ಗಳೂರು, ಮೇ 29: ಬಂಟ್ವಾಳದ ಅಬ್ದುಲ್ ರಹಿಮಾನ್ (Abdul Rahiman) ಬರ್ಬರ ಹತ್ಯೆ ಪ್ರಕರಣಕ್ಕೆ ಸದ್ಯ ಸಾಕಷ್ಟು ಚರ್ಚೆ ಮತ್ತು ಮುಸ್ಲಿಂ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ. ಸಾಮೂಹಿಕ ರಾಜೀನಾಮೆ ಕೂಡ ನೀಡಲಾಗಿದೆ. ಅಷ್ಟೇ ಅಲ್ಲದೆ ಗೃಹ ಸಚಿವ ಜಿ. ಪರಮೇಶ್ವರ್ (G. Parameshwara) ಮತ್ತು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಬದಲಾಯಿಸಲು ಪಟ್ಟು ಹಿಡಿದಿದ್ದಾರೆ.
ಈ ಮಧ್ಯೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಜಿ ಪರಮೇಶ್ವರ್, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯನ್ನು ಗಂಭೀರವಾಗಿ ಪರಿಗಣನೆ ಮಾಡಿದ್ದೇವೆ. ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರಾವಳಿ ಭಾಗ ಅಂದರೆ ಉಡುಪಿ, ಶಿವಮೊಗ್ಗ ಮತ್ತು ಮಂಗಳೂರನ್ನು ಸೂಕ್ಷ್ಮವಾಗಿ ಪರಿಗಣಿಸಿದೆ. ಮುಲಾಜಿಲ್ಲದೆ ಕ್ರಮ ಕೈಗೊಳ್ತೀವಿ, ಆದರೆ ಯಾವ ಕ್ರಮ ಅಂತಾ ಹೇಳಲ್ಲ. ಇದನ್ನು ಹತ್ತಿಕ್ಕದೆ ಬಿಡುವುದಿಲ್ಲ ಎಂದು ಎಲ್ಲರಿಗೂ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಅಬ್ದುಲ್ ರಹಿಮಾನ್ ಕೊಲೆ ಸಂಘಪರಿವಾರ ಮತ್ತು ಬಿಜೆಪಿ ಮಾಡಿದೆ: ರಿಯಾಜ್ ಕಡಂಬು
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯ ರಿಯಾಜ್ ಕಡಂಬು ಪ್ರತಿಕ್ರಿಯಿಸಿದ್ದು, ರೆಹಮಾನ್ ಹತ್ಯೆ ವೈಯಕ್ತಿಕ ದ್ವೇಷದ ಹತ್ಯೆ ಅಂತ ಸಂಘಪರಿವಾರದ ಐಟಿ ಸೆಲ್ ಪೋಸ್ಟ್ ನೋಡಿ ಸಚಿವ ದಿನೇಶ್ ಗುಂಡೂರಾವ್ ಬೇಜವಾಬ್ದಾರಿ ಹೇಳಿಕೆ ಕೊಡುತ್ತಾರೆ. ಒಬ್ಬ ಶ್ರಮ ಜೀವಿಯನ್ನು ಕೊಲ್ಲುವುದು ಇವರ ವೀರತ್ವನಾ ಎಂದು ಪ್ರಶ್ನಿಸಿದ್ದಾರೆ.
ಫಾಜಿಲ್ ಕೊಲೆಯಾದಾಗಲೂ ಒಬ್ಬ ಅಮಾಯಕನನ್ನು ಕೊಂದರು. ಈ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿಲ್ಲ. ಮುಸ್ಲಿಂ ಸಮುದಾಯ ನಿನ್ನೆ ಬಹಳ ಶಾಂತಿ ಸಂಯಮದಿಂದ ವರ್ತಿಸಿದೆ. ಅಬ್ದುಲ್ ರಹಿಮಾನ್ ಕೊಲೆ ಸಂಘಪರಿವಾರ ಮತ್ತು ಬಿಜೆಪಿ ಮಾಡಿದೆ. ಕೊಲೆಯಾದ ರಹಿಮಾನ್ ಕುಟುಂಬದ ಜೊತೆ ಸರ್ಕಾರ ನಿಲ್ಲಬೇಕಿದೆ. ಅವರ ಕುಟುಂಬಕ್ಕೆ 50 ಲಕ್ಷ ರೂ ಪರಿಹಾರ ಘೋಷಿಸಬೇಕು. ಆಸ್ಪತ್ರೆ ಸೇರಿದ ಯುವಕನ ಚಿಕಿತ್ಸಾ ವೆಚ್ಚ ಕೂಡ ಸರ್ಕಾರ ಭರಿಸಬೇಕು ಎಂದು ಹೇಳಿದ್ದಾರೆ.
ಡಿಜಿಪಿ ಯಾಕೆ ಈವರೆಗೆ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ಕೊಟ್ಟಿಲ್ಲ? ಕೊಲೆ ಮಾಡುತ್ತೇವೆ ಎನ್ನುವ ಭಾಷಣಕಾರರ ಬಂಧನ ಯಾಕೆ ಆಗುತ್ತಿಲ್ಲ. ಇಲ್ಲಿ ಮುಸ್ಲಿಂ ಸಮುದಾಯಕ್ಕೆ ಮತ್ತು ಆರ್ಎಸ್ಎಸ್ಗೆ ಒಂದು ನೀತಿಯಾ? ಮುಸ್ಲಿಂ ಶಾಸಕರು ಈ ಹತ್ಯೆ ಬಗ್ಗೆ ಒಂದೇ ಒಂದು ಮಾತು ಆಡುತ್ತಿಲ್ಲ. ಯು.ಟಿ.ಖಾದರ್ ವಿದೇಶದಲ್ಲಿ ಕೂತು ಹೇಳಿಕೆ ಕೊಟ್ಟು ಸುಮ್ಮನಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ರೀತಿ ಆದರೆ ಜಿಲ್ಲೆಯ ಭವಿಷ್ಯ ಹಾಳಾಗುತ್ತೆ ಎಂದಿದ್ದಾರೆ.
Post a Comment