: 6-6-6 : ಸಾಮಾನ್ಯವಾಗಿ ಪಿಟ್ನೆಸ್ ಜಗತ್ತಿನಲ್ಲಿ ಎಂದಿಗೂ ಹೊರೆಗುಳಿಯದ ವ್ಯಾಯಾಮ ಎಂದ್ರೆ ಅದು ವಾಕಿಂಗ್. ಇತ್ತೀಚಿನ ದಿನಗಳಲ್ಲಿ ಹೊಸ ವಾಕಿಂಗ್ ಶೈಲಿ ವೈರಲ್ ಆಗುತ್ತಿದೆ. ಸರಳ ವ್ಯಾಯಾಮವು ನಿಮ್ಮನ್ನು ಫಿಟ್ ಆಗಿಡಲು ಸಹಾಯ ಮಾಡುತ್ತದೆ, ಮುಖ್ಯವಾಗಿ ಇದು ಹೆಚ್ಚುವರಿ ಕಿಲೋಗಳನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.
ಅದುವೇ 6-6-6 ಶೈಲಿಯ ದಿನಚರಿ ನಡಿಗೆ. ಇದು ಇದೀಗ ಜಗತ್ತಿನಾದ್ಯಂತ ವೈರಲ್ ಆಗುತ್ತಿರುವ ವಾಕಿಂಗ್.
ಹೌದು, ಸಾಮಾಜಿಕ ಮಾಧ್ಯಮದಲ್ಲಿ ಫಿಟ್‌ನೆಸ್ ಸವಾಲುಗಳಿಗೆ ಕೊರತೆಯಿಲ್ಲದಿದ್ದರೂ, 6-6-6 ನಡಿಗೆ ದಿನಚರಿ ಜನಪ್ರಿಯತೆಯನ್ನು ಗಳಿಸಿದೆ. ಅದರ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ.
6-6-6 ವಾಕಿಂಗ್ ದಿನಚರಿ ಎಂದ್ರೆ?
6-6-6 ವಾಕಿಂಗ್ ದಿನಚರಿ ಎಂದ್ರೆ ಹೆಲ್ತ್ಲೈನ್ ಪ್ರಕಾರ, 'ಬೆಳಗ್ಗೆ 6 ಅಥವಾ ಸಂಜೆ 6 ಗಂಟೆಗೆ 60 ನಿಮಿಷಗಳ ಕಾಲ ವಾಕಿಂಗ್ ಮಾಡುವ ವ್ಯಾಯಾಮವಾಗಿದೆ'. ಅಲ್ಲದೆ, ನಿಧಾನಗತಿ 6 ನಿಮಿಷ ನಡೆಯಲು ಹಾಗೂ 6 ನಿಮಿಷ ಚೇತರಿಸಿಕೊಳ್ಳಲು(ನಡಿಗೆಯ ಮಧ್ಯೆ) ಸಮಯ ಕೂಡ ಒಳಗೊಂಡಿರುತ್ತದೆ. ಇತ್ತೀಚಿನ ದಿನಗಳಲ್ಲಿ 6-6-6 ವಾಕಿಂಗ್ ದಿನಚರಿಯು ನಮ್ಮ ಹೊಸ ಜೀವನಶೈಲಿಯ ಬದಲಾವಣೆಯಂತಿದೆ. ಅಲ್ಲದೆ, ಆರೋಗ್ಯವನ್ನು ಉತ್ತೇಜಿಸುವ ಮತ್ತು ತೂಕ ನಿರ್ವವಣೆಗೆ ಸಹಾಯ ಮಾಡುವ ಕೀಲಿ ಕೈನಂತಿದೆ ಎಂದು ತಜ್ಞರ ಅಭಿಪ್ರಾಯವಾಗಿದೆ.
6-6-6 ವಾಕಿಂಗ್ ದಿನಚರಿ ಪ್ರಯೋಜನಗಳೇನು?
ಆರೋಗ್ಯದ ವಿಚಾರದಲ್ಲಿ ನಡುಗೆಯೂ ಒಂದು ಅತ್ಯುತ್ತಮವಾದ ವ್ಯಾಯಾಮಗಳಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತದೆ. ಅಲ್ಲದೆ, ಇದು ನಿಜವೂ ಹೌದು. ದೇಹದಲ್ಲಿ ರೋಗ ನಿಯಂತ್ರಣ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ವಾರಕ್ಕೆ ಕನಿಷ್ಠ 150 ನಿಮಿಷಗಳ ಕಾಲ ದೈಹಿಕ ಚಟುವಟಿಕೆ ಅಗತ್ಯವಿದೆ. ಇದರಲ್ಲಿ ಚುರಕಾದ ನಡೆಗೆ ಸೇರಿ ಮಧ್ಯಮ-ತೀವ್ರತೆಯ ವ್ಯಾಯಾಮಗಳು ಸೇರಿವೆ.
1.ನಡಿಗೆ ಒಂದು ಉತ್ತಮ ವ್ಯಾಯಾಮವಾಗಿದ್ದು, ಆತಂಕ ಮತ್ತು ಖಿನ್ನತೆಯಂತಹ ಮಾನಸಿಕ ಆರೋಗ್ಯ ಸ್ಥಿತಿಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
2.ಇದು ತೂಕ ಇಳಿಸಿಕೊಳ್ಳಲು, ರಕ್ತದೊತ್ತಡದ ಮಟ್ಟವನ್ನು ನಿಯಂತ್ರಿಸಲು, ಶಕ್ತಿಯ ಮಟ್ಟವನ್ನು ಹೆಚ್ಚಿಸಲು, ಸ್ಮರಣಶಕ್ತಿಯನ್ನು ಹೆಚ್ಚಿಸಲು, ಮೂಳೆಗಳನ್ನು ಬಲಪಡಿಸಲು ಮತ್ತು ಮಧುಮೇಹದಂತಹ ದೀರ್ಘಕಾಲದ ಕಾಯಿಲೆಗಳನ್ನು ಬೆಳೆಸುವ ಸಾಧ್ಯತೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.(ಏಜೆನ್ಸೀಸ್)
Post a Comment