ಷಿಂಗ್ಟನ್: ಭಾರತದ ವಿರುದ್ಧ ಶೇ. 25 ಸುಂಕ ಹೇರಿದ ಬೆನ್ನಲ್ಲೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ ಮತ್ತು ರಷ್ಯಾ ವಿರುದ್ಧ ತಮ್ಮ ಟೀಕಾಪ್ರಹಾರ ಮುಂದುವರಿಸಿ ದ್ದಾರೆ. ಈ ಎರಡೂ ದೇಶಗಳ ನೆಲಕಚ್ಚಿದ ಆರ್ಥಿಕತೆ (ಡೆಡ್ ಎಕಾನಮಿ)
ಗಳು ಒಟ್ಟಿಗೆ ಸೇರಿ ನಾಶವಾಗಲಿ ಎಂದು ಅವರುಶಾಪ ಹಾಕಿದ್ದಾರೆ.
ರಷ್ಯಾದಿಂದ ತೈಲ ಮತ್ತು ರಕ್ಷಣ ಉತ್ಪನ್ನಗಳನ್ನು ಖರೀದಿ ಮಾಡು ತ್ತಿರುವ ಭಾರತಕ್ಕೆ ಭಾರೀ ಸುಂಕದ ಜತೆಗೆ ಹೆಚ್ಚುವರಿ ದಂಡವನ್ನೂ ವಿಧಿ ಸುವುದಾಗಿ ಹೇಳಿದ್ದಾರೆ.
"ರಷ್ಯಾದೊಂದಿಗೆ ಭಾರತ ಏನು ಮಾಡುತ್ತದೆ ಎಂಬ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಅವರು (ಭಾರತ, ರಷ್ಯಾ) ತಮ್ಮ ಆರ್ಥಿಕತೆಯನ್ನು ನಾಶ ಮಾಡಿ ಕೊಳ್ಳುತ್ತಾರೆ' ಎಂದು ಟ್ರಂಪ್ ಹೇಳಿ ದ್ದಾರೆ. ನಾವು ಭಾರತದೊಂದಿಗೆ ಸ್ವಲ್ಪವೇ ವ್ಯಾಪಾರ ಮಾಡುತ್ತೇವೆ, ಆದರೆ ಅವರ ಸುಂಕ ಭಾರೀ ಪ್ರಮಾಣದಲ್ಲಿದೆ. ಇದು ಜಗತ್ತಿನಲ್ಲೇ ಅತೀ ಹೆಚ್ಚು ಎಂದು ಟ್ರಂಪ್ ದೂರಿದರು.
ಭಾರತದ ವ್ಯಾಪಾರಿ ನೀತಿಗಳು ಅತ್ಯಂತ ಕಠಿನ ಮತ್ತು ಅಸಹ್ಯ ಕರವಾಗಿವೆ. ಎಲ್ಲವೂ ಸರಿಯಾಗಿಲ್ಲ. ಅದಕ್ಕಾಗಿಯೇ ಭಾರತವು ಶೇ. 25 ಸುಂಕವನ್ನು ಎದುರಿಸಬೇಕಾಗಿದೆ, ಜತೆಗೆ ದಂಡ ಕೂಡ ಎಂದಿದ್ದಾರೆ.
ಟ್ರಂಪ್ ಸಿಟ್ಟೇಕೆ?
ಭಾರತ ಜತೆಗೆ ಅಮೆರಿಕದ ವ್ಯಾಪಾರ ಒಪ್ಪಂದದಲ್ಲಿ ಕಾಣದ ನಿರೀಕ್ಷಿತ ಪ್ರಗತಿ.
ಅಮೆರಿಕದ ಒತ್ತಡಕ್ಕೆ ಮಣಿಯದ ಭಾರತ, ಅಧ್ಯಕ್ಷ ಟ್ರಂಪ್‌ಗೆ ಹತಾಶೆ.
ಅಮೆರಿಕದ ಎಚ್ಚರಿಕೆಯ ಹೊರತಾಗಿಯೂ ರಷ್ಯಾದಿಂದ ತೈಲ ಖರೀದಿ.
ಸಾಕಷ್ಟು ವಿಷಯಗಳಲ್ಲಿ ಅಮೆರಿಕ-ಭಾರತದ ಮಧ್ಯೆ ಮೂಡದ ಒಮ್ಮತ?
ಪಾಕ್ ಜತೆ ಅಮೆರಿಕ ತೈಲ ವ್ಯಾಪಾರ ಒಪ್ಪಂದ!
ಪಾಕ್‌ನ ಬೃಹತ್ ತೈಲ ನಿಕ್ಷೇಪ ಅಭಿವೃದ್ಧಿ ವಾಗ್ಧಾನ
ಇಸ್ಲಾಮಾಬಾದ್:ಭಾರತದ ಮೇಲೆ ಸುಂಕ ಪ್ರಹಾರ ನಡೆಸಿ, ಕಿಡಿಕಾರಿದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅತ್ತ ಪಾಕಿಸ್ಥಾನದೊಂದಿಗೆ ವ್ಯಾಪಾರ ಒಪ್ಪಂದ ಘೋಷಿಸಿದ್ದಾರೆ. ಪಾಕಿಸ್ಥಾನದಲ್ಲಿರುವ ತೈಲ ನಿಕ್ಷೇಪಗಳನ್ನು ಅಭಿವೃದ್ಧಿಪಡಿಸಲು ಅಮೆರಿಕವು ಪಾಕಿಸ್ಥಾನದ ಜತೆಗೂಡಿ ಕೆಲಸ ಮಾಡಲಿದೆ ಎಂದು ಗುರುವಾರ ಟ್ರಂಪ್ ಹೇಳಿದ್ದಾರೆ.
ಆದರೆ ಟ್ರಂಪ್ ಉಲ್ಲೇಖೀಸು ತ್ತಿರುವ ಪಾಕಿಸ್ಥಾನದ ಬೃಹತ್ ತೈಲ ನಿಕ್ಷೇಪಗಳು ಯಾವುವು ಎಂಬ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಈ ಮಾಹಿತಿ ಹಂಚಿಕೊಂಡಿರುವ ಟ್ರಂಪ್, ಪಾಕ್ ಜತೆಗೆ ಈಗಷ್ಟೇ ನಾವು ವ್ಯಾಪಾರ ಒಪ್ಪಂದ ಪೂರ್ಣ ಗೊಳಿಸಿದ್ದೇವೆ. ಅವರ ತೈಲ ನಿಕ್ಷೇಪಗಳ ಅಭಿವೃದ್ಧಿಗಾಗಿ ಜಂಟಿ ಪಾಲು ದಾರಿಕೆಯನ್ನು ಮುನ್ನಡೆಸಬಲ್ಲಂಥ ತೈಲ ಕಂಪೆನಿಯನ್ನು ನಾವು ಆಯ್ಕೆ ಮಾಡುತ್ತಿದ್ದೇವೆ. ಯಾರಿಗೆ ಗೊತ್ತು, ಮುಂದೊಂದು ದಿನ ಪಾಕಿಸ್ಥಾನವೇ ಭಾರತಕ್ಕೆ ತೈಲವನ್ನು ಮಾರಾಟ ಮಾಡಬಹುದು ಎಂದಿದ್ದಾರೆ.
ಇದರ ಬೆನ್ನಲ್ಲೇ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಪ್ರತಿಕ್ರಿಯಿಸಿ, ನಮ್ಮ ಜತೆ ವ್ಯಾಪಾರ ಒಪ್ಪಂದ ಮಾಡಿಕೊಂಡ ಟ್ರಂಪ್‌ಗೆ ಧನ್ಯವಾದಗಳು. ಇದೊಂದು ಐತಿಹಾಸಿಕ ಒಪ್ಪಂದ. ಇದು ಎರಡೂ ದೇಶಗಳ ನಡುವಿನ ಸಹಕಾರವನ್ನು ಮತ್ತಷ್ಟು ವಿಸ್ತರಿಸಲು ನೆರವಾಗಲಿದೆ ಎಂದಿದ್ದಾರೆ. ಪಾಕ್ ಹಿಂದಿನಿಂದಲೂ ತನ್ನ ಕರಾವಳಿಯಲ್ಲಿ ಭಾರೀ ತೈಲ ನಿಕ್ಷೇಪಗಳಿವೆ ಎಂದು ಹೇಳುತ್ತಿದೆ.
ಭಾರತಕ್ಕೆ ಆತಂಕ ಏಕೆ?
ಮತ್ತೆ ಪಾಕಿಸ್ಥಾನದತ್ತಲೇ ವಾಲುತ್ತಿರುವ ಅಮೆರಿಕ ವಿದೇಶಾಂಗ ನೀತಿ.
ಪಾಕ್‌ನಲ್ಲಿ ತೈಲ ನಿಕ್ಷೇಪ ಅಭಿವೃದ್ಧಿಪಡಿಸಿದರೆ ಭಾರತಕ್ಕೆ ಖರೀದಿಗೆ ಒತ್ತಡ?
ತೈಲ ನಿಕ್ಷೇಪ ಅಭಿವೃದ್ಧಿ ನೆಪ ದಲ್ಲಿ ಪಾಕ್‌ನಲ್ಲಿ ಅಮೆರಿಕ ನೆಲೆ ಸ್ಥಾಪನೆ ಸಾಧ್ಯತೆ.
ಅಮೆರಿಕದ ನೆರವನ್ನು ಪಾಕಿಸ್ಥಾನ ಮತ್ತೆ ಭಾರತದ ವಿರುದ್ಧವೇ ಬಳಸಬಹುದು.
Post a Comment