ಜ್ಯ ಸರ್ಕಾರ ಮಹತ್ವದ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ (Gruhalakshmi Yojana) ಸಾಕಷ್ಟು ಬಡವರಿಗೆ ಅನುಕೂಲ ಮಾಡಿಕೊಟ್ಟಿದೆ. ಆರಂಭದಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಜಮೆ ಆಗುತ್ತಿದ್ದ ಹಣ ಈಗ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದೆ. ಅಂದರೆ ವಿವಿಧ ಕಾರಣಕ್ಕೆ ಬರೋಬ್ಬರು ಮೂರು ತಿಂಗಳ ಹಣ ಜಮೆ ಮಾಡದೆ ಸರ್ಕಾರ ಬಾಕಿ ಉಳಿಸಿಕೊಂಡಿದೆ.
ಹೌದು, ಗ್ಯಾರಂಟಿ ಯೋಜನೆಗಳಲ್ಲಿ (Guarantee plan)ಹೆಚ್ಚು ಖರ್ಷು ಮಾಡುತ್ತಿರುವುದೇ ಈ ಗೃಹಲಕ್ಷ್ಮಿಯೋಜನೆಗೆ. ಅಲ್ಲದೆ ವಿವಿಧ ಯೋಜನೆಗಳ ದುಡ್ಡನ್ನೆಲ್ಲಾ ಇದಕ್ಕೆ ಹಾಕಲಾಗುತ್ತಿದೆ ಎಂಬ ಆರೋಪವನ್ನೂ ಸಹ ಬಿಜೆಪಿ ಮಾಡುತ್ತಿದೆ. ಇದರೊಂದಿಗೆ ಕೆಲವು ಕಡೆ ಈ ಯೋಜನೆಯನ್ನು ಕ್ಲೋಸ್ ಮಾಡಲಾಗಿದೆ ಎಂದೂ ಸಹ ಬಿಜೆಪಿಯವರು ಹೇಳುತ್ತಿದ್ದು, ಇದರಿಂದ ಸಾಮಾನ್ಯ ಜನರಿಗೆ ಗೊಂದಲ ಆಗಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಆಗಾಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಿಹಿ ಸುದ್ದಿ ನೀಡುತ್ತಿರುತ್ತಾರೆ.
ಕೆಲವು ಕಡೆ ಈ ಹಣ ಬಿಡುಗಡೆ ಆಗಿದ್ದು, ಇನ್ನೂ ಕೆಲವು ಕಡೆ ಮೂರು ತಿಂಗಳಿಂದ ಈ ಯೋಜನೆಯ ಹಣ ಮಹಿಳೆಯರ ಖಾತೆಗೆ ಜಮೆ ಆಗಿಲ್ಲ. ಪರಿಣಾಮ ಯಾವಗ ಹಣ ಹಾಕುತ್ತಾರೆ ಎಂದು ಕಾದು ಕುಳಿತಿದ್ದಾರೆ. ಈ ನಡುವೆ ದಸರಾ ಹಬ್ಬದ ಪ್ರಯುಕ್ತ 23ನೇ ಕಂತಿನ ಹಣ ಬಿಡುಗಡೆಯಾಗಿದೆ. ರಾಜ್ಯದ 1.24 ಕೋಟಿ ಫಲಾನುಭವಿಗಳಿಗೆ ಈ ಹಣ ತಲುಪಲಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ಮಹಿಳೆಯರಿಗೆ ಸಾಲ ಸೌಲಭ್ಯ ಒದಗಿಸಲು ಗೃಹಲಕ್ಷ್ಮಿ ಸಹಕಾರ ಸಂಘ ಸ್ಥಾಪನೆಗೆ ಚಿಂತನೆ ನಡೆಸಲಾಗುತ್ತಿದೆ ಎಂದೂ ಸಹ ಅವರು ತಿಳಿಸಿದ್ದಾರೆ.
ದಸರಾ ಹಬ್ಬದ ಸಂಭ್ರಮಕ್ಕೆ ಅನುಕೂಲವಾಗಲಿ ಎಂದು ಮೂರು ದಿನದ ಹಿಂದೆ 23ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಅದಾಗ್ಯೂ 24 ನೇ ಕಂತಿನ ಆಗಸ್ಟ್ ತಿಂಗಳ ಹಣ ಬಾಕಿ ಇದ್ದು, ಅದನ್ನೂ ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಈಗಾಗಲೇ ಆರ್ಥಿಕ ಇಲಾಖೆಯಿಂದ ಜಿಲ್ಲಾ ಖಜಾನೆಗಳಿಗೆ ಹಣ ವರ್ಗಾವಣೆಯಾಗಿದೆ. ಕೆಲವೇ ದಿನಗಳಲ್ಲಿ ಎಲ್ಲರ ಖಾತೆಗೂ ಹಣ ಜಮೆ ಆಗಲಿದೆ ಎಂದು ಹೇಳಿದರು.
ಈ ವರೆಗೆ ಜಮೆ ಮಾಡಲಾದ ಹಣ ಎಷ್ಟು?
ಈವರೆಗೆ ಒಟ್ಟು 23 ಕಂತುಗಳ ಹಣವನ್ನು ಪಾವತಿ ಮಾಡಲಾಗಿದ್ದು, ಯೋಜನೆ ಆರಂಭವಾದ ಇಲ್ಲಿಯವರೆಗೂ ಪ್ರತಿ ತಿಂಗಳು 2 ಸಾವಿರದಂತೆ ಪ್ರತಿಯೊಬ್ಬ ಫಲಾನುಭವಿಗೂ 46 ಸಾವಿರ ರೂ. ಜಮೆ ಆಗಿದೆ.ಕೆಲವರು ಅಷ್ಟೂ ಹಣವನ್ನು ಕೂಡಿಟ್ಟು ಮನೆ ಕಟ್ಟಿಸಿಕೊಂಡಿದ್ದಾರೆ, ಆಂಗಡಿ ಹಾಕಿಕೊಂಡಿದ್ದಾರೆ, ಮತ್ತೋರ್ವರು ಮೇಕೆ ಖರೀದಿ ಮಾಡಿದ್ದಾರೆ. ಹೀಗೆ ಈ ಹಣವನ್ನು ಜನರು ಉತ್ತಮವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭ
ಇದೇ ಸಮಯದಲ್ಲಿ ಸಚಿವೆ ಮಾಹಿತಿ ನೀಡಿ, ಐಸಿಡಿಎಸ್ ವ್ಯಾಪ್ತಿಗೆ ಬರುವ ಅಂಗನವಾಡಿ ಕೇಂದ್ರ ಆರಂಭವಾಗಿ ಐವತ್ತು ವರ್ಷ ಆಗಿದ್ದು, ಸುವರ್ಣ ಮಹೋತ್ಸವ ಕಾರ್ಯಕ್ರಮ ಮಾಡಲು ಚಿಂತನೆ ನಡೆಸಲಾಗಿದೆ. ಅಲ್ಲದೆ ಎಲ್‌ಕೆಜಿ,ಯುಕೆಜಿ ಆರಂಭಿಸುವ ಮೂಲಕ ಅಂಗನವಾಡಿಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಕೆಲಸ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
Post a Comment