ಗಳೂರು: ವಾಹನ ಸವಾರರೇ ಹುಷಾರ್.. ಹೆಲ್ಮೆಟ್ ಹಾಕದೆ ಸಂಚರಿಸಿದ್ರೆ ಬೀಳುತ್ತೆ ಸಾವಿರಾರು ರೂಪಾಯಿ ದಂಡ.. ಅದೇ ರೀತಿ ಬೆಂಗಳೂರಿನಲ್ಲಿ ಟ್ರಾಫಿಕ್ ಪೊಲೀಸ್ ಅಧಿಕಾರಿಯೊಬ್ಬರು ತಾವೇ ಹೆಲ್ಮೆಟ್ ಧರಿಸದೆ ಬೈಕ್‌ನ ಹಿಂಬದಿ ಕುಳಿತಿದ್ದಕ್ಕೆ ದಂಡ ಕಟ್ಟಿದ್ದಾರೆ.. ಈ ಘಟನೆಯು ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ವೈರಲ್ ಆಗಿದೆ.
ಹೆಬ್ಬಾಳದ ಬಿಡಿವೈ ಕಾಲೋನಿ ಬಳಿಯ ಸಂಚಾರ ಜಂಕ್ಷನ್‌ನಲ್ಲಿ ಈ ಘಟನೆ ನಡೆದಿದೆ. ಒಬ್ಬ ಟ್ರಾಫಿಕ್ ಪೊಲೀಸ್ ಅಧಿಕಾರಿ, ಬೈಕ್‌ನ ಹಿಂಬದಿ ಕುಳಿತಿದ್ದಾಗ ಹೆಲ್ಮೆಟ್ ಧರಿಸಿರಲಿಲ್ಲ. ಇದನ್ನು ಗಮನಿಸಿದ ಕೆಲವು ಸಾರ್ವಜನಿಕರು ತಕ್ಷಣವೇ ಫೋಟೋ ತೆಗೆದು, ಎಕ್ಸ್‌ನಲ್ಲಿ ಹೆಬ್ಬಾಳ ಟ್ರಾಫಿಕ್ ಪೊಲೀಸ್ ಇಲಾಖೆಯನ್ನು ಟ್ಯಾಗ್ ಮಾಡಿ, ಕಾನೂನು ಕ್ರಮಕ್ಕೆ ಒತ್ತಾಯಿಸಿದರು. 'ನಿಯಮ ಎಲ್ಲರಿಗೂ ಒಂದೇ' ಎಂದು ಹೇಳಿದ ಸಾರ್ವಜನಿಕರು, ಪೊಲೀಸ್ ಅಧಿಕಾರಿಗಳೇ ನಿಯಮ ಉಲ್ಲಂಘನೆ ಮಾಡುವುದು ಸರಿಯೇ ಎಂದು ಪ್ರಶ್ನಿಸಿದರು.
ಎಕ್ಸ್‌ನಲ್ಲಿ ಈ ಫೋಟೋ ವೈರಲ್ ಆಗುತ್ತಿದ್ದಂತೆ, ಸಾಮಾಜಿಕ ಜಾಲತಾಣದಲ್ಲಿ ಟೀಕೆಯ ಸುರಿಮಳೆಯೇ ಆರಂಭವಾಯಿತು. ಕೆಲವರು 'ಪೊಲೀಸರಿಗೆ ತಾವೇ ನಿಯಮ ಉಲ್ಲಂಘಿಸಿದರೆ, ಸಾಮಾನ್ಯ ಜನರಿಂದ ಏನನ್ನು ನಿರೀಕ್ಷಿಸಬಹುದು?' ಎಂದು ಆಕ್ಷೇಪ ವ್ಯಕ್ತಪಡಿಸಿದರೆ, ಇನ್ನು ಕೆಲವರು 'ಹೆಲ್ಮೆಟ್‌ಗಿಂತ ಕಾನೂನಿನ ದೊಡ್ಡ ರಕ್ಷಣೆ ಇದೆ ಎಂದುಕೊಂಡಿರಬಹುದು!' ಎಂದು ವ್ಯಂಗ್ಯವಾಡಿದರು.
ಸಾರ್ವಜನಿಕರ ಒತ್ತಡಕ್ಕೆ ಮಣಿದ ಹೆಬ್ಬಾಳ ಟ್ರಾಫಿಕ್ ಪೊಲೀಸ್ ಇಲಾಖೆ, ತಕ್ಷಣವೇ ಕ್ರಮಕೈಗೊಂಡಿದ್ದು, ತಪ್ಪಿತಸ್ಥ ಅಧಿಕಾರಿಗೆ ₹500 ದಂಡ ವಿಧಿಸಲಾಯಿತು. ಈ ಕ್ರಮವನ್ನು ಎಕ್ಸ್‌ನಲ್ಲಿ ದೃಢೀಕರಿಸಿದ ಪೊಲೀಸ್ ಇಲಾಖೆ, 'ನಿಯಮ ಎಲ್ಲರಿಗೂ ಸಮಾನ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ' ಎಂದು ತಿಳಿಸಿತ್ತು. ಈ ಕ್ರಮವು ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಇದನ್ನು ಇಲಾಖೆಯ ಸಮರ್ಪಕ ಕ್ರಮ ಎಂದು ಶ್ಲಾಘಿಸಿದರೆ, ಇನ್ನು ಕೆಲವರು 'ಇದು ಕೇವಲ ಸಾರ್ವಜನಿಕರ ಒತ್ತಡದಿಂದ ತೆಗೆದುಕೊಂಡ ಕ್ರಮ' ಎಂದು ಟೀಕಿಸಿದರು.
ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.
Post a Comment