ಉದಯಪುರ, ರಾಜಸ್ಥಾನ: ಮತಾಂಧರ ಕ್ರೌರ್ಯಕ್ಕೆ ರಾಜಸ್ಥಾನದ (Rajasthan) ಉದಯಪುರದಲ್ಲಿ (Udaipur) ಬಡ ಟೈಲರ್‌ನೊಬ್ಬ (Tailor) ಬಲಿಯಾಗಿದ್ದಾನೆ. ಮತಾಂಧರ ವಿರುದ್ಧ ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಟೈಲರ್ ಕನ್ಹಯ್ಯ ಲಾಲ್ (Kanhaiah Lal) ಕೊಲೆಯನ್ನು (Murder) ಪಕ್ಷಬೇಧ ಮರೆತು ರಾಜಕಾರಣಿಗಳೆಲ್ಲ (Politicians) ಖಂಡಿಸಿದ್ದಾರೆ. ಈ ಹತ್ಯೆ ಹಿಂದೆ ಐಸಿಸ್ ಉಗ್ರರ (ISIS Terrorist) ನೆರಳು ಇರುವ ಶಂಕೆ ವ್ಯಕ್ತವಾಗಿದೆ. ಇದೀಗ ಈ ಮರ್ಡರ್ ಕೇಸ್ (Murder Case) ತನಿಖೆ (Investigation) ಹೊಣೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (National Investigation Agency) ನೀಡಿ ಕೇಂದ್ರ ಗೃಹ ಸಚಿವಾಲಯ (Union Home Ministry) ಆದೇಶ ನೀಡಿದೆ.
ಕನ್ಹಯ್ಯ ಹತ್ಯೆ ಕೇಸ್ ಹೊಣೆ ಎನ್ಐಎ ಹೆಗಲಿ
ರಾಜಸ್ಥಾನದ ಉದಯ್‌ಪುರದಲ್ಲಿ ನೂಪುರ್ ಶರ್ಮಾ ಪರ ಕನ್ಹಯ್ಯ ಲಾಲ್ ಎಂಬ ಟೈಲರ್ ಪೋಸ್ಟ್ ಹಾಕಿದ್ದ. ಇದರಿಂದ ಆಕ್ರೋಶಗೊಂಡ ಮುಸ್ಲಿಂ ಯುವಕರಿಬ್ಬರು, ಆತನ ಟೈಲರ್ ಶಾಪ್‌ಗೆ ಬಂದು, ಆತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ, ತಲೆ ಕತ್ತರಿಸಿ, ಭೀಕರವಾಗಿ ಹತ್ಯೆ ಮಾಡಿದ್ದರು. ಈ ಕೃತ್ಯದ ಹಿಂದೆ ಉಗ್ರ ಸಂಘಟನೆ ಕೈವಾಡ ಇರುವ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ಈ ಹತ್ಯೆ ಕೇಸ್ ತನಿಖೆ ಹೊಣೆಯನ್ನು ಎನ್ಐಎಗೆ ನೀಡಿ ಕೇಂದ್ರ ಗೃಹ ಸಚಿವಾಲಯ ಆದೇಶಿಸಿದೆ
ಉದಯಪುರಕ್ಕೆ ಬಂದ ಎನ್‌ಐಎ
ಕೇಂದ್ರ ಸಚಿವಾಲಯದಿಂದ ಆದೇಶ ಬರುತ್ತಿದ್ದಂತೆ ಎನ್ಐಎ ಅಧಿಕಾರಿಗಳ ತಂಡ ಉದಯಪುರಕ್ಕೆ ಭೇಟಿ ನೀಡಿದೆ. ಸ್ಥಳೀಯ ಪೊಲೀಸರು ಇನ್ನೂ ಎಫ್ಐಆರ್‌ನಲ್ಲಿ ಭಯೋತ್ಪಾದನೆಯ ಆರೋಪಗಳನ್ನು ಮಾಡಿಲ್ಲವಾದರೂ, ಈಗಾಗಲೇ ರಾಜಸ್ಥಾನ ಪೊಲೀಸರು ಬಂಧಿಸಿರುವ ಆರೋಪಿಗಳ ವಿರುದ್ಧ ಭಯೋತ್ಪಾದನೆಗಾಗಿ ಮೊಕದ್ದಮೆ ಹೂಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿ
ಇದನ್ನೂ ಓದಿ: Udaipur Murder: ಕೊಲೆಯಾದ ಕನ್ಹಯ್ಯ ಲಾಲ್ ಕುಟುಂಬಕ್ಕೆ 31 ಲಕ್ಷ ಪರಿ
ಹತ್ಯೆ ಹಿಂದಿದೆಯಾ ಐಸಿಸ್ ಉಗ್ರರ ಕೈವಾ
ಇಬ್ಬರು ಹಂತಕರ ಫೋನ್‌ಗಳ ಸೈಬರ್ ಫೋರೆನ್ಸಿಕ್ ವಿಶ್ಲೇಷಣೆಯನ್ನು ಮಾಡಲಾಗುತ್ತಿದೆ. ಅವರು ಧಾರ್ಮಿಕ ಆಧಾರದ ಮೇಲೆ ಈ ರೀತಿಯ ಹತ್ಯೆಗೆ ಜನರನ್ನು ಪ್ರೇರೇಪಿಸುವ ಕೆಲವು ಆನ್‌ಲೈನ್ ಗುಂಪಿನ ಭಾಗವಾಗಿದ್ದರಾ ಎನ್ನುವ ಬಗ್ಗೆ ಪರಿಶೀಲಿಸಲಾಗುತ್ತಿದೆ. ಅವರು ಸ್ವಯಂ-ನಿಯೋಜಿತ ಇಸ್ಲಾಮಿಕ್ ಸ್ಟೇಟ್ ಗುಂಪಿನ ಭಾಗವಾಗಿದ್ದರೆ ಅದನ್ನು ಪರಿಶೋಧಿಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೂ ಇದರ ಹಿಂದೆ ಐಸಿಸ್ ಉಗ್ರರ ನೆರಳು ಇರುವ ಶಂಕೆ ವ್ಯಕ್ತವಾಗಿದೆ ಎನ್ನವಾಗಿದೆ
ಕೇಂದ್ರ ಗೃಹಸಚಿವ ಅಮಿತ್ ಶಾ ಟ್ವೀ
ಎನ್ಐಎ ತನಿಖೆ ಬಗ್ಗೆ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಟ್ವೀಟ್ ಮಾಡಿದ್ದಾರೆ. ರಾಜಸ್ಥಾನದ ಉದಯಪುರದಲ್ಲಿ ನಿನ್ನೆ ನಡೆದ ಶ್ರೀ ಕನ್ಹಯ್ಯಾ ಲಾಲ್ ತೇಲಿಯ ಕ್ರೂರ ಹತ್ಯೆಯ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ವಹಿಸಿಕೊಳ್ಳುವಂತೆ MHA ನಿರ್ದೇಶನ ನೀಡಿದೆ. ಯಾವುದೇ ಸಂಸ್ಥೆಯ ಒಳಗೊಳ್ಳುವಿಕೆ ಮತ್ತು ಅಂತರಾಷ್ಟ್ರೀಯ ಲಿಂಕ್‌ಗಳನ್ನು ಸಂಪೂರ್ಣವಾಗಿ ತನಿಖೆ ಮಾಡಲಾಗುತ್ತದೆ ಅಂತ ಅಮಿತ್ ಶಾ ಟ್ವೀಟ್ ಮಾಡಿದ್ದಾ
ಪ್ರಧಾನಿಗೂ ಬೆದರಿಕೆ ಹಾಕಿದ್ದ ಆರೋಪಿ
ಆರೋಪಿಗಳು ವಿಡಿಯೋ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೂ ಬೆದರಿಕೆ ಹಾಕಿದ್ದಾರೆ. ಆರೋಪಿಗಳಾದ ರಿಯಾಜ್ ಅನ್ಸಾರಿ ಮತ್ತು ಮೊಹಮ್ಮದ್ ಗೌಸ್ ಅವರನ್ನು ರಾತ್ರಿ 7 ಗಂಟೆಗೆ ರಾಜ್‌ಸಮಂದ್‌ನ ಭೀಮ್‌ನಲ್ಲಿ ಬಂಧಿಸಲಾಗಿದೆ. ಇಬ್ಬರೂ ಉದಯಪುರದ ಸೂರಜ್ಪೋಲ್ ಪ್ರದೇಶದ ನಿವಾಸಿಗಳಾಗಿದ್ದಾ
ಇದನ್ನೂ ಓದಿ: Urfi Javed: ಉದಯಪುರ ಟೈಲರ್ ಭೀಕರ ಹತ್ಯೆ ವಿರುದ್ಧ ಉರ್ಫಿ ಜಾವೇದ್ ಕಿಡಿಕಿ
ಉದಯಪುರದಲ್ಲಿ ಬಿಗಿ ಪೊಲೀಸ್ ಭದ್ರ
ಮುನ್ನೆಚ್ಚರಿಕಾ ಕ್ರಮವಾಗಿ ಉದಯಪುರದ 7 ಪೊಲೀಸ್ ಠಾಣೆ ಪ್ರದೇಶಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಇದರಲ್ಲಿ ಧನ್ಮಂಡಿ, ಘಂಟಾಘರ್, ಹತಿಪೋಲ್, ಅಂಬಾಮತ, ಸೂರಜ್ಪೋಲ್, ಭೂಪಾಲಪುರ ಮತ್ತು ಸವಿನ ಪೊಲೀಸ್ ಠಾಣೆ ವ್ಯಾಪ್ತಿಗಳು ಸೇರಿವೆ. ಅಲ್ಲದೆ, ಇಡೀ ರಾಜಸ್ಥಾನದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ತೆಡಿರೆ.ಗಳುರೆ.ಟ್.ಡ?ಹಾರವೆ. ಟೀಂ.ಗೆದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.
Post a Comment