ಶ್ರೀ ಜೆ ಪ್ರಕಾಶ್ ಚಂದ್ ಬಿನ್ ಜುಗ್‌ರಾಜ್ ಜೈನ್, 46 ವರ್ಷ, ರವರು ದಿನಾಂಕ 25-05-2022 ರಂದು ನೀಡಿದ ದೂರಿನಲ್ಲಿ ಆರೋಪಿತನಾದ ಬಿಜಾರಾಮ್, ಕೌನೂಜ್ ಗ್ರಾಮ, ಪಾಲಿ ಜಿಲ್ಲೆ, ರಾಜಸ್ಥಾನ ರಾಜ್ಯ. ಈತನು ಸುಮಾರು 6 ತಿಂಗಳಿನಿ೦ದ ತಮ್ಮ ತಂದೆ ಮೃತ ಜುಗ್ ರಾಜ್ ಜೈನ್ ರವರ ಜೊತೆ ಚಿಕ್ಕಪೇಟೆಯಲ್ಲಿರುವ ದೀಪಂ ಎಲೆಕ್ಟಿçಕಲ್ಸ್ ಅಂಗಡಿ ಮತ್ತು ಚಾಮರಾಜಪೇಟೆಯ ಅವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದನು.
ಆರೋಪಿ ಬಿಜಾರಾಮ್ ಮತ್ತು ಆತನ ಸಹಚರರು ಮನೆಯಲ್ಲಿ ಯಾರೂ ಇಲ್ಲದೇ ವಯೋವೃದ್ಧರಾದ ಜುಗ್‌ರಾಜ್ ಜೈನ್ ರವರು ಒಬ್ಬರೇ ಇರುವುದನ್ನು ತಿಳಿದು 2 ದಿನಗಳಿಂದ ಸಂಚು ರೂಪಿಸಿ 24-05-2022 ರಂದು ರಾತ್ರಿ 9.30 ಗಂಟೆಗೆ ಮೃತರು ಆರೋಪಿತನೊಂದಿಗೆ ಅಂಗಡಿಯಿ೦ದ ಚಾಮರಾಜಪೇಟೆ ಮನೆಗೆ ಬಂದ ಸಮಯದಲ್ಲಿ ಆರೋಪಿತನಾದ ಬಿಜಾರಾಮ್ ಈತನು ಮೃತರ ಕಣ್ಣಿಗೆ ಖಾರದ ಪುಡಿ ಎರಚಿ, ಬಾಯಿಗೆ ಬಟ್ಟೆ ತುರುಕಿ, ಎರಡು ಕೈಗಳನ್ನು ಬೆನ್ನಿನ ಹಿಂದಕ್ಕೆ ಪ್ಲಾಸ್ಟಿಕ್ ದಾರದಿಂದ ಕಟ್ಟಿ, ಕುತ್ತಿಗೆಯನ್ನು ಹಿಸುಕಿ ಕೊಲೆ ಮಾಡಿ ಮನೆಯಲ್ಲಿದ್ದ ಚಿನ್ನ ಮತ್ತು ಬೆಳ್ಳಿ ಆಭರಣಗಳು ಹಾಗೂ ನಗದು ಹಣವನ್ನು ಆರೋಪಿ ಬಿಜಾರಾಮ್ ಮತ್ತು ಆತನ ಸಹಚರರು ಓಂ ರಾಮ್ ದೇವಸಿ ರವರು ಕಳ್ಳತನ ಮಾಡಿಕೊಂಡು ಹೋಗಿದ್ದು. ಈ ಬಗ್ಗೆ ಚಾರಮರಾಜಪೇಟೆ ಪೋಲೀಸರು 3 ತಂಡಗಳನ್ನು ರಚನೆ ಮಾಡಿ ೧ ತಂಡವನ್ನು ಹೈದರಾಬಾದ್‌ಗೆ ಮತ್ತೊಂದು ತಂಡವನ್ನು ರಾಜಸ್ಥಾನಕ್ಕೆ ಕಳುಹಿಸಿ ಮಾಹಿತಿ ಕಲೆಹಾಕಿರುತ್ತಾರೆ.
ದಿನಾಂಕ 29-05-2022 ರಂದು ಗುಜರಾತ್ ರಾಜ್ಯದ ಅಮೀರ್ ಗಢ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶ್ರೀ. ಮಹಾವೀರ್ ಸಿಂಗ್ ಮತ್ತು ಸಿಬ್ಬಂದಿಯವರು ಎ-1 ಆರೋಪಿತನ್ನು ವಶಕ್ಕೆ ಪಡೆದು ಆರೋಪಿತನಿಂದ ಸುಮಾರು ನಗದು ಹಣ 8,48000 ರೂಪಾಯಿಗಳು, ವಿವಿಧ ಬಗೆಯ ತೂಕದ ಚಿನ್ನಾಭರಣ 252 ಗ್ರಾಂ ಮತ್ತು ಬೆಳ್ಳಿಯ ಬಿಸ್ಕಟ್ 3 ಕೆಜಿ 870 ಗ್ರಾಂ, ವಿವೋ ಮೊಬೈಲ್ ಪೋನ್ 40,000 ಗಳನ್ನು ವಶಪಡಿಸಿಕೊಂಡಿರುತ್ತಾರೆ.
ಎ-1 ಆರೋಪಿಯನ್ನು ಪೊಲೀಸ್ ಬಂಧನಕ್ಕೆ ಪಡೆದುಕೊಂಡು ವಿಚಾರಣೆ ಮಾಡಿದಾಗ ಇನ್ನೂ ನಾಲ್ಕ ಜನ ಆರೋಪಿತರು ಭಾಗಿಯಾಗಿ ಕಳುವಾದ ಮಾಲುಗಳು ಇದ್ದ ಬಗ್ಗೆ ಮಾಹಿತಿ ಪಡೆದುಕೊಂಡು ದಿನಾಂಕ 02-06-2022 ರಂದು ಎ-3 ಆರೋಪಿಯನ್ನು ಗೋವಾದ ಆತನ ನಿವಾಸದಲ್ಲಿ ವಶಕ್ಕೆ ಪಡೆದು ಈತನಿಂದ ಕೆಳಕಂಡ ಮಾಲುಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ.



Post a Comment