ಉತ್ತರಾಧಿಕಾರಿಯನ್ನು ನಾವೇ ಆಯ್ಕೆ ಮಾಡುತ್ತೇವೆ; ದಲೈ ಲಾಮಾಗೆ ಚೀನಾ ಚಾಟಿ


 ವದೆಹಲಿ, ಜುಲೈ 2: ದಲೈ ಲಾಮಾ (Dalai Lama) ಅವರ ಉತ್ತರಾಧಿಕಾರಿಯನ್ನು “ಚೀನಾ ಸರ್ಕಾರವು ಅನುಮೋದಿಸಬೇಕು” ಎಂದು ಚೀನಾ ಹೇಳಿದೆ. ಟಿಬೆಟಿಯನ್ ಆಧ್ಯಾತ್ಮಿಕ ನಾಯಕನ ಮರಣದ ನಂತರ ಅವರೇ ಪುನರ್ಜನ್ಮ ಪಡೆಯುತ್ತಾರೆ, ಅವರೇ ಉತ್ತರಾಧಿಕಾರಿ ಆಗುತ್ತಾರೆ ಎಂದು ದಲೈ ಲಾಮಾ ಹೇಳಿದ್ದರು. ಅದಕ್ಕೆ ಚೀನಾ ಪ್ರತಿಕ್ರಿಯಿಸಿದೆ. 14ನೇ ದಲೈ ಲಾಮಾಟೆನ್ಜಿನ್ ಗ್ಯಾಟ್ಸೊ ಅವರು 1959ರಲ್ಲಿ ಲಾಸಾದಿಂದ ಪಲಾಯನ ಮಾಡುವಾಗ 23 ವರ್ಷ ವಯಸ್ಸಿನವರಾಗಿದ್ದರು. ಚೀನಾದ ಪಡೆಗಳು ಟಿಬೆಟ್ ಅನ್ನು ಹಿಡಿತಕ್ಕೆ ತೆಗೆದುಕೊಂಡಾಗ ಜೀವಕ್ಕೆ ಭಯಪಡುತ್ತಾರೆ.


ದಲೈ ಲಾಮಾ ಅವರ ಉತ್ತರಾಧಿಕಾರಿಗೆ "ಚೀನೀ ಸರ್ಕಾರದ ಅನುಮೋದನೆ" ಇರಬೇಕು ಎಂದು ಚೀನಾ ಇಂದು ಪುನರುಚ್ಚರಿಸಿತು. ದಲೈ ಲಾಮಾ ಅವರ ಉತ್ತರಾಧಿಕಾರಿಯ ಬಗ್ಗೆ ಚೀನಾ ಸರ್ಕಾರ ತನ್ನ ಹಕ್ಕನ್ನು ಪುನರುಚ್ಚರಿಸಿದೆ. 15ನೇ ದಲೈ ಲಾಮಾ ಅವರನ್ನು ಕ್ವಿಂಗ್ ರಾಜವಂಶದ ಯುಗದ "ಗೋಲ್ಡನ್ ಅರ್ನ್" (ಚಿನ್ನದ ಪಾತ್ರೆ) ವಿಧಾನದ ಮೂಲಕ ಆಯ್ಕೆ ಮಾಡಬೇಕು. ಅದನ್ನು ಬೀಜಿಂಗ್ ಅನುಮೋದಿಸಬೇಕು ಎಂದು ಹೇಳಿದೆ.


ನೊಬೆಲ್ ಶಾಂತಿ ಪ್ರಶಸ್ತಿ ವಿಜೇತರು ತಮ್ಮ ಸಾಂಸ್ಕೃತಿಕ ಗುರುತನ್ನು ಕಾಪಾಡಿಕೊಳ್ಳಲು ಟಿಬೆಟಿಯನ್ನರ ಹೋರಾಟದ ಶಾಂತಿ ಮತ್ತು ಅಹಿಂಸೆಯ ಪ್ರಮುಖ ಸಂಕೇತವಾಗಿದ್ದಾರೆ. ಇಂದು ದಲೈ ಲಾಮಾ ಅವರು ಮಾತನಾಡುವಾಗ, 600 ವರ್ಷಗಳಷ್ಟು ಹಳೆಯದಾದ ಧಾರ್ಮಿಕ ಸಂಪ್ರದಾಯವು ಮುಂದುವರಿಯುತ್ತದೆ ಎಂದು ಪುನರುಚ್ಚರಿಸಿದ್ದರು. ಇದು ಅವರ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ನಾಯಕತ್ವದ ಭವಿಷ್ಯದ ಬಗ್ಗೆ ಕಾಳಜಿ ವಹಿಸುವ ಅನೇಕ ಟಿಬೆಟಿಯನ್ನರಿಗೆ ಧೈರ್ಯ ತುಂಬಿತು. ಪ್ರಸ್ತುತ ದಲೈ ಲಾಮಾ ಅವರನ್ನು ಪ್ರತ್ಯೇಕತಾವಾದಿ ಎಂದು ಪರಿಗಣಿಸುವ ಚೀನಾ, ಬೀಜಿಂಗ್ ಮಾತ್ರ ಅವರ ಉತ್ತರಾಧಿಕಾರಿ ಯಾರೆಂದು ನಿರ್ಧರಿಸುವ ಅಧಿಕಾರವನ್ನು ಹೊಂದಿದೆ ಎಂದು ಪ್ರತಿಪಾದಿಸಿದೆ.


“ದಲೈ ಲಾಮಾ, ಪಂಚೆನ್ ಲಾಮಾ ಮತ್ತು ಇತರ ಮಹಾನ್ ಬೌದ್ಧ ವ್ಯಕ್ತಿಗಳ ಪುನರ್ಜನ್ಮವನ್ನು ಚಿನ್ನದ ಪಾತ್ರೆಯಿಂದ ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಬೇಕು. ಅದನ್ನು ಕೇಂದ್ರ ಸರ್ಕಾರ ಅನುಮೋದಿಸಬೇಕು” ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್ ನಿಯಮಿತ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. 18ನೇ ಶತಮಾನದಲ್ಲಿ ಕ್ವಿಂಗ್ ರಾಜವಂಶದ ಚಕ್ರವರ್ತಿ ಪರಿಚಯಿಸಿದ ಆಯ್ಕೆ ವಿಧಾನವನ್ನು ಉಲ್ಲೇಖಿಸಿ ಅವರು ಈ ಹೇಳಿಕೆ ನೀಡಿದ್ದಾರೆ.


ಚಿನ್ನದ ಪಾತ್ರೆ ವ್ಯವಸ್ಥೆಯು 18ನೇ ಶತಮಾನಕ್ಕೆ ಹಿಂದಿನದು. ಇದನ್ನು ಟಿಬೆಟಿಯನ್ ಧಾರ್ಮಿಕ ಸಂಸ್ಥೆಗಳ ಮೇಲೆ ನಿಯಂತ್ರಣ ಸಾಧಿಸಲು ಕ್ವಿಂಗ್ ರಾಜವಂಶವು ಸ್ಥಾಪಿಸಿತು. ಟಿಬೆಟಿಯನ್ ಬೌದ್ಧರು ಈ ವಿಧಾನವನ್ನು ರಾಜಕೀಯ ಪ್ರೇರಿತ ಮತ್ತು ಆಧ್ಯಾತ್ಮಿಕ ನ್ಯಾಯಸಮ್ಮತತೆಯ ಕೊರತೆ ಎಂದು ಟೀಕಿಸಿದ್ದಾರೆ. ಈಗಿನ ದಲೈ ಲಾಮಾ ಇದನ್ನು ಪದೇ ಪದೇ ತಿರಸ್ಕರಿಸಿದ್ದಾರೆ. ಈ ನಿರ್ಧಾರವು ಹಿರಿಯ ಟಿಬೆಟಿಯನ್ ಬೌದ್ಧ ಲಾಮಾಗಳು ಮತ್ತು ಸಾಂಪ್ರದಾಯಿಕ ಆಚರಣೆಗಳೊಂದಿಗೆ ಇರಬೇಕು ಎಂದು ಹೇಳಿದ್ದಾರೆ.


ಚೀನಾದ ಧಾರ್ಮಿಕ ನೀತಿಗಳನ್ನು ಸಮರ್ಥಿಸಿಕೊಂಡ ಮಾವೋ, ಚೀನಾದ ಸಂಪ್ರದಾಯಗಳಿಗೆ ಅನುಗುಣವಾಗಿ ಧಾರ್ಮಿಕ ಆಚರಣೆಗಳನ್ನು ರೂಪಿಸುವ ಪ್ರಯತ್ನವು ಒಂದು ನಿರ್ಬಂಧವಲ್ಲ. ಯಾವುದೇ ಧರ್ಮದ ಉಳಿವು ಮತ್ತು ಅಭಿವೃದ್ಧಿ ದೇಶದ ಸಾಮಾಜಿಕ ಪರಿಸರ ಮತ್ತು ಸಾಂಸ್ಕೃತಿಕ ಸಂಪ್ರದಾಯಗಳಿಗೆ ಹೊಂದಿಕೊಳ್ಳುವುದರಲ್ಲಿರುತ್ತದೆ ಎಂದು ಹೇಳಿದರು. "ಟಿಬೆಟಿಯನ್ ಬೌದ್ಧಧರ್ಮವು ಚೀನಾದಲ್ಲಿ ಹುಟ್ಟಿಕೊಂಡಿತು ಮತ್ತು ಅದು ಚೀನೀ ಗುಣಲಕ್ಷಣಗಳನ್ನು ಹೊಂದಿದೆ" ಎಂದು ಅವರು ಹೇಳಿದ್ದಾರೆ.

Post a Comment

Previous Post Next Post