ಗಳೂರನ್ನು ಹಲವರ ವಿರೋಧದ ನಡುವೆಯೂ ಐದು ವಿಭಜನೆ ಮಾಡಲಾಗಿದೆ. ಯಾವುದೇ ದೊಡ್ಡ ಪ್ರತಿಭಟನೆಗಳು ಇಲ್ಲದೆ ವಿರೋಧ ಪಕ್ಷದ ಪ್ರತಿಭಟನೆಗಳೂ ಇಲ್ಲದೆ ಅತ್ಯಂತ ಸರಳವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಈ ಕೆಲಸವನ್ನು ಕಾರ್ಯಸಾಧ್ಯ ಮಾಡಿಕೊಂಡಿದೆ. ಬೆಂಗಳೂರು ಈಗಾಗಲೇ ಐದು ಭಾಗಗಳಾಗಿ ವಿಭಜನೆಗೊಂಡಿದೆ.
ಇದರ ಬೆನ್ನಲ್ಲೇ ಬೆಂಗಳೂರು ವಿಭಜನೆಯಿಂದ ಏನೆಲ್ಲಾ ಸಮಸ್ಯೆ ಹಾಗೂ ಸವಾಲುಗಳು ಎದುರಾಗಲಿವೆ ಎನ್ನುವ ಬಗ್ಗೆ ಭಾರೀ ಚರ್ಚೆ ನಡೆದಿದೆ. ಮೊದಲನೆಯದಾಗಿ ಬೆಂಗಳೂರಿಗೆ ಹೊಸ ಪ್ರದೇಶಗಳ ಸೇರ್ಪಡೆಯಿಂದ ಭೂಮಿ ಬೆಲೆ ಹೆಚ್ಚಳವಾಗಲಿದೆ ಎನ್ನುವ ನಿರೀಕ್ಷೆ ಮೂಡಿದೆ. ಆದರೆ ಇದರೊಂದಿಗೆ ಕನ್ನಡಿಗರಿಂದ ಅಧಿಕಾರ ಕೈತಪ್ಪುವ ಆತಂಕವೂ ಶುರುವಾಗಿದೆ.
ಬೆಂಗಳೂರಿನಲ್ಲಿ ಐದು ಪಾಲಿಕೆಗಳನ್ನು ರಚನೆ ಮಾಡುವುದರಿಂದ ಮೇಯರ್ ಹಾಗೂ ಉಪ ಮೇಯರ್ ಅಧಿಕಾರ ಅನ್ಯ ಭಾಷಿಕರ ಕೈ ಸೇರಲಿದೆ ಎನ್ನುವ ಆತಂಕ ಶುರುವಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ ಅನ್ಯಭಾಷಿಕರ ಹಾವಳಿ ಹೆಚ್ಚಾಗಿದೆ. ಇದೀಗ ಹೊಸ ಐದು ಪಾಲಿಕೆಗಳು ಬಂದರೆ, ತೆಲುಗು, ತಮಿಳು ಹಾಗೂ ಮಲಯಾಳಂ ಸೇರಿದಂತೆ ಅನ್ಯಭಾಷಿಕರು ಅಧಿಕಾರಕ್ಕೇರುವ ಸಾಧ್ಯತೆ ಇದೆ ಎನ್ನುವ ಚರ್ಚೆ ಶುರುವಾಗಿದೆ.
ಬೆಂಗಳೂರನ್ನು ಆಡಳಿತದ ದೃಷ್ಟಿಯಿಂದ ಮೂರು ಭಾಗಗಳನ್ನಾಗಿ ವಿಭಜನೆ ಮಾಡುವುದಾಗಿ ಮೊದಲು ಹೇಳಲಾಗಿತ್ತು. ಆದರೆ ಇದೀಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಐದು ಮಹಾನಗರ ಪಾಲಿಕೆಗಳನ್ನಾಗಿ ವಿಭಜನೆ ಮಾಡಲಾಗಿದೆ. ಬೆಂಗಳೂರು ಆಡಳಿತ ಪ್ರದೇಶ, ವಾರ್ಡ್‌ಗಳು, ಜನಸಂಖ್ಯೆ ಮತ್ತು ಆಡಳಿತಾತ್ಮಕ ಸವಾಲುಗಳು ಹಾಗೂ ಆಡಳಿತ ವಿಕೇಂದ್ರೀಕರಣ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಪರಿಕಲ್ಪನೆಯ ಅಡಿಯಲ್ಲಿ ಐದು ವಿಭಜನೆ ಆಗಿದೆ.
ಅನ್ಯ ಭಾಷಿಕರಿಗೆ ಅಧಿಕಾರ: ಇನ್ನು ಬೆಂಗಳೂರಿನಲ್ಲಿ ಈ ವಿಭಜನೆಯಿಂದ ಅನ್ಯಭಾಷಿಕರು ಅಧಿಕಾರಕ್ಕೇರುವ ಆತಂಕ ಶುರುವಾಗಿದೆ. ಬೆಂಗಳೂರು ಕೇಂದ್ರ ಭಾಗದಲ್ಲಿ ಉರ್ದು ಹಾಗೂ ತಮಿಳು ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಉತ್ತರದಲ್ಲಿ ಉರ್ದು ಮತ್ತು ತೆಲುಗು, ದಕ್ಷಿಣದಲ್ಲಿ ಉರ್ದು, ತೆಲುಗು ಹಾಗೂ ಕನ್ನಡ ಭಾಷಿಕರು ಇದ್ದಾರೆ. ಇನ್ನು ಪೂರ್ವ ಭಾಗದಲ್ಲಿ ತೆಲುಗು ಹಾಗೂ ಉತ್ತರ ಭಾರತೀಯ ಭಾಷೆಗಳು ಪ್ರಾಬಲ್ಯ ಹೆಚ್ಚಾಗಿದೆ. ಆದರೆ ಬೆಂಗಳೂರು ಪಶ್ಚಿಮ ಭಾಗದಲ್ಲಿ ಮಾತ್ರ ಕನ್ನಡಿಗರು ಹೆಚ್ಚಾಗಿದ್ದಾರೆ.
ಈಗಾಗಲೇ ಬೆಂಗಳೂರಿನಲ್ಲಿ ಭಾಷಾ ಸಮಸ್ಯೆ ಹೆಚ್ಚಾಗಿದ್ದು. ಇದೀಗ ಹೊಸ ಪಾಲಿಕೆಗಳು ಸಮಸ್ಯೆಯನ್ನು ಹೆಚ್ಚಿಸಲಿವೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಉರ್ದು, ತೆಲುಗು ಅಥವಾ ತಮಿಳು ಭಾಷಿಕರು ಮೇಯರ್ ಆಗುವ ಸಾಧ್ಯತೆಯಿದೆ ಎಂದು ಸೋಷಿಯಲ್ ಮೀಡಯಾದಲ್ಲಿ ಚರ್ಚೆಯಾಗುತ್ತಿದೆ.
ಬೆಂಗಳೂರು ವಿಭಜನೆಯಿಂದ ಗೊಂದಲ
ಇನ್ನು ಬೆಂಗಳೂರು ವಿಭಜನೆಯಿಂದ ಬೆಂಗಳೂರಲ್ಲಿ ಇನ್ನಷ್ಟು ಸಮಸ್ಯೆ ಆಗಲಿದೆ. ಉದಾ: ಒಂದು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಮತ್ತೊಂದು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎರಡೂ ಪಾಲಿಕೆಗಳ ನಡುವೆ ಸಮನ್ವಯ ಕೊರತೆ ಆಗಲಿದೆ. ನೀರು ಪೂರೈಕೆ - ಒಳಚರಂಡಿ ಹಾಗೂ ರಾಜಕಾಲುವೆ ಮತ್ತು ಕೆರೆಗಳು ಕೇವಲ ಒಂದು ಪ್ರದೇಶದ ನಿರ್ವಹಣೆ ವ್ಯಾಪ್ತಿಯಲ್ಲಿ ಇಲ್ಲ. ಒಂದಕ್ಕೊಂದು ಕನೆಕ್ಟಿವ್ ಆಗಿದೆ. ಈ ರೀತಿ ಪಾಲಿಕೆಗಳು ವಿಭಜನೆಯಾದರೆ ಸಮನ್ವಯತೆ ಇನ್ನಷ್ಟು ಕುಸಿಯುವ ಸಾಧ್ಯತೆಯೇ ಹೆಚ್ಚು ಎನ್ನಲಾಗಿದೆ.
ಆಸ್ತಿದಾರರಿಗೆ ಬಂಪರ್: ಬೆಂಗಳೂರಿನ ವಿಭಜನೆಯಿಂದ ಸಮಸ್ಯೆಗಳು ಎದುರಾದರೂ ಬೆಂಗಳೂರಿನ ವ್ಯಾಪ್ತಿಗೆ ಸೇರಲಿರುವ ಹೊಸ ಪ್ರದೇಶಗಳಲ್ಲಿ ಭೂಮಿ ಬೆಲೆ ಹೆಚ್ಚಳವಾಗುವ ನಿರೀಕ್ಷೆ ಇದೆ. ಕೆಲವು ಭಾಗದಲ್ಲಿ ರಿಯಲ್ ಎಸ್ಟೇಟ್ ಚಿಗುರುವ ನಿರೀಕ್ಷೆಯೂ ಇದೆ.
Post a Comment