ಬೆಂಗಳೂರು ಸೇರಿ ಹಲವೆಡೆ ಮಳೆ ಶುರುವಾಗಿದ್ದು, ಜೋರಾಗಿ ಸುರಿದ ಮಳೆಯಿಂದಾಗಿ ಚಲಿಸುತ್ತಿದ್ದ ಆಟೋ ಮೇಲೆಯೇ ಮರವೊಂದು ಬಿದ್ದಿದೆ. ಈ ಪರಿಣಾಮ ಆಟೋ ಚಾಲಕ ಸ್ಥಳದಲ್ಲೇ...ಇನ್ನಷ್ಟು ಸುದ್ದಿ
ರಿಕ್ಷಾದ ಮೇಲೆ ಬಿದ್ದ ಮರ
ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲವು ವಾರದಿಂದ ಭಾರೀ ಮಳೆಯಾಗುತ್ತಿದೆ. ಈ ಬಾರಿ ಬೇಸಿಗೆ ಮಳೆಯಂತು ಭಾರೀ ಬೇಗನೆ ಶುರುವಾಗಿಬಿಟ್ಟಿದೆ. ಅಲ್ಲದೇ ಶುರುವಾದ ಆರಂಭದಲ್ಲೇ ನಗರದಲ್ಲಿ ಹಲವೆಡೆ ಮಳೆ ಅವಾಂತರಗಳಾಗಿವೆ. ಇದೀಗ ಮತ್ತೆ ಬೆಂಗಳೂರು ಸೇರಿ ಹಲವೆಡೆ ಮಳೆ (Rain) ಶುರುವಾಗಿದ್ದು, ಜೋರಾಗಿ ಸುರಿದ ಮಳೆಯಿಂದಾಗಿ ಚಲಿಸುತ್ತಿದ್ದ ಆಟೋ ಮೇಲೆಯೇ ಮರವೊಂದು ಬಿದ್ದಿದೆ. ಈ ಪರಿಣಾಮ ಆಟೋ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಕತ್ರಿಗುಪ್ಪೆ ರಸ್ತೆಯಲ್ಲಿ ಘಟನೆ ನಡೆದಿದೆ.
ನಗರದ ಹಲವೆಡೆ ಜೋರಾಗಿ ಸುರಿದ ಮಳೆಯಿಂದಾಗಿ ಕತ್ರಿಗುಪ್ಪೆ ರಸ್ತೆಯಲ್ಲಿ ದುರಂತವೊಂದು ಸಂಭವಿಸಿದೆ. ಚಲಿಸುತ್ತಿದ್ದ ಆಟೋವೊಂದರ ಮೇಲೆ ಬೃಹತ್ ಮರವೊಂದು ಬಿದ್ದ ಪರಿಣಾಮ ಆಟೋ ಚಾಲಕ ಮಹೇಶ್ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಇನ್ನು ಈ ದುರ್ಘಟನೆ ಭಾರೀ ಮಳೆಯಿಂದಾಗಿ ಉಂಟಾದ ಗಾಳಿಯಿಂದ ಮರ ಬಿದ್ದ ಕಾರಣ ಸಂಭವಿಸಿದೆ ಎಂದು ತಿಳಿದುಬಂದಿದೆ. ಅದೃಷ್ಟವಶಾತ್, ಆ ಸಂದರ್ಭದಲ್ಲಿ ಆಟೋದಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ

Post a Comment