ಭಾರತದ ಚೆಸ್ ರಾಜಧಾನಿ ಚೆನ್ನೈ ನಲ್ಲಿ 44ನೇ ಒಲಿಂಪಿಯಾಡ್ ಚೆಸ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.
44ನೇ ಒಲಿಂಪಿಯಾಡ್ ಚೆಸ್ ಟೂರ್ನಿ ಜುಲೈ 26ರಿಂದ ಆಗಸ್ಟ್ 8ರವರೆಗೆ ರಷ್ಯಾದ ಮಾಸ್ಕೋದಲ್ಲಿ ನಡೆಯಬೇಕಿತ್ತು. ಆದರೆ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಿಂದಾಗಿ ಭಾರತದ ರಾಜಧಾನಿ ದೆಹಲಿ, ಗುಜರಾತ್ ಮತ್ತು ಚೆನ್ನೈ, ಈ 3 ನಗರಗಳಲ್ಲಿ ಯಾವುದಾದರೂ ಒಂದು ನಗರದಲ್ಲಿ ಒಲಿಂಪಿಯಾಡ್ ನಡೆಸಲು ಚರ್ಚೆ ಆರಂಭವಾಗಿತ್ತು.
- ಒಲಿಂಪಿಯಾಡ್ ಭಾರತದಲ್ಲಿ ಎರಡನೇ ಅತಿದೊಡ್ಡ ವಿಶ್ವ ಚೆಸ್ ಪಂದ್ಯಾವಳಿಯಾಗಿದೆ
- 2013ರಲ್ಲಿ ವಿಶ್ವನಾಥನ್ ಆನಂದ್ ಮತ್ತು ಮ್ಯಾಗ್ನಸ್ ಕಾರ್ಲ್‌ಸನ್ ನಡುವೆ ವಿಶ್ವ ಚಾಂಪಿಯನ್‌ಶಿಪ್ ಚೆಸ್ ಪಂದ್ಯ ಭಾರತದಲ್ಲಿ ನಡೆದಿತ್ತು
- ಒಲಿಂಪಿಯಾಡ್‌ನ ಆತಿಥೇಯರಾಗಿ ಆಯ್ಕೆಯಾಗಿರುವುದು ಭಾರತಕ್ಕೆ ಹೆಮ್ಮೆಯ ಕ್ಷಣ ಎಂದು ಚೆಸ್ ಆಟಗಾರ ವಿಶ್ವನಾಥನ್ ಆನಂದ್ ಹೇಳಿದ್ದಾರೆ.

Post a Comment