ಕಣ್ಣುಗಳ ಸಮಸ್ಯೆ ಉಂಟಾದಾಗ ಆತನ ಕಣ್ಣುಗಳು ಮಂದವಾಗುತ್ತವೆ. ಕಣ್ಣುಗಳ ಮಸುಕಾದ ದೃಷ್ಟಿ ಅಥವಾ ರೇಖೆಗಳು ಕಂಡು ಬಂದರೆ ತಕ್ಷಣವೇ ಕಣ್ಣುಗಳ ತಪಾಸಣೆ ಮಾಡಿಸಬೇಕು. ಯಾವುದೇ ವ್ಯಕ್ತಿಯ ಆರೋಗ್ಯವನ್ನು ಕಣ್ಣಿನಿಂದಲೇ ಪತ್ತೆ ಹಚ್ಚಲಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ಕಣ್ಣುಗಳು (Eyes) ನಮ್ಮೆಲ್ಲರ ಜೀವನದ (Life) ಪ್ರಮುಖ ಅಂಗ (Main Part). ನಾವು ಎಲ್ಲವನ್ನೂ ನಮ್ಮ ಕಣ್ಣುಗಳಿಂದಲೇ ನೋಡಿ ಚೆನ್ನಾಗಿ ಅನುಭವಿಸುತ್ತೇವೆ. ಅದಕ್ಕೆ ಹೇಳೋದು ಕಣ್ಮನ ತುಂಬಿ ಬಂತು ಅನ್ನೋದು. ಯಾವುದಾದರೂ ವಸ್ತು ಹಾಗೂ ವ್ಯಕ್ತಿ, ಪ್ರಕೃತಿ (Nature) ಹಾಗೂ ವಸ್ತುಗಳನ್ನು ನಾವು ನೋಡಿ ಅನುಭವಿಸುತ್ತೇವೆ. ಕಣ್ಣುಗಳು ಎಲ್ಲವನ್ನೂ ನೋಡಲು ಹಾಗೂ ನಾವು ಜೀವನಕ್ಕೆ ಒಂದು ಉತ್ತಮ ಫೀಲ್ ನೀಡುತ್ತದೆ. ಹಾಗಾಗಿ ನಮ್ಮ ಕಣ್ಣುಗಳ ಬಗ್ಗೆ ಅಗತ್ಯ ಕಾಳಜಿ ವಹಿಸುವುದು ತುಂಬಾ ಮುಖ್ಯ ಆಗುತ್ತದೆ. ಯಾರಿಗಾದರೂ ನೋಡಲು ತೊಂದರೆಯಾದರೆ ಆ ವ್ಯಕ್ತಿ ತುಂಬಾ ತೊಂದರೆ, ಸಮಸ್ಯೆ ಅನುಭವಿಸುತ್ತಾನೆ
ಕಣ್ಣುಗಳ ಸಮಸ್ಯೆ ಉಂಟಾದಾಗ ಆತ ತನ್ನ ಕಣ್ಣುಗಳಿಂದ ಕಡಿಮೆ ನೋಡುತ್ತಾನೆ. ಕಣ್ಣುಗಳ ಮಸುಕಾದ ದೃಷ್ಟಿ ಅಥವಾ ರೇಖೆಗಳು ಕಂಡು ಬಂದರೆ ತಕ್ಷಣವೇ ಕಣ್ಣುಗಳ ತಪಾಸಣೆ ಮಾಡಿಸಬೇಕು. ಯಾವುದೇ ವ್ಯಕ್ತಿಯ ಆರೋಗ್ಯವನ್ನು ಕಣ್ಣಿನಿಂದಲೇ ಪತ್ತೆ ಹಚ್ಚಲಾಗುತ್ತದೆ ಎಂದು ತಜ್ಞರು ಹೇಳುತ್ತಾ
ಯಾರಿಗಾದರೂ ದೀರ್ಘ ಕಾಲದವರೆಗೆ ಕಣ್ಣುಗಳಲ್ಲಿ ಯಾವುದಾದರೂ ಸಮಸ್ಯೆ ಉಂಟಾದರೆ ಅದು ಗಂಭೀರ ಅನಾರೋಗ್ಯದ ಸಂಕೇತ ಆಗಿದೆ. ನಿಮ್ಮ ಕಣ್ಣುಗಳಲ್ಲಿ ಇಲ್ಲಿ ಹೇಳಲಾದ ಸಂಕೇತಗಳು ಕಂಡು ಬಂದರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ ಪರೀಕ್ಷೆ ಮಾಡಿಸಿಕೊಳ್ಳಿ
ಇದನ್ನೂ ಓದಿ: ಮೂವತ್ತರ ಹರೆಯದ ನಂತರ ಕೈ- ಕಾಲುಗಳ ಆರೈಕೆ ಹೇಗೆ ಮಾಡುವು
ಬಿಳಿ ಕಲೆ
ಯಾರಿಗಾದರೂ ಕಾರ್ನಿಯಾದಲ್ಲಿ ಬಿಳಿ ಚುಕ್ಕೆಗಳು ಕಾಣಿಸಿದರೆ ಅದನ್ನು ಎಚ್ಚರಿಕೆಯ ಕರೆಗಂಟೆ ಎಂದು ತಿಳಿಯಬೇಕು ಎನ್ನುತ್ತಾರೆ ತಜ್ಞರು. ಕಾರ್ನಿಯಾದಲ್ಲಿ ಬಿಳಿ ಕಲೆಗಳು ಕಾಣಿಸಿದರೆ ಅದು ಕಾರ್ನಿಯಲ್ ಸೋಂಕಿನ ಸಂಕೇತ ಆಗಿರಬಹುದು. ಇದನ್ನು ನಿಧಾನವಾಗಿ ಮಾಡುವುದು ಇದರಿಂದ ಕಣ್ಣುಗಳಿಗೆ ಹಾನಿ ಆಗಬಹುದು. ಹಾಗಾಗಿ ವೈದ್ಯರ ಬಳಿ ತಪಾಸಣೆ ಮಾಡಿ
ಸೆಳೆ
ಆಲ್ಕೋಹಾಲ್, ಕೆಫೀನ್ ಅಥವಾ ನಿಕೋಟಿನ್ ಅತಿಯಾದ ಸೇವನೆ ಕಣ್ಣು ಸೆಳೆತಕ್ಕೆ ಕಾರಣ ಆಗುತ್ತದೆ. ಆದರೆ ಸಾಮಾನ್ಯ ದಿನಗಳಲ್ಲಿ ಸಹ ಒಬ್ಬರ ಕಣ್ಣುಗಳು ಆಗಾಗ್ಗೆ ಸೆಳೆತ ಅನುಭವಿಸುತ್ತಿದ್ದರೆ, ಇದು ಸುಡುವಿಕೆಯ ಆರಂಭಿಕ ಚಿಹ್ನೆ ಆಗಿರಬಹುದು. ಕಣ್ಣುಗಳ ಸುಡುವ ಸಂವೇದನೆ ದೈಹಿಕ ಆಯಾಸ ಎಂದು ಕರೆಯುತ್ತಾರೆ. ನಿಮ್ಮ ಕಣ್ಣುಗಳು ನಿರಂತರವಾಗಿ ಸೆಳೆತ ಅನುಭವಿಸುತ್ತಿದ್ದರೆ ದೈಹಿಕ ಪರಿಶ್ರಮ ಮತ್ತು ಒತ್ತಡ ಕಡಿಮೆ ಮಾಡುವ ಅವಶ್ಯಕತೆಯಿ
ಕೆಂಪು ಕಣ್ಣು
ಎದ್ದ ನಂತರ ನಿಮ್ಮ ಕಣ್ಣುಗಳು ಊದಿಕೊಂಡು ಕೆಂಪಾಗಿದ್ದರೆ ಅದು ಅಲರ್ಜಿ, ಸೋಂಕು ಅಥವಾ ತೀವ್ರ ಆಯಾಸದಿಂದ ಉಂಟಾಗಿರಬಹುದು. ಕೆಂಪು ಕಣ್ಣುಗಳು ನಿಮಗೆ ವಿಶ್ರಾಂತಿ ಬೇಕು ಎಂಬುದನ್ನು ಸೂಚಿಸುತ್ತವೆ ಎಂದು ಅರ್ಥ ಮಾಡಿಕೊಳ್ಳಬೇ
ಮಂದ ದೃಷ್ಟಿ
ದೃಷ್ಟಿ ಮಂದವಾಗುವುದು ಕಡಿಮೆ ದೃಷ್ಟಿಯ ಸಂಕೇತ. ಮಧುಮೇಹ ಮತ್ತು ಕಣ್ಣಿನ ಪೊರೆಯ ಸಂಕೇತವೂ ಆಗಿರಬಹುದು. ಅಧಿಕ ರಕ್ತದ ಸಕ್ಕರೆಯು ರೆಟಿನಾದ ರಕ್ತನಾಳಕ್ಕೆ ಹಾನಿಯುಂಟು ಮಾಡುತ್ತದೆ. ಅಂತಹ ಸ್ಥಿತಿಯಲ್ಲಿ, ಹಾನಿಗೊಳಗಾದ ರಕ್ತನಾಳಗಳಲ್ಲಿ ಊತ ಉಂಟಾಗುತ್ತದೆ. ಅವುಗಳಿಂದ ರಕ್ತವು ಹೊರಬರುತ್ತದೆ. ಇಲ್ಲವೇ ದ್ರವವು ಅವುಗಳಿಂದ ಹೊರ ಬರು
ಇದರಿಂದಾಗಿ ಸ್ಪಷ್ಟವಾಗಿ ನೋಡಲು ಕಷ್ಟ ಆಗುತ್ತದೆ. ಒಂದು ಅಥವಾ ಎರಡೂ ಕಣ್ಣುಗಳಲ್ಲಿ ಮಸುಕಾದ ದೃಷ್ಟಿ ಸಹ ಸಂಭವಿಸಬಹುದು. ರಕ್ತದ ಸಕ್ಕರೆ ನಿಯಂತ್ರಣದಲ್ಲಿ ಉಳಿದಿರುವ ಜನರ ದೃಷ್ಟಿ ಸ್ಪಷ್ಟ ಆಗಿರುತ್ತದೆ. ಅದೇ ಸಮಯದಲ್ಲಿ, ಕಣ್ಣಿನ ಪೊರೆಯು ಬೆಳಕನ್ನು ಕಣ್ಣಿಗೆ ಪ್ರವೇಶಿಸದಂತೆ ತಡೆಯುತ್ತದೆ. ಅದು ದೃಷ್ಟಿ ಮಸುಕು ಮಾಡುತ್ತ
ಇದನ್ನೂ ಓದಿ: ಮಹಿಳೆಯರನ್ನು ಸಾವಿನ ಕೂಪಕ್ಕೆ ತಳ್ಳುವ ಗರ್ಭಕಂಠದ ಕ್ಯಾನ್ಸರ್! ಲಕ್ಷಣಗಳ ಬಗ್ಗೆ ಎಚ್ಚರಿಕೆ ವಹಿ
ಉಂ
ಯಾರಾದರೂ ಕಣ್ಣಿನ ಬಿಳಿ ಭಾಗದಲ್ಲಿ ಅಂದರೆ ಕಾರ್ನಿಯಾದಲ್ಲಿ ವಿಶೇಷ ರೀತಿಯ ಉಂಗುರ ಉಂಟಾಗುವುದನ್ನು ನೋಡಿದರೆ, ಅದು ಅಧಿಕ ಕೊಲೆಸ್ಟ್ರಾಲ್ ನ ಸಂಕೇತ ಆಗಿರಬಹುದು. ನಿಮ್ಮ ಕೊಲೆಸ್ಟ್ರಾಲ್ ಅಧಿಕವಾಗಿದ್ದರೆ, ಅದರ ಆರಂಭಿಕ ಚಿಹ್ನೆಯು ಕಣ್ಣಿನಲ್ಲಿ ಕಾಣಿಸಿಕೊಳ್ಳುತ್ತದೆ. ಲಿಪಿಡ್ ಕಾರ್ನಿಯಾದ ಹೊರ ಭಾಗದಲ್ಲಿ ಉಂಗುರ ರೂಪುಗೊಳ್ಳುತ್ತದೆ. 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರು ವಿಶೇಷ ಗಮನ ನೀಡಿ. ತಜ್ಞರನ್ನು ಸಂಪರ್ಕಿಸಿ. ಗುರಸಿದೆ.ತ್ತದೆ.ಕು.ಗಳುದೆ.ತಸಿ.ಗಳುದು?.ರೆ.. ಜನರು ವಿಶೇಷ ಗಮನ ನೀಡಿ. ತಜ್ಞರನ್ನು ಸಂಪರ್ಕಿಸಿ.

Post a Comment