Veerappa Moily: ಸಿದ್ದರಾಮಯ್ಯ ನನಗೆ ಟೂ ಜೂನಿಯರ್, ನಾನು ಸಚಿವನಾಗಿದ್ದಾಗ ಸಿದ್ದರಾಮಯ್ಯ ಏನೇನೂ ಅಲ್ಲ; ವೀರಪ್ಪ ಮೊಯ್ಲಿ


 ಗಳೂರು: 2024ರ ಲೋಕಸಭಾ ಚುನಾವಣೆ (Lokasabha Election) ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. ಅಲ್ಲದೇ ಈ ವೇಳೆ ಟಿಕೆಟ್‌ ಹಂಚಿಕೆ ಬಗ್ಗೆ ಭಾರೀ ಚರ್ಚೆಯಾಗಿತ್ತು. ಅದರಲ್ಲೂ ಚುನಾವಣಾ ವೇಳೆ ಚಿಕ್ಕಬಳ್ಳಾಪುರ ಲೋಕಸಭಾ ಸ್ಥಾನಕ್ಕೆ ಟಿಕೆಟ್‌ ಹಂಚಿಕೆ ಮಾಡೋದು ಕಾಂಗ್ರೆಸ್‌ಗೆ (Congress) ಸವಾಲಿನ ಕೆಲಸ ಆಗಿತ್ತು.

ಈ ವೇಳೆ ಮಾಜಿ ಸಿಎಂ ವೀರಪ್ಪ ಮೊಯ್ಲಿ ಮತ್ತು ಮಾಜಿ ಸಚಿವರ ನಡುವೆ ಭಾರೀ ಪೈಪೋಟಿ ಇತ್ತು. ಇದೀಗ ಈ ಬಗ್ಗೆ ಮಾತನಾಡಿದ ಮಾಜಿ ಸಿಎಂ ವೀರಪ್ಪ ಮೊಯ್ಲಿ (Ex Cm Veerappa Moily), ಲೋಕಸಭಾ ಟಿಕೆಟ್ ಕೇಂದ್ರ ಚುನಾವಣೆ ಸಮಿತಿ ಕೊಡೋದು. ನನಗೆ ಟಿಕೆಟ್ ಕೊಡಿ ಅಂತ ಸಿದ್ದರಾಮಯ್ಯ (Siddaramaiah) ಮುಂದೆ ಕೈ ಚಾಚಿದವನು ನಾನಲ್ಲ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ನನಗೆ ಟೂ ಜೂನಿಯರ್, ನಾನು ಸಚಿವನಾಗಿದ್ದಾಗ ಸಿದ್ದರಾಮಯ್ಯ ಏನೇನೂ ಅಲ್ಲ; ವೀರಪ್ಪ ಮೊಯ್ಲಿ

ಲೋಕಸಭಾ ಟಿಕೆಟ್ ಕೇಂದ್ರ ಚುನಾವಣೆ ಸಮಿತಿ ಕೊಡೋದು. ನನಗೆ ಟಿಕೆಟ್ ಕೊಡಿ ಅಂತ ಸಿದ್ದರಾಮಯ್ಯ ಮುಂದೆ ಕೈ ಚಾಚಿದವನು ನಾನಲ್ಲ. ಆ ದುಸ್ಥಿತಿ ನನಗೆ ಬರಬಾರದು. ಯಾರೋ ಕಿಡಿಗೇಡಿಗಳು ನನಗೆ ಎಂಎಲ್‌ಸಿ ಮಾಡಲಿಲ್ಲ ಅಂತ ಹೇಳಬಹುದು. ಸಿದ್ದರಾಮಯ್ಯ ನನಗೆ ಟೂ ಜೂನಿಯರ್, ನಾನು ಸಚಿವನಾಗಿದ್ದಾಗ ಸಿದ್ದರಾಮಯ್ಯ ಏನೇನೂ ಅಲ್ಲ. ಹೀಗಿರುವಾಗ ನಾನು ಅವರ ಬಳಿ ಯಾಕೆ ಟಿಕೆಟ್ ಕೇಳಲು ಹೋಗ್ಬೇಕು.

ನನಗೆ ಟಿಕೆಟ್ ಕೊಟ್ಟಿದ್ರೆ ಎರಡು ಲಕ್ಷ ಮತಗಳ ಅಂತರದಿಂದ ಗೆಲ್ತಿದ್ದೆ. ಏಕೆಂದರೆ ಅಷ್ಟರ ಮಟ್ಟಿಗೆ ನಾನು ವರ್ಚಸ್ಸು ಬೆಳೆಸಿಕೊಂಡಿದ್ದೇನೆ. ನನಗೆ ಯಾರ ಮೇಲೂ ಹಗೆ ಇಲ್ಲ. 2013 ರ ಸರ್ಕಾರದಲ್ಲಿ ಇದೇ ಸಿದ್ದರಾಮಯ್ಯ ಬದಲಾವಣೆ ಅನ್ನೋ ಚರ್ಚೆಗಳು ಬಂದಾಗ ಮುಂದುವರೆಸಿ ಅಂದವನು ನಾನು. ಈ ಸರ್ಕಾರದಲ್ಲೂ ಸಿದ್ದರಾಮಯ್ಯನವರನ್ನೇ ಸಿಎಂ ಮಾಡಿ ಅಂದಿದ್ದು ನಾನೆ. ಅವರ ಪ್ರಭಾವದಿಂದ ಏನೂ ಗಳಿಸಬೇಕಾಗಿಲ್ಲ.

ಸಿದ್ದರಾಮಯ್ಯ ಮತ್ತು ವೀರಪ್ಪ ಮೊಯ್ಲಿ

ಇನ್ನು ಈ ಬಗ್ಗೆ ಹೈಕಮಾಂಡ್‌ಗೂ ನಾನು ಯಾರ ಬಗ್ಗೆಯೂ ಮನವಿ ಮಾಡಿಲ್ಲ. ಅಭಿಪ್ರಾಯ ಹೇಳ್ತೇನೆ.

ಡಿಕೆಶಿಗೆ ಸಿಎಂ ಆಗುವ ಎಲ್ಲಾ ಅರ್ಹತೆ ಇದೆ. ಕೆಪಿಸಿಸಿ ಅಧ್ಯಕ್ಷರಾಗಿ ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಮತ್ತು ಡಿಸಿಎಂ ಡಿಕೆ ಶಿವಕುಮಾರ್‌ ಪರ ಮತ್ತೆ ವೀರಪ್ಪ ಮೊಯ್ಲಿ ಮಾತನಾಡಿದ್ದಾರೆ.

ಡಿಕೆಶಿಗೆ ಸಿಎಂ ಆಗುವ ಎಲ್ಲಾ ಅರ್ಹತೆ ಇದೆ; ಡಿಸಿಎಂ ಪರ ಮಾಜಿ ಸಿಎಂ ಮತ್ತೆ ಬ್ಯಾಟಿಂಗ್!

ಇತ್ತೀಚೆಗಷ್ಟೇ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಉಡುಪಿಯ ಕಾಪು ಮಾರಿಯಮ್ಮ ದೇವಸ್ಥಾನಕ್ಕೆ ತೆರಳಿದ್ದು. ಬಳಿಕ ಅಲ್ಲಿಯೇ ಕಾಂಗ್ರೆಸ್‌ ಕುಟುಂಬೋತ್ಸವ ಕಾರ್ಯಕ್ರಮದಲ್ಲೂ ಪಾಲ್ಗೊಂಡಿದ್ದರು. ಈ ವೇಳೆ ಮಾಜಿ ಸಿಎಂ ವೀರಪ್ಪ ಮೊಯ್ಲಿ ಅವರು ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದರು. ಬಳಿಕ ಈ ಹೇಳಿಕೆ ಕೆಲ ಕಾಂಗ್ರೆಸ್‌ ನಾಯಕ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಮತ್ತೆ ಮಾಜಿ ಸಿಎಂ ವೀರಪ್ಪ ಮೊಯ್ಲಿಯವರು (Ex Cm Veerappa Moily) ಡಿಕೆಶಿ ಪರ ಬ್ಯಾಟಿಂಗ್ ಬೀಸಿದ್ದಾರೆ.

ಡಿಕೆಶಿ ಪರ ವೀರಪ್ಪ ಮೊಯ್ಲಿ ಮತ್ತೆ ಬ್ಯಾಟಿಂಗ್!


 ಮಾತನಾಡಿದ ಮಾಜಿ ಸಿಎಂ ವೀರಪ್ಪ ಮೊಯ್ಲಿ, ನನ್ನ ಹೇಳಿಕೆ ವೈಯುಕ್ತಿಕ ಸಾರ್ವಜನಿಕ ಎಂಬ ಪ್ರಶ್ನೆ ಅಲ್ಲ. ಒಬ್ಬ ಪಕ್ಷದ ಮುಖಂಡನಾಗಿ ಜವಾಬ್ದಾರಿಯುತ ಹೇಳಿಕೆ ಕೊಟ್ಟಿದ್ದೇನೆ. ಅನೇಕ ಜನ ಅಧಿಕಾರಕ್ಕಾಗಿ ಪಕ್ಷ ಬಿಟ್ಟಿದ್ದಾರೆ. ಆದ್ರೆ ಪಕ್ಷದಲ್ಲಿ ನಾನೊಬ್ಬನೇ ಸೀನಿಯರ್‌ ಆಗಿ ಉಳಿದುಕೊಂಡೆ. ಕಾಂಗ್ರೆಸ್ಸಿನ ಹಿತದೃಷ್ಟಿಯಿಂದಲೇ ಈ ಜವಾಬ್ದಾರಿಯುತ ಹೇಳಿಕೆ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ.

Post a Comment

Previous Post Next Post