ಗಳೂರು, ಜುಲೈ 01: ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆಯಾಗಲಿದೆ ಎಂದು ರಾಜ್ಯ ಪಾಳಯದಲ್ಲಿ ಕೇಳಿ ಬರುತ್ತಿದೆ. ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ ಎಂದು ಕೆ ಎನ್ ರಾಜಣ್ಣ ಅವರು ಹೇಳಿಕೆ ಕೈ ಪಡೆಯಲ್ಲಿ ತೀವ್ರ ಸಂಚಲನವನ್ನ ಸೃಷ್ಟಿಸಿದ್ದು, ಸಂಪುಟ ಪುನಾರಚನೆಯಾಗುವ ಕುರಿತು ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.
ಸದ್ಯ ಕಾಂಗ್ರೆಸ್ ಪಾಳಯದಲ್ಲಿ ಕಳೆದ ವರ್ಷದಿಂದ ಮುಖ್ಯಮಂತ್ರಿ ಬದಲಾವಣೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿದ್ದು, ಸೆಪ್ಟಂಬರ್ ನಲ್ಲಿ ಕ್ರಾಂತಿಯಾಗಲಿದೆ ಎಂದು ಸಚಿವ ಕೆಎನ್ ರಾಜಣ್ಣ ಹಾಕಿರುವ ಬಾಂಬ್ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಮಾಡಿದೆ. ಇನ್ನು, ಕೆ ಎನ್ ರಾಜಣ್ಣ ಅವರ ಹೇಳಿಕೆಯ ಹಿಂದೆ ಹಲವು ಲೆಕ್ಕಾಚಾರವಿದೆ ಎಂಬ ಮಾತುಗಳು ಕೇಳಿ ಬಂದಿವೆ. ಇನ್ನು ರಾಜಣ್ಣ ಅವರ ಹೇಳಿಕೆಯ ಕುರಿತು ಕೈ ಪಾಳಯದಲ್ಲಿ ಹಲವು ರೀತಿಯಲ್ಲಿ ಚರ್ಚೆಗಳು ಶುರುವಾಗಿದೆ. ಇದಕ್ಕೆ ಪೂರಕವಾಗಿ ಕಾಂಗ್ರೆಸ್ ಹೈಕಮಾಂಡ್ ಸಂಪುಟ ಪುನಾರಚನೆಗೆ ಕೈಹಾಕಿದೆ ಅನ್ನೋದು ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ.
ರಾಜಣ್ಣ ಅವರ ಹೇಳಿಕೆಯಂತೆ ಸೆಪ್ಟಂಬರ್ ಕೊನೆಯ ವಾರ ಇಲ್ಲವೇ ಅಕ್ಟೋಬರ್ ಮೊದಲ ವಾರದಲ್ಲೇ ಸಂಪುಟ ಪುನಾರಚನೆಗೆ ಹೈಕಮಾಂಡ್ ನಿರ್ಧರಿಸಿದೆ ಎನ್ನುವ ಸ್ಪೋಟಕ ಮಾಹಿತಿ ಇದೀಗ ಹೊರಬಿದ್ದಿದೆ. ಅಷ್ಟಕ್ಕೂ ಸಂಪುಟ ಪುನಾರಚನೆ ಆದರೆ, ಸಿದ್ದರಾಮಯ್ಯ ಬಣದವರಿಗೆ ಹಾಗೂ ಡಿ ಕೆ ಶಿವಕುಮಾರ್ ಬಣದವರಿಗೆ ಕೊಕ್ ಕೊಡ್ತಾರಾ? ಯಾರನ್ನು ಸಚಿವ ಸಂಪುಟದಿಂದ ಕೈಬಿಡಲಾಗುತ್ತದೆ, ಯಾರನ್ನು ಸೇರ್ಪಡೆ ಮಾಡಲಾಗುತ್ತದೆ ಎಂಬುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಗಿದ್ದು, ಸಿದ್ದರಾಮಯ್ಯ ಸಂಪುಟ ರಚನೆಯಾದ ದಿನದಿಂದಲೂ ಮಂತ್ರಿ ಪದವಿ ಕಳೆದು ಕೊಂಡ ಅಸಮಾಧಾನಿತರ ಸಂಖ್ಯೆ ಕೈ ಪಾಳಯದಲ್ಲಿ ಹೆಚ್ಚಾಗಿತ್ತು. ಇದೀಗ ರಾಜಣ್ಣ ಅವರ ಹೇಳಿಕೆಯ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ ಶೀಘ್ರದಲ್ಲೇ ಎಂಬ ಚರ್ಚೆಗಳು ಕೇಳಿ ಬಂದಿದೆ. ಕಳೆದ ತಿಂಗಳಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಹೈಕಮಾಂಡ್ ನಾಯಕರನ್ನ ಭೇಟಿ ಮಾಡಿದ್ದು, ಸಚಿವ ಸಂಪುಟ ಪುನಾರಚನೆಗೆ ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನೂ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಹಲವು ಹಗರಣಗಳು ಕೇಳಿಬಂದಿದ್ದು, ಅಲ್ಲದೇ ಸರ್ಕಾರ ಹಾಗೂ ಸಚಿವರ ವಿರುದ್ಧ ಶಾಸಕರ ಅಸಮಾಧಾನ ಇದೀಗ ಹೆಚ್ಚಾಗಿದ್ದು, ಬಹಿರಂಗವಾಗಿಯೇ ಸರ್ಕಾರದ ವಿರುದ್ಧ ಕಾಂಗ್ರೆಸ್‌ನ ಹಿರಿಯ ಶಾಸಕರು ಅಸಮಾಧಾನವನ್ನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸಂಪುಟ ಪುನಾರಚನೆಗೆ ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ ಎಂಬ ಮಾಹಿತಿ ಹೊರಬಿದ್ದಿವೆ. ಇನ್ನೂ ಅಳೆದು ತೂಗಿ ಈ ಬಾರೀ ಸಚಿವ ಸಂಪುಟ ಪುನಾರಚನೆಯನ್ನ ಹೈಕಮಾಂಡ್ ಮಾಡಲಿದೆ. ಆದರೆ, ಸಂಪುಟದಿಂದ ಯಾರನ್ನ ಕೈ ಬಿಡುತ್ತಾರೆ ಹಾಗೂ ಯಾರನ್ನು ಸೇರ್ಪಡೆ ಮಾಡುತ್ತಾರೆ ಎಂಬುದು ತೀವ್ರ ಕುತೂಹಲ ಹೆಚ್ಚಿಸಿದೆ.
ಸಂಪುಟದಿಂದ ಯಾರನ್ನ ಕೈಬಿಡಬಹುದು?
ಕೆ.ಹೆಚ್.ಮುನಿಯಪ್ಪ
ರಹೀಂಖಾನ್
ಶರಣಬಸಪ್ಪ ದರ್ಶನಾಪೂರ
ಡಿ.ಸುಧಾಕರ್
ಮಂಕಾಳವೈದ್ಯ
ಕೆ.ಎನ್.ರಾಜಣ್ಣ
ಕೆ.ವೆಂಕಟೇಶ್
ಶಿವಾನಂದಪಾಟೀಲ್
ಲಕ್ಷ್ಮೀ ಹೆಬ್ಬಾಳ್ಕರ್
ಬೈರತಿಸುರೇಶ್
ಆರ್.ಬಿ.ತಿಮ್ಮಾಪೂರ
ಯಾರಿಗೆ ಸಿಗಲಿದೆ ಮಂತ್ರಿ ಪಟ್ಟ?
ಬಿ.ಕೆ.ಹರಿಪ್ರಸಾದ್
ಆರ್ ವಿ ದೇಶಪಾಂಡೆ
ಅಪ್ಪಾಜಿನಾಡಗೌಡ
ಶಿವಲಿಂಗೇಗೌಡ
ಲಕ್ಷ್ಮಣಸವದಿ
ರೂಪಾಶಶಿಧರ್
ಪ್ರಸಾದ್ ಅಬ್ಬಯ್ಯ
ಮಳವಳ್ಳಿ ನರೇಂದ್ರಸ್ವಾಮಿ
ಅಜಯ್ ಸಿಂಗ್
ಯು.ಟಿ.ಖಾದರ್
ಬಿ.ನಾಗೇಂದ್ರ
ಬಂಗಾರಪೇಟೆ ನಾರಾಯಣಸ್ವಾಮಿ
ಮಾಗಡಿ ಬಾಲಕೃಷ್ಣ
ಬೇಳೂರು ಗೋಪಾಲಕೃಷ್ಣ
ತಿಪಟೂರು ಷಡಕ್ಷರಿ
ಟಿ.ಬಿ.ಜಯಚಂದ್ರ
ಬಿ.ಆರ್.ಪಾಟೀಲ್
Post a Comment