Papaya Benefits: ಪಪ್ಪಾಯ ಹಣ್ಣಿನಲ್ಲಿ ಇರುವ ಔಷಧೀಯ ಗುಣಗಳನ್ನು ತಿಳಿದ್ರೆ ನೀವೇ ಬೆರಗಾಗಿ ಬಿಡ್ತೀರಾ ವಿಟಮಿನ್ ಸಿ ಸಂಧಿವಾತ, ಹೃದಯ ಕಾಯಿಲೆ ಮತ್ತು ಕ್ಯಾನ್ಸರ್ ರೋಗಗಳನ್ನೂ ತಡೆಯುತ್ತದೆ. ಪಪ್ಪಾಯದ ಒಂದು ತುಂಡು 200% ದಷ್ಟು ವಿಟಮಿನ್ ಸಿಯನ್ನು ಒಳಗೊಂಡಿರುತ್ತದೆ. ಇದು ನಿಮ್ಮ ನಿರೋಧಕ ಶಕ್ತಿಯನ್ನು ವರ್ಧಿಸುತ್ತದೆ.


 : ಪಪ್ಪಾಯಿ (Papaya) ಹಣ್ಣುಗಳಲ್ಲಿ ಅಡಕವಾಗಿರುವ ಶಕ ಅಂಶಗಳ ಬಗ್ಗೆ ತಿಳಿದರೆ ನೀವು ನಿಜಕ್ಕೂ ಆಶ್ಚರ್ಯ ಪಡುತ್ತೀರಾ. ಇದರಲ್ಲಿರುವ ಮೆಗ್ನೀಸಿಯುಂ, ಪೊಟಾಸ್ಸಿಯುಂ, ನಿಯಾಸಿನ್, ಕ್ಯಾರೋಟೀನ್, ಪ್ರೋಟೀನ್ (Proteine), ನಾರಿನಾಂಶ ಮತ್ತು ಅನೇಕ ಆರೋಗ್ಯ (Health) ಪ್ರಯೋಜನಗಳನ್ನು ಒದಗಿಸುವ ಪಪೈನ್ ಎಂಬ ಕಿಣ್ವ ಅಧಿಕ ಪ್ರಮಾಣದಲ್ಲಿದ್ದು, ಆರೋಗ್ಯವನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರ ಇದು ವಹಿಸುತ್ತದೆ. ವಿಟಮಿನ್ ಸಿ (Vitamin C) ಸಂಧಿವಾತ, ಹೃದಯ ಕಾಯಿಲೆ ಮತ್ತು ಕ್ಯಾನ್ಸರ್ ರೋಗಗಳನ್ನೂ ತಡೆಯುತ್ತದೆ. ಪಪ್ಪಾಯದ ಒಂದು ತುಂಡು 200% ದಷ್ಟು ವಿಟಮಿನ್ ಸಿಯನ್ನು ಒಳಗೊಂಡಿರುತ್ತದೆ. ಇದು ನಿಮ್ಮ ನಿರೋಧಕ ಶಕ್ತಿಯನ್ನು ವರ್ಧಿಸುತ್ತದೆ. 



ಮಲಬದ್ಧತೆ ನಿವಾರಿಸುವ ಗುಣ ಹೊಂದಿ

ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಎಲ್ಲರನ್ನೂ ಕಾಡುತ್ತಿರುವ ಬಹು ದೊಡ್ಡ ಸಮಸ್ಯೆ ಎಂದರೇ ಮಲಬದ್ಧತೆ. ನಮ್ಮ ಬದಲಾದ ಜೀವನಶೈಲಿ ಹಾಗೂ ಫಾಸ್ಟ್ ಫುಡ್ ಸೇವಿಸುವುದರಿಂದ ಬದ್ಧತೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಮುಖವಾಗಿ ಮೈದಾ ಆಧಾರಿತ ಆಹಾರಗಳು ದೊಡ್ಡಕರುಳಿನಲ್ಲಿ ಪೂರ್ಣವಾಗಿ ಜೀರ್ಣವಾಗದೇ, ಗಟ್ಟಿಯಾಗಿದ್ದು ಮುಂದೆ ಹೋಗಲಾಗದೇ ಮಲಬದ್ಧತೆಗೆ ಕಾರಣವಾಗುತ್ತವೆ. ಈ ಸಂದರ್ಭದಲ್ಲಿ ಪಪ್ಪಾಯಿ ಹಣ್ಣನ್ನು ತಿನ್ನುವುದರಿಂದ ಅಥವಾ ರಸವನ್ನು ಸೇವಿಸುವುದರಿಂದ ಗಟ್ಟಿಯಾಗಿದ್ದ ಆಹಾರಗಳು ಮೆದುವಾಗಿ ಸುಲಭವಾಗಿ ವಿಸರ್ಜಿಸಲು ಸಾಧ್ಯವಾಗುತ್ತದೆ. ಪಪ್ಪಾಯವನ್ನು ದಿನವೂ ತಿನ್ನುವುದು ಝಂಕ್ ಫುಡ್‌ನಿಂದ ಉಂಟಾಗುವ ಜೀರ್ಣಕ್ರಿಯೆ ಸಮಸ್ಯೆಯನ್ನು ತಡೆಗಟ್ಟಿ ಉತ್ತಮ ಆರೋಗ್ಯವನ್ನು ದಯಪಾಲಿಸುತ್ತದೆ: ಇದನ್ನೂ ಓದಿ: Hair Care: ಕೂದಲ ಅನೇಕ ಸಮಸ್ಯೆಗೆ ಮೆಹಂದಿ ಮದ್ದು; ತಿಂಗಳಿಗೊಮ್ಮೆ ಹೆನ್ನಾ ಹಚ್ಚೋದನ್ನು ಮರೆಯಬೇ



ತೂಕ ಇಳಿಸಿಕೊಳ್ಳುವರಿಗೆ ರಾಮಬಾಣ ಪಪ್ಪಾ



ತೂಕ ಇಳಿಸಿಕೊಳ್ಳುವ ಯೋಚನೆ ನಿಮಗಿದ್ದರೆ ಪಪ್ಪಾಯ ಹಣ್ಣುಗಳನ್ನು ತಿನ್ನಿರಿ. ಇದು ಜೀರ್ಣಕ್ರಿಯೆಯನ್ನು ಉತ್ತಮವಾಗಿ ಸುವುದರ ಜೊತೆಗೆ ತೂಕ ಇಳಿಸಿಕೊಳ್ಳಲು ಸಹಕಾರಿಯಾಗಿದೆ. ಬೆಳಗ್ಗೆ ಖಾಲಿ ಹೊಟ್ಟೆಗೆ ಇದನ್ನು ತಿಂದರೆ ಒಳ್ಳೆಯದು. ದೇಹದಲ್ಲಿನ ಕೊಬ್ಬಿನ ಪ್ರಮಾಣವನ್ನು ನಿಯಂತ್ರಿಸುವ ಪಪ್ಪಾಯಿ ಉತ್ತಮವಾದ ಫೈಬರ್ ಗಳ ಮೂಲವಾಗಿದೆಮ ಜೊತೆಗೆ ಇದು ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚು ಮಾಡುತ್ತ



ಚರ್ಮದ ಕಾಂತಿಗೆ ಮತ್ತು ಕೂದಲಿನ ಆರೋಗ್ಯಕ್ಕೂ ಸ

ಇದರಲ್ಲಿರುವ “ಇ” ವಿಟಮಿನ್ ಸೌಂದರ್ಯ ವರ್ಧಕ ಅಂಶ ಹೊಂದಿದ್ದು, ಚರ್ಮದ ಕಾಂತಿಗೆ ಮತ್ತು ಕೂದಲಿನ ಆರೋಗ್ಯಕ್ಕೂ ತುಂಬಾ ಸಹಕಾರಿಯಾಗಿದೆ. ತ್ವಚೆಯ ಕಾಂತಿಗೆ ಪಪ್ಪಾಯಿ ಹಣ್ಣಿನಲ್ಲಿ ಅಧಿಕ ಪ್ರಮಾಣದಲ್ಲಿ ನೀರು ಸೇರಿರುವುದರಿಂದ ಅದರ ಸಹಾಯದಿಂದ ನಿಮ್ಮ ಚರ್ಮವನ್ನು ಮೆದು, ಮೃದು ಮತ್ತು ತೇವಾಂಶ ಭರಿತವಾಗಿಡಲು ಸಹಾಯಕಾರಿಯಾಗಿದೆ. ಅರ್ಧ ಕಪ್ ಮಾಗಿದ ಪಪ್ಪಾಯಿ ಹಣ್ಣನ್ನು ಪೇಸ್ಟ್ ಆಗುವ ಹಾಗೆ ಹದಗೂಡಿಸಿ. ಜೊತೆಗೆ ಸ್ವಲ್ಪ ಕಚ್ಚಾ ಜೇನುತುಪ್ಪವನ್ನು ಸೇರಿಸಬಹುದು. ಇದನ್ನು ಚೆನ್ನಾಗಿ ಹದಮಾಡಿ ನಿಮ್ಮ ಮುಖದ ಎಲ್ಲಾ ಭಾಗ ಮತ್ತು ಕತ್ತಿನ ಮೇಲೆ ಲೇಪಿಸಿ. 15 ನಿಮಿಷಗಳ ಸಮಯ ಬಿಟ್ಟ ನಂತರ ಎಚ್ಚರಿಕೆಯಿಂದ ತಣ್ಣೀರು ಬಳಸಿ ತೊಳೆದುಕೊಂಡು ಚರ್ಮದ ಮೇಲ್ಭಾಗವನ್ನು ಮೆಲ್ಲ ಮೆಲ್ಲಗೆ ತಟ್ಟಿಕೊಳ್ಳಿ. ಪಪ್ಪಾಯವನ್ನು ದಿನವೂ ತಿನ್ನುವುದು ನಿಮ್ಮ ವಯಸ್ಸನ್ನು 5 ವರ್ಷ ಕಡಿಮೆಯಾದಂತೆ ಮಾಡುತ್ತದೆ



ಇದನ್ನೂ ಓದಿ: Health Tips: ಖಾಲಿ ಹೊಟ್ಟೆಯಲ್ಲಿ ಈ ಆಹಾರ ಸೇವನೆ ಆರೋಗ್ಯಕ್ಕೆ ಬೆಸ್ಟ್



ಸಂಧಿವಾತದಿಂದ 



ಪಪ್ಪಾಯಲ್ಲಿರುವ ಆಂಟಿ ಇನ್‌ಫ್ಲಾಮೇಟರಿ ಅಂಶಗಳು ವಿಟಮಿನ್ ಸಿಯೊಂದಿಗೆ ಜೊತೆಗೂಡಿ ಸಂಧಿವಾತದ ಮೂಲವನ್ನು ಹೊರದೂಡುವಲ್ಲಿ ಸಹಕಾರಿಯಾಗಿದೆ. ವಿಟಮಿನ್ ಸಿಯುಳ್ಳ ಆಹಾರವನ್ನು ಸೇವಿಸುವವರು ಸಂಧಿವಾತದಿಂದ ಗುಣಮುಖರಾಗಿರುವುದು ಸಂಶೋಧನೆಗಳಿಂದ ತಿಳಿದು ಬಂದಿ



ಒಂದು ಮಧ್ಯಮ ಗಾತ್ರದ ಪಪ್ಪಾಯ ಹಣ್ಣಿನಲ್ಲಿ 68 ಕ್ಯಾಲೋರಿಗಳು ಇರುತ್ತದೆ. ಜಿಂಕ್ 0.13 ಮಿ.ಗ್ರಾಂ., ಕ್ಯಾಲ್ಸಿಯಂ 31 ಮಿ.ಗ್ರಾಂ., ಮ್ಯಾಗ್ನಿಷಿಯಂ 33 ಮಿ.ಗ್ರಾಂ., ಪೋಟ್ಯಾಷಿಯಂ 286 ಮಿ.ಗ್ರಾಂ., ಕಾರ್ಬೋಹೈಡ್ರೇಟ್ 50.1 ಗ್ರಾಂ., ನಾರು 2.7 ಗ್ರಾಂ., ಪ್ರೋಟಿನ್ 2.9 ಗ್ರಾಂ., ಸಕ್ಕರೆ 8.30 ಗ್ರಾಂ., ಓಮೆಗಾ 3 ಕೊಬ್ಬಿನ ಆಮ್ಲಗಳು-35.0 ಮಿ.ಗ್ರಾಂ. ಪೋಷಕಾಂಶಗಳು ಲಭ್ಯವಿರುತ್ತವೆ.ದೆ.ಮುಕ್ತಿ.ಹಕಾರಿದೆ.ಯಡಿ.ದೆ. ಪೋಷಕಾಂಶಗಳು ಲಭ್ಯವಿರುತ್ತವೆ.

Post a Comment

Previous Post Next Post