ಅಕಸ್ಮಾತ್ ಹಾವು ಕಚ್ಚಿದರೆ, ಕೂಡಲೇ ಹೀಗೆ ಮಾಡಿ-ಪ್ರಾಣ ಉಳಿಸಿಕೊಳ್ಳಿ ಒಂದು ವೇಳೆ ಆಕಸ್ಮಾತ್ ಆಗಿ ನಿಮಗೆ ಹಾವು ಕಚ್ಚಿಬಿಟ್ಟರೆ, ಇಲ್ಲಾಂದರೆ ಮನೆಯ ಸಮಸ್ಯೆರಿಗೆ ಹಾವು ಕಚ್ಚಿದರೆ, ಕೂಡಲೇ ಪ್ರಥಮ ಚಿಕಿತ್ಸೆ ಮಾಡಿಕೊಂಡು ಆದಷ್ಟು ಬೇಗ, ಆಸ್ಪತ್ರೆಗೆ ಹೋಗಿ ಸರಿಯಾದ ಚಿಕಿತ್ಸೆ ಮಾಡಿಕೊಳ್ಳಿ


: ಮಳೆಗಾಲ ಶುರುವಾಗುತ್ತಿದ್ದಂತೆ, ಹಾವುಗಳ ಓಡಾಟ ಕೂಡ ಜಾಸ್ತಿ ಇರುತ್ತದೆಯಂತೆ. ಈ ಸಮಯದಲ್ಲಿ ಗದ್ದೆ ಕೆಲಸ ಅಥವಾ ತೋಟದ ಕೆಲಸಕ್ಕೆ ಹೋಗುವವರು ಆದಷ್ಟು ಎಚ್ಚರಿಕೆ ಯಿಂದ ಇರಬೇಕಾಗುತ್ತದೆ. ಯಾಕೆಂ ದರೆ ಹಸಿರು ಹುಲ್ಲಿನ ಮಧ್ಯೆ, ಕೆಲವೊಂದು ಹಾವುಗಳು, ಹಾಯಾಗಿ ಮಲಗಿರುತ್ತವೆ ಅಥವಾ ತನ್ನ ಪಾಡಿಗೆ ತಾನು ಓಡಾಡುತ್ತಾ ಇರುತ್ತವೆ. ಈ ಸಮಯದಲ್ಲಿ ನಾವು ಎಷ್ಟೇ ಜಾಗರೂಕತೆ ವಹಿಸಿದರೂ ಕೂಡ ಕೆಲವೊಮ್ಮೆ ಅಚಾತುರ್ಯ ನಡೆದು ಹೋಗುತ್ತದೆ

ಸಾಮಾನ್ಯವಾಗಿ ಏನು ತಿಳಿಯದ ಸಣ್ಣ ಮಕ್ಕಳನ್ನು ಬಿಟ್ಟರೆ, ಹಾವಿಗೆ ಹೆದರದೆ ಇರುವ ಯಾವ ಜೀವಿಯೂ ಪ್ರಪಂಚದಲ್ಲಿ ಇಲ್ಲ ಎನಿಸುತ್ತದೆ! ಅದರಲ್ಲೂ ಸಿಟಿಯಲ್ಲಿ ಇರುವವರಿಗೆ, ಅಲ್ಲಿ ಹಾವಿದೆ ಎಂದು ಜೋಕ್ ಮಾಡಿದರೂ ಸಾಕು, ಎದ್ದು ಬಿದ್ದು ಓಡಲು ಶುರು ಮಾಡಿಬಿಡುತ್ತಾರೆ! ಹಳ್ಳಿಕಡೆ ವಾಸಿಸುವ ಜನರಿಗೆ, ಹಾವುಗಳನ್ನು ನೋಡುವುದು ಕಾಮನ್ ಆಗಿ ಬಿಟ್ಟಿದೆ. ಮಳೆಗಾಲದಲ್ಲಿ ಮನೆಯ ಅಂಗಳದಲ್ಲಿ, ಮರಿ ಹಾವುಗಳೆಲ್ಲಾ ಅಂಗಳದಲ್ಲಿ ಓಡಾಡುತ್ತಾ ಇರುತ್ತವೆ. ಎಷ್ಟೋ ಸಲ ಮನೆಯೊಳಗೆ ಹಾವು ಬರುವುದು ಕೂಡ ಇದೆ! ಆದರೆ ಹೆಚ್ಚಿನವರಿಗೆ ಹಾವಿನಿಂದ ಕಚ್ಚಿಸಿಕೊಂಡವರೆಲ್ಲಾ ಸಾಯುತ್ತಾರೆ ಎನ್ನುವ ನಂಬಿಕೆ ಬಂದು ಬಿಟ್ಟಿದೆ! ಆದರೆ ಇದು ಸುಳ್ಳು. ಹಾವು ಕಚ್ಚಿದ ಕೂಡಲೇ ಪ್ರಥಮ ಚಿಕಿತ್ಸೆ ಹಾಗೂ ಕೆಲವೊಂದು ಮುನ್ನೆಚ್ಚರಿಕೆಗಳನ್ನು ತೆಗೆದು ಕೊಂಡರೆ, ಖಂಡಿತವಾಗಿಯೂ ಕೂಡ ಪ್ರಾಣ ಉಳಿಸಿಕೊಳ್ಳಬಹುದು. ಮುಂದೆ ಓದಿ

ಮೊದಲು ಆಸ್ಪತ್ರೆಗೆ ಹೋಗಿ: ಒಂದು ವೇಳೆ ನಿಮಗೆ, ಹಾವು ಕಚ್ಚಿಬಿಟ್ಟರೆ ಕೂಡಲೇ, ಆಸ್ಪತ್ರೆಗೆ ಹೋಗುವ ವ್ಯವಸ್ಥೆ ಮಾಡಿಕೊಳ್ಳಿ. ಈ ಸಮಯ ದಲ್ಲಿ ಕೆಲವರು, ಕಚ್ಚಿದ ಹಾವು, ಅಷ್ಟೊಂದು ವಿಷಕಾರಿ ಅಲ್ಲ, ಹೀಗಾಗಿ ಹಳ್ಳಿ ಔಷಧಿಗಳನ್ನು ಮಾಡಿದರೆ ಸಾಕಾಗುತ್ತದೆ ಎಂದು ಪುಕ್ಸಟೆ ಸಲಹೆಗಳನ್ನು ನೀಡುತ್ತಾರೆ. ಆದರೆ ನಿಜ ಹೇಳಬೇಕೆಂದರೆ, ಕಚ್ಚಿದ ಹಾವು ವಿಷಕಾರಿ ಆಗಿರಲಿ ಅಥವಾ ಆಗಿರದೆ ಇರಲಿ ನಿಮ್ಮ ಎಚ್ಚರಿಕೆಯಲ್ಲಿ ನೀವು ಇರುವುದು ಒಳ್ಳೆಯದು.

ಈ ಸಮಯದಲ್ಲಿ ಸಮಯ ಕಳೆದು ಹೋಗುವ ಮೊದಲು, ಆದಷ್ಟು ಬೇಗ, ಆಸ್ಪತ್ರೆಗೆ ಹೋಗಿ, ವೈದ್ಯರಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು. ಆದಷ್ಟು ಬೇಗನೆ ಹತ್ತಿರದ ಆಸ್ಪತ್ರೆ ಕಡೆಗೆ ಧಾವಿಸಿ, ಮೊದಲಿಗೆ ಪ್ರಥಮ ಚಿಕಿತ್ಸೆ ಪಡೆದು ಕೊಳ್ಳಬೇಕು.

Post a Comment

Previous Post Next Post