ಹೊಸ ವಿದ್ಯುತ್‌ ಸಂಪರ್ಕಕ್ಕೆ ಸ್ಮಾರ್ಟ್‌ ಮೀಟರ್‌ ಕಡ್ಡಾಯ: ಕೆಇಆರ್‌ಸಿ


 ಗಳೂರು: ರಾಜ್ಯದಲ್ಲಿ ಕೃಷಿ ಪಂಪ್‌ಸೆಟ್‌ ಹೊರತುಪಡಿಸಿ ಹೊಸದಾಗಿ ವಿದ್ಯುತ್‌ ಸಂಪರ್ಕ ಪಡೆಯುವ ಯಾವುದೇ ಗ್ರಾಹಕರಿಗೆ ಸ್ಮಾರ್ಟ್‌ ಮೀಟರ್‌ ಅಳವಡಿಕೆ ಕಡ್ಡಾಯಗೊಳಿಸಿರುವುದನ್ನು ಪುನರುಚ್ಚರಿಸಿರುವ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ), ಈ ಮೂಲಕ ಸ್ಮಾರ್ಟ್‌ ಮೀಟರ್‌ ವಿಷಯದಲ್ಲಿ ಉಂಟಾದ ಗೊಂದಲಕ್ಕೆ ತೆರೆ ಎಳೆದಿದೆ.

ಈ ಸಂಬಂಧ ಈಚೆಗೆ ಆದೇಶ ಹೊರಡಿಸಿರುವ ಆಯೋಗವು, ಇನ್ಮುಂದೆ ಹೊಸದಾಗಿ ವಿದ್ಯುತ್‌ ಸಂಪರ್ಕ ಪಡೆಯುವ ಗ್ರಾಹಕರು ಸ್ಮಾರ್ಟ್‌ ಮೀಟರ್‌ ಅಳವಡಿಸಿಕೊಳ್ಳುವುದು ಕಡ್ಡಾಯ. ಅಲ್ಲದೆ, ತಾತ್ಕಾಲಿಕ ಸಂಪರ್ಕ ಪಡೆಯಲಿಚ್ಚಿಸುವವರಿಗೆ ಪ್ರಿಪೇಯ್ಡ ಮೀಟರ್‌ನೊಂದಿಗೆ ಸಂಪರ್ಕ ಸೇವೆ ಕಲ್ಪಿಸಬೇಕು ಎಂದು ಸ್ಪಷ್ಟಪಡಿಸಿದೆ.


ಈಗಾಗಲೇ ಸಾಂಪ್ರದಾಯಿಕ ಮೀಟರ್‌ಗಳನ್ನು ಹೊಂದಿರುವವರಿಗೆ ಸ್ಮಾರ್ಟ್‌ ಮೀಟರ್‌ ಅಳವಡಿಕೆ ಕಡ್ಡಾಯವಲ್ಲ. ಗ್ರಾಹಕರು ಪ್ರಿಪೇಯ್ಡ ಮೀಟರ್‌ ಬಿಲ್ಲಿಂಗ್‌ ಇಚ್ಛಿಸಿದಲ್ಲಿ ಅವರ ಸ್ವಂತ ಖರ್ಚಿನಲ್ಲಿ ಸ್ಮಾರ್ಟ್‌ ಮೀಟರ್‌ ಅಳವಡಿಸಿಕೊಳ್ಳಬಹುದು ಎಂದೂ ಆದೇಶದಲ್ಲಿ ಹೇಳಿದೆ. “ಕೇಂದ್ರೀಯ ವಿದ್ಯುತ್ಛಕ್ತಿ ಪ್ರಾಧಿಕಾರ (ಮೀಟರ್‌ಗಳ ಅಳವಡಿಕೆ ಮತ್ತು ನಿರ್ವಹಣೆ) (ಆಡಳಿತ) ನಿರ್ಬಂಧಗಳು-2022′ ಉಲ್ಲೇಖೀಸಿ ಈ ಆದೇಶ ಹೊರಡಿಸಲಾಗಿದೆ.

Post a Comment

Previous Post Next Post