ಹೆಂಡತಿ ಸೌಂದರ್ಯ ತಮ್ಮ ವೈವಾಹಿಕ ಜೀವನವನ್ನು ಹಾಳು ಮಾಡುತ್ತದೆ ಎಂದು ಹೆದರಿದ 44 ವರ್ಷದ ತನ್ನ ಪತ್ನಿಯ ಮೇಲೆ ಆ್ಯಸಿಡ್ ಸುರಿದಿದ್ದ. ಆ್ಯಸಿಡ್ ಹಾಕಿದ್ದ ಆಟೋ ಡ್ರೈವರ್ ಗೆ ಸಿಸಿಎಚ್ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿ, 25,000 ರೂ. ದಂಡ ವಿಧಿಸಿದೆ. ಬೆಂಗಳೂರು (ಜು.29): ನನ್ನ ಹೆಂಡತಿ (Wife) ಸುಂದರವಾಗಿರಬೇಕು ಅನ್ನೋದು ಅನೇಕ ಗಂಡಸರ ಆಸೆಯಾಗಿರುತ್ತದೆ. ಆದ್ರೆ ಇಲ್ಲೊಬ್ಬ ಗಂಡ, ಹೆಂಡತಿ ಅತೀ ಸುಂದರಿ ಎಂದು ಆಕೆಯ ಮೇಲೆ ಆ್ಯಸಿಡ್ (Acid) ಹಾಕಿದ್ದಾನೆ. ಆಕೆಯ ಸೌಂದರ್ಯ (Beauty) ತಮ್ಮ ವೈವಾಹಿಕ ಜೀವನವನ್ನು ಹಾಳು ಮಾಡುತ್ತದೆ ಎಂದು ಹೆದರಿದ 44 ವರ್ಷದ ತನ್ನ ಪತ್ನಿಯ ಮೇಲೆ ಆ್ಯಸಿಡ್ ಸುರಿದಿದ್ದ. ಆ್ಯಸಿಡ್ ಹಾಕಿದ್ದ ಆಟೋ ಡ್ರೈವರ್ (Auto Driver)ಗೆ ಸಿಸಿಎಚ್ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿ, 25,000 ರೂ. ದಂಡ ವಿಧಿಸಿದೆ
ಪತ್ನಿ ಸುಂದರವಾಗಿದ್ರೆ ಬೇರೆ ಗಂಡಸರ ಕಣ್ಣು ಬೀಳುತ್ತೆ
2017ರ ಜುಲೈ 14ರಂದು ಕೆಂಪೇಗೌಡನಗರದ ಸನ್ಯಾಸಿಪಾಳ್ಯದ ಮನೆಯಲ್ಲಿ ಮಂಜುಳಾ ಎಂಬಾಕೆಯ ಮೇಲೆ ಗಂಡ ಚೆನ್ನೇಗೌಡ ಆ್ಯಸಿಡ್ ಎರಚಿದ್ದ. ತನ್ನ ಹೆಂಡತಿಯ ಶೀಲ ಶಂಕಿಸಿ, ಈಕೆ ಸುಂದರವಾಗಿದ್ರೆ ಬೇರೆ ಗಂಡಸರ ಗಮನ ತನ್ನ ಹೆಂಡತಿಯ ಮೇಲೆ ಬೀಳುತ್ತೆ ಎಂಬ ಕಾರಣಕ್ಕೆ ಮಂಜುಳಾ ಮೇಲೆ ಆ್ಯಸಿಡ್ ಎರಚಿದ್ದಾನೆ. ದಂಪತಿಗೆ ಸುಮಾರು 21 ವರ್ಷಗಳ ಹಿಂದೆ ಮದುವೆಯಾಗಿತ್ತು. ಇವರಿಗೆ ಇಬ್ಬರು ಮಕ್ಕಳಿದ್ದಾ
ಕೆಲಸ ಬಿಡುವಂತೆ ನಿತ್ಯ
ಆಕೆ ತನ್ನ ಸೌಂದರ್ಯದಿಂದ ಬೇರೆ ಪುರುಷರನ್ನು ಆಕರ್ಷಿಸುತ್ತಿದ್ದಾಳೆ ಎಂದು ಆತ ಭಾವಿಸಿದ್ದ. ಇದೇ ವಿಚಾರಕ್ಕೆ ಕೆಲಸಕ್ಕೆ ಹೊರಗೆ ಹೋಗ್ಬೇಡ ಎಂದು ಜಗಳ ಸಹ ಆಡಿದ್ದಾನೆ. ಆತನ ಕಿರುಕುಳವನ್ನು ಸಹಿಸಲಾಗದೆ, ಘಟನೆಗೆ ನಾಲ್ಕು ದಿನಗಳ ಮೊದಲು ಅವಳು ತನ್ನ ಕೆಲಸವನ್ನು ಸಹ ತೊರೆದಿದ್ದಳು. ಆಗಾಗ ಜಗಳ ನಡೆಯುತ್ತಿದ್ದ ಕಾರಣ ಮಂಜುಳಾ ಪತಿಯನ್ನು ಬಿಟ್ಟು ಮಕ್ಕಳೊಂದಿಗೆ ಪ್ರತ್ಯೇಕವಾಗಿ ಇರಲು ನಿರ್ಧರಿಸಿದ್ದ
ಇದನ್ನೂ ಓದಿ: New Rules: ರಾಜ್ಯದ ಪಬ್, ಬಾರ್ & ರೆಸ್ಟೋರೆಂಟ್ಗೆ ಹೊಸ ರೂಲ್ಸ್; ಪೊಲೀಸ್ ಇಲಾಖೆಯಿಂದ ಸುತ್ತೋ
ಚಿಕಿತ್ಸೆ ಫಲಿಸದೇ ಮಂಜುಳಾ ಸಾ
ಆ್ಯಸಿಡ್ ದಾಳಿಯಿಂದಾಗಿ ಪತ್ನಿ ಮಂಜುಳಾ ಕೈ, ಕಾಲು, ಮುಖ ಹಾಗೂ ಹೊಟ್ಟೆ ಭಾಗ ಸುಟ್ಟು ಹೋಗಿದ್ದು, ಚಿಕಿತ್ಸೆ ಫಲಿಸದೇ ಆಕೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು. ಚೆನ್ನೇಗೌಡ ದೋಷಿ ಎಂದು 46ನೇ ಸಿಸಿಎಚ್ ನ್ಯಾಯಾಲಯ ತೀರ್ಪು ನೀಡಿ
ಮಗನ ದೂರು ಆಧರಿಸಿ ತಂದೆಯ ಬಂ
ಘಟನೆ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು 5 ದಿನಗಳ ಬಳಿಕ ಬಂಧಿಸಲಾಗಿತ್ತು. ಆತನ ಸ್ನೇಹಿತರೊಬ್ಬರು ಆ್ಯಸಿಡ್ ಸಂಗ್ರಹಿಸಲು ಸಹಾಯ ಮಾಡಿದ್ದರು. ಸಂತ್ರಸ್ತ ಮಹಿಳೆ ಆಸ್ಪತ್ರೆಯಲ್ಲಿ ಸಾಯುವ ಮುನ್ನ ಹೇಳಿಕೆ ನೀಡಿದ್ದಳು. ನಾನು ಹಾಲು ತರಲು ಹೋಗಿದ್ದೆ, ನನ್ನ ತಾಯಿಯ ಮೇಲೆ ಆ್ಯಸಿಡ್ ಎರಚಿದ್ದು ಯಾರು ಎಂದು ತನಗೆ ತಿಳಿದಿಲ್ಲ ಎಂದು ಮೃತ ಮಹಿಳೆಯ ಪುತ್ರ ಹೇಳಿದ್ದ. ಆತ ಮೇಜರ್ ಆಗಿದ್ದರಿಂದ ಅವರ ಹೇಳಿಕೆಗಳನ್ನೂ ದಾಖಲಿಸಿಕೊಳ್ಳಲಾಗಿತ್ತು
ಜೀವಾವಧಿ ಶಿಕ್ಷೆ ನೀಡಿ, 25,000 ರೂ
ಆ್ಯಸಿಡ್ ಹಾಕಿದ್ದ ಆಟೋ ಡ್ರೈವರ್ಗೆ ಸಿಸಿಎಚ್ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿ, 25,000 ರೂ. ದಂಡ ವಿಧಿಸಿದೆ. ಆರೋಪಿಗೆ ಆಸಿಡ್ ಪೂರೈಸಿದ ವ್ಯಕ್ತಿಯನ್ನು ಪ್ರಕರಣದಲ್ಲಿ ಸಾಕ್ಷಿಯನ್ನಾಗಿ ಮಾಡಲಾಗಿದೆ ಎಂದು 46ನೇ ಸಿಸಿಎಚ್ ನ್ಯಾಯಾಲಯದ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ಎಸ್.ಲತಾ ತಿಳಿಸಿ
ಇದನ್ನೂ ಓದಿ: Murder Case: ಚಿಕನ್ ಅಂಗಡಿ ತೆರೆದಿದ್ದೇ ಕೊಲೆಗೆ ಕಾರಣವಾಯ್ತಾ? ಪ್ರವೀಣ್ ಸಹೋದರನ ಸ್ಫೋಟಕ ಹೇಳಿ
ಇತ್ತೀಚೆಗಷ್ಟೇ ಯುವತಿ ಮೇಲೆ ಯುವಕನೊಬ್ಬ ಆ್ಯಸಿಡ್ ದಾಳಿ ಮಾಡಿ ವಿಕೃತಿ ಮೆರೆದಿದ್ದ. ಪ್ರೀತಿ ನಿರಾಕರಿಸಿದ ಕಾರಣಕ್ಕೆ ಪ್ರೀತಿಸಿದ ಹುಡುಗಿಯ ಮೇಲೆ ಆಸಿಡ್ ದಾಳಿ ಮಾಡಿರುವ ದುರಂತ ಘಟನೆ ಬೆಂಗಳೂರಿನ ಸುಂಕದಕಟ್ಟೆಯಲ್ಲಿ ನಡೆದಿತ್ತು. 23 ವರ್ಷದ ಸಂತ್ರಸ್ಥೆಯ ಮೇಲೆ ಸುಂಕದಕಟ್ಟಯ ಮುತ್ತೂಟು ಫಿನ್‌ಕಾರ್ಪ್ ಬಳಿ ಹುಚ್ಚು ಪ್ರೇಮಿ ನಾಗೇಶ್ ಆಸಿಡ್ ದಾಳಿ ನಡೆಸಿದ್ದ. ನಾಗೇಶ್ ಯುವತಿಯನ್ನು ಹಲವು ದಿನಗಳಿಂದ ಪ್ರೀತಿಸುವಂತೆ ಪೀಡಿಸುತ್ತಿದ್ದ. ಎಲ್ಲಿ ಹೋದರೂ ಹಿಂದೆ ಹಿಂದೆಯೇ ಸುತ್ತುತ್ತಿದ್ದ. ಹುಡುಗಿ ತನಗೆ ಇಷ್ಟವಿಲ್ಲ ಎಂದು ಎಷ್ಟು ಬಾರಿ ಹೇಳಿದರೂ ಕೇಳಲು ನಾಗೇಶ್ ಸಿದ್ಧನಿರಲಿಲ್ಲ. ಕಡೆಯಬಾರಿಗೆ ಪ್ರೀತಿಸುತ್ತೀಯಾ ಇಲ್ಲವಾ ಎಂದು ಧಮಕಿ ಹಾಕಿದ್ದಾನೆ, ಹುಡುಗಿ ನಿರಾಕರಿಸಿದಾಗ ಆಸಿಡ್ ಎರಚಿದ್ದಾನೆ ಎಂದು ಸ್ಥಳೀಯ ಮೂಲಗಳು ಮಾಹಿತಿ ನೀಡಿವೆ. ಕೆದರು.. ದಂಡ.ಧನದೆ.ವುಲೆರು. ಜಗಳರೆ..ಸ್ಥಳೀಯ ಮೂಲಗಳು ಮಾಹಿತಿ ನೀಡಿವೆ.

Post a Comment