ಅಮಾನತುಗೊಂಡಿದ್ದ ದಯಾನಂದ್‍ ಅವರಿಗೆ ಮತ್ತೆ ಆಯುಕ್ತರ ಹುದ್ದೆ ನೀಡುವುದಿಲ್ಲ: ಡಾ.ಜಿ. ಪರಮೇಶ್ವರ್


 ಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಬೆಂಗಳೂರು ನಗರ ಲೀಸ್ ಆಯುಕ್ತರಾಗಿದ್ದ ಬಿ.ದಯಾನಂದ್ ಅವರಿಗೆ ಮತ್ತೆ ಅದೇ ಹುದ್ದೆ ನೀಡುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಾನತು ಆಡಳಿತಾತ್ಮಕ ನಿರ್ಧಾರ ಆಗಿದ್ದು, ಈಗ ಅದನ್ನು ಹಿಂಪಡೆಯಲಾಗಿದೆ.

ಆದರೆ, ಪ್ರಕರಣ ಸಂಬಂಧ ತನಿಖೆ ಮುಂದುವರಿದಿದ್ದು, ಇಲಾಖಾ ವಿಚಾರಣೆ ಮಾಡುತ್ತಾರೆ. ಅದೇ ರೀತಿ, ಬಿ.ದಯಾನಂದ್ ಅವರಿಗೆ ಅದೇ (ಬೆಂಗಳೂರು ನಗರ ಪೊಲೀಸ್ ಆಯುಕ್ತ) ಹುದ್ದೆಯನ್ನು ನೀಡುವುದಿಲ್ಲ. ಅವರ ಸೇವಾಹಿರಿತನಕ್ಕೆ ಸಮಾನವಾದ ಹುದ್ದೆ ನೀಡಲಾಗುತ್ತದೆ ಎಂದು ವಿವರಿಸಿದರು.


ಕಾಲ್ತುಳಿತ ಪ್ರಕರಣದ ಕುರಿತು ನ್ಯಾ.ಮೈಕೆಲ್ ಡಿ.ಕುನ್ಹಾ ಅವರ ವರದಿಯ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿದ ಬಳಿಕ ಅಮಾನತು ವಾಪಸ್ಸು ಪಡೆದು, ವಿಚಾರಣೆ ಮುಂದುವರಿಸಲು ತೀರ್ಮಾನಿಸಲಾಗಿದೆ ಎಂದೂ ಅವರು ಉಲ್ಲೇಖಿಸಿದರು.

Post a Comment

Previous Post Next Post