ಆರೋಪಿ ಚಿತ್ರಲಿಂಗ ಕೊಲೆಯಾಗಿರೋ ಈಶ್ವರಪ್ಪನ ಮೊಮ್ಮಗಳನ್ನ ಪ್ರೀತಿ ಮಾಡುತ್ತಿದ್ದ. ಅಲ್ಲದೇ ಆಕೆಯನ್ನೇ ಮದುವೆ ಆಗಬೇಕು ಅಂತ ಅಂದುಕೊಂಡಿದ್ದ. ಆದರೆ ಅದಕ್ಕೆ ಅಡ್ಡಿಯಾಗಿ ಬಂದ ಈಶ್ವರಪ್ಪ ಮದುವೆಯನ್ನ ನಿರಾಕರಿಸಿ ಇಬ್ಬರನ್ನೂ ದೂರ ಮಾಡಿದ್ದರು.
ಚಿತ್ರದುರ್ಗ : ಪ್ರೀತಿಸಿದ್ದ (Love) ಯುವತಿ ಜೊತೆ ಮದುವೆ (Marriage) ಆಗೋಕೆ ಅಡ್ಡಿ ಮಾಡಿ, ಕೊಟ್ಟ ಹಣವನ್ನ (Money) ವಾಪಸ್ ಕೇಳುತ್ತಾನೆ ಅನ್ನೋ ಕಾರಣಕ್ಕೆ ಚಿಕ್ಕಪ್ಪನಿಗೆ ಸ್ಕೆಚ್ ಹಾಕಿ ತಲೆಗೆ ಹೊಡೆದು ಕೊಲೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಸೇಡು ತೀರಿಸಿಕೊಳ್ಳೋಕೆ ಆವೇಶದಲ್ಲಿ ಕೊಲೆ ಮಾಡಿದ ಆರೋಪಿ ಯುವಕ ಈಗ ಜೈಲು ಸೇರಿ ಮುದ್ದೆ ಮುರಿಯುತ್ತಿದ್ದಾನೆ. ಆಸ್ತಿಗಾಗಿ ಚಿಕ್ಕಪ್ಪ, ದೊಡ್ಡಪ್ಪ , ಅಣ್ಣ, ತಮ್ಮಂದಿರು ದ್ವೇಷ ಮೂಡಿ ಕೊಲೆ ಮಾಡಿರೋದನ್ನ ನಾವು ನೋಡಿದ್ದೇವೆ, ಕೇಳಿದ್ದೇವೆ. ಆದರೆ ಪ್ರೀತಿಸಿದ ಯುವತಿಯನ್ನ ಮದುವೆ ಆಗೋದು ಬೇಡ ಅಂತ ತಡೆದು ಬುದ್ದಿ ಹೇಳಿದ್ದ ಚಿಕ್ಕಪ್ಪನ ಮೇಲೆ ಅಣ್ಣನ ಮಗ ಇಟ್ಟ ಸೇಡು ಕೊಲೆ ಮಾಡಿಸಿದೆ. ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಅರಸನಘಟ್ಟ ಗ್ರಾಮದ ಹೊರ ವಲಯದಲ್ಲಿ ನಡೆದಿದೆ
ಚಿಕ್ಕನ ಜೊತೆ ಹಣದ ವಿ
ಹೀಗೆ ಅಣ್ಣನ ಮಗನ ಮೋಸದ ಸಂಚಿನ ಸೇಡಿಗೆ ಬಲಿಯಾಗಿ ರಕ್ತದ ಮಡುವಿನಲ್ಲಿ ಹೆಣವಾಗಿ ಬಿದ್ದಿರುವ ವ್ಯಕ್ತಿ ಈಶ್ವರಪ್ಪ. ಮೂಲತಃ ಹೊಳಲ್ಕೆರೆ ತಾಲ್ಲೂಕಿನ ಚಿತ್ರಹಳ್ಳಿ ಗೊಲ್ಲರಹಟ್ಟಿ ಗ್ರಾಮದವರು. ಊರಲ್ಲಿ ಒಳ್ಳೆ ಗೌರವದಿಂದ ಬದುಕಿದವರು, ಸಣ್ಣ ಪುಟ್ಟ ಹಣಕಾಸಿಮ ವ್ಯವಹಾರ ಮಾಡುತ್ತಿದ್ದರು, ಆದರೇ ಇದೇ ಹಣಕಾಸಿನ ವಿಚಾರದ ನೆಪದಲ್ಲಿ ಇಂದು ಅಣ್ಣನ ಮಗ ಆರೋಪಿ ಚಿತ್ರಲಿಂಗ ಸಂಚು ಹೂಡಿ ಕೊಲೆ ಮಾಡಿ ಜೀವ ಬಲಿ ಪಡೆದಿದ್ದಾನೆ. ಅದು ಹೇಗೆ ಅಂದ್ರೆ ಆರೋಪಿ ಚಿತ್ರಲಿಂಗ ತನ್ನ ಚಿಕ್ಕಪ್ಪ ಈಶ್ವರಪ್ಪನ ಬಳಿ ಹಣ ಕಾಸಿನ ವ್ಯವಹಾರ ಮಾಡಿದ್ದ, ಇದು ಇವರ ನಡುವೆ ಒಳಗೊಳಗೆ ದ್ವೇಷವನ್ನೂ ಬೆಳೆಸಿತ್ತು
ತಲೆಗೆ ಹೊಡೆದು ಕೊ
ಇದೇ ವಿಚಾರಕ್ಕೆ ಬಗರ್ ಹುಕಂ ಭೂಮಿ ಸಾಗುವಳಿ ಚೀಟಿ ಮಾಡಿಸಿ ಕೊಡುವೆ ಅಂತ ಆರೋಪಿ ಚಿತ್ರಲಿಂಗ ಹೇಳಿದ್ದ. ಆದರೇ ಅವನು ಹೇಳಿದ ಹಾಗೆ ಅದು ಆಗಿರಲಿಲ್ಲ, ಬದಲಿಗೆ ಹಣ ವಾಪಸ್ ಕೊಡು ಅಂತ ಈಶ್ವರಪ್ಪ ಪಟ್ಟು ಹಿಡಿದಿದ್ದ. ಮೊದಲೇ ಈಶ್ವರಪ್ಪ ನ ಮೇಲೆ ದ್ವೇಷ ಸಾಧಿಸುತ್ತಿದ್ದ ಚಿತ್ರಲಿಂದ ಸಾಗುವಳಿ ಚೀಟಿ ಕೊಡಿಸುತ್ತೇನೆ ಬಾ ಎಂದು ಕರೆದೊಯ್ದು ದೊಣ್ಣೆಯಿಂದ ಹೊಡೆದು, ಕಲ್ಲಿನಿಂದ ತಲೆನ್ನ ಜಜ್ಜಿ ಹತ್ಯೆ ಮಾಡಿ, ಪರಾರಿ ಆಗಿದ್ದಾನೆ ಅಂತ ಕುಟುಂಬಸ್ಥರು ಆರೋಪ ಮಾಡಿದ್ದು, ಅವನಿಗೆ ಕಾನೂನು ಮರಣ ದಂಡನೆ ಶಿಕ್ಷೆ ಆಗಬೇಕು ಅಂತ ಮನವಿ ಮಾಡಿದ್ದಾ
ಇದನ್ನೂ ಓದಿ: Marriage Dhoka: ವಯಸ್ಸು 30 ಅಂತ ಯಾಮಾರಿಸಿ ಯುವಕನನ್ನು ಮದ್ವೆಯಾದ 52ರ ಆಂಟಿ! ಮೇಕಪ್ ನೋಡಿ ಮೋಸ ಹೋದ ಹು
24 ಗಂಟೆ ಒಳಗೆ ಆರೋಪಿ ಬಂಧನ
ಇನ್ನೂ ಈ ಘಟನೆ ಹೊಳಲ್ಕೆರೆ ತಾಲ್ಲೂಕಿನ ಚಿಕ್ಕಜಾಜೂರು ಪೋಲೀಸ್ ಠಾಣೆ ವ್ಯಾಪ್ತಿಯ ಅರಸನಘಟ್ಟ ಕಣುವೆಲ್ಲಿ ನಡಿದಿದೆ. ಈಶ್ವರಪ್ಪ ನ ಹತ್ಯೆ ತಿಳಿದು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು, ಅನ್ಯಾಯವಾಗಿ ಮೋಸದ ಸಂಚಿಗೆ ಬಲಿಯಾದ ತಂದೆಯ ಶವದ ಮುಂದೆ ಕುಳಿತ ಮಕ್ಕಳು ರೋಧಿಸುತ್ತಿದ್ದು. ಇನ್ನೂ ಹತ್ಯೆ ನಡೆದ ಜಾಗಕ್ಕೆ ಚಿಕ್ಕಜಾಜೂರು ಪೊಲೀಸ್ ಸ್ಥಳಕ್ಕೆ ದೌಡಾಯಿಸಿ ಚಿತ್ರದುರ್ಗ ಎಸ್ಪಿ ಕೆ. ಪರುಶುರಾಮ್ ಗೆ ಮಹಿತಿ ತಿಳಿಸಿದ್ದರು. ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಎಸ್ಪಿ ಪರುಶುರಾಮ್, ಹೊಳಲ್ಕೆರೆ ಇನ್ಸ್ಪೆಕ್ಟರ್ ರವೀಶ್ ನೇತೃತ್ವದಲ್ಲಿ ವಿಶೇಷ ತಂಡಗಳನ್ನ ರಚಿಸಿ ಆರೋಪಿ ಬಂಧಿಸಲು ಆದೇಶ ಮಾಡಿದ್ರು. ಬಳಿಕ ತನಿಖಾ ಕಾರ್ಯ ಪ್ರಾರಂಭ ಮಾಡಿದ ಪೋಲೀಸರು 24 ಗಂಟೆ ಒಳಗೆ ಆರೋಪಿ ಚಿತ್ರಲಿಂಗನನ್ನ ಹೆಡೆಮುರಿ ಕಟ್ಟಿ ಬಂದಿಸಿದ್ದಾರೆ. ಬಳಿಕ ಕೊಲೆ ಮಾಡಿದ ಉದ್ದೇಶ ಕುರಿತು ವಿಚಾರಣೆ ಮಾಡಿದಾಗ ಹಸಲಿ ಸತ್ಯವನ್ನ ಬಾಯಿ ಬಿಟ್ಟಿದ್ದಾ
ಪ್ರೀತಿಗೆ ಅಡ್ಡಿ ಬಂದಿದ್ದಕ್ಕೆ ಕೊ
ಅದೇನಂದ್ರೆ ಕೊಲೆ ಆರೋಪಿ ಚಿತ್ರಲಿಂಗ ಕೊಲೆಯಾಗಿರೋ ಈಶ್ವರಪ್ಪನ ಮೊಮ್ಮಗಳನ್ನ ಪ್ರೀತಿ ಮಾಡುತ್ತಿದ್ದ. ಅಲ್ಲದೇ ಆಕೆಯನ್ನೇ ಮದುವೆ ಆಗಬೇಕು ಅಂತ ಅಂದುಕೊಂಡಿದ್ದ. ಆದರೆ ಅದಕ್ಕೆ ಅಡ್ಡಿಯಾಗಿ ಬಂದ ಈಶ್ವರಪ್ಪ ಮದುವೆಯನ್ನ ನಿರಾಕರಿಸಿ ಇಬ್ಬರನ್ನೂ ದೂರ ಮಾಡಿದ್ದು, ಅದೇ ಸೇಡಿಗೆ ಈಗ ಚಿತ್ರಲಿಂಗ ಕೊಲೆ ಮಾಡಿದ್ದಾಗಿ ಪೋಲೀಸರ ಬಳಿ ಹೇಳಿದ್ದಾನೆ. ಒಟ್ಟಾರೇ ಮಕ್ಕಳು ಚೆನ್ನಾಗಿರಲಿ ದುಡುಕಿನ ನಿರ್ಧಾರಗಳಿಗೆ ಬಲಿಯಾಗುವುದು ಬೇಡ ಅಂತ ದೊಡ್ಡವರು ಬುದ್ದಿ ಮಾತು ಹೇಳೋದು ಕಾಳಜಿಯಾದ್ರೆ. ಅದನ್ನೇ ದ್ವೇಶವಾಗಿ ಬೆಳಸಿ ಮೋಸದ ಸಂಚು ಹೂಡಿ ಹತ್ಯೆ ಮಾಡಿ ಕ್ರೂರತೆ ಮೆರೆಯೋದು ವಿಕೃತಿ. ಇತ್ತ ನಂಬಿಕೆಯಿಂದ ಮೋಸಗಾರನ ಹಿಂದೆ ಹೋದ ಈಶ್ವರಪ್ಪ ಕೊಲೆಯಾಗಿ ಜೀವ ಕಳೆದುಕೊಂಡ್ರೆ, ಇತ್ತ ದ್ವೇಶ ಸಾಧಿಸಿ ಹತ್ಯೆ ಮಾಡಿದ ಆರೋಪಿ ಜೈಲು ಸೇರಿ ಕಂಬಿ ಎಣಿಸುತ್ತಿದ್ದಾನೆ. ಲೆ ನೆ. ಡುಗರೆ.ಲೆ .ಚಾರ.ಬಿ ಎಣಿಸುತ್ತಿದ್ದಾನೆ.

Post a Comment