ಮೊಟ್ಟೆ & ಚಿಕನ್ ಬೆಲೆ ಭರ್ಜರಿ ಇಳಿಕೆ: ಮದ್ಯ ಮಾರಾಟವೂ ಕುಸಿತ!


 ಜ್ಯದಲ್ಲಿ ಏಕಾಏಕಿ ಮೊಟ್ಟೆ ಹಾಗೂ ಚಿಕನ್ ಬೆಲೆ ಇಳಿಕೆಯಾಗಿದೆ. ವಿವಿಧ ಕಾರಣಗಳಿಗೆ ಮೊಟ್ಟೆ ಹಾಗೂ ಚಿಕನ್ ಬೆಲೆ ಭರ್ಜರಿ ಇಳಿಕೆಯಾಗಿದ್ದು ನಾನ್‌ವೆಜ್ ಪ್ರಿಯರಿಗೆ ಖುಷಿ ನೀಡಿದೆ. ಆದರೆ ಎಲ್ಲಾ ನಾನ್‌ವೆಜ್ ಪ್ರಿಯರು ಈ ಬೆಲೆ ಇಳಿಕೆಯಿಂದ ತುಂಬಾ ಖುಷಿಯಾದಂತೆ ಕಾಣುತ್ತಿಲ್ಲ.

 ಯಾವ ಕಾರಣಕ್ಕೆ ಮೊಟ್ಟೆ ಹಾಗೂ ಚಿಕನ್ ಬೆಲೆ ಇಳಿಕೆಯಾಗಿದೆ. ನಾನ್‌ವೆಜ್ ಪ್ರಿಯರು ಏನು ಹೇಳುತ್ತಿದ್ದಾರೆ ಎನ್ನುವ ವಿವರ ಇಲ್ಲಿದೆ.


ಶ್ರಾವಣ ಮಾಸ ಹಾಗೂ ವಿವಿಧ ಧಾರ್ಮಿ ಕಾರ್ಯಕ್ರಮಗಳು, ಪೂಜೆ ಹಿನ್ನೆಲೆಯಲ್ಲಿ ಕರ್ನಾಟಕದಾದ್ಯಂತ ಮೊಟ್ಟೆ ಮತ್ತು ಚಿಕನ್ ಬೆಲೆಯು ಭರ್ಜರಿ ಇಳಿಕೆ ಕಂಡಿದೆ. ಈ ತಿಂಗಳಿನಲ್ಲಿ ಕೆಲವರು ನಾನ್‌ವೆಜ್ ಸೇವನೆ ಮಾಡುವುದಿಲ್ಲ. ಮೊಟ್ಟೆ ಅಥವಾ ಚಿಕನ್ ಸೇವಿಸುವುದಿಲ್ಲ. ಈ ಕಾರಣಗಳಿಗೆ ಮೊಟ್ಟೆ ಹಾಗೂ ಚಿಕನ್ ಬೆಲೆ ಭರ್ಜರಿ ಇಳಿಕೆ ಕಂಡಿದೆ. ಆದರೆ ಈಗಾಗಲೇ ಹೇಳಿದಂತೆ ಇದು ಎಲ್ಲಾ ನಾನ್‌ವೆಜ್ ಪ್ರಿಯರಲ್ಲೂ ಸಂತೋಷವನ್ನುಂಟು ಮಾಡಿಲ್ಲ.'


ಕಳೆದ ತಿಂಗಳು ಸಗಟು ದರ 100 ಮೊಟ್ಟೆಗಳಿಗೆ 620 ರೂಪಾಯಿಯ ಆಸುಪಾಸಿನಲ್ಲಿತ್ತು. ಆದರೆ ಇದೀಗ 485ಕ್ಕೆ ಕಡಿಮೆ ಆಗಿದೆ. ಒಂದೇ ತಿಂಗಳ ಅವಧಿಯಲ್ಲಿ ಮೊಟ್ಟೆ ಬೆಲೆಯು 135 ರೂಪಾಯಿ ಕಡಿಮೆ ಆಗಿದೆ. ಪ್ರತಿ ವರ್ಷವು ಈ ಅವಧಿಯಲ್ಲಿ ಮೊಟ್ಟೆ ಹಾಗೂ ಚಿಕನ್ ಬೆಲೆ ಇಳಿಕೆಯಾಗುವುದು ಇದೆ. ಕರ್ನಾಟಕದಿಂದ ಮೊಟ್ಟೆ ಹೊರ ರಾಜ್ಯಗಳಿಗೆ ರಫ್ತು ಆಗುವುದೂ ಇದೆ. ಆದರೆ, ಈ ಬಾರಿ ಹೊರ ರಾಜ್ಯಗಳಲ್ಲೂ ಮೊಟ್ಟೆ ಬೇಡಿಕೆ ಕುಸಿತ ಕಂಡಿದ್ದು ರಾಜ್ಯದಲ್ಲಿ ಬೆಲೆ ಇಳಿಕೆಗೆ ಕಾರಣವಾಗಿದೆ ಎಂದು ಹೇಳಲಾಗಿದೆ.

ಚಿಕನ್ ಬೆಲೆ ಅಲ್ಪ ಇಳಿಕೆ: ಮೊಟ್ಟೆ ಬೆಲೆಯಲ್ಲಿ ಭರ್ಜರಿ ಇಳಿಕೆ ಕಂಡಿದೆಯಾದರೂ ಚಿಕನ್ ಬೆಲೆಯಲ್ಲಿ ಅಲ್ಪ ಪ್ರಮಾಣದ ಇಳಿಕೆ ಮಾತ್ರವಾಗಿದೆ. ಚಿಕನ್‌ನ ಬೆಲೆಯಲ್ಲಿ ಒಂದು ಕೆ.ಜಿಗೆ ಹಲವೆಡೆ 10 ರೂಪಾಯಿಯಿಂದ 30 ರೂಪಾಯಿ ಕಡಿಮೆ ಆಗಿದೆ. ಕೆಲವು ಕಡೆ ಚಿಲ್ಲರೆ ವ್ಯಾಪಾರಿಗಳು ಲಾಭವನ್ನು ಗ್ರಾಹಕರಿಗೆ ಕೊಡುತ್ತಿಲ್ಲ. ಮೊಟ್ಟೆ ಹಾಗೂ ಚಿಕನ್ ಬೆಲೆಯಿಂದ ಲಾಭ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಆರೋಪವೂ ಇದೆ. ಮೊಟ್ಟೆ ಬೆಲೆ ಈಗಲೂ ಹಲವು ಭಾಗಗಳಲ್ಲಿ 6.50 ಪೈಸೆ ಇದೆ. ಇನ್ನುಳಿದಂತೆ ಬಹುತೇಕ ಪ್ರದೇಶಗಳಲ್ಲಿ ಚಿನ್ನದ ಬೆಲೆ ಇಳಿಕೆ ಆಗಿದೆ.


ಮದ್ಯ ಬೇಡಿಕೆಯೂ ಕುಸಿತ: ಇನ್ನು ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಇದರ ಬಿಸಿ ಅಬಕಾರಿ ಇಲಾಖೆಗೂ ಮುಟ್ಟಿದೆ. ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಮದ್ಯ ಖರೀದಿ ಹಾಗೂ ಮಾರಾಟವೂ ಅಲ್ಪ ಪ್ರಮಾಣದಲ್ಲಿ ಕುಸಿತ ಕಂಡಿದೆ. ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಮದ್ಯ ಹಾಗೂ ನಾನ್‌ವೆಜ್ ಸೇವನೆಯನ್ನು ಹಲವರು ಮಾಡುವುದಿಲ್ಲ. ಮದ್ಯ ಹಾಗೂ ನಾನ್‌ವೆಜ್ ಒಂದಕ್ಕೊಂದು ಕನೆಕ್ಟ್‌ ಇದೆ. ಈ ಕಾರಣಕ್ಕೆ ಮದ್ಯ ಮಾರಾಟದಲ್ಲೂ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ.

Post a Comment

Previous Post Next Post