Fatty Liver: ಕೊಬ್ಬು ತುಂಬಿದ ಯಕೃತ್ತಿನ ರೋಗದ ಲಕ್ಷಣಗಳ ಬಗ್ಗೆ ಗೊತ್ತಿರಬೇಕಾದ ಮಾಹಿತಿ ‘ಅತಿಯಾಗಿ ಮದ್ಯಪಾನ ಮಾಡಬೇಡಿ, ಲೀವರ್ ಹಾಳಾಗುತ್ತೆ’ ಅಂತ ಹೇಳುವ ಮಾತನ್ನು ನಾವು ಅನೇಕ ಬಾರಿ ಕೇಳಿರುತ್ತೇವೆ ಅಲ್ಲವೇ? ಹೌದು.. ಅತಿಯಾಗಿ ಮದ್ಯ ಕುಡಿದರೆ ನಿಮ್ಮ ಲೀವರ್ ಎಂದರೆ ಯಕೃತ್ತು ಹಾಳಾಗುವುದಂತೂ ಗ್ಯಾರಂಟಿ. ಮದ್ಯ ಸೇವನೆಯು ಪಿತ್ತಜನಕಾಂಗದ ಹಾನಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.


 ಅತಿಯಾಗಿ ಮದ್ಯಪಾನ ಮಾಡಬೇಡಿ, ಲೀವರ್ (Liver) ಹಾಳಾಗುತ್ತೆ’ ಅಂತ ಹೇಳುವ ಮಾತನ್ನು ನಾವು ಅನೇಕ ಬಾರಿ ಕೇಳಿರುತ್ತೇವೆ ಅಲ್ಲವೇ? ಹೌದು.. ಅತಿಯಾಗಿ ಮದ್ಯ ಕುಡಿದರೆ ನಿಮ್ಮ ಲೀವರ್ ಎಂದರೆ ಯಕೃತ್ತು ಹಾಳಾಗುವುದಂತೂ ಗ್ಯಾರಂಟಿ. ಮದ್ಯ ಸೇವನೆಯು (Alcohol consumption) ಪಿತ್ತಜನಕಾಂಗದ ಹಾನಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಆಲ್ಕೋಹಾಲ್ ನಿಂದಾಗಿ ಯಕೃತ್ತು ಹಾನಿ ಸಂಭವಿಸಿದಾಗ, ಅದನ್ನು ಆಲ್ಕೋಹಾಲ್ ಸಂಬಂಧಿತ ಯಕೃತ್ತಿನ ಕಾಯಿಲೆ (ಎಆರ್‌ಎಲ್‌ಡಿ) ಎಂದು ಕರೆಯಲಾಗುತ್ತದೆ, ಇದು ಒಂದು ರೀತಿಯ ಕೊಬ್ಬಿನ ಯಕೃತ್ತಿನ (Fatty liver) ಕಾಯಿಲೆಯಾಗಿದೆ. ಆಲ್ಕೋಹಾಲ್-ಸಂಬಂಧಿತ ಪಿತ್ತಜನಕಾಂಗದ ಕಾಯಿಲೆಯ (Disease) ಹಲವಾರು ಹಂತಗಳಿವೆ.

ಯಕೃತ್ತಿನ ಕಾಯಿಲೆಯ ಅತ್ಯಂತ ಗಂಭೀರ ಹಂತವಾದ ಸಿರೋಸಿಸ್ ಸಾಮಾನ್ಯವಾಗಿ ಬೆಳೆಯಲು ಅನೇಕ ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಯಕೃತ್ತು ತೀವ್ರವಾಗಿ ಹಾನಿಗೊಳಗಾಗುವವರೆಗೆ ಎಆರ್‌ಎಲ್‌ಡಿ ಸಾಮಾನ್ಯವಾಗಿ ಯಾವುದೇ ರೋಗಲಕ್ಷಣಗಳನ್ನು ತೋರಿಸುವುದಿಲ್ಲ ಎಂದು ಎನ್ಎಚ್ಎಸ್ ಯುಕೆ ಹೇಳುತ್ತದೆ. ಆರಂಭಿಕ ಹಂತದಲ್ಲಿ ಯಕೃತ್ತಿನ ಹಾನಿಯ ಬಗ್ಗೆ ತಿಳಿದು ಕೊಳ್ಳುವುದು ನಿಮ್ಮ ಯಕೃತ್ತು ಚೇತರಿಸಿಕೊಳ್ಳಲು ಸಹಾಯ ಮಾಡುವ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿಮಗೆ ಅನುಮತಿಸುತ್ತ

ನೀವು ಎಷ್ಟು ಮದ್ಯ ಸೇವಿಸಿದರೆ ಈ ಅಪಾಯಕ್ಕೆ ಸಿಲುಕಬಹುದು

ಈ ಸ್ಥಿತಿಯು ಉಂಟಾಗಲು ನೀವು ಮದ್ಯದ ವ್ಯಸನಿಗಳಾಗಿರಬೇಕಾಗಿಲ್ಲ, ನಿಯಮಿತವಾಗಿ ಹೆಚ್ಚು ಮದ್ಯವನ್ನು ಕುಡಿಯುವುದು ನಿಮ್ಮನ್ನು ಅಪಾಯಕ್ಕೆ ಸಿಲುಕಿಸಬಹುದು. ನೀವು ಹೆಚ್ಚು ಮದ್ಯ ಸೇವನೆ ಮಾಡಿದಷ್ಟೂ ಎಆರ್‌ಎಲ್‌ಡಿ ಕಾಯಿಲೆಯನ್ನು ಅಭಿವೃದ್ಧಿಪಡಿಸುವ ನಿಮ್ಮ ಅಪಾಯವು ಹೆಚ್ಚಾಗುತ್ತದೆ

ನೀವು ಎಷ್ಟು ಬಾರಿ ಮದ್ಯ ಸೇವನೆ ಮಾಡುತ್ತೀರಿ ಮತ್ತು ನಿಮ್ಮ ಕುಡಿತವು ಯಾವುದೇ ಹಾನಿಯನ್ನು ಉಂಟು ಮಾಡಿದೆಯೇ ಮತ್ತು ಎಷ್ಟರ ಮಟ್ಟಿಗೆ ಹಾನಿ ಉಂಟು ಮಾಡಿದೆ ಎಂಬುದನ್ನು ಕಂಡು ಹಿಡಿಯುವುದು ಬಹಳ ಮುಖ್ಯವಾಗುತ್ತದೆ. ಡ್ರಿಂಕವೇರ್ ಪ್ರಕಾರ, ದಿನಕ್ಕೆ 40 ಗ್ರಾಂ ಗಿಂತ ಹೆಚ್ಚು ಮದ್ಯ ಅಥವಾ ನಾಲ್ಕು ಯೂನಿಟ್ ಗಿಂತ ಹೆಚ್ಚು ಮದ್ಯವನ್ನು ಕುಡಿಯುವ 90 ಪ್ರತಿಶತದಷ್ಟು ಜನರಲ್ಲಿ ಎಆರ್‌ಎಲ್‌ಡಿ ರೋಗವು ಬೆಳೆಯುತ್ತದೆ ಎಂದು ಅಂದಾಜಿಸಲಾಗಿದೆ.ಇದು ಸುಮಾರು ಎರಡು ಮಧ್ಯಮ ಅಂದರೆ 12 ಪ್ರತಿಶತ ಎಬಿವಿ (ಅಲ್ಕೋಹಾಲ್ ಬೈ ವಾಲ್ಯೂಮ್) ಇರುವ 175 ಮಿ.ಲೀಟರ್ ಸಾಮರ್ಥ್ಯದ ವೈನ್ ಗ್ಲಾಸುಗಳು ಅಥವಾ ಸಾಮಾನ್ಯ ಸಾಮರ್ಥ್ಯದ ಎರಡು ಪಿಂಟ್ ಗಳಿಗಿಂತ ಸ್ವಲ್ಪ ಕಡಿಮೆ ಪ್ರಮಾಣಕ್ಕೆ ಹೆಚ್ಚು ಕಡಿಮೆ ಸಮನಾಗಿದೆ ಎಂದು ಹೇಳಬಹುದಾಗಿ

ಎಆರ್‌ಎಲ್‌ಡಿ ಗೆ ಸಂಬಂಧಿಸಿದ ರೋಗಲಕ್ಷಣಗ

ಎಆರ್‌ಎಲ್‌ಡಿ ಕಾಯಿಲೆಯ ಆರಂಭಿಕ ಹಂತಗಳು ಸಾಮಾನ್ಯವಾಗಿ ಯಾವುದೇ ರೋಗಲಕ್ಷಣಗಳನ್ನು ತೋರಿಸುವುದಿಲ್ಲ. ಈ ಕಾರಣದಿಂದಾಗಿ, ನೀವು ಮದ್ಯ ಸೇವನೆಯಿಂದಲೇ ಪಿತ್ತಜನಕಾಂಗಕ್ಕೆ ಹಾನಿಯಾಗಿದೆ ಎಂದು ನಿಮಗೆ ತಿಳಿದಿರಲಿಕ್ಕಿಲ್ಲ. ರೋಗಲಕ್ಷಣಗಳು ಇದ್ದಲ್ಲಿ, ಅದು ನಿಮ್ಮ ಯಕೃತ್ತಿನ ಊತವಾಗಿರಬಹುದು, ಇದು ನಿಮ್ಮ ಕಿಬ್ಬೊಟ್ಟೆಯ ಮೇಲ್ಭಾಗದ ಬಲಭಾಗದಲ್ಲಿ ಅಸ್ವಸ್ಥತೆಗೆ ಕಾರಣವಾಗಬಹುದು

ಇದನ್ನೂ ಓದಿ: Musk Melon Benefits: ಮಾನಸಿಕ ಆರೋಗ್ಯ ಸೇರಿ ಕರ್ಬೂಜ ಹಣ್ಣಿನಲ್ಲಿದೆ ಹಲವು ಪ್ರಯೋ

ಎಆರ್‌ಎಲ್‌ಡಿ ಕಾಯಿಲೆಯ ರೋಗಲಕ್ಷಣಗಳಲ್ಲಿ ಆಯಾಸ, ತುಂಬಾನೇ ತೂಕ ನಷ್ಟವಾಗುವುದು, ಹಸಿವಾಗದಿರುವುದು, ವಾಕರಿಕೆ ಮತ್ತು ವಾಂತಿ ಸೇರಿವೆ. ಕಣ್ಣುಗಳು ಮತ್ತು ಚರ್ಮವು ಹಳದಿಯಾಗುವುದನ್ನು ಸಹ ನೀವು ಗಮನಿಸಬಹುದು ಮತ್ತು ಪಾದಗಳಲ್ಲಿ ಊತವನ್ನು ಅನುಭವಿಸಬಹುದು. ಹಾನಿಗೊಳಗಾದ ಯಕೃತ್ತು ಗೊಂದಲ, ನಿದ್ರಾಹೀನತೆಗೆ ಕಾರಣವಾಗಬಹುದು ಮತ್ತು ನೀವು ರಕ್ತವನ್ನು ವಾಂತಿ ಮಾಡಬಹುದು ಅಥವಾ ನಿಮ್ಮ ಮಲದಲ್ಲಿ ರಕ್ತ ಹೋಗಬಹು

ಮದ್ಯ ಸೇವನೆ ಯಕೃತ್ತಿಗೆ ಹೇಗೆ ಹಾನಿ ಮಾಡುತ್ತದೆ

ಆಲ್ಕೋಹಾಲ್ ನಂತಹ ಸಂಭಾವ್ಯ ವಿಷಕಾರಿ ವಸ್ತುಗಳನ್ನು ಮುರಿದು ಸಂಸ್ಕರಿಸುವುದು ನಿಮ್ಮ ಯಕೃತ್ತಿನ ಕೆಲಸಗಳಲ್ಲಿ ಒಂದಾಗಿದೆ. ನೀವು ಕುಡಿದಾಗ, ನಿಮ್ಮ ಯಕೃತ್ತಿನಲ್ಲಿರುವ ವಿವಿಧ ಕಿಣ್ವಗಳು ಆಲ್ಕೋಹಾಲ್ ಅನ್ನು ವಿಭಜಿಸಲು ಕೆಲಸ ಮಾಡುತ್ತವೆ. ಹೆಚ್ಚಾಗಿ ಮದ್ಯ ಸೇವನೆ ಮಾಡುವುದು ನಿಮ್ಮ ಯಕೃತ್ತಿಗೆ ಹಾನಿಯನ್ನುಂಟು ಮಾಡಬಹುದು. ಇದು ಆರಂಭದಲ್ಲಿ ನಿಮ್ಮ ಪಿತ್ತಜನಕಾಂಗದಲ್ಲಿ ಹೆಚ್ಚಿದ ಕೊಬ್ಬಿನ ರೂಪವನ್ನು ತೆಗೆದುಕೊಳ್ಳುತ್ತದೆ, ಆದರೆ ಕಾಲಾನಂತರದಲ್ಲಿ ಇದು ಉರಿಯೂತ ಮತ್ತು ಗಾಯದ ಅಂಗಾಂಶದ ಶೇಖರಣೆಗೆ ಕಾರಣವಾಗಬಹುದು

ಯಕೃತ್ತು ತನ್ನನ್ನು ತಾನು ಪುನರುತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ, ಆದರೆ ಪ್ರತಿ ಬಾರಿ ನಿಮ್ಮ ಯಕೃತ್ತು ಆಲ್ಕೋಹಾಲ್ ಅನ್ನು ಫಿಲ್ಟರ್ ಮಾಡಿದಾಗ, ಕೆಲವು ಯಕೃತ್ತಿನ ಜೀವಕೋಶಗಳು ಸಾಯುತ್ತವೆ. ಯಕೃತ್ತು ಹೊಸ ಜೀವಕೋಶಗಳನ್ನು ಅಭಿವೃದ್ಧಿಪಡಿಸಬಹುದು, ಆದರೆ ದೀರ್ಘಕಾಲದ ಮದ್ಯ ಸೇವನೆಯು ಯಕೃತ್ತಿನ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಇದು ನಿಮ್ಮ ಯಕೃತ್ತಿಗೆ ಗಂಭೀರ ಮತ್ತು ಶಾಶ್ವತ ಹಾನಿಗೆ ಕಾರಣವಾಗಬಹುದು. ನೀವು ಮದ್ಯ ಕುಡಿಯುವುದನ್ನು ಸಂಪೂರ್ಣವಾಗಿ ನಿಲ್ಲಿಸಿದರೆ ಮಾತ್ರವೇ ಈ ಯಕೃತ್ತಿನ ಹಾನಿಯನ್ನು ನಿಯಂತ್ರಿಸಲು ಸಾಧ್ಯವಾಗುತ್ತ

ಕೊಬ್ಬು ತುಂಬಿದ ಯಕೃತ್ತಿನ ಕಾಯಿಲೆಯನ್ನು ತಡೆಗಟ್ಟುವುದು ಹೇ

ಮೊದಲೇ ಚರ್ಚಿಸಿದಂತೆ, ಮದ್ಯ ಸೇವನೆಯು ಯಕೃತ್ತಿಗೆ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಮಾಡಬಹುದು, ಅದಕ್ಕಾಗಿಯೇ ನಿಮ್ಮ ಮದ್ಯ ಸೇವನೆಯನ್ನು ಮಿತಿಗೊಳಿಸಲು ಬಲವಾಗಿ ಸಲಹೆ ನೀಡಲಾಗುತ್ತದೆ. ಹೆಚ್ಚುವರಿಯಾಗಿ, ನೀವು ಆರೋಗ್ಯಕರ ಆಹಾರವನ್ನು ಸೇವಿಸಲು, ನಿಯಮಿತವಾಗಿ ವ್ಯಾಯಾಮ ಮಾಡಲು ಮತ್ತು ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ವೈದ್ಯರು ಶಿಫಾರಸು ಮಾಡುತ್ತಾರೆ. ಒಟ್ಟಿನಲ್ಲಿ ಒಳ್ಳೆಯ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಿರಿ

ಇದನ್ನೂ ಓದಿ: Jack Fruit Benefits: ಹಲಸಿನಹಣ್ಣನ್ನು ಸೇವಿಸುವುದರಿಂದ ಇದೆ ಆರೋಗ್ಯ ಲಾ

ಎಲ್ಲಕ್ಕಿಂತ ಮುಖ್ಯವಾಗಿ, ನಿಮ್ಮ ರೋಗಲಕ್ಷಣಗಳು ಉಲ್ಬಣಗೊಂಡರೆ ಕೂಡಲೇ ವೈದ್ಯಕೀಯ ಸಲಹೆಯನ್ನು ಪಡೆಯಿರಿ ಮತ್ತು ವೈದ್ಯರು ಸೂಚಿಸಿದಂತೆ ಔಷಧಿಗಳನ್ನು ತೆಗೆದುಕೊಳ್ಳಿರಿ.ಭಗಳು.ಗೆ?ದೆ..?ದು.ಜನ.ಳು:ದೆ..?ದೆ.ಸಿದಂತೆ 

Post a Comment

Previous Post Next Post