Bengaluru: ಈದ್ಗಾ ಮೈದಾನ ವಿವಾದ, ನಾಳೆ ಚಾಮರಾಜಪೇಟೆ ಬಂದ್; ಶಾಲಾ-ಕಾಲೇಜಿಗೆ ರಜೆ ಇದು ಸ್ವಯಂ ಪ್ರೇರಿತ ಹಾಗೂ ಶಾಂತಿಯುತ ಬಂದ್ ಆದ್ದರಿಂದ ನಾಳೆ ಯಾವುದೇ ರೀತಿಯ ರ್ಯಾಲಿ, ಪ್ರತಿಭಟನೆ ಇರೋದಿಲ್ಲ. ಕೇವಲ ಒಂದು ದಿನದ ಮಟ್ಟಿಗೆ ಶಾಂತಿಯುತ ಬಂದ್ ನಡೆಸಿ, ಸರ್ಕಾರದ ಮೇಲೆ ಒತ್ತಡ ಹೇರಿಲು ಮುಂದಾಗಿದ್ದಾರೆ.


  ಬೆಂಗಳೂರು (ಜು. 11): ಈದ್ಗಾ ಮೈದಾನ ಕಳೆದ ಕೆಲವು ದಿನಗಳಿಂದ ವಿವಾದದಿಂದ ಸುದ್ದಿ ಆಗ್ತಿದೆ. ಸದ್ಯ ಭೂಮಾಲೀಕತ್ವದ ವಿಚಾರವಾಗಿ ಶುರುವಾಗಿದ್ದ ಕಿತ್ತಾಟ, ಇದೀಗ ಬಂದ್ ವರೆಗೆ ತಲುಪಿದೆ. ನಾಳೆ ಚಾಮರಾಜಪೇಟೆ (Chamarajapete) 7 ವಾರ್ಡ್ ಗಳ ಬಂದ್ ನಾಗರೀಕರ ಒಕ್ಕೂಟದ ವೇದಿಕೆ ಕರೆ ಕೊಟ್ಟಿದೆ.  ನಾಳೆ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ಸಂಪೂರ್ಣವಾಗಿ ಬಂದ್ ಆಗಲಿದೆ. ಬೆಳಗ್ಗೆ 8 ರಿಂದ ಸಂಜೆ 5ರವರೆಗೆ ಬಂದ್ ಗೆ ಚಾಮರಾಜಪೇಟೆ ನಾಗರೀಕರ ಒಕ್ಕೂಟದ ವೇದಿಕೆ ಕರೆ ನೀಡಿದೆ. ಅನೇಕ ಹಿಂದೂಪರ ಸಂಘಟನೆಗಳು, (Hindu Organization) ಕನ್ನಡಪರ ಸಂಘಟನೆಗಳು ಸೇರಿದಂತೆ 50ಕ್ಕೂ ಅಧಿಕ ಸಂಘ, ಸಂಸ್ಥೆಗಳು ಬೆಂಬಲ ಸೂಚಿಸಿವೆ. ಹೀಗಾಗಿ ಇಂದು ಸಹ ಶಾಲಾ-ಕಾಲೇಜು, (School-College) ಬೇಕರಿ, ಅಂಗಡಿಗಳಿಗೆ ಸೇರಿದಂತೆ ಮನೆ ಮನೆಗೆ ತೆರಳಿ 20 ಸಾವಿರಕ್ಕೂ ಅಧಿಕ ಕರಪತ್ರಗಳನ್ನ ಹಂಚಿಕೆ ಮಾಡಲಾಗಿದೆ.

ಯಾವುದೇ ರೀತಿಯ ರ್ಯಾಲಿ, ಪ್ರತಿಭಟನೆ ಇರೋದಿ

ಇದು ಸ್ವಯಂ ಪ್ರೇರಿತ ಹಾಗೂ ಶಾಂತಿಯುತ ಬಂದ್ ಆದ್ದರಿಂದ ನಾಳೆ ಯಾವುದೇ ರೀತಿಯ ರ್ಯಾಲಿ, ಪ್ರತಿಭಟನೆ ಇರೋದಿಲ್ಲ. ಕೇವಲ ಒಂದು ದಿನದ ಮಟ್ಟಿಗೆ ಶಾಂತಿಯುತ ಬಂದ್ ನಡೆಸಿ, ಸರ್ಕಾರದ ಮೇಲೆ ಒತ್ತಡ ಹೇರಿಲು ಮುಂದಾಗಿದ್ದಾರೆ. ಬಂದ್ ಬಳಿಕ ಸರ್ಕಾರದ ನಡೆ ಗಮನಿಸಿ ಮುಂದಿನ ಹೆಜ್ಜೆ ಇಡಲು ಒಕ್ಕೂಟ ನಿರ್ಧರಿಸಿದೆ

ಚಾಮರಾಜಪೇಟೆ ನಾಗರೀಕರ ಒಕ್ಕೂಟದ ಬೇಡಿಕೆ ಏ

ಚಾಮರಾಜಪೇಟೆ ಮೈದಾನ ಬಿಬಿಎಂಪಿ ಸ್ವತ್ತು ಎಂದು ಘೋಷಿಸಬೇಕು. ಮೈದಾನವನ್ನ ಆಟದ ಮೈದಾನವನ್ನಾಗಿಯೇ ಉಳಿಸಬೇಕು. ಚಾಮರಾಜಪೇಟೆ ಮೈದಾನಕ್ಕೆ ಜಯಚಾಮರಾಜೇಂದ್ರ ಮೈದಾನ ಎಂದು ನಾಮಕರಣಕ್ಕೆ ಒತ್ತಾಯ. ಯಾವುದೇ ಕಾರಣಕ್ಕೂ ವಕ್ಫ್ ಬೋರ್ಡ್ ಗೆ ವಹಿಸಬಾರದು. ಮೈದಾನ ವಿಚಾರವಾಗಿ ಕಾನೂನಾತ್ಮಕವಾಗಿ ಹೋರಾಡಲು ರಮಿತಿ ರಚಿಸಬೇಕು. ಚಾಮರಾಜಪೇಟೆ ಮೈದಾನದಲ್ಲಿ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನ, ಕನ್ನಡ ರಾಜ್ಯೋತ್ಸವ, ಶಿವರಾತ್ರಿ, ನಾಡಹಬ್ಬ ದಸರಾ ಸೇರಿದಂತೆ ಹಿಂದೂ ಹಬ್ಬಗಳ ಆಚರಣೆಗೆ ಅನುಮತಿ ನೀಡುವಂತೆ ಒತ್ತಾ

ಇದನ್ನೂ ಓದಿ: Karnataka Politics: ಇದು ಸಿದ್ದರಾಮೋತ್ಸವ ಅಲ್ಲ, ಸಿದ್ದರಾಮ ಉರುಸ್; ಯತ್ನಾಳ್ ವ್ಯಂ

 ಶಾಲಾ, ಕಾಲೇಜು ಬಂದ್ ಆಗುತ್ತಾ

ಚಾಮರಾಜಪೇಟೆಯಲ್ಲಿ ಅಂಗಡಿ-ಮುಂಗಟ್ಟು, ಬ್ಯಾಂಕ್, ಶಾಲಾ-ಕಾಲೇಜುಗಳ ಬಂದ್ ಮಾಡಲು ಒಕ್ಕೂಟ ಮನವಿ ಮಾಡಿದೆ. ಕರಪತ್ರ ಹಂಚಿಕೆ ಮಾಡುವ ಮೂಲಕ ಬಂದ್ ಬೆಂಬಲಕ್ಕೆ ಸಹಕರಿಸುವಂತೆ ಮನವಿ ಮಾಡಿ ಕೊಂಡಿದ್ದಾರೆ. ಚಾಮರಾಜಪೇಟೆಯ ಪ್ರತೀ ಅಂಗಡಿಗಳ ಮೇಲೂ ಬಂದ್ ಬೆಂಬಲದ ಬೋರ್ಡ್ ಹಾಕಲಾಗಿದೆ. ಚಾಮರಾಜಪೇಟೆ ಆಟದ ಮೈದಾನ ಬಿಬಿಎಂಪಿ ಸ್ವತ್ತಾಗಬೇಕೆಂಬ ಸಾಲುಗಳು ಅಂಗಡಿಗಳ ಮೇಲೆ ಹಾಕಲಾಗಿದೆ. ಜ್ಯುವೆಲ್ಲರಿ ಶಾಪ್ಸ್, ದಿನಸಿ ಅಂಗಡಿ, ಬೇಕರಿ, ಮೆಕಾನಿಕ್ ಶಾಪ್ ಸೇರಿದಂತೆ ಎಲ್ಲೆಡೆ ಅಳವಡಿಕೆ ಮಾಡಲಾಗಿದೆ‌. ಕೆಲವೆಡೆ ಖಾಸಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿ

ಸರ್ಕಾರಿ ಶಾಲೆಗಳಿಗೂ ರಜೆ ನೀಡುವಂತೆ ಆಯೋಜಕರು ಮನವಿ ಮಾಡಿದ್ದಾರೆ. ಇನ್ನು ಇದು ರಾಜಕೀಯ ಪ್ರೇರಿತರ ಬಂದ್ ಅಂತ ಚಾಮರಾಜಪೇಟೆಯ ಮಾಜಿ ಪಾಲಿಕೆ ಸದಸ್ಯ ಚಂದ್ರಶೇಖರ್ ಒಕ್ಕೂಟದ ವಿರುದ್ಧ ಕಿಡಿ ಕಾರಿದ್ದಾರೆ. ಜಮೀರ್ ಓರ್ವ ಅಲ್ಪಸಂಖ್ಯಾತ ಶಾಸಕ ಎಂಬ ಕಾರಣಕ್ಕೆ ಎಲ್ಲರೂ ಚುನಾವಣೆಯನ್ನ ಮುಂದಿಟ್ಟುಕೊಂಡು ಹೀಗೆ ಮಾಡ್ತಿದ್ದಾರೆ‌. ಇದು ಸರಿಯಾದ ಬೆಳವಣಿಗೆ ಅಲ್ಲ. ಬಲವಂತದ ಬಂದ್ ಸೂಕ್ತವಲ್ಲ, ಏನೇ ಇದ್ದರೂ ಕಾನೂನಾತ್ಮಕವಾಗಿ ಹೋರಾಡಿದ್ರೆ ಮಾತ್ರ ನಮ್ಮ ಬೆಂಬಲ ಅಂತ ಅಂತೇಳಿದ್ದಾರೆ. ಶಾಸಕರ ಬಳಿ ಮಾತುಕತೆ ನಡೆಸದೆಯೇ ಬಂದ್ ಅನ್ನೋದು ಸರಿಯಲ್ಲ ಮಾಜಿ ಪಾಲಿಕೆ ಸದಸ್ಯ, ಚಾಮರಾಜಪೇಟೆ ವಾರ್ಡ್ ಮಾಜಿ ಸದಸ್ಯ ಚಂದ್ರಶೇಖರ್ರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾ

ಇದನ್ನೂ ಓದಿ: Mekedatu Project: ಮೇಕೆದಾಟು ಯೋಜನೆ ವಿರೋಧಿಸಿ ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ತಮಿಳು

ಒಟ್ಟಾರೆ ಚಾಮರಾಜಪೇಟೆ ಮೈದಾನದ ಬಡಿದಾಟ ಬಂದ್ ವರೆಗೂ ತಲುಪಿದೆ. ನಾಳೆ ಬಂದ್ ಬಳಿಕ ಮುಂದಿನ ಹೋರಾಟದ ರೂಪುರೇಷೆ ಸಿದ್ದಗೊಳಿಸಲು ಒಕ್ಕೂಟ ಮುಂದಾಗಿದೆ. ಸದ್ಯ ಈ ವಿವಾದ ಮುಂದೆ ಎಲ್ಲಿ ಹೋಗಿ ನಿಲ್ಲುತ್ತೊ ಕಾದು ನೋಡ್ಬೇಕಿದೆ. ನಾಡುರೆ.ದೆ.?ಗ್ಯಯ.ನು?.ಲ್ಲಲ್ಲುತ್ತೊ ಕಾದು ನೋಡ್ಬೇಕಿದೆ.

Post a Comment

Previous Post Next Post