Volodymyr Zelenskyy: ಟ್ರಂಪ್‌ ಜೊತೆ ಜಗಳದಿಂದ ಹೀರೋ ಆದ ಝೆಲೆನ್ಸ್ಕಿ! ಟೀಕೆಗಳ ಹೊರತಾಗಿಯೂ ನಾಯಕನಿಗೆ ಉಕ್ರೇನ್ ಜನರ ಬೆಂಬಲ!


 ಓವಲ್ ಕಚೇರಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ವಾಗ್ವಾದ ನಡೆಸಿದ ನಂತರ ಉಕ್ರೇನ್‌ನಲ್ಲಿ ಝೆಲೆನ್ಸ್ಕಿ ಪಕ್ಷಾತೀತವಾಗಿ ಹೀರೋ ಆಗಿದ್ದು, ಜನರು ವ್ಯಾಪಕವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ.

ಉಕ್ರೇನ್: ರಷ್ಯಾ-ಉಕ್ರೇನ್ ಯುದ್ಧದ ಕುರಿತು ಓವಲ್ ಕಚೇರಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelenskyy) ನಡುವೆ ಬಿಸಿ ಬಿಸಿ ಚರ್ಚೆ ವಿಕೋಪಕ್ಕೆ ತಿರುಗಿ ಇಬ್ಬರ ನಡುವೆ ವಾಗ್ವಾದ ನಡೆದಿತ್ತು.

ಆದರೆ, ಅಮೆರಿಕಾ ಅಧ್ಯಕ್ಷರ ಮುಂದೆ ತಲೆ ತಗ್ಗಿಸದ ವೊಲೊಡಿಮಿರ್ ಝೆಲೆನ್ಸ್ಕಿ ದಿಟ್ಟವಾಗಿ ಟ್ರಂಪ್‌ಗೆ ಎದುರುತ್ತರ ಕೊಟ್ಟು ಶ್ವೇತ ಭವನದಿಂದ ಹೊರ ನಡೆದಿದ್ದರು. ಇದೀಗ ಈ ಘಟನೆಯ ನಂತರ ಉಕ್ರೇನಿಯನ್ ನಾಗರಿಕರು ಝೆಲೆನ್ಸ್ಕಿಯೊಂದಿಗೆ ಒಗ್ಗಟ್ಟನ್ನು ತೋರಿಸಿದ್ದಾರೆ. ಯೂರೋಪಿಯನ್ ರಾ‍ಷ್ಟ್ರಗಳ ಅನೇಕ ನಾಯಕರು ಕೂಡ ಝೆಲೆನ್ಸ್ಕಿಗೆ ಬೆಂಬಲ ನೀಡಿ ನೀವು ಒಬ್ಬಂಟಿಯಲ್ಲ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಹೇಳಿದ್ದರು.

ಅಸೋಸಿಯೇಟೆಡ್ ಪ್ರೆಸ್ ಪ್ರಕಾರ, ವೊಲೊಡಿಮಿರ್ ಝೆಲೆನ್ಸ್ಕಿಯೊಂದಿಗೆ ನಿಂತ ಉಕ್ರೇನಿಯನ್ ನಾಗರಿಕರು ಅವರ ಧೈರ್ಯವನ್ನು ಶ್ಲಾಘಿಸಿದ್ದಾರೆ. ‘ಝೆಲೆನ್ಸ್ಕಿ ಸಿಂಹದಂತೆ ಹೋರಾಡಿದರು ಮತ್ತು ಅವರು ತಮ್ಮ ದೇಶದ ಹಿತಾಸಕ್ತಿಗಳನ್ನು ಸಮರ್ಥಿಸಿಕೊಂಡರು’ ಎಂದು ಕೀವ್‌ನಲ್ಲಿ ನಿವೃತ್ತರಾಗಿರುವ 67 ವರ್ಷದ ನಟಾಲಿಯಾ ಸೆರ್ಹಿಯೆಂಕೊ ಹೇಳಿದ್ದಾರೆ.

Post a Comment

Previous Post Next Post