ಇನ್ನು ಕಳೆದ ಬಾರಿ ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಳಿ ಕೇಳಿದ್ದಕ್ಕೆ, ಇನ್ನೆರಡು ದಿನದಲ್ಲಿ ಹಣ ಬರುವಂತೆ ಮಾಡಲಾಗುತ್ತದೆ ಎಂದು ಉತ್ತರ ಕೊಟ್ಟಿದ್ದರು. ಆದ್ರೆ ಇದೀಗ ಇದಕ್ಕೆ ವಿರುದ್ಧವೆಂಬಂತೆ ಉತ್ತರ ನೀಡಿದ್ದಾರೆ.
ಬೆಂಗಳೂರು: ಕಾಂಗ್ರೆಸ್ ಸರ್ಕಾರ ಚುನಾವಣೆಗೂ ಮುನ್ನ ನೀಡಿದ್ದ ಆಶ್ವಾಸನೆಯಂತೆ ಪಂಚ ಗ್ಯಾರಂಟಿಗಳಾದ, ಅನ್ನಭಾಗ್ಯ, ಗೃಹಲಕ್ಷ್ಮಿ, ಯುವನಿಧಿ, ಗೃಹಜ್ಯೋತಿ ಹಾಗೂ ಶಕ್ತಿ ಯೋಜನೆಗಳನ್ನು ಜಾರಿಗೆ ತಂದಿತ್ತು. ಆ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದ್ದೇವೆ ಎಂದು ಹೇಳಿಕೊಂಡಿತ್ತು. ಇನ್ನು ಇದೇ ಪಂಚ ಗ್ಯಾರಂಟಿ ಯೋಜನೆಗಳಿಂದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ ಎಂದು ಹಲವರು ಹೇಳುತ್ತಿದ್ದರು.
ಆದ್ರೆ ಸೆಪ್ಟೆಂಬರ್ ಹಾಗೂ ಅಕ್ಟೋಬರ್ 2 ತಿಂಗಳಿನಿಂದ ಹಣ ಮಹಿಳೆಯರ ಖಾತೆಗೆ ಬಂದಿರಲಿಲ್ಲ. ಹಾಗಾಗಿ ಯಾಕೆ ಈ ಬಾರಿ ಇಷ್ಟು ತಿಂಗಳಾದ್ರೂ ಗೃಹಲಕ್ಷ್ಮಿ ಹಣ ಬಂದಿಲ್ಲ ಎಂದು ಜನ ಚಿಂತಿತರಾಗಿದ್ದರು. ಆದ್ರೆ ಇದೀಗ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬಳಿ ಮಾಧ್ಯಮದವರ ಪ್ರಶ್ನೆಗೆ ಗೃಹಲಕ್ಷ್ಮಿ ಯೋಜನೆ ಬಗ್ಗೆ ಉಡಾಫೆ ಉತ್ತರ ನೀಡಿದ್ದಾರೆ.ಇನ್ನು ಕಳೆದ ಬಾರಿ ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಳಿ ಕೇಳಿದ್ದಕ್ಕೆ, ಇನ್ನೆರಡು ದಿನದಲ್ಲಿ ಹಣ ಬರುವಂತೆ ಮಾಡಲಾಗುತ್ತದೆ ಎಂದು ಉತ್ತರ ಕೊಟ್ಟಿದ್ದರು. ಆದ್ರೆ ಇದೀಗ ಇದಕ್ಕೆ ವಿರುದ್ಧವೆಂಬಂತೆ ಉತ್ತರ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್, ಗೃಹ ಲಕ್ಷ್ಮಿಯನ್ನ ಮನೆ ಮನೆಗೆ ತಲುಪಿಸಬೇಕು. ಒಂದು ತಿಂಗಳು ಗೃಹ ಲಕ್ಷ್ಮಿ ಲೇಟಾದ್ರೆ, 500 ಕಾಲ್ ಬರುತ್ತೆ. ಅವರಿಗೆಲ್ಲಾ ಉತ್ತರ ಕೊಡಬೇಕು ಎಂದು ಹೇಳಿದ್ದಾರೆ.
ಇನ್ನು ಒಂದು ತಿಂಗಳು ಬರಲಿಲ್ಲ ಅಂದ್ರೆ ಮಂದಿನ ತಿಂಗಳು ಬರಲ್ಲಾ ಅಂತ ವಿಪಕ್ಷಗಳು ಹೇಳ್ತಾರೆ. ನಾವು ವಚನ ಭ್ರಷ್ಟರಲ್ಲಾ, ವಚನ ಇಟ್ಟುಕೊಂಡವರು ಎಂದು ಹೇಳಿದ್ದಾರೆ.
ಪ್ರತಿ ತಿಂಗಳು ಗೃಹಲಕ್ಷ್ಮಿ ಹಣ ಯಾಕೆ ಕೊಡೊದಿಲ್ಲಾ ಎಂಬ ಪ್ರಶ್ನೆಗೆ, ಲಕ್ಷ್ಮಿ ಹೆಬ್ಬಾಳ್ಕರ್, ಮಾಧ್ಯಮದವರಿಗೆ ನಿಮಗೆ ಪ್ರತಿ ತಿಂಗಳ ಸರಿಯಾಗಿ ಸಂಬಳ ಕೊಡ್ತಾರಾ? ಎಂದು ಕೇಳಿದ್ದಾರೆ. ಕೆಲವೊಂದು ಸರ್ಕಾರಿ ಸಂಸ್ಥೆಗಳಲ್ಲಿ ಎರಡು ಮೂರು ತಿಂಗಳ ಬಳಿಕ ಸಂಬಳ ಕೊಡ್ತಾರೆ. ನಮಗೂ ಎಲ್ಲಾ ಗೊತ್ತಿದೆ ಒಮ್ಮೊಮ್ಮೆ ಎರಡು ತಿಂಗಳಾಗುತ್ತೆ. ಅದಕ್ಕೆ ಈ ತಿಂಗಳದ್ದು ಮುಂದಿನ ತಿಂಗಳು ಕೊಡ್ತೀವಿ ಎಂದು ಹೇಳಿದ್ದಾರೆ.
ಕಳೆದ ಬಾರಿಯೂ ಲಕ್ಷ್ಮಿ ಹೆಬ್ಬಾಳ್ಕರ್ ಗೃಹಲಕ್ಷ್ಮಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಈ ವೇಳೆ ಗೃಹಲಕ್ಷ್ಮಿ ಯೋಜನೆ, ಹಣ ಸಿಗದೇ ಇರಲು ಕೆಲವು ಸಮಸ್ಯೆಗಳು ಕಾರಣವಾಗಿವೆ ಎಂದು ಹೇಳಿದ್ದಾರೆ. ಕೆಲವು ದಾಖಲೆಗಳನ್ನು ಸಾಫ್ಟ್‌ವೇರ್ ತೆಗೊಳದೇ ಇರೋದೆ ಇದಕ್ಕೆ ಕಾರಣ ಎಂದು ಹೇಳಿದ್ದರು. ಅಂತವರಿಗೆ ಈಗಾಗಲೇ ಪ್ರತಿಕ್ರಿಯೆ ನೀಡಿದ್ದೇವೆ, ಇದು ಆಗೋದಿಲ್ಲ ಅಂತಾನೂ ತಿಳಿಸಿದ್ದೇವೆ ಎಂದು ಹೇಳಿದ್ದರು.

Post a Comment