Muda Scam: ಯಾರು ಸುಳ್ಳ ಎಂಬುದನ್ನು ರಾಜ್ಯದ ಜನ ಗಮನಿಸುತ್ತಿದ್ದಾರೆ! ಸಿಎಂ ವಿರುದ್ಧ ಮತ್ತೆ ಕಿಡಿಕಾರಿದ ಸ್ನೇಹಮಯಿ

 ಸೂರು: ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ್ದ ಮುಡಾ ಹಗರಣದ (MUDA Scam) ಲೋಕಾಯುಕ್ತ ತನಿಖೆ (Lokayukta investigation) ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಈ ನಡುವೆ ಇಡಿ (ED) ಕೂಡ ಎಂಟ್ರಿ ಕೊಟ್ಟಿದ್ದು, ಸಿಬಿಐ (CBI) ದಾಳಿ ನಡೆಯಬೇಕಾ ಬೇಡವೇ ಎಂಬುದರ ಕುರಿತು ಕೋರ್ಟ್‌ನಲ್ಲಿ ವಾದ ನಡೆಯುತ್ತಿದೆ.

ಈ ನಡುವೆ ಮುಡಾ 50:50 ಸೈಟ್ ಹಂಚಿಕೆ ಕುರಿತು ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ (Snehamayi Krishna) ಮತ್ತೆ ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ ಮಾಡಿದ್ದ ಪೋಸ್ಟ್ ಕೌಂಟರ್

ಸಿಎಂ ಸಿದ್ದರಾಮಯ್ಯ ಎಕ್ಸ್ ಖಾತೆಯಲ್ಲಿ ಮಾಡಿರುವ ಪೋಸ್ಟ್ ಉಲ್ಲೇಖಿಸಿ ಆಕ್ರೋಶ ವ್ಯಕ್ತಪಡಿಸಿರುವ ಸ್ನೇಹಮಯಿ ಕೃಷ್ಣ ಅವರು ಸಿಎಂ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ದೇವನೂರು ಮೂರನೇ ಹಂತದಲ್ಲಿ ನಿವೇಶನ ಇಲ್ಲದ ಕಾರಣ ನನ್ನ ಶ್ರೀಮತಿಗೆ ಸಮಾಂತರ ಬಡಾವಣೆಯಲ್ಲಿ ಸೈಟ್ ಕೇಳಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಪೋಸ್ಟ್ ಹಾಕಿದ್ದರು.

ದೇವನೂರು ಬಡಾವಣೆಯಲ್ಲಿ ಇನ್ನೂ 370 ನಿವೇಶನಗಳು ಬಾಕಿ ಇವೆ

ಆದ್ರೆ ಮುಡಾ ಪ್ರಾಧಿಕಾರ ಮಾಹಿತಿ ಹಂಚಿಕೊಂಡಿದ್ದು, ದೇವನೂರು ಬಡಾವಣೆಯಲ್ಲಿ 370 ನಿವೇಶನಗಳು ಇನ್ನು ಬಾಕಿಯಿದೆ ಎಂದು ಹೇಳಿದೆ. ಹಾಗಿದ್ರೆ ಯಾರು ಸುಳ್ಳು ಹೇಳುತ್ತಿದ್ದಾರೆ ಎಂದು ರಾಜ್ಯದ ಜನ ಗಮನಿಸಬೇಕಿದೆ ಎಂದು ಸ್ನೇಹಮಯಿ ಕೃಷ್ಣ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮೂಲಕ ಸಿಎಂ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಮುಡಾ ಸೈಟ್ ಕೊಡಿಸುವುದಾಗಿ ವಂಚನೆ

ಇತ್ತ ಮೂಡಾದಲ್ಲಿ ಬ್ರಷ್ಟಾಚಾರ ಬಗೆದಷ್ಟೂ ಬಯಲಿಗೆ ಬರ್ತಾ ಇದೆ. ಮುಡಾದಲ್ಲಿ ನಿವೇಶನ ಕೊಡಿಸುದಾಗಿ ಮಹಿಳೆಗೆ ಆಮಿಷ ಒಡ್ಡಿ 30 ಲಕ್ಷ ವಂಚನೆ ಮಾಡಿರುವ ಪ್ರಕರಣವೊಂದು ಅಲನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಲಲಿತಾದ್ರಿಪುರ ಗ್ರಾಮದ ಮನಿಷಾ ಎಂಬುವವರು ವಂಚನೆಗೆ ಒಳಗಾದ ಮಹಿಳೆಯಾಗಿದ್ದಾರೆ.

ಮಹಿಳೆಯಿಂದ ದೂರು

ಆಲನಹಳ್ಳಿ ಗ್ರಾಮದ ಪವಿತ್ರಾ, ಆಕೆಯ ಪತಿ ವಿಶ್ವನಾಥ್ ಶೆಟ್ಟಿ ಹಣ ಪಡೆದು ವಂಚನೆ ಮಾಡಿರುವ ಆರೋಪಿಗಳಾಗಿದ್ದಾರೆ. ಹಣ ನೀಡಿ ತಿಂಗಳು ಕಳೆದರೂ ಹಣವೂ ಇಲ್ಲ, ಸೈಟು ಇಲ್ಲ. ಹಣ ವಾಪಸ್ ಕೇಳಿದ್ದಕ್ಕೆ ಮನೆ ಬಳಿ ಕರೆಸಿ ಮನಿಷಾ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಪವಿತ್ರಾ, ವಿಶ್ವನಾಥ್ ಶೆಟ್ಟಿ ಹಾಗೂ ಪವಿತ್ರಾ ಮಗನ ಮೇಲೆ ದೂರು ದಾಖಲಿಸಿದ್ದಾರೆ.

ಜಿಟಿಡಿ ಬುಡಕ್ಕೆ ಮುಡಾ ಕಂಟಕ

ಮುಡಾ ನಿವೇಶನ ಹಂಚಿಕೆ ಅಕ್ರಮ ಕುರಿತಂತೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿಕೃಷ್ಣ ಸಿಎಂ ಸಿದ್ದರಾಮಯ್ಯ ಕುಟುಂಬದ ವಿರುದ್ಧ ಹೋರಾಟ ನಡೆಸುತ್ತಿದ್ದು ಇದೀಗ ಜೆಡಿಎಸ್ ಶಾಸಕ ಜಟಿ ದೇವೇಗೌಡ ವಿರುದ್ಧ ಇಡಿ ಮತ್ತು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

19 ನಿವೇಶನ ಪಡೆದಿರುವುದಾಗಿ ಲೋಕಾಯುಕ್ತಕ್ಕೆ ದೂರು

ಜಿಟಿ ದೇವೇಗೌಡ ವಿರುದ್ಧವೂ ಸಹ ಅಕ್ರಮವಾಗಿ 50:50 ಅನುಪಾತದಲ್ಲಿ ಸುಮಾರು 19 ನಿವೇಶನಗಳನ್ನು ಪಡೆದುಕೊಂಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಜಿಟಿ ದೇವೇಗೌಡ ಅವರು ತಮ್ಮ ಸಹೋದರಿಯ ಮಗ ಮಹೇಂದ್ರ ಹೆಸರಿನಲ್ಲಿ ಬೇನಾಮಿಯಾಗಿ ಪರಿಹಾರ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

 

Post a Comment

Previous Post Next Post