BBMPಗೆ ಹಿಂದೂಪರ ಸಂಘಟನೆಗಳಿಂದ ಡೆಡ್ ಲೈನ್! ಯೋಗ ದಿನಕ್ಕೆ ಅವಕಾಶ ಕೊಡದಿದ್ರೆ ಕೋರ್ಟ್ ಮೊರೆ? ಆಗಸ್ಟ್​ 15ರಂದು ಸ್ವಾತಂತ್ರ್ಯ ದಿನಾಚರಣೆಗೆ ಅವಕಾಶ ಕೋಡಬೇಕು ಎಂದು ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತರಿಗೆ ಮನವಿ ಮಾಡಲಾಗಿದೆ. ಈ ಸಂಬಂಧ ಜೂನ್ 7ರಂದು ಮನವಿ ಸಲ್ಲಿಸಿದ್ದರೂ ಈವರೆಗೆ ಪ್ರತಿಕ್ರಿಯೆ ನೀಡಿಲ್ಲ


 ಬೆಂಗಳೂರು (ಜೂ 14):  ಚಾಮರಾಜಪೇಟೆ ಈದ್ಗಾ  ಮೈದಾನಾ ? ಅಥವಾ ಬಿಬಿಎಂಪಿ (BBMP) ಆಟ ಮೈದಾನನಾ ? ಅನ್ನೋ ಗೊಂದಲ ಇನ್ನೂ ಬಗೆಹರೆಯುತ್ತಿಲ್ಲ. ಇದೇ  ವಿಚಾರ ಈಗ ದಿನಕ್ಕೊಂದು ತಿರುವು ಪಡೆಯುತ್ತಲೇ ಇದೆ. ಇದೀಗ ಹಿಂದೂಪರ ಸಂಘಟನೆ, (Hindu Organization) ಹಿಂದೂ ಸನಾತನ ಪರಿಷತ್, ಶ್ರೀರಾಮ ಸೇನೆ (SriRamsene) ಮೈದಾನ ವಿಚಾರವಾಗಿ ಪಾಲಿಕೆಗೆ ಮತ್ತೊಂದು  ಡೆಡ್ ಲೈನ್ (Deadline) ಕೊಟ್ಟಿದೆ. ಚಾಮರಾಜಪೇಟೆಯ (Chamarajapete) ವಿವಾದಿತ ಈದ್ಗಾ ಮೈದಾನದ (Idgah Maidan) ಸುತ್ತಲೂ BBMP 12 ಕಂಬಗಳನ್ನು ನೆಟ್ಟಿದ್ದು, ಸಿಸಿ ಕ್ಯಾಮೆರಾ (CCTV) ಅಳವಡಿಸಲು ಸಿದ್ಧತೆ ಅಂತಿಮಗೊಳಿಸಿದೆ.

ವಿದ್ಯುತ್ ಪೂರೈಕೆಗೆ ವ್ಯವಸ್ಥೆ ಕಲ್ಪಿಸಿದೆ. ಆದ್ರೆ ಇದು ಪಾಲಿಕೆಯ ಸ್ವತ್ತು ಅಂತ ಬೋಡ್೯ ಹಾಕಲು ಅಧಿಕಾರಿಗಳು ಮುಂದು ಬರ್ತಿಲ್ಲ. ಇನ್ನೂ ಹಿಂದೂ ಸಂಘಟನೆಗಳ ಮನವಿಯನ್ನ ಸ್ವೀಕರಿಸುತ್ತಲೂ ಇಲ್ಲ. ಬೇಡ ಅಂತ ನಿರ್ಲಕ್ಷ್ಯ ಕೂಡಾ ಮಾಡ್ತಿಲ್ಲ. ಆದ್ರೆ ಅನುಮತಿ ನೀಡೋಕೆ ಡೆಡ್ ಲೈನ್ ನೀಡಿದ್ರು

ಮತ್ತೊಮ್ಮೆ ಪರಿಶೀಲಿಸ್ತೀವಿ. ಕಾನೂನು ಕೋಶದ ಅಭಿಪ್ರಾಯ ಪಡೀತೀವಿ ಅಂತ ಬಿಬಿಎಂಪಿ ಕಾಲಾಹರಣ ಮಾಡುತ್ತಲೇ ಇದೆ. ಚಾಮರಾಜಪೇಟೆ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ ಆಚರಣೆಗೆ ಅವಕಾಶ ನೀಡಬೇಕು ಅಂತ ಹಿಂದೂ ಸನಾತನ ಪರಿಷತ್ ಬಿಬಿಎಂಪಿಗೆ ಮನವಿ ನೀಡಿತ್ತು. ಅದೇ ರೀತಿ ಶ್ರೀರಾಮ ಸೇನೆ ಕೂಡಾ ಹಿಂದೂ ಸಾಂಸ್ಕೃತಿಕ ಕಾರ್ಯಕ್ರಮಗಳು, ಧಾರ್ಮಿಕ ಕಾರ್ಯಕ್ರಮ ಗಳ ಜೊತೆ ಗಣೇಶೋತ್ಸವ ಕ್ಕೂ ಅವಕಾಶ ನೀಡಿ ಅದರ ಜೊತೆ ಯೋಗ ದಿನಾಚರಣೆಗೂ ಅವಕಾಶ ನೀಡಬೇಕು  ಅಂತ  ಇಂದು ಮಧ್ಯಾಹ್ನ 3 ಗಂಟೆಯ ಒಳಗೆ ನಿಲುವು ತಿಳಿಸಬೇಕೆಂದು ಕೋರಿ ಹಿಂದೂಪರ ಸಂಘಟನೆಗಳು ಬಿಬಿಎಂಪಿಗೆ ಡೆಡ್ಲೈನ್ ಕೊಟ್ಟಿದ್ವು

ಇದನ್ನೂ ಓದಿ: Murder Case: ಪತ್ನಿಯ ಸ್ನೇಹಿತೆ ಜೊತೆ ಅಫೇರ್; ಲಾಡ್ಜ್ಗೆ ಕರೆದೊಯ್ದು ಕೊಂದೇ ಬಿಟ್ಟ; ಹೆಂಡತಿಯೇ ಕೊಟ್ಲಾ 

ಆದ್ರೆ ಇಂದು ಅಂತಿಮ ತೀರ್ಮಾನ ತೆಗೆದು ಕೊಳ್ಳಬೇಕಿದ್ದ ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತರು. ಕಂದಾಯ ಇಲಾಖೆಯಲ್ಲಿ ದಾಖಲೆಗಳನ್ನ ಪರಿಶೀಲನೆಗೆ ಕಳಿಸಿದೀವಿ, ಅದೇ ರೀತಿ ಕಾನೂನು ಕೋಶದ ಒಪೀನಿಯನ್ ಕೂಡಾ ಕೇಳಿದೀವಿ. ಅದರ ಜೊತೆ ವಕ್ಫ್ ಬೋರ್ಡ್ಗೆ ದಾಖಲೆಗಳನ್ನ ಸಲ್ಲಿಸಲು ನೋಟಿಸ್ ನೀಡಲು ಒಂದು ವಾರಗಳ ಕಾಲ ಸಮಯಾವ ಕಾಯಬೇಕಿದೆ ಅಂತ ಕುಂಟು ನೆಪ ಹೇಳ್ತಿದಾ

2 ದಿನಗಳ ಕಾಲ ಮತ್ತೊಮ್ಮೆ ಡೆಡ್ ಲೈ

ಇನ್ನು  ಆಗಸ್ಟ್  15ರಂದು ಸ್ವಾತಂತ್ರ್ಯ ದಿನಾಚರಣೆಗೆ ಅವಕಾಶ ಕೋಡಬೇಕು ಎಂದು ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತರಿಗೆ ಮನವಿ ಮಾಡಲಾಗಿದೆ. ಈ ಸಂಬಂಧ ಜೂನ್ 7ರಂದು ಮನವಿ ಸಲ್ಲಿಸಿದ್ದರೂ ಈವರೆಗೆ ಪ್ರತಿಕ್ರಿಯೆ ನೀಡಿಲ್ಲ. ಅನುಮತಿ ಕೊಡುವುದು ಅಥವಾ ಇಲ್ಲ ಎನ್ನುವ ಬಗ್ಗೆ ಲಿಖಿತ ರೂಪದಲ್ಲಿ ಮಾಹಿತಿ ನೀಡಬೇಕು. ಸ್ವಾತಂತ್ರ್ಯ ದಿನಾಚರಣೆಗೆ ಅವಕಾಶ ಕೊಡದಿದ್ದರೆ, ನ್ಯಾಯಾಲಯದ ಮೊರೆ ಹೋಗುವುದಾಗಿ ವಿಶ್ವ ಸನಾತನ ಪರಿಷತ್ ಹಾಗೂ ಶ್ರೀರಾಮ ಸೇನೆ ಬಿಬಿಎಂಪಿಗೆ ಎರಡು ದಿನಗಳ ಕಾಲ ಮತ್ತೊಮ್ಮೆ ಡೆಡ್ ಲೈನ್ ನೀಡಿದೆ

ಇದನ್ನೂ ಓದಿ: Mysuru: ಟಾಟಾ ತೆಕ್ಕೆಗೆ ಪಾರಂಪರಿಕ ಲಲಿತಮಹಲ್ ಪ್ಯಾಲೇಸ್? ಖಾಸಗಿ ಒಡೆತನಕ್ಕೆ ಪಂಚತಾರಾ ಹೋಟೆ

ಸದ್ಯ ಚಾಮರಾಜಪೇಟೆ ಮೈದಾನ ದಿನದಿಂದ ದಿನಕ್ಕೆ  ಯುದ್ಧಭೂಮಿಯ ರೀತಿ ಮಾರ್ಪಡುತ್ತಿದೆ. ಅತ್ತ ವಕ್ಫ್ ಬೋರ್ಡ್ ನಮಗೆ ಸೇರುತ್ತೆ ಅಂತಿದ್ರೆ, ಇತ್ತ ಪಾಲಿಕೆ ಆಟದ ಮೈದಾನ ಎನ್ನುತ್ತಿದೆ. ಇದೆಲ್ಲದರ ನಡುವೆ ಹಿಂದೂಪರ ಸಂಘಟನೆಗಳು ಬಿಬಿಎಂಪಿಗೆ ಮತ್ತೊಂದು  ಡೆಡ್ ಲೈನ್ ಕೊಟ್ಟಿದ್ದು, ಅನುಮತಿ ಸಿಗದಿದ್ರೆ ಕೋರ್ಟ್ ಮೊರೆ ಹೋಗುವ ಲೆಕ್ಕಾಚಾರಗಳು ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಮೈದಾನದ ವಿವಾದ ಎಲ್ಲಿಗೆ ಹೋಗಿ ನಿಲ್ಲುತ್ತೋ ಅಂತ  ಕಾದು ನೋಡ್ಬೇಕಿದೆ.ಲ್?.ನ್ರೆ.ಸಾಥ್?..ಡ್ಬೇಕಿದೆ.

Post a Comment

Previous Post Next Post