BIG NEWS : ಬೆಂಗಳೂರಲ್ಲಿ ಹೆಚ್ಚಾದ ಬೈಕ್ ವ್ಹಿಲಿಂಗ್ ಪ್ರಕರಣ : ಪೋಲೀಸರ ವಿರುದ್ಧ ಹೈಕೋರ್ಟ್ ಅಸಮಾಧಾನ!


 ಗಳೂರು : ಬೆಂಗಳೂರಿನಲ್ಲಿ 18ರಿಂದ 20 ವರ್ಷದ ಯುವಕರು ಎಲ್ಲಿಂದರಲ್ಲಿ ಬೈಕ್ ವ್ಹಿಲಿಂಗ್ ಮಾಡುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಇದರಿಂದ ವಾಹನ ಚಲಾಯಿಸುವವರಿಗೆ ಹಾಗೂ ಸಾರ್ವಜನಿಕರಿಗೆ ತುಂಬಾ ಸಮಸ್ಯೆ ಆಗುತ್ತಿದೆ ಆದರೂ ಕೂಡ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೈಕೋರ್ಟ್ ವಿಭಾಗೀಯ ಪೀಠ ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕಿದೆ.

 ಹೌದು ಈ ಕುರಿತು ವ್ಯಕ್ತಿಯೊಬ್ಬರು ಅರ್ಜಿಯೊಂದನ್ನು ಸಲ್ಲಿಸಿದ್ದು, ಈ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್ ಭಾಗಿಯ ಪೀಠವು, ಬೆಂಗಳೂರಿನ ಕೆಲ ಏರಿಯಾಗಳಲ್ಲಿ ಬೈಕ್ ಸವಾರರಿಂದ ವ್ಹಿಲಿಂಗ್ ನಡೆಯುತ್ತಿದ್ದು, ಈ ಕುರಿತು ಯಾವುದೆ ಕ್ರಮ ಕೈಗೊಳ್ಳದ ಪೊಲೀಸರ ನಿರ್ಲಕ್ಷಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ಅಸಮಾಧಾನ ವ್ಯಕ್ತಪಡಿಸಿದೆ. ಸುಮಾರು 18 ರಿಂದ 20 ವಯಸ್ಸಿನ ಯುವಕರು ವ್ಹಿಲಿಂಗ್ ಮಾಡಿ ಸಮಸ್ಯೆ ಸೃಷ್ಟಿಸುತ್ತಿದ್ದಾರೆ ವ್ಹಿಲಿಂಗ್ ಮಾಡು ಅವರ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ.


ಬೆಂಗಳೂರಿನಲ್ಲಿ ವಾಸ ಮಾಡುವವರೆಗೆ ಇದರಿಂದ ತುಂಬಾ ತೊಂದರೆಯಾಗುತ್ತಿದೆ. ವ್ಹಿಲಿಂಗ್ ನಿಂದ ಅಪಘಾತವಾಗಿ ಸಾವುಗಳು ಕೂಡ ಸಂಭವಿಸುತ್ತಿವೆ. ಬೈಕ್ ಸವಾರರು ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುತ್ತಾರೆ. ಸರ್ಕಾರ ಈ ಬಗ್ಗೆ ಯಾವ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಲು ಹೈಕೋರ್ಟ್ ವಿಭಾಗಿಯ ಪೀಠ ಸೂಚನೆ ನೀಡಿದೆ.ನ್ಯಾ. ಎನ್ ವಿ ಆಂಜಾರಿಯ ಹಾಗೂ ನ್ಯಾ ಎಂ.ಐ ಅರುಣ್ ಅವರಿದ್ದ ಪೀಠ ಸೂಚನೆ ನೀಡಿದೆ. ಬಳಿಕ ಅರ್ಜಿಯ ವಿಚಾರಣೆಯನ್ನು ಮಾರ್ಚ್ 17ಕ್ಕೆ ನಿಗದಿಪಡಿಸಿತು. ಅರ್ಜಿದಾರರ ಪರ ವಕೀಲ ನಿತಿನ್ ರಮೇಶ್ ವಾದ ಮಂಡಿಸಿದರು. ಮಕ್ಕಳಿಗೂ ಹೆಲ್ಮೆಟ್ ನಿಯಮ ಜಾರಿಗೆ ಮನವಿ ಮಾಡಿದರು. ಸೂಕ್ತ ಹೆಲ್ಮೆಟ್ ನಿಯಮ ಜಾರಿಗಾಗಿ ಡಾಕ್ಟರ್ ಅರ್ಚನಾ ಭಟ್ ಪಿಐಎಲ್ ಸಲ್ಲಿಸಿದ್ದರು.

Post a Comment

Previous Post Next Post