ಗಳೂರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಗರದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ಉಂಟಾದ ಹಾನಿ ಹಾಗೂ 'ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ' ಸಂಬಂಧ ಸಭೆ ನಡೆಸಿದರು. ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಗರದ ಫುಟ್‌ಪಾತ್ ವ್ಯಾಪಾರವನ್ನು ಸಂಪೂರ್ಣವಾಗಿ ನಿಲ್ಲಿಸಲು ನಿರ್ಧಾರ ಮಾಡಿಕೊಂಡಿರುವುದಾಗಿ ಘೋಷಿಸಿದರು.
ಫುಟ್‌ಪಾತ್ ವ್ಯಾಪಾರಕ್ಕೆ ಬ್ರೇಕ್:
'ಇಡೀ ಬೆಂಗಳೂರಿನಲ್ಲಿ ಫುಟ್‌ಪಾತ್ ಮೇಲೆ ಅಂಗಡಿ ಇಡುವಂತಿಲ್ಲ. ನಾವು ನಿಶ್ಚಿತಪಡಿಸಿದ ಸ್ಥಳದಲ್ಲೇ ವ್ಯಾಪಾರ ನಡೆಯಬೇಕು. ಈಗಾಗಲೇ 3755 ಮಂದಿ ತಳ್ಳುಗಾಡಿ ವ್ಯಾಪಾರಕ್ಕೆ ಅನುಮತಿ ಕೇಳಿದ್ದಾರೆ. ಆದರೆ ಕಾನೂನಿನ ಪ್ರಕಾರ ಫುಟ್‌ಪಾತ್‌ಗಳಲ್ಲಿ ಅಂಗಡಿ ಇಡಲು ಅನುಮತಿ ಇಲ್ಲ, ಅದಕ್ಕಾಗಿ ಪ್ಲಾನ್ ಆಫ್ ಆಕ್ಷನ್ ಮೂಲಕ ವ್ಯವಸ್ಥಿತವಾಗಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸುತ್ತೇವೆ,' ಎಂದು ಡಿಕೆಶಿ ತಿಳಿಸಿದರು.
ಬೇಸ್‌ಮೆಂಟ್ ನಿಲ್ದಾಣ ದುರುಪಯೋಗದ ವಿರುದ್ಧ ಕ್ರಮ:
'ಟೌನ್ ಪ್ಲ್ಯಾನ್ ಪ್ರಕಾರ ಬೇಸ್‌ಮೆಂಟ್‌ನಲ್ಲಿ ಅಂಗಡಿ ಅಥವಾ ಬೇರೇನೂ ಮಾಡಲಾಗದು. ಆದರೆ ಈಗಾಗಲೇ ಹಲವೆಡೆ ಪಾರ್ಕಿಂಗ್‌ಗಾಗಿ ಬೇಸ್‌ಮೆಂಟ್ ಬಳಸಲಾಗಿದೆ. ಇವುಗಳ ವಿರುದ್ಧ ಕ್ರಮ ಜರುಗಿಸಲಾಗುವುದು,' ಎಂದು ಅವರು ತಿಳಿಸಿದರು.
ಆಸ್ತಿ ವಿವರಗಳ ಡಿಜಿಟಲಿಕರಣ:
'ಬೆಂಗಳೂರು ನಗರದ ಆಸ್ತಿಗಳಿಗೆ ಇ-ಖಾತಾ ನೀಡುವ ಪ್ರಕ್ರಿಯೆ ಆರಂಭಿಸಲಾಗಿದೆ. ಈ ಮೂಲಕ ನಾಡಿನ ಜನರಿಗೆ ಆಸ್ತಿ ದಾಖಲಾತಿಗಳನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡುತ್ತೇವೆ,' ಎಂಬುದು ಅವರ ಸ್ಪಷ್ಟನೆ.
ವಾಹನ ನಿಲ್ಲಿಸುವಿಕೆ ನಿಯಂತ್ರಣ:
ರಸ್ತೆ ಬದಿಯಲ್ಲಿ ಯಾವುದೇ ವಾಹನ ನಿಲ್ಲಿಸುವಂತಿಲ್ಲ. ಉಲ್ಲಂಘನೆಯಾದರೆ ಟ್ರಾಫಿಕ್ ಪೊಲೀಸರು ಆ ವಾಹನಗಳನ್ನು ಜಪ್ತಿ ಮಾಡಲಿದ್ದಾರೆ. ಮಾಲೀಕರು 21 ದಿನಗಳೊಳಗೆ ತೆಗೆದುಕೊಂಡು ಹೋಗದಿದ್ದರೆ ಹರಾಜು ಹಾಕಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಮಳೆ ನೀರಿಗೆ ಪರಿಹಾರ:
'ಮಳೆಯಿಂದ ಮನೆಯೊಳಗೆ ನೀರು ನುಗ್ಗಿದರೆ ತಕ್ಷಣ ಪರಿಹಾರ ಒದಗಿಸುತ್ತೇವೆ. ಜನರು ಬೇಜಾರಾಗಬೇಡಿ,' ಎಂದು ಡಿಕೆಶಿ ಭರವಸೆ ನೀಡಿದರು.

Post a Comment