ನೇರಳೆ ಹಣ್ಣಿನ ತಿರುಳನ್ನು ತಣ್ಣೀರು ಮತ್ತು ಕಪ್ಪು ಉಪ್ಪನ್ನು ಸೇರಿಸಿ. ರುಚಿಗೆ ತಕ್ಕಂತೆ ಜೇನುತುಪ್ಪವನ್ನು ಸೇರಿಸಿ ಮತ್ತು ಎಲ್ಲವನ್ನೂ ಒಟ್ಟಿಗೆ ಮಿಶ್ರಣ ಮಾಡಿ. ಈ ರಸವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ನಿಮ್ಮ ಚರ್ಮವನ್ನು ಸ್ವಚ್ಛವಾಗಿರಿಸುತ್ತದೆ ಮತ್ತು ನಿಮ್ಮ ರಕ್ತವನ್ನು ಸಹ ಶುದ್ಧೀಕರಿಸುತ್ತದೆ

2. ನೇರಳೆ ಹಣ್ಣಿನ ಚಿಯಾ ಪಡ್ಡಿಂ

ಎಲ್ಲಾ ಆರೋಗ್ಯ ಪ್ರಯೋಜನಗಳೊಂದಿಗೆ ಈ ನೋ-ಕುಕ್ಕಿಂಗ್ ಪಾಕವಿಧಾನವು ತ್ವರಿತ ಮತ್ತು ಸುಲಭವಾಗಿದೆ. ನಿಮ್ಮ ಚಿಯಾ ಬೀಜಗಳು, ಜೇನುತುಪ್ಪ ಮತ್ತು ತೆಂಗಿನ ಹಾಲನ್ನು ಒಂದು ಬೌಲ್ ನಲ್ಲಿ ಒಟ್ಟಿಗೆ ಸೇರಿಸಿ, ಬೀಜಗಳು ಉಬ್ಬಿಕೊಳ್ಳುವವರೆಗೆ ಸುಮಾರು 4 ಗಂಟೆಗಳ ಕಾಲ ಇರಿಸಿ. ನೇರಳೆ ಹಣ್ಣಿನ ತಿರುಳನ್ನು ತೆಗೆದುಕೊಳ್ಳಿ ಮತ್ತು ಅವುಗಳನ್ನು ಪ್ಯೂರಿ ಮಾಡಿ. ನಂತರ ನೇರಳೆ ಹಣ್ಣಿನ ಆ ಮಿಶ್ರಣವನ್ನು ಚಿಯಾ ಮಿಶ್ರಣದೊಂದಿಗೆ ಸೇರಿಸಿ

3. ನೇರಳೆ ಹಣ್ಣಿನ ಫಿ

ನೀವು ನೇರಳೆ ಹಣ್ಣನ್ನು ನಿಮ್ಮ ಡಯಟ್ ನಲ್ಲಿ ರುಚಿಕರವಾದ ರೀತಿಯಲ್ಲಿ ಸೇರಿಸಲು ಬಯಸಿದರೆ, ಇದು ಒಳ್ಳೆಯ ಅನುಸರಿಸಬೇಕಾದ ಮಾರ್ಗವಾಗಿದೆ. ಒಂದು ಬೌಲ್ ನಲ್ಲಿ ಸ್ವಲ್ಪ ನಿಂಬೆ ಸೋಡಾ ಮತ್ತು ಸೇಬಿನ ರಸವನ್ನು ಸೇರಿಸಿ. ನಿಮ್ಮ ನೇರಳೆ ಹಣ್ಣಿನ ಮಿಶ್ರಣಕ್ಕೆ ಹಾಕಿ ಮತ್ತು ಅವು ಸೋಡಾಗಳಲ್ಲಿ ಮುಳುಗುತ್ತಿದ್ದಂತೆ ಸ್ವಲ್ಪ ಸಮಯದವರೆಗೆ ಹಾಗೆ ಬಿಡಿ. ನಂತರ ತಣ್ಣಗೆ ಸರ್ವ್ ಮಾಡಿ. ಇದು ನಿಮ್ಮ ಜೀರ್ಣಕಾರಿ ಆರೋಗ್ಯಕ್ಕೆ ಒಳ್ಳೆಯದು

ಇದನ್ನೂ ಓದಿ: Belly Fat: ಹೊಟ್ಟೆ ಬೊಜ್ಜು ಕರಗಿಸಲು ಆಪಲ್ ಸೈಡರ್ ವಿನೆಗರ್ ಹೇಗೆ ಸಹಕಾ

4. ನೇರಳೆ ಹಣ್ಣಿನ ಸ

ನೀವು ಸಲಾಡ್ ಪ್ರಿಯರಾಗಿದ್ದರೆ, ನಿಮ್ಮ ಬಟ್ಟಲುಗಳಲ್ಲಿ ಈ ನೇರಳೆ ಹಣ್ಣುಗಳನ್ನು ಸಹ ಸೇರಿಸಿಕೊಳ್ಳಲು ಮರೆಯಬೇಡಿ. ನಿಮ್ಮ ಇಷ್ಟದ ಯಾವುದೇ ಸಲಾಡ್ ಗೆ ನೇರಳೆ ಹಣ್ಣುಗಳನ್ನು ಸೇರಿಸಿಕೊಳ್ಳಿ. ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಸುಧಾರಿಸುವುದು ಮಾತ್ರವಲ್ಲದೆ, ನಿಮ್ಮ ರಕ್ತದಲ್ಲಿನ ಹಿಮೋಗ್ಲೋಬಿನ್ ಅಂಶವನ್ನು ಸಹ ಹೆಚ್ಚು ಮಾಡುತ್ತದೆ

5. ಇದನ್ನು ಹಾಗೆಯೇ ಸೇವಿ

ನೇರಳೆ ಹಣ್ಣನ್ನು ಹಾಗೆಯೇ ತಿನ್ನಿರಿ. ವಿಶೇಷವಾಗಿ ನೀವು ತೂಕ ಇಳಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಇದ್ದರೆ ಈ ಹಣ್ಣುಗಳಲ್ಲಿ ಕಡಿಮೆ ಕ್ಯಾಲೋರಿಗಳು ಮತ್ತು ಹೆಚ್ಚಿನ ನಾರಿನಂಶವಿರುತ್ತದೆ. ಆದ್ದರಿಂದ ಈ ಹಣ್ಣು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವಾಗ ನಿಮ್ಮ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಬಹುದು. ಸಿ.ಲಾಡ್ರಿ?.ಜ್.ಗ್.ಸ್ಡಿ.ತೆ!..ಗಳು.ರೆ ಮಟ್ಟವನ್ನು ಕಾಪಾಡಿಕೊಳ್ಳಬಹುದು.

Post a Comment

Previous Post Next Post