ಗಳೂರು : ಕಾಂಗ್ರೆಸ್ ಕಾರ್ಯಕರ್ತ ಹೈದರ್ ಅಲಿ ಮರ್ಡರ್ ಕೇಸ್ ಕಾಂಗ್ರೆಸ್ ನಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಮಹಮ್ಮದ್ ನಲಪಾಡ್ ಆಪ್ತ ಹೈದರ್ ಅಲಿ ಕೊಲೆ ಕೇಸ್ ಸಂಬಂಧ ದೊಡ್ಡ ಅಪ್ಡೇಟ್ ಹೊರಬಿದ್ದಿದೆ
ಬಿಬಿಎಂಪಿ ಚುನಾವಣೆಗಾಗಿ ಹೈದರ್ ಅಲಿಯ ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ರೌಡಿಶೀಟರ್ ಹೈದರ್ ಅಲಿ ಹತ್ಯೆ ಹಿಂದೆ ಯೂತ್ ಕಾಂಗ್ರೆಸ್ ನ ಅಬ್ಬಾಸ್ ಅಲಿ ಕೈವಾಡ ಇದೆ ಎಂಬ ಗಂಭೀರ ಆರೋಪ ಕೇಳಿ ಬಂದಿದ್ದು,ಪ್ರಕರಣದ ಪ್ರಮುಖ ಆರೋಪಿ ನಾಜು ಜೊತೆ ಕೈ ಜೋಡಿಸಿ ಕೊಲೆ ಮಾಡಿಸಲಾಗಿದೆ ಎಂದು ಹೈದರ್ ಅಣ್ಣ ಸಲೀಂ ಮತ್ತು ಅತ್ತಿಗೆ ಆರೋಪಿಸಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ಬಿಬಿಎಂಪಿ ಚುನಾವಣೆ ಬರಲಿದ್ದು, ಹೈದರ್ ಮತ್ತು ಅಣ್ಣ ತಯಾರಿಸಿ ನಡೆಸಿದ್ರು. ಏರಿಯಾದಲ್ಲಿ ಕೂಡ ಒಳ್ಳೆಯ ಹೆಸರಿತ್ತು. ತಮಗೆ ಟಿಕೆಟ್ ಸಿಗುತ್ತೆ ಎಂದು ನಾಜು ಆಂಡ್ ಗ್ಯಾಂಗ್ ಮೂಲಕ ಕೊಲೆ ಮಾಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮುಂದಿನ ದಿನಗಳಲ್ಲಿ ಬಿಬಿಎಂಪಿ ಚುನಾವಣೆ ಬರಲಿದ್ದು, ಹೈದರ್ ಮತ್ತು ಅಣ್ಣ ತಯಾರಿಸಿ ನಡೆಸಿದ್ರು. ಏರಿಯಾದಲ್ಲಿ ಕೂಡ ಒಳ್ಳೆಯ ಹೆಸರಿತ್ತು. ತಮಗೆ ಟಿಕೆಟ್ ಸಿಗುತ್ತೆ ಎಂದು ನಾಜು ಆಂಡ್ ಗ್ಯಾಂಗ್ ಮೂಲಕ ಕೊಲೆ ಮಾಡಿಸಿದ್ದಾರೆ ಎನ್ನಲಾಗಿದೆ.
2017 ರಲ್ಲಿ ಕೂಡ ಹೈದರ್ ಮೇಲೆ ಅಟ್ಯಾಕ್ ಆಗಿತ್ತು. ಈ ವೇಳೆ ಹೈದರ್ ಪ್ರಾಣಾಪಾಯದಿಂದ ಪಾರಾಗಿದ್ದ. ನಂತರ ಕಳೆದ ವರ್ಷ ರಂಜಾನ್ ವೇಳೆ ರಾಜಿ ಸಂಧಾನ ಮಾಡಲಾಗಿತ್ತು. ಸಂಧಾನದ ಬಳಿಕ ಒಂದೇ ತಟ್ಟೆಯಲ್ಲಿ ಊಟ ಮಾಡಿದ್ರಂತೆ. ಸ್ನೇಹ ಅಂತಾ ಪ್ರಮಾಣ ಮಾಡಿ ಸ್ಕೆಚ್ ಹಾಕಿ ಕೊಲೆ ಮಾಡಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಕಳೆದ ಕೆಲದಿನಗಳ ಹಿಂದೆ ರೆಸಿಡೆನ್ಸಿ ರಸ್ತೆಯ ಬಾರ್‌ನಲ್ಲಿ ತಡರಾತ್ರಿವರೆಗೆ ಪಾರ್ಟಿ ಮಾಡಿದ್ದ ಹೈದರ್ ಅಲಿ, ಸ್ನೇಹಿತನ ಜತೆ ಕಾರಿನಲ್ಲಿ ಆನೆಪಾಳ್ಯದ ತನ್ನ ಮನೆಗೆ ಹೋಗುತ್ತಿದ್ದಾಗ ನಾಲ್ಕೈದು ದುಷ್ಕರ್ಮಿಗಳು ದಾಳಿ ಮಾಡಿದ್ದರು. ಅಲ್ಲದೆ ಕೊಚ್ಚಿ ಕೊಲೆ ಮಾಡಿದ್ದರು.

Post a Comment