ಬೆಂಗಳೂರು ಜೂನ್ 1, ಗಾಂಜಾ ಮಾರಟಾ ಮಾಡುತ್ತಿದ್ದ ಆಂಧ್ರಪ್ರದೇಶದ ಐವರ ಆರೋಪಿಗಳನ್ನು ದಿನಾಂಕ 01-06-2022 ರಂದು ಬೆಳಿಗ್ಗೆ 9.00 ಗಂಟೆಗೆ ಶ್ರೀ ನಾರಾಯಣ್, ಪಿಎಸ್‌ಐ ಯಶವಂತಪುರ ಪೊಲೀಸ್ ಠಾಣೆ ರವರು ಠಾಣೆಯಲಿದ್ದಾಗ ಭಾತ್ಮೀದಾರರಿಂದ ಬಂದ ಮಾಹಿತಿಯನ್ನು ಪಡೆದು ಒಬ್ಬ ಆಸಾಮಿಯು ಜಯರಾಮ್ ಕಾಲೋನಿಯಲ್ಲಿ ಮಾದಕ ವಸ್ತು ಗಾಂಜಾವನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರವರು ತಮ್ಮ ಸಿಬ್ಬಂದಿಯೊAದಿಗೆ ಸ್ಥಳಕ್ಕೆ ಹೋಗಿ ಖಚಿತ ಪಡಿಸಿಕೊಂಡು ದಾಳಿ ಮಾಡಿ 1 ಕೆ.ಜಿ. 590ಗ್ರಾಂ ಗಾಂಜಾವನ್ನು ಮತ್ತು ಆರೋಪಿಯನ್ನು ವಶಪಡಿಸಿಕೊಂಡ್ಡಿರುತ್ತಾರೆ.
ಪ್ರಕರಣದ ದಸ್ತಗಿರಿಯಾಗಿದ್ದ ಆರೋಪಿ ಮಾಹಿತಿ ಮೇರೆಗೆ ಅದೇ ದಿನ ಬೆಳಿಗ್ಗೆ 11.40 ಗಂಟೆಗೆ ಶ್ರೀ ವಿನೋದ್ ರಾಠೋಡ್ ಪಿಎಸ್‌ಐ ರವರು ಕೆನರಾ ಯೂನಿಯನ್ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆಂದ್ರಪ್ರದೇಶ ರಾಜ್ಯ ತಿರುಪತಿ ಮೂಲದ ಒಬ್ಬ ಆರೋಪಿಯನ್ನು ವಶಕ್ಕೆ ಪಡೆದು 7 ಕೆಜಿ 50 ಗ್ರಾಂ ಗಾಂಜಾವನ್ನು ಆರೋಪಿಯಿಂದ ವಶಪಡಿಸಿಕೊಂಡು. ಪಿಎಸ್‌ಐ ಶ್ರೀ ರಾಜು ರವರ ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಆತನ ಮಾಹಿತಿ ಮೇರೆಗೆ ಆಂಧ್ರಪ್ರದೇಶದ ವಿಶಾಖಪಟ್ಟಣದ ಕಾಕಿನÁಡದ ತನ್ನ ಸ್ನೇಹಿತನಿಂದ ಗಾಂಜಾವನ್ನು ಕಡಿಮೆ ಬೆಲೆಗೆ ಖರೀದಿಸಿ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದ್ದು, ಆಂಧ್ರಪ್ರದೇಶ ರಾಜ್ಯದಿಂದ ಗಾಂಜಾ ತರುವಾಗ ಯಾರಿಗೂ ಅನುಮಾನ ಬರದಂತೆ ಪ್ಯಾಕ್ ಮಾಡಿ ದೊಡ್ಡ ಬ್ಯಾಗ್‌ನಲ್ಲಿ ಕೆಳಭಾಗದಲ್ಲಿ ಇಟ್ಟು ಮೇಲ್ಭಾಗದಲ್ಲಿ ಸೀರೆಗಳನ್ನು ತುಂಬಿಕೊAಡು ಸೀರೆಗಳ ಮಾರಾಟ ಮಾಡಲು ಹೋಗುತ್ತಿದ್ದೇನೆಂದು ತಿಳಿಸಿ, ಖಾಸಗಿ ಬಸ್‌ಗಳಲ್ಲಿ ಬೆಂಗಳೂರಿಗೆ ತಂದು ಮಾರಾಟ ಮಾಡುತ್ತಿದ್ದಾಗ ತನಿಖೆಯಿಂದ ತಿಳಿದು ಬಂದಿರುತ್ತದೆ. ಮಾಹಿತಿ ಮೇರೆಗೆ ಈ ಪ್ರಕರಣದಲ್ಲಿ ಭಾಗಿರಯಾಗಿರುವ ಎ-1 ಆರೋಪಿಗೆ ಗಾಂಜಾವನ್ನು ನೀಡಲು ಬಂದಾಗ ಎ-2 ಆರೋಪಿಯನ್ನು ದಸ್ತಗಿರಿಪಡಿಸಿ ಆತನಿಂದ 40 ಕೆಜಿ 700 ಗ್ರಾಂ ಗಾಂಜಾವನ್ನು ವಶಪಡಿಸಕೊಳ್ಳಲಾಗಿದೆ. ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿ ಆರೋಪಿಗಳ ವಶದಿಂದ 47.75 ಕೆ.ಜಿ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಯಶವಂತಪುರ ಪೊಲೀಸಲರು ಯಶಸ್ವಿಯಾಗಿರುತ್ತಾರೆ.
ಶ್ರೀ ಅರುಣ್ ನಾಗೇಗೌಡ, ಎಸಿಪಿ ಯಶವಂತಪುರ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಶ್ರೀ ಸುರೇಶ ಕೆ. ಪೊಲೀಸ್ ಇನ್ಸ್ಪೆಕ್ಟರ್, ಯಶವಂತಪುವರ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಪಿಎಸ್‌ಐ ರವರುಗಳಾದ ಶ್ರೀ ವಿನೋಧ್. ಶ್ರೀ ರಾಜು ಸಿ, ಶ್ರೀ ನಾರಾಯಣ ರವರ ಮತ್ತು ಸಿಬ್ಬಂದಿಯವರಾದ, ಶ್ರೀ ರಾಚಪ್ಪ ಹಕ್ಕಿ, ಶ್ರೀ ದತ್ತಾತ್ರೇಯ ಬಡಿಗೇರ, ಶ್ರೀ ರಘುರಾಮ ರೆಡ್ಡಿ, ಶ್ರೀ ಮೊಟ್ಲಾ ನಾಯಕ್, ಶ್ರೀ ಗೋಪಾಲ ರಾಹುತ್, ಶ್ರೀ ಮುತ್ತಪ್ಪ ಭಜಂತ್ರಿ, ಶ್ರೀ ಲೋಕೇಶ ಸನಾದಿ ಮತ್ತು ಶ್ರೀ ಈರೇಶ ರವರುಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

Post a Comment