ಮೈಸೂರು (ಜೂ 6): ಆಕೆ ಆ ಮನೆಯ ಮುದ್ದಿನ ಮಗಳು. ಕಷ್ಟ ಪಟ್ಟು ಅದ್ದೂರಿಯಾಗಿ ಮದುವೆ ಸಹ ಮಾಡಿಕೊಟ್ಟಿದ್ರು. ಆದ್ರೆ ಮದುವೆಯಾದ (Marriage) ಎರಡೇ ವರ್ಷಕ್ಕೆ ಗಂಡನ ವರದಕ್ಷಿಣೆ (Marriage Dowry) ಕಿರುಕುಳಕ್ಕೆ ಬೇಸತ್ತ ಗೃಹಿಣಿ (House Wife) ವಿಷ ಸೇವಿಸಿ ಆತ್ಮಹತ್ಯೆಗೆ (Suicide) ಯತ್ನಿಸಿದ್ದಾಳೆ. ಇತ್ತ ಗಂಡ, ಅತ್ತೆ ಮಾವ ಎಸ್ಕೇಪ್ ಆಗಿರುವ ಘಟನೆ ಮೈಸೂರು (Mysore) ಜಿಲ್ಲೆಯಲ್ಲಿ ನಡೆದಿದೆ.
ಮಗಳನ್ನು ಕಳೆದುಕೊಂಡು ಕುಟುಂಬಸ್ಥರ ಆಕ್ರಂ
ಮನೆಯ ಮುಂದೆ ಮಗಳನ್ನ ಕಳೆದುಕೊಂಡು ಅಳುತ್ತಿರುವ ಕುಟುಂಬಸ್ಥರು. ಮಗಳ ಸಾವಿಗೆ ಕಾರಣರಾದವರನ್ನ ನೆನಸಿಕೊಂಡ ಹಿಡಿ ಶಾಪ ಹಾಕುತ್ತಿರುದ್ದಾರ. ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕೆಲ್ಲೂರು ಗ್ರಾಮ. ಹೀಗೆ ಫೋಟೋದಲ್ಲಿ ಗಂಡನ ಜೊತೆ ಇರುವ ಈಕೆ ಶ್ವೇತ (22). ಶ್ವೇತಳನ್ನು ಕಿತ್ತೂರು ಗ್ರಾಮದ ಬಸವರಾಜ್ ನೊಂದಿಗೆ ಮದುವೆ ಮಾಡಲಾಗಿತ್ ಗಂಡ-ಹೆಂಡತಿ ನಡುವೆ ಜ
ಮದುವೆ ಸಂದರ್ಭದಲ್ಲಿ 100 ಗ್ರಾಂ ಚಿನ್ನ, ಒಂದು ಲಕ್ಷ ಹಣವನ್ನ ವರದಕ್ಷಣೆ ಕೊಟ್ಟು ಅದ್ದೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ಬಸವರಾಜ್ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಶ್ವೇತ ಹಾಗೂ ಬಸವರಾಜ್ ಗೆ ಒಂದುವರೆ ವರ್ಷದ ಮಗು ಸಹ ಇದೆ. ಮದುವೆಯಾದ ದಿನದಿಂದಲೂ ಗಂಡ ಮತ್ತು ಹೆಂಡತಿಯ ನಡುವೆ ಜಗಳ ನಡೆಯುತ್ತಲೇ ಇತ್ತಂತೆ. ಬಸವರಾಜ್ ದಿನ ನಿತ್ಯ ನಿಮ್ಮ ಅಪ್ಪನ ಬಳಿ ಹಣ ತೆಗೆದುಕೊಂಡು ಬಾ ಎಂದು ಪೀಡಿಸುತ್ತಿದ್ದನಂ
ಇದನ್ನೂ ಓದಿ: Bagalakote: ಹಾವಿನ ರೂಪದಲ್ಲಿ ಮತ್ತೆ ಮನೆಗೆ ಬಂದ ಗಂಡ; 4 ದಿನ ನಾಗರ ಹಾವಿನ ಜೊತೆ ಅಜ್ಜಿ
ನಾಲೆಗೆ ಬಿದ್ದು ಆತ್ಮಹತ್ಯೆಗೂ ಯತ್ನಿಸಿದ್ರೂ
ಶ್ವೇತ ಮೂರು ತಿಂಗಳ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ನಾಲೆಗೆ ಬಿದ್ದು ಆತ್ಮಹತ್ಯೆಗೂ ಸಹ ಯತ್ನಿಸಿದ್ದಾಳೆಂತೆ. ಎರೆಡು ಕುಟುಂಬದವರು ಸಾಕಷ್ಟು ಬಾರಿ ರಾಜೀ ಪಂಚಾಯತಿ ಸಹ ಮಾಡಿದ್ಧಾರೆ. ಇಷ್ಟಾದ್ರು ಸಹ ಗಂಡ, ಮಾವ, ಅತ್ತೆಯ ಕಾಟಕ್ಕೆ ಬೇಸತ್ತ ಶ್ವೇತ ಜೂನ್ 1 ರಂದು ವಿಷ ಕುಡಿದು ತಾಯಿಯ ಮನೆಗೆ ಫೋನ್ ಮಾಡಿ ವಿಚಾರ ತಿಳಿಸಿದ್ದಾ
3 ದಿನಗಳ ಕಾಲ ಐಸಿಯುನಲ್ಲಿ ಚಿಕಿ
ಇನ್ನೂ ಮಗಳು ವಿಷ ಕುಡಿದ ವಿಚಾರ ತಿಳಿದ ಶ್ವೇತ ಕುಟುಂಬಸ್ಥರು ಕಿತ್ತೂರು ಗ್ರಾಮಕ್ಕೆ ತೆರಳಿದ್ದಾರೆ. ಮನೆಯವರನ್ನ ಕಂಡು ಮನೆಯಿಂದ ಹೊರ ಬಂದ ಶ್ವೇತಾಳನ್ನು ನೇರವಾಗಿ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ಧಾರೆ. ಮೂರು ದಿನಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ಪಡೆದ ಶ್ವೇತ ಚಿಕಿತ್ಸೆ ಫಲಿಸದೆ ಪ್ರಾಣ ಬಿಟ್ಟಿದ್ದಾ
ಬಸವರಾಜ್ ಮನೆಯವರೆಲ್ಲಾ ಎಸ್ಕೇ
ಶ್ವೇತ ಮೃತಪಟ್ಟಿರುವ ವಿಚಾರ ಗೊತ್ತಾಗುತ್ತಿದಂತೆ ಬಸವರಾಜ್, ಅತ್ತೆ ಸರೋಜಮ್ಮ, ಮಾವ ಎಲ್ಕರೂ ಎಸ್ಕೇಪ್ ಆಗಿದ್ದಾರೆ. ಈ ಸಂಬಂಧ ಬೆಟ್ಟದ ಪುರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದ್ದು, ತಲೆಮರಿಸಿಕೊಂಡುವರನ್ನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಶ್ವೇತಾಳಿಗೆ ಚೆನ್ನಾಗಿ ಒಡೆದಿದ್ದಾರೆ. ಗಾಯದ ಗುರುತುಗಳು ದೇಹದಲ್ಲಿ ಪತ್ತೆಯಾಗಿದೆ ಎಂದು ಗಂಭೀರವಾಗಿ ಆರೋಪಿಸುತ್ತಿದ್ದಾರೆ ಶ್ವೇತಾಳ ಚಿಕ್ಕ
ಇದನ್ನೂ ಓದಿ: Chitradurga: ಕಾಂಗ್ರೆಸ್ ನವರೇನು ಸ್ವಾತಂತ್ರ್ಯ ಹೋರಾಟಗಾರರೇ? ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಪ್ರಶ್ನೆ
ಒಟ್ಟಾರೆ ಇತ್ತ ಮಗಳನ್ನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಗಳ ಸಾವಿಗೆ ಕಾರಣರಾದವರಿಗೆ ಶಿಕ್ಷೆಯಾಗಲೇಬೇಕೆಂದು ಕುಟುಂಬಸ್ಥರು ಆಗ್ರಹಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ವರದಕ್ಷಿಣೆ ಪ್ರಕರಣ ಹೆಚ್ಚಾಗಿದೆ. ಮಗಳು ಸುಖವಾಗಿರಲಿ ಎಂದು ಹಣ ಕೊಟ್ಟು, ಚಿನ್ನ ಕೊಟ್ಟು ಮದುವೆ ಮಾಡಿಕೊಟ್ಟಿದ್ರು. ಈಗ ಮಗಳಿಲ್ಲದೇ ಹೆತ್ತವರು ಕಣ್ಣೀರು ಹಾಕುತ್ತಿದ್ದಾರೆ.ಪ್ಪ.ಪ್ಳೆ.ತ್ಸೆಳೆ.ವಾಸತೆ.ಗಳ.ದನವರು ಕಣ್ಣೀರು ಹಾಕುತ್ತಿದ್ದಾರೆ.

Post a Comment