ಮೈಕ್ರೋ ಫೈನಾನ್ಸ್ ಕಂಪನಿಗಳು ಕಿರುಕುಳಕ್ಕೆ ಪುಲ್ ಬ್ರೇಕ್..! ಪೊಲೀಸ್ ಇಲಾಖೆಯಿಂದ ಗೈಡ್ ಲೈನ್ಸ್ ಬಿಡುಗಡೆ


 ಹಾಗಾದರೆ ಅದ್ಯಾವ್ ಗೈಡ್ ಲೈನ್ ಅಂತೀರಾ ಹೇಳ್ತೀವಿ ನೋಡಿ.


ಯೆಸ್.. ಮೈಕ್ರೋ ಫೈನಾನ್ಸ್ ಕಂಪನಿಗಳು ಸಾಲ ವಸೂಲಿ ನೆಪದಲ್ಲಿ ಸಾಲಗಾರರನ್ನು ಕಾಡಿ ಕಾಡಿ ಇನ್ನಿಲ್ಲದಂತೆ ಮಾಡ್ತಿವೆ. ಸುಮಾರು ಜನರ ಪ್ರಾಣಕ್ಕೆ ಕಂಟಕವಾಗಿವೆ..ಸಾಲ ನೀಡಿ ವಾಪಸು ಹಣ ಕಟ್ಟದೆ ಇದ್ದಾಗ ಜೀವ ಹಿಂಡುವ ಇಂತಹ ಪೈನಾನ್ಸ್ ಕಂಪನಿಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದ್ದು,

[ಕಾನೂನು ತಿದ್ದುಪಡಿಗೆ ತುರ್ತಾಗಿ ಸುಗ್ರೀವಾಜ್ಞೆ ರೂಪಿಸಲು ಮುಂದಾಗಿದೆ. ಈ ನಡುವೆ ಪೊಲೀಸ್ ಇಲಾಖೆ ಕೂಡಾ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಡಿಜಿಪಿ ಅಲೋಕ್ ಮೋಹನ್ ನೇತೃತ್ವದಲ್ಲಿ ನಿನ್ನೆ ಹಿರಿಯ ಅಧಿಕಾರಿಗಳು ಸಭೆ ನಡೆದಿದೆ.. ಮೈಕ್ರೋ ಫೈನಾನ್ಸ್ ಹಾವಳಿ ತಡೆಗಟ್ಟುವ ಕುರಿತು ಕೆಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ..


ಹೌದು… ಮೈಕ್ರೋ ಫೈನಾನ್ಸರ್ಸ್ ಗಳ ವಿರುದ್ಧ ಸಮರ ಸಾರಲು ಪೊಲೀಸರು ಮುಂದಾಗಿದ್ದಾರೆ. ಮೈಕ್ರೋ ಫೈ‌ನಾನ್ಸರ್ಸ್ ಹಾವಳಿಗೆ ಮೂಗುದಾರ ಹಾಕಲು ಪೊಲೀಸರಿಂದ ಹೊಸ ಗೈಡ್ ಲೈನ್ ಹೊರಡಿಸಿದ್ದಾರೆ. ಪೊಲೀಸ್ ಮಹಾನಿರ್ದೇಶಕರು ಬೆಂಗಳೂರು ಕಮಿಷನರ್ , ಹಾಗೂ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಕಠಿಣ ಕ್ರಮದ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಮೈಕ್ರೋ ಫೈನಾನ್ಸರ್ಸ್ ಗಳು ಬಡವರ ರಕ್ತ ಹಿರುತ್ತಿದ್ದು.


ಮರ್ಯಾದೆ ಅಂಜಿ ಹಲವುರು ಊರು ಬಿಟ್ಟು ಹೋಗ್ತಾ ಇದ್ದರೆ ಇನ್ನು ಕೆಲವರು ಪ್ರಾಣವನ್ನೆ ಕಳೆದುಕೊಳ್ತಾ ಇದ್ದಾರೆ. ಹಾಗಾಗಿ ಮೈಕ್ರೋ ಫೈನಾನ್ಸರ್ಸ್ ಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಸಂಬಂದ ಪಟ್ಟ ಪೊಲೀಸರಿಗೆ ಹಿರಿಯ ಅಧಿಕಾರಿಗಳಿಂದ ಒಂದಷ್ಟು ಅಂಶಗಳನ್ನ‌ ಒಳಗೊಂಡ ಹೊಸ ಗೈಡ್ ಲೈನ್ ಬಿಡುಗಡೆ ಮಾಡಿದ್ದಾರೆ.


ಇನ್ನು ಅಷ್ಟೇ ಅಲ್ಲದೆ ಮೀಟರ್ ಬಡ್ಡಿ ದಂಧೆ ಮಾಡೋರಿಗೆ ಕಾನೂನು ಎಚ್ಚರಿಕೆ ನೀಡಲಾಗಿದೆ. ಯಾರಾದರೂ ಕಿರುಕುಳ ನೀಡಿದ್ರೆ ಪೊಲೀಸ್ರಿಗೆ ಅಥವಾ 112 ಗೆ ಕರೆ ಮಾಡುವಂತೆ ಸಾರ್ವಜನಿಕರಿಗೆ ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.. ಒಟ್ನಿಲ್ಲಿ ಮೈಕ್ರೋ ಫೈನಾನ್ಸ್ ಹೆಸ್ರಿನಲ್ಲಿ ಜನರಿಗೆ ಹಣ ನೀಡಿ ಕಿರುಕುಳ ನೀಡ್ತಿರೋ ಕಂಪನಿಗಳಿಗೆ ಬಿಸಿ ಮುಟ್ಟಿಸುತ್ತಿದ್ದಾರೆ ಪೊಲೀಸರು.

Post a Comment

Previous Post Next Post