ನೇಪಾಳದಲ್ಲಿ ವಿಮಾನ ಅಪಘಾತ : ೧೪ ಮೃತದೇಹಗಳು ಪತ್ತೆ, ಉಳಿದವರಿಗಾಗಿ ಶೋಧ.


 ಪೋಖರಾ - ಹಿಮಾಲಯದಲ್ಲಿ ೨೨ ಮಂದಿಯೊAದಿಗೆ ನಾಪತ್ತೆಯಾಗಿದ್ದು ಪ್ರಯಾಣಿಕ ವಿಮಾನದ ಅವಶೇಷಗಳಿಂದ ೧೪ ಮೃತದೇಹಗಳನ್ನು ನೇಪಾಳ ಸೇನಾ ಸಿಬ್ಬಂದಿ ಸೋಮವಾರ ಹೊರತೆಗೆದ್ದಾರೆ. 


ಭಾನುವಾರ ಬೆಳಿಗ್ಗೆ ಪಶ್ಚಿಮ ನೇಪಾಳದ ಪೊಖರಾದಿಂದ ಜನಪ್ರಿಯ ಟ್ರೆಕ್ಕಿಂಗ್ ತಾಣವಾದ ಜೋಮ್ಸಮ್‌ಗೆ ಹೊರಟ ಸ್ವಲ್ಪ ಸಮಯದಲ್ಲಿ ನೇಪಾಳದ ವಾಹನ ತಾರಾ ಏರ್ ನಿರ್ವಹಿಸುವ ಒಟ್ಟರ್ ವಿಮಾನದೊಂದಿಗೆ ಏರ್ ಟ್ರಾಫಿಕ್ ಕಂಟ್ರೋಲ್ ಸಂಪರ್ಕ ಕಂಟ್ರೋಲ್ ಸಂಪರ್ಕ ಕಳೆದುಕೊಂಡಿತು.

ಮಿಲಿಟರಿ ಮತ್ತು ಖಾಸಗಿ ಸಂಸ್ಥೆಗಳು ನಿರ್ವಹಿಸುವ ಹೆಲಿಕಾಪ್ಟೆರ್‌ಗಳು ನಿನ್ನೆ ಇಡೀ ದಿನ ದೂರದ ಪರ್ವತ ಪ್ರದೇಶವನ್ನು ಕಾಲ್ನಡಿಗೆಯಲ್ಲಿ ತಂಡದ ನೆರವಿನೊಂದಿಗೆ ಹುಡುಕಾಟ ನಡೆಸಿದವು, ಹವಾಮಾನದಿಂದಾಗಿ ಸಮುದ್ರ ಮಟ್ಟದಿಂದ ಸುಮಾರು ೩೮೦೦-೪೦೦೦ ಮೀಟರ್ ಎತ್ತರದಲ್ಲಿ ಕಾರ್ಯಾಚರಣೆಗೆ ಅಡ್ಡಿಯಾಯಿತು. 

ವಿಮಾನದಲ್ಲಿ ನಾಲ್ವರು ಭಾರತೀಯರು ಮತ್ತು ಇಬ್ಬರು ಜರ್ಮನ್ನರು, ಉಳಿದರು ನೇಪಾಳಿಗಳಾಗಿದ್ದಾರೆ. ವಿಮಾನ ಅಪಘಾತದ ಕಾರಣದ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ಮುಸ್ತಾಂಗ್ ಜಿಲ್ಲೆಯ ಥಾಸಾಂಗ್ ಗ್ರಾಮೀಣ ಪುರಸಭೆಯ ಸಾನೋಸ್‌ವೇರ್ ಪ್ರದೇಶದಲ್ಲಿ ೪,೪೨೦ ಮೀಟರ್ ಅಡಿ ಎತ್ತರದಲ್ಲಿ ವಿಮಾನವು ಅಪಘಾತಕ್ಕೀಡಾಗಿ ಪತನವಾಗಿದೆ ಎಂದು ನಾಗರಿಕ ವಿಮಾನಯಾನ ಪ್ರಾಧಿಕಾರ ದೃಢಪಡಿಸಿದೆ. ೧೪ ಮಂದಿಯ ಶವಗಳನ್ನು ಹೊರತೆಗೆಯಲಾಗಿದ್ದು ಉಳಿದವರಿಗಾಗಿ ಶೋಧಕಾರ್ಯ ಮುಂದುವರಿದಿದೆ ಎಂದು ವಿಮಾನಯಾನ ಪ್ರಾಧಿಕಾರದ ವಕ್ತಾರ ಡಿಯೊ ಚಂದ್ರ ಲಾಲ್ ಕರ್ನ್ ಎಎಫ್ ಪಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. 




Post a Comment

Previous Post Next Post